ಜಬಲ್​ಪುರ್-ಮುಂಬೈ ಎಕ್ಸ್​ಪ್ರೆಸ್ ರೈಲಿನಲ್ಲಿ ಕಾಣಿಸಿಕೊಂಡ ಹಾವು; ಹೌಹಾರಿದ ಪ್ರಯಾಣಿಕರು, ವಿಡಿಯೋ ವೈರಲ್
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಜಬಲ್​ಪುರ್-ಮುಂಬೈ ಎಕ್ಸ್​ಪ್ರೆಸ್ ರೈಲಿನಲ್ಲಿ ಕಾಣಿಸಿಕೊಂಡ ಹಾವು; ಹೌಹಾರಿದ ಪ್ರಯಾಣಿಕರು, ವಿಡಿಯೋ ವೈರಲ್

ಜಬಲ್​ಪುರ್-ಮುಂಬೈ ಎಕ್ಸ್​ಪ್ರೆಸ್ ರೈಲಿನಲ್ಲಿ ಕಾಣಿಸಿಕೊಂಡ ಹಾವು; ಹೌಹಾರಿದ ಪ್ರಯಾಣಿಕರು, ವಿಡಿಯೋ ವೈರಲ್

Snake in Train: ಜಬಲ್‌ಪುರ-ಮುಂಬೈ ಗರೀಬ್ ರಾಥ್ ಎಕ್ಸ್‌ಪ್ರೆಸ್ (12178) ರೈಲಿನ ಎಸಿ ಕಂಪಾರ್ಟ್​ಮೆಮಟ್​ನಲ್ಲಿ ಹಾವು ಕಾಣಿಸಿಕೊಂಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಜಬಲ್​ಪುರ್-ಮುಂಬೈ ಎಕ್ಸ್​ಪ್ರೆಸ್ ರೈಲಿನಲ್ಲಿ ಕಾಣಿಸಿಕೊಂಡ ಹಾವು; ಹೌಹಾರಿದ ಪ್ರಯಾಣಿಕರು
ಜಬಲ್​ಪುರ್-ಮುಂಬೈ ಎಕ್ಸ್​ಪ್ರೆಸ್ ರೈಲಿನಲ್ಲಿ ಕಾಣಿಸಿಕೊಂಡ ಹಾವು; ಹೌಹಾರಿದ ಪ್ರಯಾಣಿಕರು

Snake in Gareeb Rath Express: ಜಬಲ್‌ಪುರ-ಮುಂಬೈ ಗರೀಬ್ ರಾಥ್ ಎಕ್ಸ್‌ಪ್ರೆಸ್ (12178) ರೈಲಿನ ಎಸಿ ಕಂಪಾರ್ಟ್​ಮೆಮಟ್​ನಲ್ಲಿ ಹಾವು ಕಾಣಿಸಿಕೊಂಡಿದ್ದು, ಪ್ರಯಾಣಿಕರು ಹೌಹಾರಿದ್ದಾರೆ. ಜಿ17 ಎಸಿ ಕೋಚ್​​​ನಲ್ಲಿ ಹಾವು ಪತ್ತೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಾವು ಕಂಡು ಬಂದ ಬೆನ್ನಲ್ಲೇ ಪ್ರಯಾಣಿಕರನ್ನು ಸುರಕ್ಷಿತವಾಗಿ ಮತ್ತೊಂದು ಕೋಚ್​​ಗೆ ಸ್ಥಳಾಂತರಿಸಲಾಯಿತು. ಕೋಚ್‌ನ ಹ್ಯಾಂಡಲ್‌ಗೆ ಹಾವು ನೇತಾಡುತ್ತಿತ್ತು. ಘಟನೆಯ ಬಗ್ಗೆ ರೈಲ್ವೆ ಇನ್ನೂ ಪ್ರತಿಕ್ರಿಯಿಸಿಲ್ಲ.

ಇತ್ತೀಚೆಗೆ ಭಾರತೀಯ ರೈಲ್ವೆ ನಿಲ್ದಾಣಗಳಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಕೆಲ ದಿನಗಳ ಹಿಂದೆಯಷ್ಟೇ ರಿಷಿಕೇಶ ರೈಲ್ವೆ ನಿಲ್ದಾಣದಲ್ಲಿ 6 ಅಡಿ ಉದ್ದದ ಹಾವು ಕಂಡು ಬಂದಿದ್ದು ವಿಡಿಯೋ ವೈರಲ್ ಆಗಿತ್ತು. ಅಲ್ಲದೆ, ಕೆಲವು ತಿಂಗಳ ಹಿಂದೆ, ಗುರುವಾಯೂರ್-ಮದುರೈ ರೈಲಿನಲ್ಲಿ ಇದೇ ರೀತಿಯ ಘಟನೆ ವರದಿಯಾಗಿದೆ. ಚಲಿಸುವ ರೈಲಿನಲ್ಲಿ ಒಬ್ಬ ವ್ಯಕ್ತಿಗೆ ಹಾವು ಕಚ್ಚಿತ್ತು. ಈ ವರ್ಷ ಜುಲೈನಲ್ಲಿ ಗೋರಖ್‌ಪುರ-ಬಾಂದ್ರಾ ಎಕ್ಸ್‌ಪ್ರೆಸ್‌ನಲ್ಲಿ ಹಾವು ಕಾಣಿಸಿಕೊಂಡಿತ್ತು. ಇದು ಪ್ರಯಾಣಿಕರ ಭೀತಿಗೆ ಕಾರಣವಾಗಿದೆ.

ರೈಲಿನಲ್ಲಿದ್ದ ವ್ಯಕ್ತಿಯೇ ಪೋಸ್ಟ್​

ಆಘಾತಕಾರಿ ವಿಡಿಯೋವನ್ನು ಎಕ್ಸ್​ ಖಾತೆಯಲ್ಲಿ ರೈಲಿನಲ್ಲಿದ್ದ ಪ್ರಯಾಣಿಕರೂ ಆಗಿದ್ದ ರಾಜೇಂದ್ರ ಬಿ ಆಕ್ಲೇಕರ್​​ ಎನ್ನುವವರು ಸೆಪ್ಟೆಂಬರ್ 22 ರಂದು ಪೋಸ್ಟ್ ಮಾಡಿದ್ದು, ಈ ಕುರಿತು ಬರೆದಿದ್ದಾರೆ. ಜಬಲ್‌ಪುರ-ಮುಂಬೈನಿಂದ ಹೊರಟಿದ್ದ ಗರೀಬ್ ರಕ್ಷಾ ಎಕ್ಸ್‌ಪ್ರೆಸ್‌ನ 12187 ಸಂಖ್ಯೆಯ ಎಸಿ ಕೋಚ್ ಜಿ17 ರೊಳಗೆ ಹಾವೊಂದು ಬಂದಿದೆ. ಪ್ರಯಾಣಿಕರನ್ನು ಮತ್ತೊಂದು ಕೋಚ್‌ಗೆ ಕಳುಹಿಸಿದ ನಂತರ ಜಿ17 ಅನ್ನು ಲಾಕ್ ಮಾಡಲಾಗಿದೆ ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಈ ಸುದ್ದಿ ಬರೆಯುವ ತನಕ ವಿಡಿಯೋ ಕ್ಲಿಪ್ 3 ಲಕ್ಷ 92 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 2 ಸಾವಿರ ಲೈಕ್‌ಗಳನ್ನು ಪಡೆದಿದೆ. ಈ ವಿಷಯದ ಕುರಿತು ಅಪ್ಡೇಟ್ ನೀಡಿದ ರಾಜೇಂದ್ರ, ಕಸರಾ ಹೋಮ್ ಸಿಗ್ನಲ್ ಬಳಿ ರೈಲು ನಿಂತಿದ್ದಾಗ ಈ ಘಟನೆ ಸಂಭವಿಸಿದೆ. ರೈಲು ನಿಲ್ಲಿಸಿದ ವೇಳೆ ಪಕ್ಕದ ಮರದಿಂದ ಹಾವು ಬಂದಿದೆ. ಜನರು ತಮ್ಮ ಬೆಡ್​ಶೀಟ್​ಗಳ ಮೂಲಕ ಹೊರ ಹಾಕಲು ಯತ್ನಿಸಿದರು. ಆದರೆ ಎಸೆಯುವ ಸಂದರ್ಭದಲ್ಲಿ ಹೊರ ಬಿದ್ದ ಹಾವು ಎಸಿ ಪ್ಯಾನೆಲ್ ಒಳಗೆ ಹೋಗಿದೆ. ಇದೀಗ ಕೋಚ್ ಅನ್ನು ಬೇರ್ಪಡಿಸಿ ವಾಪಸ್ ಪ್ರಯಾಣ ಆರಂಭಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಚೆಕ್ ಡ್ರೈವ್ ಆರಂಭಿಸಿದ ರೈಲ್ವೆ

Ticketless Travellers in Trains: ಪೊಲೀಸರು ಸೇರಿದಂತೆ ಟಿಕೆಟ್ ಇಲ್ಲದೆಯೇ ಪ್ರಯಾಣ ಬೆಳೆಸುವವರ ಪತ್ತೆ ಹಚ್ಚಲು ಮತ್ತು ಪರಿಶೀಲಿಸಲು ಹಬ್ಬದ ಸಮಯದಲ್ಲಿ ಭಾರತದ ರೈಲ್ವೇಯು ವಿಶೇಷ ಟಿಕೆಟ್ ಚೆಕ್ ಡ್ರೈವ್ ಅಭಿಯಾನ ಪ್ರಾರಂಭಿಸಿದೆ. ಅಕ್ಟೋಬರ್ 1 ರಿಂದ 15 ಮತ್ತು ಅಕ್ಟೋಬರ್ 25 ರಿಂದ ನವೆಂಬರ್ 10 ರವರೆಗೆ ಟಿಕೆಟ್ ರಹಿತ ಮತ್ತು ಅನಧಿಕೃತ ಪ್ರಯಾಣಿಕರ ವಿರುದ್ಧ ವಿಶೇಷ ಅಭಿಯಾನ ಪ್ರಾರಂಭಿಸುವಂತೆ 17 ವಲಯಗಳ ಜನರಲ್ ಮ್ಯಾನೇಜರ್‌ಗಳಿಗೆ ಸಚಿವಾಲಯವು ಪತ್ರ ಬರೆದಿದೆ. 1989ರ ರೈಲ್ವೆ ಕಾಯಿದೆಯ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಕೋರಿದೆ. ಈ ಕುರಿತು ಇನ್ನಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.