ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Hassan Sex Scandal: ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಬಗ್ಗೆ ಬಿಜೆಪಿ ನಾಯಕ ಅಮಿತ್ ಶಾ ಮೊದಲ ಪ್ರತಿಕ್ರಿಯೆ, ಕಾನೂನು ಕ್ರಮಕ್ಕೆ ಆಗ್ರಹ

Hassan Sex Scandal: ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಬಗ್ಗೆ ಬಿಜೆಪಿ ನಾಯಕ ಅಮಿತ್ ಶಾ ಮೊದಲ ಪ್ರತಿಕ್ರಿಯೆ, ಕಾನೂನು ಕ್ರಮಕ್ಕೆ ಆಗ್ರಹ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಕಾನೂನು ಕ್ರಮ ಜರುಗಲಿ ಎಂದು ಆಗ್ರಹಿಸಿದ್ದಾರೆ. ಅವರ ಹೇಳಿಕೆಯ ವಿಡಿಯೋ ಸಹಿತ ವರದಿ ಇಲ್ಲಿದೆ.

ಪ್ರಜ್ವಲ್ ರೇವಣ್ಣ ಹಗರಣ; ಹಾಸನ ಸಂಸದ ಪ್ರಜ್ವಲ್ ರೇವಣ್ಣ (ಬಲ ಚಿತ್ರ) ಅವರ ಲೈಂಗಿಕ ಹಗರಣಕ್ಕೆ ಸಂಬಂಧಿಸಿ, ಭಾರತದ ಮಾತೃಶಕ್ತಿಗೆ ಜೊತೆಗೆ ಬಿಜೆಪಿ ನಿಲ್ಲಲಿದೆ ಎಂದು ಹೇಳುತ್ತ ಕೇಂದ್ರ ಗೃಹ ಸಚಿವ ಅಮಿತ್ ಷಾ (ಎಡಚಿತ್ರ) ಬಿಜೆಪಿಯ ನಿಲುವು ಸ್ಪಷ್ಟಪಡಿಸಿದ್ರು.
ಪ್ರಜ್ವಲ್ ರೇವಣ್ಣ ಹಗರಣ; ಹಾಸನ ಸಂಸದ ಪ್ರಜ್ವಲ್ ರೇವಣ್ಣ (ಬಲ ಚಿತ್ರ) ಅವರ ಲೈಂಗಿಕ ಹಗರಣಕ್ಕೆ ಸಂಬಂಧಿಸಿ, ಭಾರತದ ಮಾತೃಶಕ್ತಿಗೆ ಜೊತೆಗೆ ಬಿಜೆಪಿ ನಿಲ್ಲಲಿದೆ ಎಂದು ಹೇಳುತ್ತ ಕೇಂದ್ರ ಗೃಹ ಸಚಿವ ಅಮಿತ್ ಷಾ (ಎಡಚಿತ್ರ) ಬಿಜೆಪಿಯ ನಿಲುವು ಸ್ಪಷ್ಟಪಡಿಸಿದ್ರು.

ನವದೆಹಲಿ: ಲೋಕಸಭಾ ಚುನಾವಣೆ ನಡೆಯುತ್ತಿರುವ ಈ ಹೊತ್ತಿನಲ್ಲಿ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧದ ಲೈಂಗಿಕ ಹಗರಣದ ಆರೋಪ ರಾಜಕೀಯ ಸಂಚಲನ ಮೂಡಿಸಿದೆ. ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಗಮನಸೆಳೆದಿದ್ದು, ಮತದಾನಕ್ಕೆ ಎರಡು ದಿನ ಇರುವಾಗ ಬಹಿರಂಗವಾಗಿತ್ತು. ಕರ್ನಾಟಕದಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿ ಮಾಡಿಕೊಂಡು ಲೋಕಸಭೆ ಚುನಾವಣೆ ಎದುರಿಸುತ್ತಿರುವ ಕಾರಣ, ಈ ಹಗರಣಕ್ಕೆ ಸಂಬಂಧಿಸಿ ಬಿಜೆಪಿಯ ನಿಲುವು ಏನು ಎಂದು ಕಾಂಗ್ರೆಸ್ ನಾಯಕರು ಪದೇ ಪದೇ ಕೇಳುತ್ತ ಬಂದಿದ್ದರು.

ಟ್ರೆಂಡಿಂಗ್​ ಸುದ್ದಿ

ಬಿಜೆಪಿಯ ರಾಜ್ಯ ನಾಯಕರು ಕಾನೂನು ಪ್ರಕಾರ ಕ್ರಮ ನಡೆಯಲಿ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಎಸ್‌ಐಟಿ ರಚನೆಯಾಗಿದೆ. ತನಿಖೆ ಆಗಿ, ತಪ್ಪಿತಸ್ಥರ ವಿರುದ್ಧ ಕ್ರಮವಾಗಲಿ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿವೈ ವಿಜಯೇಂದ್ರ ಅವರೂ ಹೇಳಿದ್ದರು. ಇಷ್ಟಾದರೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಬಿಜೆಪಿ ಕೇಂದ್ರ ನಾಯಕರು ಈ ಬಗ್ಗೆ ಸ್ಪಷ್ಟೀಕರಣ ಕೊಡಲಿ, ಬಿಜೆಪಿಯ ನಿಲುವು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದ್ದರು.

ಭಾರತದ ಮಾತೃಶಕ್ತಿಯ ಜೊತೆಗೆ ಬಿಜೆಪಿ; ಅಮಿತ್ ಷಾ ಸ್ಪಷ್ಟೀಕರಣ

ರಾಜಕೀಯವಾಗಿ ಸಂಕಷ್ಟವನ್ನು ತಂದೊಡ್ಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣ ಜೆಡಿಎಸ್‌ಗಷ್ಟೇ ಅಲ್ಲ, ಬಿಜೆಪಿಗೂ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ, ಬಿಜೆಪಿ ನಾಯಕರು ಕೂಡ ಪ್ರಜ್ವಲ್ ಪ್ರಕರಣದಿಂದ ಅಂತರ ಕಾಪಾಡಿಕೊಂಡಿದ್ದಾರೆ. ಇಂದು (ಏಪ್ರಿಲ್ 30) ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಷಾ ಕೂಡ ಮಾತನಾಡಿದ್ದು, “ನಾವು ದೇಶದ 'ಮಾತೃಶಕ್ತಿ' ಜೊತೆ ನಿಲ್ಲುತ್ತೇವೆ. ಈ ವಿಚಾರದಲ್ಲಿ ಬಿಜೆಪಿಯ ನಿಲುವು ಸ್ಪಷ್ಟವಾಗಿದೆ. ಕರ್ನಾಟಕದಲ್ಲಿ ಯಾರ ಸರ್ಕಾರವಿದೆ ಎಂದು ಕಾಂಗ್ರೆಸ್ ಅನ್ನು ಕೇಳಲು ಬಯಸುತ್ತೇನೆ. ಇದು ರಾಜ್ಯದ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆ ಆಗಿರುವುದರಿಂದ ನಾವು ಕೇಂದ್ರ ಸರ್ಕಾರವಾಗಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕಿಲ್ಲ...ನಾವು ಕಾಂಗ್ರೆಸ್ ಪಕ್ಷದ ಸರ್ಕಾರ ಮತ್ತು ತನಿಖೆಯ ಪರವಾಗಿ ನಿಲ್ಲುತ್ತೇವೆ. ಪಾಲುದಾರ ಪಕ್ಷವಾಗಿ ಜೆಡಿಎಸ್ ಇದ್ದರೂ ಸಹ, ಅದು ಕೂಡ ಈ ಹಗರಣಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದೆ. ಇಂದು ಜೆಡಿಎಸ್‌ ಕೋರ್ ಕಮಿಟಿಯ ಸಭೆ ಇದ್ದು ಅದರಲ್ಲಿ ಅವರು ಕ್ರಮ ತೆಗೆದುಕೊಳ್ಳುವವರಿದ್ದಾರೆ” ಎಂದು ವಿವರಿಸಿದ್ದಾರೆ.

ಬಿಜೆಪಿ ನಾಯಕ ಅಮಿತ್ ಷಾ ಅವರ ವಿಡಿಯೋ

ಪ್ರಜ್ವಲ್ ರೇವಣ್ಣ ಹಗರಣ ಸಂಬಂಧ ಬಿಜೆಪಿ ನಾಯಕ ಅಮಿತ್ ಷಾ ಅವರ ವಿಡಿಯೋ ತುಣುಕು ಇಲ್ಲಿದೆ ನೋಡಿ.

ಪ್ರಜ್ವಲ್ ರೇವಣ್ಣ ಹಗರಣ; ಓದಬಹುದಾದ ಇನ್ನಷ್ಟು ಸ್ಟೋರಿಗಳಿವು

1) Hassan Sex Scandal: ಈ ಪ್ರಕರಣಕ್ಕೂ ನಮಗೂ ಸಂಬಂಧವಿಲ್ಲ ಎಂದ ಪ್ರಜ್ವಲ್ ರೇವಣ್ಣ ಚಿಕ್ಕಪ್ಪ ಕುಮಾರಸ್ವಾಮಿ, ಪ್ರಜ್ವಲ್ ಜರ್ಮನಿಗೆ ಪರಾರಿ ಶಂಕೆ -ಇಲ್ಲಿದೆ ಪೂರ್ಣ ವರದಿ

2) ಪ್ರಜ್ವಲ್‌ ನಂತರ ತಂದೆ ಎಚ್‌ಡಿರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ದೂರು, ಮೊಕದ್ದಮೆ ದಾಖಲು- ಪೂರ್ಣ ವರದಿಗೆ ಇಲ್ಲಿ ಕ್ಲಿಕ್ ಮಾಡಿ

3) ಜೆಡಿಎಸ್‌ನಿಂದ ಪ್ರಜ್ವಲ್‌ ರೇವಣ್ಣ ಉಚ್ಚಾಟನೆ, ಮಾಜಿ ಪ್ರಧಾನಿ ದೇವೇಗೌಡ ಆದೇಶ ವಿವರ ವರದಿಗೆ ಇಲ್ಲಿ ಕ್ಲಿಕ್ ಮಾಡಿ

4) Hassan Sex Scandal: ಲೈಂಗಿಕ ಹಗರಣ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಯಾರು?, ಶಿಕ್ಷಣ, ಆಸ್ತಿ ಮತ್ತು ಇತರೆ 5 ಅಂಶಗಳ ವಿವರಗಳಿರುವ ವಿಸ್ತೃತ ವರದಿ ಹೀಗಿದೆ ನೋಡಿ

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

IPL_Entry_Point