ಕನ್ನಡ ಸುದ್ದಿ  /  Nation And-world  /  Tanishq Gold 100 Ton Gold Exchange Celebration For Tanishq 20 Lakh Customers Exchanged Old Gold Tanishq Gold Rate Uks

Tanishq Gold: ತನಿಷ್ಕ್‌ಗೆ 100 ಟನ್‌ ಗೋಲ್ಡ್‌ ಎಕ್ಸ್‌ಚೇಂಜ್‌ ಸಂಭ್ರಮ; ಹಳೆಯ ಚಿನ್ನ ವಿನಿಮಯ ಮಾಡಿಕೊಂಡ ತನಿಷ್ಕ್‌ನ 20 ಲಕ್ಷ ಗ್ರಾಹಕರು

Tanishq Gold: ಹಳೆಯ ಚಿನ್ನ ಕೊಟ್ಟು ಹೊಸ ಚಿನ್ನ ಖರೀದಿಸಲು ಉತ್ತೇಜಿಸಬೇಕು ಎಂಬ ವಿಚಾರ ಹೊಸದಲ್ಲ. ಆದರೆ ಅದರ ಅನುಷ್ಠಾನಕ್ಕಾಗಿಯೇ ಟಾಟಾ ಸಮೂಹದ ತನಿಷ್ಕ್‌ ತನ್ನ ಪರಿಷ್ಕೃತ ಗೋಲ್ಡ್‌ ಎಕ್ಸ್‌ಚೇಂಜ್‌ ಪಾಲಿಸಿಯನ್ನು ಗ್ರಾಹಕರಿಗೆ ಪರಿಚಯಿಸಿದೆ. ಪರಿಣಾಮ, 20 ಲಕ್ಷ ಗ್ರಾಹಕರು ಈ ವಿನಿಮಯ ನೀತಿಯ ಪ್ರಯೋಜನ ಪಡೆದುಕೊಂಡು ದಾಖಲೆ ನಿರ್ಮಿಸಲು ಕೈಜೋಡಿಸಿದರು.

ತನಿಷ್ಕ್‌ನ ಗೋಲ್ಡ್‌ ಎಕ್ಸ್‌ಚೇಂಜ್‌ ನೀತಿಯ ಪ್ರಕಾರ, ದೇಶಾದ್ಯಂತ 20 ಲಕ್ಷ ಭಾರತೀಯರು 100 ಟನ್ ಚಿನ್ನ ವಿನಿಮಯ ಮಾಡಿಕೊಂಡರು. (ಸಾಂಕೇತಿಕ ಚಿತ್ರ)
ತನಿಷ್ಕ್‌ನ ಗೋಲ್ಡ್‌ ಎಕ್ಸ್‌ಚೇಂಜ್‌ ನೀತಿಯ ಪ್ರಕಾರ, ದೇಶಾದ್ಯಂತ 20 ಲಕ್ಷ ಭಾರತೀಯರು 100 ಟನ್ ಚಿನ್ನ ವಿನಿಮಯ ಮಾಡಿಕೊಂಡರು. (ಸಾಂಕೇತಿಕ ಚಿತ್ರ) (tanishq.co.in)

ಚಿನ್ನದ ಬೆಲೆ ದಿನವಹಿ ಏರಳಿತ ಇದ್ದರೂ, ಕಾಲಾನುಕ್ರಮದಲ್ಲಿ ಏರುಗತಿಯಲ್ಲೇ ಸಾಗುತ್ತಿರುವುದು ವಾಸ್ತವ. ಈ ಹಿನ್ನೆಲೆಯಲ್ಲಿ, ಭಾರತದ ಅತ್ಯಂತ ವಿಶ್ವಾಸಾರ್ಹ ಆಭರಣ ಬ್ರಾಂಡ್ ಆದ ತನಿಷ್ಕ್ (Tanishq) ತನ್ನ ಗ್ರಾಹಕರ ವಿಕಸನಶೀಲ ಅಗತ್ಯಗಳನ್ನು ಪೂರೈಸುವ ಕೆಲಸ ಮಾಡಿದೆ. ಅಸ್ಥಿರ ಚಿನ್ನದ ದರದ ನಡುವೆಯೇ ತನ್ನ ಪರಿಷ್ಕೃತ ಚಿನ್ನ ವಿನಿಮಯ ನೀತಿ (ಗೋಲ್ಡ್ ಎಕ್ಸ್‌ಚೇಂಜ್‌ ಪಾಲಿಸಿ) ಯನ್ನು ಪರಿಚಯಿಸಿದೆ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಈ ಪರಿಷ್ಕೃತ ನೀತಿಯ ಪ್ರಕಾರ, ಗ್ರಾಹಕರು ತಮ್ಮ ಬಳಿ ಇರುವ ಹಳೆಯ ಚಿನ್ನವನ್ನು ತನಿಷ್ಕ್‌ಗೆ ತಂದುಕೊಟ್ಟು, ಹೊಸ ಚಿನ್ನವನ್ನು ಪಡೆದುಕೊಳ್ಳುವ ಅಥವ ಇತ್ತೀಚಿನ ವಿನ್ಯಾಸದ ಚಿನ್ನಾಭರಣದ ಜತೆಗೆ ವಿನಿಮಯ ಮಾಡಿಕೊಳ್ಳುವ ಅವಕಾಶವನ್ನು ನೀಡಿದೆ. ಇದರ ಪರಿಣಾಮ 20 ಲಕ್ಷದಷ್ಟು ಗ್ರಾಹಕರು ತನಿಷ್ಕ್‌ಗೆ ಬಂದು ಹಳೆಯ ಚಿನ್ನವನ್ನು ಹೊಸ ಚಿನ್ನಕ್ಕೆ ವಿನಿಮಯ ಮಾಡಿಕೊಳ್ಳುತ್ತಿದ್ದು, ಹೊಸ ದಾಖಲೆ ಬರೆಯಲು ಕೈ ಜೋಡಿಸಿದರು. ತನಿಷ್ಕ್‌ ತನ್ನ ಪರಿಷ್ಕೃತ ಚಿನ್ನ ವಿನಿಮಯ ನೀತಿಯ ಪ್ರಕಾರ, 1,00,000 ಕಿಲೋ ಚಿನ್ನ ವಿನಿಮಯ ಮಾಡಿಕೊಂಡು ದಾಖಲೆ ನಿರ್ಮಿಸಿತು.

ತನಿಷ್ಕ್‌ನ ಪರಿಷ್ಕೃತ ಚಿನ್ನ ವಿನಿಮಯ ನೀತಿಯ ಕಾರಣ ಗ್ರಾಹಕರು, ತಮ್ಮ ಹಳೆಯ ಆಭರಣಗಳನ್ನು ಸೊಗಸಾದ ಹೊಸ ಆಭರಣಗಳನ್ನಾಗಿ ಪರಿವರ್ತಿಸಿಕೊಳ್ಳುವುದು ಸಾಧ್ಯವಾಯಿತು. ಇದೇ ಕಾರಣಕ್ಕೆ 20 ಲಕ್ಷ ಗ್ರಾಹಕರು ತನಿಷ್ಕ್‌ ಮೇಲೆ ನಂಬಿಕೆ ಮತ್ತು ನಿಷ್ಠೆಯನ್ನು ತೋರಿಸಿದ್ದು ಎಂದು ಕಂಪನಿ ಹೇಳಿಕೊಂಡಿದೆ.

ಎಲ್ಲ ವಯೋಮಾನದವರನ್ನೂ ಆಕರ್ಷಿಸಿದ ವಿನಿಮಯ ಯೋಜನೆ

ಇಂದಿನ ಚಲನಶೀಲ ಮಾರುಕಟ್ಟೆಯಲ್ಲಿ ತನಿಷ್ಕ್‌ ಗೋಲ್ಡ್‌ ಎಕ್ಸ್‌ಚೇಂಜ್‌ ಪ್ರೋಗ್ರಾಂ, ಗ್ರಾಹಕರಲ್ಲಿ ನಂಬಿಕೆ, ಪಾರದರ್ಶಕತೆ, ಸಾಟಿ ಇಲ್ಲದ ಮೌಲ್ಯದ ದಾರಿದೀಪದಂತೆ ಕಾರ್ಯನಿರ್ವಹಿಸುತ್ತಿದೆ. ಇದು ಹೆಚ್ಚುತ್ತಿರುವ ಚಿನ್ನದ ಬೆಲೆಯ ನಡುವೆ ಗ್ರಾಹಕರಿಗೆ ಪರಿಹಾರ ರೂಪವಾಗಿ ಗೋಚರಿಸಿದೆ. ಈ ನೀತಿಯು ಎಲ್ಲ ತನಿಷ್ಕ್ ಮಳಿಗೆಗಳಲ್ಲಿ ಚಾಲ್ತಿಯಲ್ಲಿದೆ. ಮದುವೆ ಮತ್ತು ಇತರೆ ಶುಭ ಸಮಾರಂಭಗಳ ಸೀಸನ್‌ನಲ್ಲಿ ಈ ನೀತಿ ಜಾರಿಯಾಗಿರುವುದು ಗ್ರಾಹಕರಿಗೆ ಅನುಕೂಲವಾಗಿ ಗೋಚರಿಸಿದೆ. ಎಲ್ಲರ ಅಗತ್ಯಗಳನ್ನು ಪೂರೈಸುವ ಯೋಜನೆಯಾಗಿ ರೂಪುಗೊಂಡಿದೆ. ಎಲ್ಲ ವಯೋಮಾನದ ಮಹಿಳೆಯರನ್ನೂ ಈ ವಿನಿಮಯ ಯೋಜನೆ ಆಕರ್ಷಿಸಿದೆ.

ಈ ಸಂಭ್ರಮಾಚರಣೆ ಸಂದರ್ಭದಲ್ಲಿ ಮಾತನಾಡಿದ ಟೈಟಾನ್‌ ಕಂಪನಿ ಲಿಮಿಟೆಡ್‌ನ ಆಭರಣ ವಿಭಾಗದ ಸಿಇಒ ಅಜಯೋ ಚಾವ್ಲಾ,"ದೇಶಾದ್ಯಂತ 20 ಲಕ್ಷ ಭಾರತೀಯರು 100 ಟನ್ ಚಿನ್ನ ವಿನಿಮಯ ಮಾಡಿಕೊಂಡಿರುವ ಈ ಸಂಭ್ರಮಾಚರಣೆಯು ಕಳೆದ ಹಲವು ವರ್ಷಗಳಲ್ಲಿ ಸಂಪಾದಿಸಿದ ವಿಶ್ವಾಸ ಹಾಗೂ ನಿಷ್ಠೆತ ಸಂಕೇತವಾಗಿದೆ. ಇಂದಿನ ಅಧಿಕ ಬೆಲೆಯಲ್ಲಿ ಮತ್ತು ತಮ್ಮ ಲಾಕರ್‌ಗಳಲ್ಲಿ ಹಾಗೆಯೇ ಇಟ್ಟಿದ್ದ ಚಿನ್ನವನ್ನು ವಿನಿಮಯ ಮಾಡಿಕೊಳ್ಳಲು ಇದು ಗ್ರಾಹಕರಿಗೆ ಉತ್ತಮ ಅವಕಾಶ. ಈ ಉಪಕ್ರಮವು ಚಿನ್ನದ ಆಮದನ್ನು ಕಡಿಮೆ ಮಾಡುವ ಕಾರಣದಿಂದ ದೇಶದ ಹಿತಕ್ಕೂ ಉತ್ತಮ. ಚಿನ್ನ ಮರುಬಳಕೆ ಆಗುತ್ತಿರುವ ಕಾರಣ ಭೂಮಿಗೂ ಉತ್ತಮ. ಈ ಆಚರಣೆಯ ಭಾಗವಾಗಲು ನಾವು ಎಲ್ಲ ಗ್ರಾಹಕರನ್ನು ಆಹ್ವಾನಿಸುತ್ತೇವೆ. ಅವರ ಹಳೆಯ ಚಿನ್ನವನ್ನು ಅಪರಿಮಿತ ಖಜಾನೆಯಾಗಿ ಪರಿವರ್ತಿಸುವ ಸ್ಮಾರ್ಟ್ ಆಯ್ಕೆಯನ್ನು ಅವರ ಮುಂದಿಡುತ್ತಿದ್ದೇವೆ" ಎಂದು ಬಣ್ಣಿಸಿದರು.

ವಿನಿಮಯ ನೀತಿ ಯಾವುದಕ್ಕೆಲ್ಲ ಅನ್ವಯ; ವಿನಿಮಯಕ್ಕೆ ಐದು ಕಾರಣ

ಗ್ರಾಹಕರು ತಮ್ಮ ಹಳೆಯ ಚಿನ್ನಾಭರಣಗಳನ್ನು ತನಿಷ್ಕ್‌ನಲ್ಲಿ ವಿನಿಮಯ ಮಾಡಿಕೊಳ್ಳಲು ಅನುಕೂಲಕರ 5 ಕಾರಣಗಳು ಇಲ್ಲಿವೆ:

1. ಗ್ರಾಹಕರು ತಮ್ಮ ಚಿನ್ನಕ್ಕೆ ಗರಿಷ್ಠ ಮೌಲ್ಯವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ತನಿಷ್ಕ್ ಶೂನ್ಯ ಕಡಿತ ಒದಗಿಸುತ್ತದೆ.

2. ತನಿಷ್ಕ್ ಭಾರತದ ಯಾವುದೇ ಆಭರಣಕಾರರಿಂದ ಚಿನ್ನದ ಆಭರಣಗಳನ್ನು ವಿನಿಮಯಕ್ಕಾಗಿ ಸ್ವೀಕರಿಸುತ್ತದೆ

3. ತನಿಷ್ಕ್ ವರ್ಷವಿಡೀ ಚಿನ್ನದ ವಿನಿಮಯ ಸೇವೆಗಳನ್ನು ನೀಡುತ್ತದೆ, ಗ್ರಾಹಕರಿಗೆ ನಮ್ಯತೆ ಮತ್ತು ಅನುಕೂಲತೆಯನ್ನು ಒದಗಿಸುತ್ತದೆ.

4. ಸೊಗಸಾದ ಕರಕುಶಲತೆಯನ್ನು ಪ್ರದರ್ಶಿಸುವ ಸಂಕೀರ್ಣ ವಿನ್ಯಾಸದ, ಕರಕುಶಲ ಆಭರಣ ತುಣುಕುಗಳಿಗೆ ತನಿಷ್ಕ್ ಲಭ್ಯತೆಯನ್ನು ಒದಗಿಸುತ್ತದೆ.

5. ತನಿಷ್ಕ್‌ನ ವಿಶ್ವಾಸಾರ್ಹ ಬ್ರ್ಯಾಂಡ್ ಪರಂಪರೆ ಮತ್ತು ಪಾರದರ್ಶಕ ವಿನಿಮಯ ಪ್ರಕ್ರಿಯೆಯು ಎಲ್ಲ ಗ್ರಾಹಕರಿಗೆ ತೊಂದರೆ-ಮುಕ್ತ ಅನುಭವವನ್ನು ನೀಡುತ್ತದೆ.

ಗ್ರಾಹಕರಿಗೆ ನಮ್ಯತೆ ಮತ್ತು ಅನುಕೂಲಕ್ಕಾಗಿ ಯಾವುದೇ ಆಭರಣ ವ್ಯಾಪಾರಿಗಳಿಂದ ಖರೀದಿಸಿದ ಹಳೆಯ ಚಿನ್ನವನ್ನು ಸ್ವೀಕರಿಸಲು ತನಿಷ್ಕ್ ಈ ವಿನಿಮಯ ಕೊಡುಗೆಯನ್ನು ವಿಸ್ತರಿಸಿದೆ. ಈ ಆಫರ್ ಎಲ್ಲ ತನಿಷ್ಕ್ ಮಳಿಗೆಗಳಲ್ಲಿ ಮಾನ್ಯವಾಗಿದೆ. ಷರತ್ತು ಮತ್ತು ನಿಬಂಧನೆಗಳು ಅನ್ವಯ. ಈ ವಿನಿಮಯ ಕಾರ್ಯಕ್ರಮವು ಗೋಲ್ಡ್‌ ಪ್ಲೇನ್, ಗ್ಲಾಸ್ ಕುಂದನ್, ಕುಂದನ್ ಪೋಲ್ಕಿ, ಓಪನ್ ಪೋಲ್ಕಿ, ಪಿಜೆಡಬ್ಲ್ಯುಎಸ್, ಕಲರ್ ಸ್ಟೋನ್ ಇತ್ಯಾದಿ ಸೇರಿ ವ್ಯಾಪಕ ಶ್ರೇಣಿಯ ಆಭರಣಗಳಿಗೆ ಅನ್ವಯಿಸುತ್ತದೆ. ಆದರೂ, ಷರತ್ತು ಮತ್ತು ನಿಬಂಧನೆ ಇಲ್ಲೂ ಅನ್ವಯ.