ಬಾರ್ಡರ್ ಕೋಲಿ ನಾಯಿಯಾಗಿ ತನ್ನ ಅನುಭವ ದಾಖಲಿಸುತ್ತಿರುವ ಜಪಾನಿ ವ್ಯಕ್ತಿಗೆ ಈಗ ಪಾಂಡಾ, ಕರಡಿಯಾಗುವ ಆಸೆ, ಟೋಕೋ ಅನುಭವ ಕಥನ-japan news man who turned himself into a dog also wants to become panda bear and more world news viral news uks ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಬಾರ್ಡರ್ ಕೋಲಿ ನಾಯಿಯಾಗಿ ತನ್ನ ಅನುಭವ ದಾಖಲಿಸುತ್ತಿರುವ ಜಪಾನಿ ವ್ಯಕ್ತಿಗೆ ಈಗ ಪಾಂಡಾ, ಕರಡಿಯಾಗುವ ಆಸೆ, ಟೋಕೋ ಅನುಭವ ಕಥನ

ಬಾರ್ಡರ್ ಕೋಲಿ ನಾಯಿಯಾಗಿ ತನ್ನ ಅನುಭವ ದಾಖಲಿಸುತ್ತಿರುವ ಜಪಾನಿ ವ್ಯಕ್ತಿಗೆ ಈಗ ಪಾಂಡಾ, ಕರಡಿಯಾಗುವ ಆಸೆ, ಟೋಕೋ ಅನುಭವ ಕಥನ

ಬಾರ್ಡರ್ ಕೋಲಿ ನಾಯಿಯಾಗಿ ತನ್ನ ಅನುಭವ ದಾಖಲಿಸುತ್ತಿರುವ ಜಪಾನಿ ವ್ಯಕ್ತಿಗೆ ಈಗ ಪಾಂಡಾ, ಕರಡಿಯಾಗುವ ಆಸೆ ಕಂಡುಬಂದಿದೆ. ಟೋಕೋ ಅನುಭವ ಕಥನ ಯೂಟ್ಯೂಬ್, ಇನ್‌ಸ್ಟಾಗ್ರಾಂಗಳಲ್ಲಿ ದಾಖಲಾಗುತ್ತಿದ್ದು, ಜಗತ್ತಿನ ಕುತೂಹಲಕ್ಕೆ ಕಾರಣವಾಗಿದೆ.

ಬಾರ್ಡರ್ ಕೋಲಿ ತಳಿಯ ನಾಯಿಯಾಗಿ ಬದಲಾದ ಜಪಾನಿನ ವ್ಯಕ್ತಿಗೆ ಈಗ ಕರಡಿ, ನರಿ, ಪಾಂಡಾ ಆಗುವ ಆಸೆಯಂತೆ. ಟೋಕೋ ನಾಯಿಯಾಗಿ ತನ್ನ ಬದುಕಿನ ಅನುಭವಗಳನ್ನು ದಾಖಲಿಸುತ್ತಿದ್ದು, ಯೂಟ್ಯೂಬ್‌, ಇನ್‌ಸ್ಟಾಗ್ರಾಂನಲ್ಲಿ ಅವುಗಳ ಚಿತ್ರಣವಿದೆ.
ಬಾರ್ಡರ್ ಕೋಲಿ ತಳಿಯ ನಾಯಿಯಾಗಿ ಬದಲಾದ ಜಪಾನಿನ ವ್ಯಕ್ತಿಗೆ ಈಗ ಕರಡಿ, ನರಿ, ಪಾಂಡಾ ಆಗುವ ಆಸೆಯಂತೆ. ಟೋಕೋ ನಾಯಿಯಾಗಿ ತನ್ನ ಬದುಕಿನ ಅನುಭವಗಳನ್ನು ದಾಖಲಿಸುತ್ತಿದ್ದು, ಯೂಟ್ಯೂಬ್‌, ಇನ್‌ಸ್ಟಾಗ್ರಾಂನಲ್ಲಿ ಅವುಗಳ ಚಿತ್ರಣವಿದೆ. (YouTube/ I want to be an animal)

ಟೋಕಿಯೋ: ತನ್ನನ್ನು ತಾನು ನಾಯಿಯ ರೂಪಕ್ಕೆ ಪರಿವರ್ತಿಸಿಕೊಂಡು ಕಳೆದ ವರ್ಷ ವೈರಲ್ ಆಗಿದ್ದ ಜಪಾನ್ ವ್ಯಕ್ತಿ, ಈಗ ಪಾಂಡಾ, ಕರಡಿ ಹೀಗೆ ಹಲವು ರೂಪ ಧರಿಸಲು ಉತ್ಸುಕನಾಗಿರುವ ಸುದ್ದಿ ಬಂದಿದೆ. ಟೋಕೋ ಎಂಬ ನಾಯಿಯ ರೂಪ ಪಡೆಯಲು ಆತ ಅಂದು 2 ದಶಲಕ್ಷ ಯೆನ್ ( ಅಂದು11 ಲಕ್ಷ ರೂಪಾಯಿ) ಖರ್ಚು ಮಾಡಿದ್ದ.

ಟಿವಿ ಜಾಹೀರಾತು ಮತ್ತು ಚಲನಚಿತ್ರಗಳಿಗೆ ವೇಷಭೂಷಣಗಳನ್ನು ತಯಾರಿಸುವ ಜಪಾನಿನ ಜೆಪ್ಪೆಟ್ ಸಂಸ್ಥೆಯು ಈ ವ್ಯಕ್ತಿಯ ಹೈಪರ್-ರಿಯಲಿಸ್ಟಿಕ್ ನಾಯಿ ಉಡುಪನ್ನು ರಚಿಸಲು 40 ದಿನಗಳನ್ನು ತೆಗೆದುಕೊಂಡಿತ್ತು. ಕಂಪನಿಯು ಮಿನಿಯೇಚರ್ ಗಳು, ಬಾಡಿ ಸೂಟ್ ಗಳು ಮತ್ತು 3-ಡಿ ಮಾದರಿಗಳನ್ನು ಉತ್ಪಾದಿಸುವಲ್ಲಿ ಪರಿಣತಿ ಹೊಂದಿದೆ.

ಟೋಕೋ ನಾಯಿಯಾಗಿ ಪಡೆದ ಅನುಭವ ಹಂಚಿಕೊಂಡ ವ್ಯಕ್ತಿ

ಈಗ, ಬಾರ್ಡರ್ ಕೋಲಿ ತಳಿಯ ನಾಯಿಯಾಗಿ ತನ್ನ ಬದುಕಿನ ಅನುಭವದ ಬಗ್ಗೆ ಮಾತನಾಡಿದ ಅವರು, “ನನ್ನನ್ನು ಹೊರತುಪಡಿಸಿ ಬೇರೆ ಏನನ್ನಾದರೂ ಆಗಲು ಸಾಧ್ಯವಾಗುವುದು ನಿಜವಾಗಿಯೂ ಸಂತೋಷದ ಅನುಭವ. ನನ್ನನ್ನು ಹೊರತುಪಡಿಸಿ ಬೇರೆ ಯಾರೋ ಆಗಿರುವ ವಿಚಾರದಲ್ಲಿ ಕುತೂಹಲಿ ಮತ್ತು ಉತ್ಸುಕನಾಗಿದ್ದೇನೆ. ಅದನ್ನು ಸಂತೋಷದಿಂದ ಅನುಭವಿಸುತ್ತೇನೆ. ಆದಾಗ್ಯೂ, ನಾಯಿಗಳು ಮತ್ತು ಮನುಷ್ಯರು ವಿಭಿನ್ನ ಅಸ್ಥಿಪಂಜರದ ರಚನೆಗಳನ್ನು ಹೊಂದಿರುವುದು ಗಮನಾರ್ಹ.

ನಾವು ನಮ್ಮ ಕಾಲುಗಳು ಮತ್ತು ತೋಳುಗಳನ್ನು ಬಗ್ಗಿಸುವ ವಿಧಾನವು ವಿಭಿನ್ನವಾಗಿದೆ. ಆದ್ದರಿಂದ ನಾಯಿಯಂತೆ ಕಾಣುವ ರೀತಿಯಲ್ಲಿ ಚಲಿಸುವುದು ತುಂಬಾ ಕಷ್ಟ. ನಾನು ಪ್ರಸ್ತುತ ಹೆಚ್ಚು ನಾಯಿಯಂತೆ ಕಾಣುವ ಚಲನೆಗಳ ಅಧ್ಯಯನ ನಡೆಸುತ್ತಿದ್ದೇನೆ. ಅಲ್ಲದೆ, ಅದು ಕೊಳಕಾದಾಗ ಅದನ್ನು ಸ್ವಚ್ಛಗೊಳಿಸುವುದು ಸ್ವಲ್ಪ ನೋವು ಕೊಡುವ ವಿಚಾರ. ನಾನು ಹೊರಗೆ ಹೋದಾಗ, ಅದರ ಮೇಲೆ ಕೊಳಕು ಬರುತ್ತದೆ, ಮತ್ತು ಧೂಳು ನನ್ನ ತುಪ್ಪಳದಲ್ಲಿ ಸಿಲುಕಿಕೊಳ್ಳುತ್ತದೆ, ಆದ್ದರಿಂದ ಪ್ರತಿ ಬಾರಿಯೂ ಅದನ್ನು ಸ್ವಚ್ಛಗೊಳಿಸಲು ಸಾಕಷ್ಟು ಶ್ರಮವಹಿಸಬೇಕಾಗುತ್ತದೆ” ಎಂದು ವಿವರಿಸಿದರು.

ಪಾಂಡಾ, ಕರಡಿ, ನರಿ ಹೀಗೆ ವಿಭಿನ್ನ ಪ್ರಾಣಿಯಾಗಬೇಕು…

ಟೋಕೊ ಅವರು ಹೊಸ ಪ್ರಾಣಿಯಾಗಿ ಬದುಕಲು ಬಯಸುತ್ತಾರೆ. ನಾಲ್ಕು ಪ್ರಾಣಿಗಳಾಗಿ ಪರಿವರ್ತನೆಯಾಗಬೇಕು ಎಂದು ಬಯಸಿರುವ ವಿಚಾರವನ್ನು ಜಪಾನ್‌ನ ಸುದ್ದಿಮಾಧ್ಯಮಕ್ಕೆ ತಿಳಿಸಿದ್ದಾರೆ. ಆದರೆ ಅವುಗಳಲ್ಲಿ ಎರಡು ವ್ಯವಸ್ಥಾಪನಾ ನಿರ್ಬಂಧಗಳ ಅಪ್ರಾಯೋಗಿಕವಾಗಿದೆ. ನಾಯಿಯ ಬದುಕಿನ ಹೊರತಾಗಿ, ಪಾಂಡಾ, ಕರಡಿ, ನರಿ ಅಥವಾ ಬೆಕ್ಕು ಆಗಲು ಬಯಸುತ್ತಿರುವುದಾಗಿ ಅವರು ಹೇಳಿದರು.

"ನಾನು ಇತರ ಪ್ರಾಣಿಗಳಂತೆ ಆಗಲು ಪ್ರಯತ್ನಿಸಲು ಬಯಸುತ್ತೇನೆ. ನಾನು ವಾಸ್ತವಿಕವಾಗಿ ಮತ್ತೊಂದು ನಾಯಿ, ಪಾಂಡಾ ಅಥವಾ ಕರಡಿಯಾಗಬಹುದು. ನರಿ ಅಥವಾ ಬೆಕ್ಕು ಒಳ್ಳೆಯದು, ಆದರೆ, ಅವು ಮನುಷ್ಯನ ಅನುಭವಕ್ಕೆ ನಿಲುಕುವುದು ಕಷ್ಟ. ಗಾತ್ರದಲ್ಲಿ ಸಣ್ಣವಾಗಿರುವ ಕಾರಣ, ಪರಿವರ್ತನೆ ಕಷ್ಟ. ಇದು ಪ್ರಾಯೋಗಿಕವಾಗಿ ಸಾಧ್ಯವಿಲ್ಲದ ಕೆಲಸ. ಒಂದು ದಿನ ಮತ್ತೊಂದು ಪ್ರಾಣಿಯಾಗುವ ನನ್ನ ಕನಸನ್ನು ನನಸಾಗಿಸಲು ನಾನು ಆಶಿಸುತ್ತೇನೆ" ಎಂದು ಟೋಕೊ ವಾನ್ಕೋಲ್ಗೆ ತಿಳಿಸಿದರು.

ಪ್ರಸ್ತುತ, ಟೋಕೊ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಬಾರ್ಡರ್ ಕೋಲಿಯಾಗಿ ತನ್ನ ದೈನಂದಿನ ಜೀವನವನ್ನು ದಾಖಲಿಸುತ್ತಾನೆ. 65,000 ಚಂದಾದಾರರಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.