ಮುಂಬಯಿನ ಬೀದಿಗೆ ಬಾತ್‌ರೂಮ್‌ನಿಂದ ಓಡಿ ಬಂದ ಯುವತಿಯ ಟವಲ್ ಜಾರಿತು, ಕಂಗಾಲಾದ್ರು ಜನ- ವೈರಲ್ ವಿಡಿಯೋ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮುಂಬಯಿನ ಬೀದಿಗೆ ಬಾತ್‌ರೂಮ್‌ನಿಂದ ಓಡಿ ಬಂದ ಯುವತಿಯ ಟವಲ್ ಜಾರಿತು, ಕಂಗಾಲಾದ್ರು ಜನ- ವೈರಲ್ ವಿಡಿಯೋ

ಮುಂಬಯಿನ ಬೀದಿಗೆ ಬಾತ್‌ರೂಮ್‌ನಿಂದ ಓಡಿ ಬಂದ ಯುವತಿಯ ಟವಲ್ ಜಾರಿತು, ಕಂಗಾಲಾದ್ರು ಜನ- ವೈರಲ್ ವಿಡಿಯೋ

Tending News; ಸೋಷಿಯಲ್ ಮೀಡಿಯಾ ಸೆಲೆಬ್ರಿಟಿಗಳು ದಿನಕ್ಕೊಂದು ಹೊಸ ಅವತಾರದಲ್ಲಿ ಕಾಣಿಸಿಕೊಂಡು ಮನೆಮಾತಾಗಿ ಬಿಡುತ್ತಾರೆ. ಅಂತಹದೊಂದು ವಿದ್ಯಮಾನ ಇದು. ಮುಂಬಯಿನ ಬೀದಿಗೆ ಬಾತ್‌ರೂಮ್‌ನಿಂದ ಓಡಿ ಬಂದ ಯುವತಿಯ ಟವಲ್ ಜಾರಿತು, ಕಂಗಾಲಾದ್ರು ಜನ. ಅಂದ ಹಾಗೆ ಈ ಸೆಲೆಬ್ರಿಟಿ ಹೆಸರು ತನುಮಿತಾ ಘೋ‍ಷ್. ಅವರ ವೈರಲ್ ವಿಡಿಯೋ ನೀವೂ ನೋಡಿ.

ಮುಂಬಯಿನ ಬೀದಿಗೆ ಬಾತ್‌ರೂಮ್‌ನಿಂದ ಓಡಿ ಬಂದ ಯುವತಿಯ ಟವಲ್ ಜಾರಿತು, ಕಂಗಾಲಾದ್ರು ಜನ. ವೈರಲ್ ವಿಡಿಯೋದ ದೃಶ್ಯಗಳು ಮತ್ತು ಯುವತಿ ತನುಮಿತಾ ಘೋಷ್‌
ಮುಂಬಯಿನ ಬೀದಿಗೆ ಬಾತ್‌ರೂಮ್‌ನಿಂದ ಓಡಿ ಬಂದ ಯುವತಿಯ ಟವಲ್ ಜಾರಿತು, ಕಂಗಾಲಾದ್ರು ಜನ. ವೈರಲ್ ವಿಡಿಯೋದ ದೃಶ್ಯಗಳು ಮತ್ತು ಯುವತಿ ತನುಮಿತಾ ಘೋಷ್‌

ಮುಂಬಯಿ: ಶತಾಯ ಗತಾಯ ಫೇಮಸ್ ಆಗಬೇಕು, ಜಗತ್ತು ತನ್ನ ಬಗ್ಗೆ ಮಾತನಾಡಬೇಕು ಎಂಬ ಆಶಯದೊಂದಿಗೆ ಕೆಲಸ ಮಾಡುವವರು ಅನೇಕರು. ಸೋಷಿಯಲ್ ಮೀಡಿಯಾ ಬಳಕೆ ಹೆಚ್ಚಾದ ಬಳಿಕ ಇಂತಹ ಪ್ರವೃತ್ತಿ ಕೂಡ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣಗಳ ಈ ಯುಗದಲ್ಲಿ ಜನ ಫೇಮಸ್ ಆಗಲು ಏನನ್ನು ಮಾಡಲೂ ಹಿಂಜರಿಯುವುದಿಲ್ಲ. ತನ್ನ ಕ್ರಿಯೆ ಸಮಾಜದ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು, ತನ್ನನ್ನು ಹಿಂಬಾಲಿಸುವ ಯುವಜನರ ಮನಸ್ಸಿನ ಮೇಲೆ ಯಾವ ಪರಿಣಾಮ ಬೀರುಬಹುದು ಎಂಬುದರ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳುವಂತೆ ಕಾಣುವುದಿಲ್ಲ.

ಇದಕ್ಕೆ ಪೂರಕವೆನಿಸುವ ಒಂದು ವಿದ್ಯಮಾನದ ವಿಡಿಯೋ ವೈರಲ್ ಆಗಿದೆ. ಹೌದು, ಮುಂಬೈನ ಬೀದಿಯಲ್ಲಿ ನಡೆದ ನಾಟಕೀಯ ವಿದ್ಯಮಾನವದು. ಸಾಮಾಜಿಕ ಜಾಲತಾಣದ ಸೆಲೆಬ್ರಿಟಿಯೊಬ್ಬರು ಟವೆಲ್ ಸುತ್ತಿ ರಸ್ತೆಗೆ ಬಂದರು. ನೋಡಿದವರು ಆಕೆಯೇನೋ ಬಾತ್‌ ರೂಮ್‌ನಿಂದ ಹಾಗೆಯೇ ಎದ್ದು ಬಂದಳೇನೋ ಎಂದುಕೊಳ್ಳಬೇಕು.

ಆಕೆ ನಡೆದುಕೊಂಡು ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಟವಲ್‌ ಜಾರಿತು. ಅದನ್ನಾಕೆ ಎತ್ತಿ ಸೈಡ್‌ಗೆ ಎಸೆದರು. ಅಲ್ಲಿದ್ದವರಲ್ಲೆ ಒಂದು ಕ್ಷಣ ಕಂಗಾಲಾಗಿ ಹೋದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಮಿಂತ್ರಾ ಫ್ಯಾಷನ್‌ ಸೂಪರ್‌ಸ್ಟಾರ್ ತನುಮಿತಾ ಘೋ‍ಷ್‌

ವೈರಲ್ ವಿಡಿಯೋದಲ್ಲಿದ್ದ ಯುವತಿ ಬೇರಾರೂ ಅಲ್ಲ, ಮಿಂತ್ರಾ ಫ್ಯಾಷನ್ ಸೂಪರ್‌ಸ್ಟಾರ್ ವಿಜೇತೆ, ಸೆಲೆಬ್ರಿಟಿ ತನುಮಿತಾ ಘೋಷ್. ಇನ್‌ಸ್ಟಾಗ್ರಾಮ್‌ನಲ್ಲಿ ಈಕೆಗೆ 37000 ಕ್ಕೂ ಹೆಚ್ಚು ಅನುಯಾಯಿಗಳಿದ್ದು, ಇತ್ತೀಚೆಗೆ ಮುಂಬೈನ ಜನನಿಬಿಡ ಬೀದಿಗಳಲ್ಲಿ ದಿಟ್ಟ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದರು. ವೈರಲ್ ವಿಡಿಯೋದ ದೃಶ್ಯ ಗಮನಿಸಿದರೆ, ಬಾತ್ ರೂಮ್‌ನಿಂದ ಓಡಿ ಬಂದವರಂತೆ ಕಾಣುತ್ತಿದ್ದ ತನುಮಿತಾ ಮುಂಬೈನ ಬೀದಿಗಳಲ್ಲಿ ಸಹಜವೆಂಬಂತೆ ನಡೆದಾಡುತ್ತಿರುವುದು ಕಂಡುಬಂದಿದೆ.

ಬಳಿಕ ಅಲ್ಲೇ ಬೆಂಚ್‌ ಮೇಲೆ ಕುಳಿತು ತಲೆ ಒರೆಸುತ್ತಿರುವಂತೆ ಕಂಡುಬಂತು. ಬಳಿಕ ಎದ್ದು ನಾಲ್ಕಾರು ಹೆಜ್ಜೆ ಹೋದ ಕೂಡಲೇ ತಲೆಗೆ ಸುತ್ತಿದ ಟವೆಲ್ ಅಷ್ಟೇ ಅಲ್ಲ, ಮೈಮುಚ್ಚಿದ ಟವೆಲ್ ಅನ್ನೂ ಜಾರಿಸಿ ದೂರ ಎಸೆದರು. ಅಷ್ಟೇ, ಅಲ್ಲಿ ಈ ದೃಶ್ಯ ನೋಡುತ್ತಿದ್ದವರೆಲ್ಲ ಒಂದರೆ ಕ್ಷಣ ಕಂಗಾಲಾಗಿ ಹೋದರು.

ಇನ್ನು, ಈ ವಿಡಿಯೋ ಹಿನ್ನೆಲೆಯಲ್ಲಿ 'ತೌಬಾ-ತೌಬಾ' ಹಾಡು ಪ್ಲೇ ಆಗುತ್ತಿದೆ. ತನ್ನ ಶೀರ್ಷಿಕೆಯಲ್ಲಿ, ಮುಂಬೈನಲ್ಲಿರುವ ಜನರು ತನ್ನ ನೋಟವನ್ನು ನೋಡಿದ ನಂತರ 'ತೌಬಾ-ತೌಬಾ' ಗುನುಗಬಹುದು ಎಂದು ಆಕೆ ತಮಾಷೆಯಾಗಿ ಬರೆದುಕೊಂಡಿದ್ದಾರೆ.

ತನುಮಿತಾ ಘೋ‍ಷ್‌ ಅವರ ವೈರಲ್ ವಿಡಿಯೋ ಹೀಗಿದೆ ನೋಡಿ

ಇದ್ದಕ್ಕಿದ್ದಂತೆ ತನುಮಿತಾ ಟವೆಲ್ ಅನ್ನು ಎಸೆದಾಗ ಕಂಗಾಲಾಗಿ ನೋಡಿದವರು ಆಕೆ ಒಳಗೆ ಇನ್ನೊಂದು ಉಡುಪು ಧರಿಸಿರುವುದು ಕಂಡು ಸಮಾಧಾನದ ನಿಟ್ಟುಸಿರು ಬಿಟ್ಟದ್ದು ಕಾಣಬಹುದು. ಆಕೆ ಎದುರಲ್ಲಿ ಬಂದ ವ್ಯಕ್ತಿಯೊಬ್ಬರ ಜಾಕೆಟ್ ತೆಗೆದು ಮೈಗೇರಿಸಿಕೊಳ್ಳುವ ದೃಶ್ಯದೊಂದಿಗೆ ವಿಡಿಯೋ ಕೊನೆಯಾಗುತ್ತದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಅಪ್‌ಲೋಡ್ ಮಾಡಿದ ಕೆಲವೇ ಗಂಟೆಗಳಲ್ಲಿ ಅದು ವೈರಲ್ ಆಗಿದೆ. ಇದು 10 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ ಮತ್ತು ಎಣಿಕೆಯಾಗಿದೆ. ಈ ವಿಡಿಯೋಗೆ ಹಲವು ಕಾಮೆಂಟ್‌ಗಳು ಕೂಡ ಬಂದಿವೆ. ಅವರ ಕೆಲಸ ಮತ್ತು ಉದ್ದೇಶಗಳ ಬಗ್ಗೆ ಹೆಚ್ಚಿನವರು ಪ್ರಶ್ನೆಗಳನ್ನು ಎತ್ತಿದ್ದಾರೆ. ತನಗೆ ವಿಶೇಷ ಟಾಸ್ಕ್‌ ಇರುವ ಕಾರಣ ಈ ವಿಡಿಯೋ ಮಾಡಿರುವುದಾಗಿ ತನುಮಿತಾ ಸ್ಪಷ್ಟೀಕರಣವನ್ನೂ ಕೊಟ್ಟಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.