ಸಿಟಿ ರವಿ ಕೇಸ್ ಸಿಐಡಿಗೆ ಹಸ್ತಾಂತರ; ಸತ್ಯ ಹೊರ ಬರಬೇಕು ಎಂಬುದಷ್ಟೇ ಉದ್ದೇಶ ಎಂದ ಗೃಹ ಸಚಿವ ಡಾ ಜಿ ಪರಮೇಶ್ವರ
ಕನ್ನಡ ಸುದ್ದಿ  /  ಕರ್ನಾಟಕ  /  ಸಿಟಿ ರವಿ ಕೇಸ್ ಸಿಐಡಿಗೆ ಹಸ್ತಾಂತರ; ಸತ್ಯ ಹೊರ ಬರಬೇಕು ಎಂಬುದಷ್ಟೇ ಉದ್ದೇಶ ಎಂದ ಗೃಹ ಸಚಿವ ಡಾ ಜಿ ಪರಮೇಶ್ವರ

ಸಿಟಿ ರವಿ ಕೇಸ್ ಸಿಐಡಿಗೆ ಹಸ್ತಾಂತರ; ಸತ್ಯ ಹೊರ ಬರಬೇಕು ಎಂಬುದಷ್ಟೇ ಉದ್ದೇಶ ಎಂದ ಗೃಹ ಸಚಿವ ಡಾ ಜಿ ಪರಮೇಶ್ವರ

CT Ravi Case: ವಿಧಾನ ಪರಿಷತ್‌ ಕಲಾಪ ಸ್ಥಳದಲ್ಲಿ ಕಲಾಪ ಮುಂದೂಡಲ್ಪಟ್ಟ ಬಳಿಕ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸಿಟಿ ರವಿ ಅವಾಚ್ಯ ಪದ ಬಳಸಿದ್ದಾರೆ ಎನ್ನಲಾದ ಸಿಟಿ ರವಿ ಕೇಸ್‌ ಸಿಐಡಿಗೆ ಹಸ್ತಾಂತರ ಮಾಡಲಾಗಿದೆ. ಸತ್ಯ ಹೊರಬರಬೇಕು ಎಂಬುದಷ್ಟೇ ಉದ್ದೇಶ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ ಹೇಳಿದ್ದಾರೆ.

ಬಿಜೆಪಿ ಸದಸ್ಯ ಸಿಟಿ ರವಿ ಕೇಸ್ ಸಿಐಡಿಗೆ ಹಸ್ತಾಂತರ; ಸತ್ಯ ಹೊರಬರಬೇಕು ಎಂಬುದಷ್ಟೇ ಉದ್ದೇಶ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ ಹೇಳಿದ್ದಾರೆ.
ಬಿಜೆಪಿ ಸದಸ್ಯ ಸಿಟಿ ರವಿ ಕೇಸ್ ಸಿಐಡಿಗೆ ಹಸ್ತಾಂತರ; ಸತ್ಯ ಹೊರಬರಬೇಕು ಎಂಬುದಷ್ಟೇ ಉದ್ದೇಶ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ ಹೇಳಿದ್ದಾರೆ. (HT News )

CT Ravi Case: ವಿಧಾನ ಪರಿಷತ್ ಸದನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಸದಸ್ಯ ಸಿಟಿ ರವಿ ಅವಾಚ್ಯ ಪದ ಬಳಕೆ ಮಾಡಿದ್ದರು ಎನ್ನಲಾದ ಪ್ರಕರಣ ಮತ್ತು ಸಿಟಿ ರವಿ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸಿದ ಪ್ರಕರಣಗಳನ್ನು ಸಿಐಡಿ ತನಿಖೆಗೆ ಆದೇಶಿಸಲಾಗಿದೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ ಮಂಗಳವಾರ ತಿಳಿಸಿದರು. ಸುದ್ದಿಗಾರರ ಜತೆಗೆ ಮಾತನಾಡುತ್ತ, ಯಾವುದೇ ಹಸ್ತಕ್ಷೇಪವಿಲ್ಲದೆ ತನಿಖೆಗೆ ಅವಕಾಶ ನೀಡಬೇಕು. ಹಾಗಾಗಿ ಅದರ ಬಗ್ಗೆ ಸಿಐಡಿ ತನಿಖೆಗೆ ಆದೇಶಿಸಿದ್ದೇನೆ, ವಿಚಾರಣೆ ನಡೆಯುತ್ತಿರುವಾಗ ನಾವು ಯಾವುದೇ ಹೇಳಿಕೆ ನೀಡಬಾರದು ಎಂದು ಪರಮೇಶ್ವರ ಹೇಳಿದರು. ಪೊಲೀಸರು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾರೆ ಮತ್ತು ಸ್ಪೀಕರ್ ಅವರು ತಮ್ಮ ಕೆಲಸವನ್ನು ಮಾಡುತ್ತಾರೆ. ತನಿಖೆ ಮುಗಿಯಲಿ. ಅಲ್ಲಿವರೆಗೂ ತಾಳ್ಮೆ ಇರಲಿ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದರು.

ಸತ್ಯ ಬಹಿರಂಗವಾಗಬೇಕು ಎಂದ ಗೃಹ ಸಚಿವ ಡಾ ಜಿ ಪರಮೇಶ್ವರ್

ಸಿಟಿ ರವಿ ಕೇಸ್‌ನಲ್ಲಿ ಎಫ್‌ಐಆರ್ ದಾಖಲಿಸಲು ವಿಳಂಬವಾಗಲಿದೆ. ಎರಡು ಕೇಸ್‌ಗಳಿವೆ. ಎರಡರಲ್ಲೂ ಸತ್ಯವನ್ನು ಬಯಲಿಗೆಳೆಯುವ ಮಹತ್ವವನ್ನು ಅರಿಯಬೇಕು ಎಂದು ಸಚಿವ ಪರಮೇಶ್ವರ ಹೇಳಿದರು. "ಸತ್ಯವನ್ನು ಬಹಿರಂಗಪಡಿಸಬೇಕಾಗಿದೆ. ನಾವು ಸಾಕ್ಷಿಗಳನ್ನು ಪರಿಶೀಲಿಸಬೇಕಾಗಿದೆ, ಆದ್ದರಿಂದ ಇದನ್ನು ನಿರ್ವಹಿಸಲು ಸಿಐಡಿ ತನಿಖೆಯನ್ನು ಮಾಡಿಸಲಾಗುತ್ತಿದೆ" ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದರು.

ಸಿಟಿ ರವಿ ಕೇಸ್‌ನಲ್ಲಿ ಅಧಿಕೃತ ಸಾಕ್ಷ್ಯಗಳಿಲ್ಲ; ಪರಿಷತ್ ಸಭಾಪತಿ ರೂಲಿಂಗ್‌

ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಬಿಜೆಪಿ ಎಂಎಲ್ಸಿ ರವಿ ಪ್ರಕರಣದ ಕುರಿತು ಸೋಮವಾರ ಸ್ಪಷ್ಟನೆ ನೀಡಿದರು. ವಿಧಾನ ಪರಿಷತ್‌ನ ಅಧಿಕೃತ ಕ್ಯಾಮೆರಾಗಳಲ್ಲಿ ಈ ವಿದ್ಯಮಾನ ದಾಖಲಾಗಿಲ್ಲ. ಪರಿಷತ್ತಿಗೆ ಸಂಬಂಧಿಸಿ ಅಧಿಕೃತ ಕ್ಯಾಮೆರಾ ಫೂಟೇಜ್‌ಗಳೇ ಸಾಕ್ಷ್ಯಗಳು. ಖಾಸಗಿ ಮಾಧ್ಯಮಗಳ ವಿಡಿಯೋ ಫೂಟೇಜ್‌ ಸಾಕ್ಷ್ಯವಾಗಿ ಪರಿಗಣಿಸಲಾಗದು. ಅವುಗಳನ್ನು ಎಫ್‌ಎಸ್‌ಎಲ್‌ಗೆ ರವಾನಿಸಬೇಕಾಗುತ್ತದೆ. ಈ ವಿಷಯದ ಬಗ್ಗೆ ಚರ್ಚಿಸಲು ಸಿಟಿ ರವಿ ಮತ್ತು ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ಇಬ್ಬರನ್ನೂ ಕರೆಯಿಸಿ ಮಾತನಾಡಿದ್ದಾರೆ. ಇಬ್ಬರೂ ತಮ್ಮ ಹೇಳಿಕೆ ಮತ್ತು ನಿಲುವುಗಳಿಗೆ ಬದ್ಧರಾಗಿ ನಿಂತಿದ್ದಾರೆ ಎಂದು ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ನಮ್ಮ ಪರಿಷತ್ತಿನ ಮಾಧ್ಯಮಗಳಿಂದ ನಮಗೆ ಯಾವುದೇ ಪುರಾವೆ ಸಿಕ್ಕಿಲ್ಲ. ಹಾಗಾಗಿ ನಾನು ಮೊದಲು ಸಿಟಿ ರವಿ ಅವರಿಗೆ ಕರೆ ಮಾಡಿ ರಾಜಿ ಮಾಡಿಕೊಳ್ಳಲು ಬಯಸುತ್ತೀರಾ ಎಂದು ಕೇಳಿದಾಗ ಅವರು 'ಇಲ್ಲ' ಎಂದು ಹೇಳಿದರು. ನಂತರ ನಾನು ಅವರಿಗೆ (ಲಕ್ಷ್ಮಿ ಹೆಬ್ಬಾಳ್ಕರ್) ಕರೆ ಮಾಡಿದೆ' ಎಂದು ಅವರು ಹೇಳಿದರು. ಇಲ್ಲ, ನಮ್ಮ ಹೇಳಿಕೆಗೆ ನಾವು ಬದ್ಧರಿದ್ದೇವೆ.' ಎಂದು ಹೇಳಿದ್ದಾಗಿ ಹೊರಟ್ಟಿ ವಿವರಿಸಿದರು. "ನಾವು ಕಾರ್ಯದರ್ಶಿ ಮತ್ತು ಇತರ ಜನರೊಂದಿಗೆ ಕೂಲಂಕಷವಾಗಿ ಚರ್ಚಿಸಿದ್ದೇವೆ. ಕಾನೂನು ಸಂಬಂಧಪಟ್ಟ ಪುಸ್ತಕಗಳನ್ನು ಅಧ್ಯಯನ ಮಾಡಿ ನಮ್ಮ ತೀರ್ಪು ನೀಡಿದ್ದೇವೆ" ಎಂದು ಸಭಾಪತಿ ಹೊರಟ್ಟಿ ಹೇಳಿದರು.

ಸಿಟಿ ರವಿ ಅವರ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ದಾಖಲಿಸಿರುವ ದೂರು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಸಿಟಿ ರವಿ ಮೇಲೆ ಹಲ್ಲೆ ಯತ್ನಕ್ಕೆ ಸಂಬಂಧಿಸಿದ ಕೇಸ್ ಕೂಡ ದಾಖಲಾಗಿದೆ. ಆದರೆ, ಸಿಟಿ ರವಿ ಅವರು ಕೊಟ್ಟ ದೂರಿಗೆ ಹಿಂಬರಹವಷ್ಟೇ ಅವರಿಗೆ ಸಿಕ್ಕಿದ್ದು, ಎಫ್‌ಐಆರ್ ದಾಖಲಾಗಿಲ್ಲ. ಈ ನಡುವೆ, ವಿಧಾನ ಪರಿಷತ್ ಸದಸ್ಯನಾಗಿರುವ ತನ್ನನ್ನು ಬಂಧಿಸಿ ಊರೆಲ್ಲ ಸುತ್ತಾಡಿಸಿ, ಮಾನಸಿಕ ಹಿಂಸೆ ಕೊಟ್ಟು, ಮಾನವ ಹಕ್ಕು ಉಲ್ಲಂಘಿಸಿದ್ದಕ್ಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧ ದೂರು ನೀಡುವುದಾಗಿ ಸಿಟಿ ರವಿ ಹೇಳಿದ್ದಾರೆ.

Whats_app_banner