ಭೋರ್ಗರೆದು ಹರಿಯುತ್ತಿರುವ ನದಿಯ ತಡೆಗೋಡೆ ಇಲ್ಲದ ಸೇತುವೆ ದಾಟಿದ ಬಸ್; ಉಸಿರು ಬಿಗಿಹಿಡಿದು ನೋಡುವಂತೆ ಮಾಡುವ ವೈರಲ್ ವಿಡಿಯೋ
Viral Video: ವಯನಾಡು ಭೂಕುಸಿತದ ವಿಡಿಯೋಗಳು ವೈರಲ್ ಆಗಿರುವುದರ ಜೊತೆಗೆ ಆ ಜಿಲ್ಲೆಯ ಪಕ್ಕದ ಜಿಲ್ಲೆ ಕೋಯಿಕ್ಕೋಡ್‌ನಿಂದ ಲಭ್ಯವಾಗಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಉಸಿರು ಬಿಗಿಹಿಡಿದು ನೋಡುವಂತೆ ಮಾಡುವ ವೈರಲ್ ವಿಡಿಯೋದಲ್ಲಿದೆ ಭೋರ್ಗರೆದು ಹರಿಯುತ್ತಿರುವ ನದಿಯ ತಡೆಗೋಡೆ ಇಲ್ಲದ ಸೇತುವೆ ದಾಟಿದ ಬಸ್‌ನ ದೃಶ್ಯ.
ಕಾಸರಗೋಡು: ಭೂಕುಸಿತಕ್ಕೆ ಒಳಗಾದ ವಯನಾಡು ಜಿಲ್ಲೆಯ ನೆರೆಯ ಜಿಲ್ಲೆ ಕೋಯಿಕ್ಕೋಡ್ ಜಿಲ್ಲೆಯಲ್ಲೂ ಕಳೆದ ಕೆಲವು ದಿನಗಳಿಂದ ವ್ಯಾಪಕ ಧಾರಾಕಾರ ಮಳೆಯಾಗುತ್ತಿದೆ. ಅಲ್ಲಿಂದ ಬಂದ ವೈರಲ್ ವಿಡಿಯೋ ಒಂದರಲ್ಲಿ ಮೈದುಂಬಿ ಹರಿಯುತ್ತಿರುವ ನದಿಯ ತಡೆಗೋಡೆ ಇಲ್ಲದ ಸೇತುವೆ ಮೇಲೆ ಬಸ್ ಸಂಚರಿಸಿದ ದೃಶ್ಯ ನೋಡಿ ಅನೇಕರು ಎದೆ ಹಿಡಿದುಕೊಂಡಿದ್ದಾರೆ.
ವಯನಾಡ್ ಭೂಕುಸಿತಕ್ಕೆ ಕನಿಷ್ಠ 150 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಉತ್ತರ ಕೇರಳದಲ್ಲಿ ಭಾರಿ ಮಳೆಯಿಂದಾಗಿ ಉಂಟಾದ ವಿನಾಶದ ತೀವ್ರತೆಯನ್ನು ಪ್ರದರ್ಶಿಸುವ ಉದ್ವಿಗ್ನ ಕ್ಷಣ ಕೋಯಿಕ್ಕೋಡ್‌ನ ಈ ವೈರಲ್ ವಿಡಿಯೋದಲ್ಲಿದೆ.
ವಯನಾಡ್ ಜಿಲ್ಲೆಯ ಗಡಿಯಲ್ಲಿರುವ ಕೋಯಿಕ್ಕೋಡ್‌ನ ಉತ್ತರ ಭಾಗದಲ್ಲಿ ಅಲ್ಲಲ್ಲಿ ಭೂಕುಸಿತ ಸಂಭವಿಸಿದ್ದು ಹಲವಾರು ಮನೆಗಳಿಗೆ ಹಾನಿಯಾಗಿದೆ. ಕೆಲವು ಕಡೆ ಸೇತುವೆ ಮತ್ತು ರಸ್ತೆಗಳು ಕೊಚ್ಚಿಹೋಗಿವೆ.
ಪ್ರವಾಹ ಪೀಡಿತ ನದಿಯ ಸೇತುವೆಯಲ್ಲಿ ಬಸ್ ಸಂಚರಿಸಿದ ವಿಡಿಯೋ ನೋಡಿ
ಕೋಯಿಕ್ಕೋಡ್ ಜಿಲ್ಲೆಯಲ್ಲೂ ನಾಳೆ ರೆಡ್ ಅಲರ್ಟ್
ಕೋಯಿಕ್ಕೋಡ್ ಜಿಲ್ಲೆಯಲ್ಲಿ ಕಳೆದ ಎರಡು ಮೂರು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದ್ದು, ಇಂದು ಮತ್ತು ನಾಳೆಯೂ ರೆಡ್ ಅಲರ್ಟ್ ಘೋಷಣೆಯಾಗಿದೆ. ಈ ನಡುವೆ, ಕೋಯಿಕ್ಕೋಡ್ ತಾಲೂಕಿನಲ್ಲಿ 24 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದ್ದು, 298 ಜನರಿಗೆ ಆಶ್ರಯ ನೀಡಲಾಗಿದೆ. ವಡಕರ ತಾಲೂಕು ಶಿಬಿರ (21 ಜನರು), ಕೊಯಿಲಾಂಡಿ ತಾಲೂಕಲ್ಲಿ ಏಳು ಶಿಬಿರಗಳು (161 ಜನರು) ಮತ್ತು ತಾಮರಸ್ಸೇರಿ ತಾಲೂಕಲ್ಲಿ(374 ಜನರು) ಎಂಟು ಶಿಬಿರಗಳನ್ನು ಸ್ಥಾಪಿಸಲಾಗಿದೆ.
ವಯನಾಡಿನ ಚೂರಲ್ಮಾಲಾದಲ್ಲಿ ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಸೇನೆ ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್ಡಿಆರ್ಎಫ್) ಭಾಗಿಯಾಗಿವೆ. ಹಗ್ಗಗಳನ್ನು ಬಳಸಿ, ಸೈನಿಕರನ್ನು ನದಿಯುದ್ದಕ್ಕೂ ಸಾಗಿಸಲಾಯಿತು, ಇದು ಉಕ್ಕಿ ಹರಿಯುತ್ತಿದೆ. ಕೇರಳ ಸರ್ಕಾರ ಮಂಗಳವಾರ ಮತ್ತು ಬುಧವಾರ ರಾಜ್ಯದಲ್ಲಿ ಅಧಿಕೃತ ಶೋಕಾಚರಣೆ ಘೋಷಿಸಿದೆ.
ವಯನಾಡು ಭೂಕುಸಿತಕ್ಕೆ ಕಾರಣವೇನು?: ಕೇರಳದ ವಯನಾಡು ಜಿಲ್ಲೆಯ ಗುಡ್ಡಗಾಡು ಪ್ರದೇಶಗಳಲ್ಲಿ ಮಂಗಳವಾರ ಮುಂಜಾನೆ ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿದೆ. ಹಲವರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಕೇರಳದಲ್ಲಿ ರೆಡ್ ಅಲರ್ಟ್: ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಕೇರಳದ ಎಂಟು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ಇಡುಕ್ಕಿ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಝಿಕೋಡ್, ವಯನಾಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಪತ್ತನಂತಿಟ್ಟ, ಅಲಪ್ಪುಳ, ಕೊಟ್ಟಾಯಂ ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲಿ ಇಂದು ಆರೆಂಜ್ ಅಲರ್ಟ್ ಘೋಷಣೆಯಾಗಿದೆ.
"ರೇಶನ್ ಕಾರ್ಡ್‌ಗಳು ಮತ್ತು ತೋಟಗಳ ಮಸ್ಟರಿಂಗ್ ದಾಖಲೆಗಳ ಆಧಾರದ ಮೇಲೆ ಪಟ್ಟಿಯನ್ನು ಸಿದ್ಧಪಡಿಸಲಾಗುವುದು. ಶಿಬಿರಗಳು ಮುಂದುವರಿಯುತ್ತದೆ ಮತ್ತು ಸಮಗ್ರ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಶೀಘ್ರವೇ ಪುನರ್ವಸತಿ ಕೈಗೊಳ್ಳಲಾಗುವುದು ಎಂದು ರಾಜನ್ ಹೇಳಿದ್ದಾರೆ.
ಜುಲೈ 30 ರಂದು ಭೂಕುಸಿತದಿಂದ ಹಾನಿಗೊಳಗಾದ ವಯನಾಡ್ ಜಿಲ್ಲೆಯಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸಲು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬುಧವಾರ ಬೆಳಿಗ್ಗೆ ಸಭೆ ನಡೆಸಿದರು.
ಭೂಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ. ನಿರಂತರ ಮಳೆಯ ಹಿನ್ನೆಲೆಯಲ್ಲಿ ಮಂಗಳವಾರ ವಯನಾಡು ಜಿಲ್ಲೆಯ ಮೆಪ್ಪಾಡಿಯ ಗುಡ್ಡಗಾಡು ಪ್ರದೇಶಗಳಲ್ಲಿ 158 ಕ್ಕೆ ಏರಿಕೆಯಾಗಿದೆ ಎಂದು ಕೇರಳ ಕಂದಾಯ ಇಲಾಖೆ ಬುಧವಾರ ತಿಳಿಸಿದೆ.
ಸಂತ್ರಸ್ತರ ಸಂಖ್ಯೆ ಇಂದು ಸಂಜೆಯೊಳಗೆ ಲಭ್ಯವಾಗಲಿದೆ ಎಂದು ಕೇರಳ ಕಂದಾಯ ಮತ್ತು ವಸತಿ ಸಚಿವ ಕೆ ರಾಜನ್ ಹೇಳಿದ್ದಾರೆ.
(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆಎಚ್‌ಟಿ ಕನ್ನಡ ಬೆಸ್ಟ್.ಕರ್ನಾಟಕದ ತಾಜಾ ವಿದ್ಯಮಾನ, ಅದೇ ರೀತಿರಾಜಕೀಯ ವಿಶ್ಲೇಷಣೆ, ದೇಶ ಮತ್ತು ಜಗತ್ತಿನ ವಿದ್ಯಮಾನಗಳ ವರದಿಗಳನ್ನು ಓದಲುkannada.hindustantimes.com/nation-and-world ಕ್ಕೆ ಭೇಟಿ ನೀಡಿ.)