Vande Bharat Sleeper Updates: ಭಾರತದಲ್ಲಿ ಬಹುನಿರೀಕ್ಷಿತ ವಂದೇ ಭಾರತ್‌ ಸ್ಲೀಪರ್‌ ರೈಲು ಸೇವೆ ಈ ವರ್ಷ ಆರಂಭ ಅನುಮಾನ, ಏನಿರಬಹುದು ಕಾರಣ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Vande Bharat Sleeper Updates: ಭಾರತದಲ್ಲಿ ಬಹುನಿರೀಕ್ಷಿತ ವಂದೇ ಭಾರತ್‌ ಸ್ಲೀಪರ್‌ ರೈಲು ಸೇವೆ ಈ ವರ್ಷ ಆರಂಭ ಅನುಮಾನ, ಏನಿರಬಹುದು ಕಾರಣ

Vande Bharat Sleeper Updates: ಭಾರತದಲ್ಲಿ ಬಹುನಿರೀಕ್ಷಿತ ವಂದೇ ಭಾರತ್‌ ಸ್ಲೀಪರ್‌ ರೈಲು ಸೇವೆ ಈ ವರ್ಷ ಆರಂಭ ಅನುಮಾನ, ಏನಿರಬಹುದು ಕಾರಣ

Vande Bharat Sleeper Updates: ವಂದೇ ಭಾರತ್‌ ಸ್ಲೀಪರ್‌ ರೈಲುಗಳ ಸೇವೆ ಡಿಸೆಂಬರ್‌ಗೆ ಆರಂಭವಾಗಬೇಕಾಗಿತ್ತಾದರೂ ಇನ್ನೂ ರೈಲುಗಳ ನಿರ್ಮಾಣ ಹಂತದ ಅಂತಿಮ ತೀರ್ಮಾನವಾಗದೇ ವಿಳಂಬವಾಗುತ್ತಿದೆ ಎನ್ನುವ ಚರ್ಚೆಗಳು ನಡೆದಿವೆ.

ವಂದೇಭಾರತ್‌ ಎಕ್ಸ್‌ಪ್ರೆಸ್‌ ಸ್ಲೀಪರ್‌ ರೈಲುಗಳ ಸೇವೆ ಭಾರತದಲ್ಲಿ ಈ ಡಿಸೆಂಬರ್‌ನಲ್ಲಿ ವಿಳಂಬ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ವಂದೇಭಾರತ್‌ ಎಕ್ಸ್‌ಪ್ರೆಸ್‌ ಸ್ಲೀಪರ್‌ ರೈಲುಗಳ ಸೇವೆ ಭಾರತದಲ್ಲಿ ಈ ಡಿಸೆಂಬರ್‌ನಲ್ಲಿ ವಿಳಂಬ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

Vande Bharat Sleeper Updates: ಭಾರತದಲ್ಲಿ ವಂದೇ ಭಾರತ್‌ನ ಬಹುನಿರೀಕ್ಷಿತ ಸ್ಲೀಪರ್‌ ರೈಲು ಸೇವೆ ಡಿಸೆಂಬರ್‌ನಲ್ಲಿ ಆರಂಭವಾಗಬೇಕಿತ್ತು. ಈ ಸಂಬಂಧ ಅನೌಚಾರಿಕ ಘೋಷಣೆಗಳು ನಿಯಮಿತವಾಗಿ ನಡೆದುಕೊಂಡು ಬಂದಿದ್ದರೂ ಅಧಿಕೃತ ಘೋಷಣೆಗಳು ಮಾತ್ರ ಬಾಕಿಯಿದೆ. ಆದರೆ ಸ್ಲೀಪರ್‌ಗಳು ಉತ್ಪಾದನೆ ಸೇರಿದಂತೆ ಹಲವು ಯೋಜನೆಗಳಿಗೆ ಸಂಬಂಧಿಸಿ ಇನ್ನೂ ಚರ್ಚೆ, ಪ್ರಸ್ತಾವನೆ, ಹೊಸಸೇರ್ಪಡೆಯಂತಹ ಚಟುವಟಿಕೆಗಳು ಮುಂದುವರಿದಿವೆ. ಹೊಸ ಸ್ಲೀಪರ್-ಸುಸಜ್ಜಿತ ವಂದೇ ಭಾರತ್ ರೈಲುಗಳ ವಿನ್ಯಾಸವನ್ನು ಅಂತಿಮಗೊಳಿಸುವಲ್ಲಿ ಭಾರತೀಯ ರೈಲ್ವೆ ಮತ್ತು ರಷ್ಯಾ-ಭಾರತೀಯ ಜಂಟಿ ಉದ್ಯಮ ವಿಭಾಗಗಳು ವಿಳಂಬ ನೀತಿ ಅನುಭವಿಸುತ್ತಿದೆ. ಅದರಲ್ಲೂ ಹೆಚ್ಚಿದ ಶೌಚಾಲಯಗಳು, ಲಗೇಜ್ ಸ್ಥಳಗಳು ಮತ್ತು ಪ್ಯಾಂಟ್ರಿ ಕಾರುಗಳು ಸೇರಿದಂತೆ ಭಾರತೀಯ ರೈಲ್ವೇಯು ವಿನಂತಿಸಿದ ವಿನ್ಯಾಸ ಬದಲಾವಣೆಗಳು, ಇದು ಉತ್ಪಾದನಾ ಟೈಮ್‌ಲೈನ್ ಮತ್ತು ಬಜೆಟ್ ಮೇಲೆ ಪರಿಣಾಮ ಬೀರಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ವಿನ್ಯಾಸ ಬದಲಾವಣೆ

ಭಾರತದಲ್ಲಿ ಐದು ವರ್ಷಗಳಿಂದ ವಂದೇ ಭಾರತ್ ರೈಲುಗಳ ಪ್ರಗತಿ ಹಾದಿ ಈಗ ಸ್ಲೀಪರ್‌ ರೈಲು ಆರಂಭದವರೆಗೂ ಬಂದಿದೆ. ಈಗಾಗಲೇ ಇಂಡೋ-ರಷ್ಯನ್ ಜಂಟಿ ಉದ್ಯಮದೊಂದಿಗೆ (ಜೆವಿ) ಒಪ್ಪಂದಕ್ಕೆ ಸಹಿ ಹಾಕಿದ 14 ತಿಂಗಳ ನಂತರವೂ ಸ್ಲೀಪರ್ ಕೋಚ್‌ಗಳೊಂದಿಗೆ ಈ ಹೊಸ ರೈಲುಗಳ ವಿನ್ಯಾಸವನ್ನು ರೈಲ್ವೆ ಇನ್ನೂ ಅಂತಿಮಗೊಳಿಸಿಲ್ಲ. ಭಾರತೀಯ ಅಗತ್ಯತೆಗಳನ್ನು ಪೂರೈಸಲು ಈಗಾಗಲೇ ರೂಪಿಸಿರುವ ಸ್ಲೀಪರ್‌ ರೈಲಿನಲ್ಲಿ ಹೆಚ್ಚಿನ ಶೌಚಾಲಯಗಳು, ಪ್ರತಿ ಕೋಚ್‌ನಲ್ಲಿ ಹೊಸ ಲಗೇಜ್ ಝೋನ್‌ಗಳು ಮತ್ತು ಪ್ರತಿ ರೈಲಿನಲ್ಲಿ ಪ್ಯಾಂಟ್ರಿ ಕಾರ್‌ನ ಸೇರ್ಪಡೆಯೊಂದಿಗೆ ವಿನ್ಯಾಸ ಬದಲಾಯಿಸಲಾಗಿದೆ.

ಭಾರತೀಯ ರೈಲ್ವೆ ಸ್ಲೀಪರ್‌ ಟ್ರೈನ್‌ಗಳ ನಿರ್ಮಾಣ ಪ್ರಕ್ರಿಯೆಯನ್ನು ಮುಂದೂಡಿದರೆ, ಅವಧಿ ಮುಗಿಸುವ ಸಮಯದ ಮೇಲೆ ಇದು ಖಂಡಿತವಾಗಿಯೂ ಪರಿಣಾಮ ಬೀರುತ್ತದೆ. ನಾವು ತ್ವರಿತವಾಗಿ ಉತ್ಪಾದನೆಯನ್ನು ಪ್ರಾರಂಭಿಸಲು ಉತ್ಸುಕರಾಗಿದ್ದೇವೆ. ನನ್ನ ಭಾವನೆಗಳಿಗೆ, ನಾವು ಚರ್ಚಿಸುತ್ತಿರುವ ಎಲ್ಲವನ್ನೂ ಒಂದೇ ಸಮಯದಲ್ಲಿ, ಎರಡು ಗಂಟೆಗಳಲ್ಲಿ ಪರಿಹರಿಸಬಹುದು.ನಾವು ಕೇವಲ ಪತ್ರಗಳನ್ನು ಕಳುಹಿಸಲು ಮತ್ತು ವಿವರಣೆಗಳಿಗಾಗಿ ಕಾಯುತ್ತಿದ್ದೇವೆ ಎಂದು ರೈಲು ನಿರ್ಮಾಣದ ಉಸ್ತುವಾರಿ ಹೊತ್ತ ಟಿಎಂಎಚ್ ನ ಸಿಇಒ ಕಿರಿಲ್ ಲಿಪಾ ಹೇಳಿರುವುದನ್ನು ಟೈಂಸ್‌ ಆಫ್‌ ಇಂಡಿಯಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಬೃಹತ್‌ ಒಪ್ಪಂದ

ಒಟ್ಟು 1,920 ವಂದೇ ಭಾರತ್ ಸ್ಲೀಪರ್ ಕೋಚ್‌ಗಳನ್ನು ತಯಾರಿಸುವ 55,000 ಕೋಟಿ ಒಪ್ಪಂದವನ್ನುಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ರಷ್ಯಾದ ಜೆವಿ ಯ ಪ್ರಮುಖ ಷೇರುದಾರರು ಅಥವಾ ಟಿಎಂಎಚ್‌ ರೈಲ್ವೇ ಸೊಲ್ಯೂಷನ್ಸ್ ಮತ್ತು ಭಾರತೀಯ ರೈಲ್ವೆ ಮಾಡಿಕೊಂಡಿವೆ.

1 ಲಕ್ಷಕ್ಕೂ ಹೆಚ್ಚು ಮಾನವಶಕ್ತಿಯನ್ನು ಹೊಂದಿರುವ ಜಗತ್ತಿನಾದ್ಯಂತ ಅಗ್ರ ಐದು ರೈಲ್ವೆ ಕಂಪನಿಗಳಲ್ಲಿ ಟಿಎಂಎಚ್‌ ಒಂದಾಗಿದೆ. ರೈಲಿನ ಮೊದಲ ಮಾದರಿಯನ್ನು ವರ್ಷಾಂತ್ಯದ ವೇಳೆಗೆ ಹೊರತರುವ ಭರವಸೆಯಲ್ಲಿದ್ದರು.

ಆದರೆ ಭಾರತೀಯ ರೈಲ್ವೇ ಬೋಗಿಗಳ ವಿನ್ಯಾಸದಲ್ಲಿ ಬದಲಾವಣೆಗಳನ್ನು ಬಯಸಿದ್ದರಿಂದ ಪುನಃ ಕೆಲಸ ಮಾಡಬೇಕಾಯಿತು. ಇಷ್ಟಾದರೂ ಸೇರ್ಪಡೆ ಇನ್ನೂ ನಿಂತಿಲ್ಲ.

ಹೆಚ್ಚುವರಿ ಬೇಡಿಕೆ

ಮೊದಲು ನಮಗೆ 16 ಕೋಚ್‌ಗಳನ್ನು ಹೊಂದಿದ 80 ರೈಲುಗಳಿಗೆ ಬೇಡಿಕೆ ಇಡಲಾಗಿತ್ತು. ಈಗ ಅದನ್ನು 120 ರೈಲುಗಳಿಗೆ ಏರಿಸಿ24 ಕೋಚ್‌ಗಳನ್ನು ಒದಗಿಸುವಂತೆ ಸೂಚಿಸಲಾಗಿದೆ. ಪ್ರತಿ ಕೋಚ್‌ನಲ್ಲಿ ಮೂರು ಶೌಚಾಲಯಗಳಿಗೆ ಹಿಂದಿನ ಷರತ್ತು ಬದಲಿಗೆ, ಈಗ ನಾಲ್ಕು ಶೌಚಾಲಯಗಳನ್ನು ಒದಗಿಸಬೇಕಾಗಿದೆ. ಪ್ರತಿ ರೈಲಿನಲ್ಲಿ ಪ್ಯಾಂಟ್ರಿ ಕಾರ್ ಅನ್ನು ಹೊಂದಿರಬೇಕು ಎಂಬ ಬೇಡಿಕೆ ಬಂದಿದೆ,. ಅದು ಮೂಲ ಟೆಂಡರ್‌ ನಲ್ಲಿ ಇರಲ್ಲಿಲ್ಲ. ರೈಲ್ವೇಯು ಪ್ರತಿ ಕೋಚ್‌ನಲ್ಲಿ ಲಗೇಜ್ ವಲಯಗಳಿಗೆ ಜಾಗವನ್ನು ಒದಗಿಸುವ ಬೇಡಿಕೆ ಬಂದಿದೆ. ಇದರಿಂದ ರೈಲು ಇನ್ನಷ್ಟು ವಿಳಂಬವಾಗಲಿದೆ ಎನ್ನುವುದು ಸಂಸ್ಥೆ ಮುಖ್ಯಸ್ಥರು ನೀಡಿರುವ ವಿವರಣೆ.

ಹೊಸ ವಿನ್ಯಾಸ, ಬೇಡಿಕೆಗಳಿಗೆ ಸಂಬಂಧಿಸಿ ಪತ್ರ ವ್ಯವಹಾರ ನಡೆದಿದ್ದರೂ ಇನ್ನೂ ಅಂತಿಮ ಒಪ್ಪಂದದ ಪತ್ರ ಬಂದಿಲ್ಲ. ಪತ್ರ ವಹಿವಾಟು ವಿಳಂಬವಾಗಿರುವುದು ಉತ್ಪಾದನೆಯ ಮೇಲೂ ಪರಿಣಾಮ ಬೀರಿದೆ ಎನ್ನುವ ಚರ್ಚೆಗಳು ನಡೆದಿವೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.