Jharkhand Election Live 2024: ಮೊದಲ ಎಕ್ಸಿಟ್ ಪೋಲ್, ಜಾರ್ಖಂಡ್‌ನಲ್ಲಿ ಎನ್‌ಡಿಎ ಜಯಭೇರಿ ಸೂಚನೆ, ಇಂಡಿಯಾ ಒಕ್ಕೂಟಕ್ಕೆ ಹಿನ್ನಡೆ ಸಾಧ್ಯತೆ
Jharkhand Election Live 2024: ಜಾರ್ಖಂಡ್ ವಿಧಾನಸಭೆ ಚುನಾವಣೆ ಮತದಾನೋತ್ತರ ಸಮೀಕ್ಷೆಗಳು ಪ್ರಕಟವಾಗುತ್ತಿದ್ದು, ಆಡಳಿತಾರೂಢ ಜೆಎಂಎಂ ಹಿಂದಿಕ್ಕಿ ಬಿಜೆಪಿ ಅಧಿಕಾರ ಹಿಡಿಯುವ ಸೂಚನೆಗಳಿವೆ.
Jharkhand Election Live 2024: ಜಾರ್ಖಂಡ್ ರಾಜ್ಯದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಜೆಎಂಎಂ ಹಾಗೂ ಇತರ ಪಕ್ಷಗಳ ಇಂಡಿಯಾ(INDIA Block)ಒಕ್ಕೂಟವನ್ನು ಹಿಂದಿಕ್ಕಿ ಬಿಜೆಪಿ ನೇತೃತ್ವದ ಎನ್‌ಡಿಎ ಸ್ಪಷ್ಟ ಬಹುಮತದೊಂದಿಗೆ ಮುನ್ನಡೆ ಸಾಧಿಸಬಹುದು ಎಂದು ಮೊದಲು ಪ್ರಕಟಗೊಂಡ ಮತದಾನೋತ್ತರ ಸಮೀಕ್ಷೆಗಳು( ಎಕ್ಸಿಟ್ ಪೋಲ್) ಹೇಳುತ್ತಿವೆ. ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಗೆಲುವು ಸಾಧಿಸುವ ಸಾಧ್ಯತೆಯಿದೆ ಎಂದು ಎಕ್ಸಿಟ್ ಪೋಲ್‌ಗಳು ತಿಳಿಸಿವೆ.
ಪೀಪಲ್ಸ್ ಪಲ್ಸ್
ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) 42-47 ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದು, 81 ಸ್ಥಾನಗಳ ವಿಧಾನಸಭೆಯಲ್ಲಿ ಇಂಡಿ ಒಕ್ಕೂಟವು 25-30 ಸ್ಥಾನಗಳನ್ನು ಪಡೆಯಬಹುದು ಎಂದು ಮ್ಯಾಟ್ರಿಜ್‌ನ ನಿರ್ಗಮನ ಸಮೀಕ್ಷೆಗಳು ತಿಳಿಸಿವೆ. ಪೀಪಲ್ಸ್ ಪಲ್ಸ್‌ನ ಮತ್ತೊಂದು ನಿರ್ಗಮನ ಸಮೀಕ್ಷೆಯು ಎನ್‌ಡಿಎ 44-53 ಸ್ಥಾನಗಳನ್ನು ಗೆಲ್ಲುತ್ತದೆ ಮತ್ತು ಇಂಡಿಯಾ ಬ್ಲಾಕ್‌ಗೆ 25-37 ಸ್ಥಾನಗಳನ್ನು ನೀಡುತ್ತದೆ ಎಂದು ಮುನ್ಸೂಚನೆ ನೀಡಿದೆ.
ಆಕ್ಸಿಸ್ ಮೈ ಇಂಡಿಯಾ
ಚಾಣಕ್ಯ ಕೂಡ ಜಾರ್ಖಂಡ್‌ನಲ್ಲಿ ಎನ್‌ಡಿಎ ಮುನ್ನಡೆ ಸಿಗಬಹುದು ಎಂದು ಹೇಳಿದೆ. ಇಲ್ಲಿ ಎನ್‌ಡಿಎಗೆ 45ರಿಂದ 50 ಸ್ಥಾನ ಬರಬಹುದು, ಇದರಲ್ಲಿ ಬಿಜೆಪಿಯೇ ಬಹುಮತ ಗಳಿಸಿ ಅಧಿಕಾರ ಹಿಡಿಯಬಹುದು ಎಂದು ತಿಳಿಸಲಾಗಿದೆ. ಅದೇ ರೀತಿ ಇಂಡಿಯಾ ಬ್ಲಾಕ್ ಇಲ್ಲಿ 35ರಿಂದ 38 ಸ್ಥಾನ ಗಳಿಸಬಹುದು. ಆಡಳಿತಾರೂಢ ಜೆಎಂಎಂ 26 , ಕಾಂಗ್ರೆಸ್ 10, ಆರ್‌ಜೆಡಿ 3 ಸ್ಥಾನ ಪಡೆಯಬಹುದು ಎಂದು ಮುನ್ಸೂಚನೆ ನೀಡಲಾಗಿದೆ.
ಟೈಂಸ್ ನೌ ಸಮೀಕ್ಷೆ ಹೇಗಿದೆ
ಟೈಂಸ್ ನೌ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಇಲ್ಲಿಯೂ ಎನ್‌ಡಿಎ 40 ರಿಂದ 44 ಸ್ಥಾನ, ಇಂಡಿಯಾ ಬ್ಲಾಕ್‌ಗೆ 30 ರಿಂದ 40 ಸ್ಥಾನ, ಇತರರು ಒಂದು ಸ್ಥಾನ ಪಡೆಯುವ ಸಾಧ್ಯತೆಗಳಿವೆ.
ಆಕ್ಸಿಸ್ ಮೈ ಇಂಡಿಯಾ ಫಲಿತಾಂಶ ಏನು
ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಗಳ ಪ್ರಕಾರ ಇಂಡಿಯಾ ಬ್ಲಾಕ್ ಭಾರೀ ಬಹುಮತ ಪಡೆಯಲಿದೆ. ಇಂಡಿಯಾ ಬ್ಲಾಕ್ ಗೆ 53 ಸ್ಥಾನ ಬಂದರೆ, ಎನ್‌ಡಿಎ 25 ಸ್ಥಾನ ಸಿಗಬಹುದು ಎನ್ನುವ ಮುನ್ಸೂಚನೆ ನೀಡಲಾಗಿದೆ. ಇತರರೂ 3 ಸ್ಥಾನ ಗೆಲ್ಲಬಹುದು ಎಂದು ಈ ಸಮೀಕ್ಷೆ ಹೇಳಿದೆ.
ಎಷ್ಟು ಕ್ಷೇತ್ರದಲ್ಲಿ ಯಾರ ಸ್ಪರ್ಧೆ
ಇಲ್ಲಿ ಆಡಳಿತಾರೂಢ ಜೆಎಂಎಂ, ಕಾಂಗ್ರೆಸ್ ಹಾಗೂ ಆರ್‌ಜೆಡಿ, ಸಿಪಿಐಎಂ ಸ್ಪರ್ಧೆ ಮಾಡಿವೆ. ಬಿಜೆಪಿ 68 ಸ್ಥಾನಗಳಲ್ಲಿ, ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್ (ಎಜೆಎಸ್‌ಯು) 10 ಸ್ಥಾನಗಳಲ್ಲಿ, ಜನತಾ ದಳ (ಯುನೈಟೆಡ್) 2 ಸ್ಥಾನಗಳಲ್ಲಿ ಮತ್ತು ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) 1 ಸ್ಥಾನಗಳಲ್ಲಿ ಸ್ಪರ್ಧಿಸಿದೆ.
ಅವರ ಪ್ರತಿಸ್ಪರ್ಧಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) 41 ಸ್ಥಾನಗಳಲ್ಲಿ, ಕಾಂಗ್ರೆಸ್ 30 ಸ್ಥಾನಗಳಲ್ಲಿ, ರಾಷ್ಟ್ರೀಯ ಜನತಾ ದಳ 6 ಸ್ಥಾನಗಳಲ್ಲಿ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್-ಲೆನಿನಿಸ್ಟ್) 4 ಸ್ಥಾನಗಳಲ್ಲಿ ಸ್ಪರ್ಧಿಸಿದ್ದಾರೆ.
ಹಿಂದಿನ ಚುನಾವಣೆ ಫಲಿತಾಂಶ
ಹಿಂದಿನ ಚುನಾವಣೆಯಲ್ಲಿ ಜೆಎಂಎಂ ಹಾಗೂ ಕಾಂಗ್ರೆಸ್ ಮೈತ್ರಿಯೊಂದಿಗೆ 46 ಸ್ಥಾನ ಪಡೆದು ಯುಪಿಎ ಅಧಿಕಾರದಲ್ಲಿತ್ತು. ಅದರ ಹಿಂದಿನ ಬಾರಿ ಅಧಿಕಾರದಲ್ಲಿದ್ದ ಬಿಜೆಪಿ ಕಳೆದ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿತ್ತು.