Reliance Jio Plans: ಕೈಗೆಟುಕುವ ಮೊಬೈಲ್ ರಿಚಾರ್ಜ್ ಯೋಜನೆಗಳನ್ನು ಘೊಷಿಸಿದ ರಿಲಯೆನ್ಸ್ ಜಿಯೋ; ಐಎಸ್‌ಡಿ ಪ್ಲ್ಯಾನ್ 39 ರೂನಿಂದ ಆರಂಭ
Reliance Jio Plans: ರಿಲಯೆನ್ಸ್ ಜಿಯೊ ಹೊಸ ಐಎಸ್‌ಡಿ ರಿಚಾರ್ಜ್ ಪ್ಲ್ಯಾನ್ ಘೋಷಿಸಿದೆ. ಇದು 39 ರೂಪಾಯಿಯಿಂದ ಆರಂಭವಾಗುವ ಯೋಜನೆಯಾಗಿದ್ದು, ವಿದೇಶದಲ್ಲಿರುವರ ಜತೆ ಮಾತುಕತೆ ಇನ್ನಷ್ಟು ಅಗ್ಗವಾಗಲಿದೆ. ಈ ಯೋಜನೆಯ ಮೂಲಕ ಏಳು ದಿನಗಳ ಕಾಲ ನಿರ್ದಿಷ್ಟ ನಿಮಿಷಗಳ ಕಾಲ ಕರೆ ಮಾಡಿ ಮಾತನಾಡಬಹುದು.
Reliance Jio Plans: ವಿವಿಧ ದೇಶಗಳು ಐಎಸ್‌ಡಿ ದರ ಪರಿಷ್ಕರಿಸಿವೆ. ಬಾಂಗ್ಲಾದೇಶ, ಇಂಗ್ಲೆಂಡ್, ಸೌದಿ ಅರೇಬಿಯಾ, ನೇಪಾಳ, ಚೀನಾ, ಜರ್ಮನಿ, ನೈಜೀರಿಯಾ, ಪಾಕಿಸ್ತಾನ, ಕತಾರ್, ನ್ಯೂಜಿಲೆಂಡ್, ಶ್ರೀಲಂಕಾ, ಸ್ವಿಜರ್‌ಲೆಂಡ್, ಸ್ಪೈನ್, ಇಂಡೋನೇಷ್ಯಾ ಮುಂತಾದ ದೇಶಗಳಲ್ಲಿ ಐಎಸ್‌ಡಿ ದರ ಬದಲಾಗಿದೆ. ಇದಕ್ಕೆ ತಕ್ಕಂತೆ ಜಿಯೋ ಕೂಡ ಐಎಸ್‌ಡಿ ಯೋಜನೆಗಳ ದರ ಪರಿಷ್ಕರಣೆ ಮಾಡಿದೆ.
ರಿಲಯೆನ್ಸ್ ಜಿಯೋ ಪರಿಷ್ಕೃತ ಐಎಸ್‌ಡಿ ದರಗಳು
ರಿಲಯೆನ್ಸ್ ಜಿಯೋ ಪರಿಷ್ಕೃತ ಯೋಜನೆಯಿಂದ ವಿದೇಶಗಳಲ್ಲಿರುವ ಆತ್ಮೀಯರ ಜತೆ, ಬಂಧು ಬಳಗದ ಜತೆ ಹೆಚ್ಚು ಸಮಯ ಮಾತನಾಡಬಹುದಾಗಿದೆ. 39 ರೂಪಾಯಿ ಪ್ಲ್ಯಾನ್ ಹಾಕಿಕೊಂಡರೆ ಕೆನಡಾ ಮತ್ತು ಅಮೆರಿಕದಲ್ಲಿರುವವರ ಜತೆ 30 ನಿಮಿಷಗಳ ಕಾಲ ಆರಾಮವಾಗಿ ಮಾತನಾಡಬಹುದು. ಈ ಯೋಜನೆಯ ವ್ಯಾಲಿಡಿಟಿ 7 ದಿನ ಇರುತ್ತದೆ. 49 ರುಪಾಯಿ ಪ್ಲ್ಯಾನ್ ಹಾಕಿಕೊಂಡರೆ ಬಾಂಗ್ಲಾದೇಗಳಲ್ಲಿರುವ ಸ್ನೇಹಿತರು, ಬಂಧುಗಳ ಜತೆ 20 ನಿಮಿಷ (ಟಾಕ್ ಟೈಮ್) ಮಾತನಾಡಬಹುದು. 59 ರೂಪಾಯಿ ಪ್ಲ್ಯಾನ್‌ನಲ್ಲಿ ಸಿಂಗಾಪುರ, ಥೈಲಾಂಡ್, ಮಲೇಷ್ಯಾ, ಹಾಂಕಾಂಗ್‌ನಲ್ಲಿರುವವರ ಜತೆ 15 ನಿಮಿಷಗಳ ಕಾಲ ಮಾತನಾಡಬಹುದು. 69 ರೂಪಾಯಿ ಪ್ಲ್ಯಾನ್ ನೆರವಿನಿಂದ ನ್ಯೂಜಿಲೆಂಡ್‌ನಲ್ಲಿರುವವರ ಜತೆ 15 ನಿಮಿಷ ಮಾತನಾಡಬಹುದು. ಆಸ್ಟ್ರೇಲಿಯಾದಲ್ಲಿರುವವರ ಜತೆ ಮಾತನಾಡಲು ಕೂಡ ಇದೇ ಪ್ಲ್ಯಾನ್ ಅನ್ವಯವಾಗುತ್ತದೆ. 79 ರೂಪಾಯಿ ಪ್ಲ್ಯಾನ್ ಹಾಕಿಕೊಂಡರೆ ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್, ಸ್ಪೈನ್‌ನಲ್ಲಿರುವವರ ಜತೆ 10 ನಿಮಿಷ ಮಾತನಾಡಬಹುದು.
1,028 ರೂ ಮತ್ತು 1,029 ರೂ ರಿಚಾರ್ಜ್ ಆಫರ್
ಐಎಸ್‌ಡಿ ಪ್ಲ್ಯಾನ್‌ಗಳು ಮಾತ್ರವಲ್ಲದೆ 1,028 ರೂ ಮತ್ತು 1,029 ರೂ ರಿಚಾರ್ಜ್ ಯೋಜನೆಗಳನ್ನು ಘೋಷಿಸಿದೆ. ಇದರಲ್ಲಿ 1,028 ರೂ ಯೋಜನೆಯು 84 ದಿನಗಳ ವ್ಯಾಲಿಡಿಟಿ ಪಿರೆಯಿಡ್ ಹೊಂದಿರುತ್ತದೆ. ಇದು ಅನ್‌ಲಿಮಿಟೆಡ್ ಕಾಲ್ಸ್, 100 ಎಸ್‌ಎಂಎಸ್, 2 ಜಿಬಿ ಪ್ರತಿದಿನ ಡೇಟಾ ಇತ್ಯಾದಿ ಫೀಚರ್‌ಗನ್ನು ಹೊಂದಿದೆ. ಜಿಯೋ 5ಜಿ ಕವರೇಜ್ ಇರುವವರು ಅನ್‌ಲಿಮಿಟೆಡ್ 5 ಜಿ ಡೇಟಾ ಪ್ರಯೋಜನ ಪಡೆಯಬಹುದು. ಸ್ವಿಗ್ಗಿ ಒನ್‌ಲೈಟ್ ಉಚಿತ ಬಳಕೆಯೂ ಇದರಲ್ಲಿ ದೊರಕುತ್ತದೆ. ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೌಡ್ ಕೂಡ ದೊರಕುತ್ತದೆ.
ಇದೇ ರೀತಿ ಜಿಯೋ 1,029 ರೂಪಾಯಿ ಪ್ಲ್ಯಾನ್‌ನಲ್ಲಿ 1,028 ರೂ ಪ್ಲ್ಯಾನ್‌ನ ಎಲ್ಲಾ ಫೀಚರ್‌ಗಳು ಇರುತ್ತವೆ. ಇದು ಅನ್‌ಲಿಮಿಟೆಡ್ ಕಾಲ್ಸ್, 100 ಎಸ್‌ಎಂಎಸ್, 2 ಜಿಬಿ ಪ್ರತಿದಿನ ಡೇಟಾ ಇತ್ಯಾದಿ ಫೀಚರ್‌ಗಳನ್ನು ಹೊಂದಿದೆ. ಜಿಯೋ 5ಜಿ ಕವರೇಜ್ ಇರುವವರು ಅನ್‌ಲಿಮಿಟೆಡ್ 5 ಜಿ ಡೇಟಾ ಪ್ರಯೋಜನ ಪಡೆಯಬಹುದು. ಸ್ವಿಗ್ಗಿ ಒನ್‌ಲೈಟ್ ಉಚಿತ ಬಳಕೆಯೂ ಇದರಲ್ಲಿ ದೊರಕುತ್ತದೆ. ಹೆಚ್ಚುವರಿಯಾಗಿ ಅಮೆಜಾನ್ ಪ್ರೈಮ್ ಲೈಟ್ ಮತ್ತು ಜಿಯೋ ಸೂಟ್ ಅಪ್ಲಿಕೇಷನ್‌ಗಳು ದೊರಕುತ್ತವೆ.
ಜಿಯೋ 39 ರೂಪಾಯಿಯ ಐಎಸ್‌ಡಿ ಪ್ಲ್ಯಾನ್ ಪರಿಚಯಿಸಿದ್ದರಿಂದ ವಿದೇಶದಲ್ಲಿರುವ ಮಕ್ಕಳು, ಬಂಧು ಬಳಗದ ಜತೆ ಹೆಚ್ಚು ಸಮಯ ಮಾತನಾಡಲು ಭಾರತೀಯರಿಗೆ ಸಾಧ್ಯವಾಗಲಿದೆ. ಇಲ್ಲಿಯವರೆಗೆ ಹೆಚ್ಚು ದುಬಾರಿ ಮೊತ್ತ ಪಾವತಿಸಿ ಮಾತನಾಡಬೇಕಿತ್ತು. ಅಥವಾ ಬೇರೆ ಯಾವುದಾದರೂ ಅಪ್ಲಿಕೇಷನ್‌ಗಳ ನೆರವಿನಿಂದ ಆನ್‌ಲೈನ್ ಕಾಲ್ ಮಾಡಬೇಕಿತ್ತು.