Atiq Ahmad: ಈದ್ ಸಂದೇಶದಲ್ಲಿ ಅತೀಕ್ ಅಹ್ಮದ್ ಹತ್ಯೆಗೆ ಪ್ರತಿಕಾರ ತೀರಿಸುವುದಾಗಿ ಘೋಷಿಸಿದ ಆಲ್ ಖೈದಾ ಉಗ್ರ ಸಂಘಟನೆ
ಭಯೋತ್ಪಾದಕ ಸಂಘಟನೆ ಅಲ್ ಖೈದಾವು (AQIS- al Qaeda in Indian Subcontinent ) ಇತ್ತೀಚೆಗೆ ಹತ್ಯೆಯಾದ ಅತೀಕ್ ಅಹ್ಮದ್ ಮತ್ತು ಅವನ ಸಹೋದರ ಅಶ್ರಫ್ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಭಾರತದ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದೆ.
ಜಗತ್ತಿನೆಲ್ಲೆಡೆ ಮುಸ್ಲಿಂ ಸಮುದಾಯವು ಈದ್ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದೆ. ಇಂತಹ ಸಮಯದಲ್ಲಿ ಭಾರತೀಯ ಉಪಖಂಡದಲ್ಲಿನ ಭಯೋತ್ಪಾದಕ ಸಂಘಟನೆ ಅಲ್ ಖೈದಾವು (AQIS- al Qaeda in Indian Subcontinent ) ಇತ್ತೀಚೆಗೆ ಹತ್ಯೆಯಾದ ಅತೀಕ್ ಅಹ್ಮದ್ ಮತ್ತು ಅವನ ಸಹೋದರ ಅಶ್ರಫ್ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಭಾರತದ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದೆ. ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಲೈವ್ ಟೆಲಿವಿಷನ್‌ನಲ್ಲಿ ಹತ್ಯೆಗೀಡಾದವರನ್ನು ಹುತಾತ್ಮರು ಎಂದು ಈ ಉಗ್ರ ಸಂಘಟನೆ ತಿಳಿಸಿದೆ.
ಈದ್ ಅಲ್-ಫಿತರ್ ಹಬ್ಬದ ಸಮಯದಲ್ಲಿ ಅಲ್ ಖೈದಾದ ಪ್ರಚಾರ ಮಾಧ್ಯಮ ವಿಭಾಗವಾದ ಅಸ್-ಸಾಹಬ್ ಬಿಡುಗಡೆ ಮಾಡಿದ ಏಳು ಪುಟಗಳ ನಿಯತಕಾಲಿಕೆಯಲ್ಲಿ ಈ ಈದ್ ಸಂದೇಶ ನೀಡಲಾಗಿದೆ. ರಾಷ್ಟ್ರ ರಾಜಧಾನಿಯ ಭದ್ರತಾ ತಿಹಾರ್ ಜೈಲಿನಿಂದ ತನ್ನ ಸದಸ್ಯರನ್ನು ಬಿಡುಗಡೆ ಮಾಡಿಸುವುದಾಗಿಯೂ ಉಗ್ರ ಸಂಘಟನೆ ತಿಳಿಸಿದೆ.
"ದಬ್ಬಾಳಿಕೆಯಿಂದ ನಿಮ್ಮನ್ನು ರಕ್ಷಿಸುತ್ತೇವೆ. ಅದು ಅಮೆರಿಕದ ಶ್ವೇತಭವನದಲ್ಲಿರಬಹುದು ಅಥವಾ ದೆಹಲಿಯ ಪ್ರಧಾನ ಮಂತ್ರಿಯ ಮನೆಯಾಗಿರಬಹುದು ಅಥವಾ ರಾವಲ್ಪಿಂಡಿಯ GHQ ಆಗಿರಬಹುದು. ಟೆಕ್ಸಾಸ್‌ನಿಂದ ತಿಹಾರ್‌ನಿಂದ ಅಡ್ಯಾಲಾವರೆಗೆ - ನಾವು ಎಲ್ಲಾ ಮುಸ್ಲಿಂ ಸಹೋದರ ಸಹೋದರಿಯರನ್ನು ಬಂಧನದಿಂದ ಮುಕ್ತಿಗೊಳಿಸುತ್ತೇವೆ" ಎಂದು ಈ ಏಳು ಪುಟಗಳ ಸಂದೇಶದಲ್ಲಿ ತಿಳಿಸಲಾಗಿದೆ.
ಇತ್ತೀಚೆಗೆ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್‌ನನ್ನು ಪೊಲೀಸ್ ಸಿಬ್ಬಂದಿ ತಪಾಸಣೆಗಾಗಿ ಕರೆದೊಯ್ಯುತ್ತಿದ್ದಾಗ ಪ್ರಯಾಗ್‌ರಾಜ್ ಆಸ್ಪತ್ರೆಯಲ್ಲಿ ಮಾಧ್ಯಮ ಸಂವಾದದ ಸಂದರ್ಭದಲ್ಲಿ ಪತ್ರಕರ್ತರಂತೆ ನಟಿಸಿದ ಮೂವರು ವ್ಯಕ್ತಿಗಳು ಇವರಿಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು.
ಬಳಿಕ ಪಟನಾ ಮಸೀದಿ ಬಳಿ ಅತೀಕ್ ಅಹ್ಮದ್ ಪರ ಘೋಷಣೆಗಳು ಮೊಳಗಿದ್ದವು. ಬಿಹಾರ ರಾಜಧಾನಿಯ ಅತಿದೊಡ್ಡ ಮಸೀದಿಯ ಬಳಿ ನಿನ್ನೆಯೂ ಅತೀಕ್ ಅಹ್ಮದ್ ಮತ್ತು ಅಶ್ರಫರನ್ನು ಹುತಾತ್ಮರೆಂದು ಘೋಷಿಸುವ ಘೋಷಣೆಗಳು ನಿನ್ನೆಯೂ ಕೇಳಿಬಂದಿತ್ತು.
ಉತ್ತರ ಪ್ರದೇಶ ಪೊಲೀಸ್ ಕಸ್ಟಡಿಯಲ್ಲಿ ಅತೀಕ್ ಅಹ್ಮದ್ ಕೊಲೆ ನಡೆದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಕೂಡ ಹೇಳಿದ್ದರು. ಯುಪಿ ಪೊಲೀಸರ ಸಮ್ಮುಖದಲ್ಲೇ ಹಂತಕರು ತಲೆಗೆ ಗುಂಡಿಟ್ಟು ಕೊಲ್ಲಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಇದು ಪೂರ್ವನಿಯೋಜಿತ ಕೃತ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಓವೈಸಿ ಆರೋಪಿಸಿದ್ದಾರೆ.
ಅತೀಕ್ ಮತ್ತು ಅಶ್ರಫ್ ಸಹೋದರರನ್ನು ಕೊಲೆಗೈದವರು ಭಯೋತ್ಪಾದಕರು. ಅವರು ಮುಂದಿನ ದಿನಗಳಲ್ಲಿ ಮತ್ತಷ್ಟ ಜನರನ್ನು ಕೊಲ್ಲಬಹುದು ಎಂದು ಅಸಾದುದ್ದೀನ್ ಓವೈಸಿ ಎಚ್ಚರಿಸಿದ್ದಾರೆ. ಅಲ್ಲದೇ ಅತೀಕ್ ಹಂತಕರ ಮೇಲೆ ಯುಎಪಿಎ ಕಾಯ್ದೆಯಡಿ ಪ್ರಕರಣ ಏಕೆ ದಾಖಲಿಸಿಲ್ಲ ಎಂದೂ ಯುಪಿ ಸರ್ಕಾರವನ್ನು ಓವೈಸಿ ಪ್ರಶ್ನಿಸಿದ್ದಾರೆ.
ವಿಭಾಗ