Shiva Shiva Song Lyrics: ಗುರುವೇ ನಿನ್ನಾಟ ಬಲ್ಲೋರ್ ಯಾರ್ ಯಾರೋ... ಕೆಡಿ ಸಿನಿಮಾದ ಶಿವ ಶಿವ ಹಾಡಿಗೆ ಧ್ರುವ ಸರ್ಜಾ ಫ್ಯಾನ್ಸ್ ಖುಷ್
KD Shiva Shiva Song Lyrics: ಜೋಗಿ ಪ್ರೇಮ್ ನಿರ್ದೇಶನದ, ಆಕ್ಷನ್‌ಪ್ರಿನ್ಸ್ ದ್ರುವ ಸರ್ಜಾ ನಟಿಸಿರುವ ಕೆಡಿ ದಿ ಡೆವಿಲ್ ಸಿನಿಮಾದ ಶಿವ ಶಿವ ಹಾಡಿನ ಲಿರಿಕ್ಸ್ ಬಿಡುಗಡೆಯಾಗಿದೆ. "ಗುರುವೇ ನಿನ್ನಾಟ ಬಲ್ಲೋರ್ ಯಾರ್ ಯಾರೋ.. ಶಿವನೇ ನಿನ್ನಾಟ ಬಲ್ಲೋರ್ ಯಾರ್ ಯಾರೋ, " ಎಂಬ ಹಾಡಿನ ಮೋಡಿಗೆ ಸಂಗೀತಪ್ರಿಯರು ಖುಷಿಗೊಂಡಿದ್ದಾರೆ.
KD Shiva Shiva Song Lyrics: ಜೋಗಿ ಪ್ರೇಮ್ ನಿರ್ದೇಶನದ, ಆಕ್ಷನ್‌ಪ್ರಿನ್ಸ್ ದ್ರುವ ಸರ್ಜಾ ನಟಿಸಿರುವ ಕೆಡಿ ದಿ ಡೆವಿಲ್ ಸಿನಿಮಾದ ಶಿವ ಶಿವ ಹಾಡಿನ ಲಿರಿಕ್ಸ್ ಬಿಡುಗಡೆಯಾಗಿದೆ. "ಗುರುವೇ ನಿನ್ನಾಟ ಬಲ್ಲೋರ್..ಗುರುವೇ ನಿನ್ನಾಟ ಬಲ್ಲೋರ್.. ಗುರುವೇ ನಿನ್ನಾಟ ಬಲ್ಲೂರ್ ಯಾರ್ ಯಾರೋ.. ಶಿವನೇ ನಿನ್ನಾಟ ಬಲ್ಲೂರ್ ಯಾರ್ ಯಾರೋ, ಶಿವಾ.." ಎಂಬ ಹಾಡಿನ ಮೋಡಿಗೆ ಸಂಗೀತಪ್ರಿಯರು ಖುಷಿಗೊಂಡಿದ್ದಾರೆ. ಎಂಭತ್ತರ ದಶಕದ ಯುವಕ ಕಾಳಿದಾಸನಾಗಿ ಈ ಸಿನಿಮಾದಲ್ಲಿ ಧ್ರುವ ಸರ್ಜಾ ನಟಿಸಿದ್ದಾರೆ. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಇದೀಗ ಶಿವ ಶಿವ ಹಾಡಿನ ಲಿರಿಕ್ಸ್ ಬಿಡುಗಡೆ ಮಾಡಲಾಗಿದೆ. ಇಂದು ಶಿವ ಶಿವ ಹಾಡಿನ ಲಾಂಚ್ ಕಾರ್ಯಕ್ರಮವೂ ಬೆಂಗಳೂರಿನಲ್ಲಿ ನಡೆದಿದೆ. ಈ ಹಾಡಿಗೆ ಆನಂದ್ ಮಾಸ್ಟರ್ ಕೊರಿಯಾಗ್ರಫಿ ಮಾಡಿದ್ದಾರೆ. ಪ್ರೇಮ್ ಹಾಗೂ ಕೈಲಾಶ್ ಖೇರ್ ದನಿಯಾಗಿದ್ದಾರೆ. ಚಿತ್ರದಲ್ಲಿ ಆರು ಹಾಡುಗಳಿದ್ದು 'ಕೆಡಿ' ಇಂಡಿಯಾದಲ್ಲೇ ದೊಡ್ಡ ಆಲ್ಬಂ ಆಗಿ ಹೊರಹೊಮ್ಮಲಿದೆ ಎಂದು ಚಿತ್ರತಂಡ ತಿಳಿಸಿದೆ. ಈ ಸಿನಿಮಾದಲ್ಲಿ ಒಂದು ಹಾಡು ಜನಪದ ಶೈಲಿಯಲ್ಲಿದೆ. 1970-75ರ ಸಮಯದಲ್ಲಿ ನಡೆದ ನೈಜಘಟನೆಯನ್ನು ಆಧರಿಸಿ ಮಾಡಿದ ಗ್ಯಾಂಗ್‌ಸ್ಟರ್ ಕಥೆ ಈ ಚಿತ್ರದಲ್ಲಿದೆ ಎಂದು ಚಿತ್ರತಂಡ ಈ ಹಿಂದೆ ಮಾಹಿತಿ ನೀಡಿತ್ತು.
ಕೆಡಿ ಸಿನಿಮಾದ ಶಿವ ಶಿವ ಹಾಡಿನ ಕನ್ನಡ ಲಿರಿಕ್ಸ್
(ಪಲ್ಲವಿ)
ಗುರುವೇ ನಿನ್ನಾಟ ಬಲ್ಲೋರ್ ..ಗುರುವೇ ನಿನ್ನಾಟ ಬಲ್ಲೂರ್..
ಗುರುವೇ ನಿನ್ನಾಟ ಬಲ್ಲೋರ್ ಯಾರ್ ಯಾರೋ..
ಶಿವನೇ ನಿನ್ನಾಟ ಬಲ್ಲೋರ್ ಯಾರ್ ಯಾರೋ, ಶಿವಾ..
ಶಿವ ಶಿವ ಶಿವ ಶಿವ ಶಿವ ಶಿವ
ಗುರುವೇ ನಿನ್ನಾಟ ಬಲ್ಲೋರ್ ಯಾರ್ ಯಾರೋ..
ಶಿವನೇ ನಿನ್ನಾಟ ಬಲ್ಲೋರ್ ಯಾರ್ ಯಾರೋ, ಶಿವಾ..
ಚರಣ 1:
ಹತ್ತೂರಿನ ಒಡೆಯ ನೀನು, ಗೊತ್ತೇನೋ ಯಾರು ನಿಂಗೆ...
ಸೈನ್ಯಾನೆ ಇಲ್ಲ ಇವನ್ಗೆ, ಹೊಂಟವ್ನೆ ರಾಜ ನಂಗೆ..
ಬೆಳಗಾಗೋದ್ರಲ್ಲೇ ಬೆಳೆದಾ...ಬೆಳಗಾಗೋದ್ರಲ್ಲೇ ಬೆಳೆದು ಫೇಮಸ್ಸು ಆಗೋದ್ನಲ್ಲ..
ನಾನು ನಾನ್ ಅಂದೋರ್ಗೆಲ್ಲಾ ತೊಡೆತಟ್ಟಿ ನಿಂತವ್ನ್ ನೋಡ್ಲಾ..
ಬೆಳೆದ ಬೆಳೆದ ಬೆಳೆದ ನೋಡೋ..
ಗುರುವೇ ನಿನ್ನಾಟ ಬಲ್ಲೂರ್ ಯಾರ್ ಯಾರೋ..
ಶಿವನೇ ನಿನ್ನಾಟ ಬಲ್ಲೂರ್ ಯಾರ್ ಯಾರೋ, ಶಿವಾ..
ಚರಣ 2:
ದೌಲತ್ತಲ್ ಮೆರದೋರೆಲ್ಲ ಹಿಸ್ಟರಿಲಿ ಉಳಿದೆಯಿಲ್ಲ..
ಕಾಲೇಳೆಯೋಕ್ ಬಂದೋರೆಲ್ಲ ಕಾಲ ಕೆಳ್ಗೆ ಉಳ್ದೊದ್ರಲ್ಲ
ನೀನ್ ಅಂತೋನ್ ಅಲ್ವೇ ಅಲ್ಲ...ನೀನ್ ಅಂತೋನ್ ಅಲ್ವೇ ಅಲ್ಲ... ನಿನ್ನಂಗೆ ಯಾರು ಇಲ್ಲ..
ಬಕೇಟಾ ಹಿಡಿಯೋರ್ನೆಲ್ಲ ಸೈಡಿಟ್ಟು ಹೋಯ್ತಯೀರ್ಲಾ ..
ಬೆಳೆದ ಬೆಳೆದ ಬೆಳೆದ ನೋಡೋ..
ಗುರುವೇ ನಿನ್ನಾಟ ಬಲ್ಲೋರ್ ..ಗುರುವೇ ನಿನ್ನಾಟ ಬಲ್ಲೂರ್..
ಗುರುವೇ ನಿನ್ನಾಟ ಬಲ್ಲೋರ್ ಯಾರ್ ಯಾರೋ..
ಶಿವನೇ ನಿನ್ನಾಟ ಬಲ್ಲೋರ್ ಯಾರ್ ಯಾರೋ, ಶಿವಾ..
ಶಿವ ಶಿವ ಹಾಡಿನ ಲಿರಿಕ್ಸ್ ವಿಡಿಯೋ
ಶಿವ ಶಿವ ಹಾಡಿನ ಮೋಡಿಗೆ ಅಭಿಮಾನಿಗಳು ಫಿದಾ
ಈ ಹಾಡಿನ ಲಿರಿಕಲ್ ವಿಡಿಯೋ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ಅದಕ್ಕೆ ಧ್ರುವ ಸರ್ಜಾ ಅಭಿಮಾನಗಳು ಸಾಕಷ್ಟು ಸಂಖ್ಯೆಯಲ್ಲಿ ಕಾಮೆಂಟ್ ಮಾಡಿದ್ದಾರೆ. "ಪೊಗರು ಮಾರ್ಟಿನ್ ಸಿನಿಮಾಗಳಿಂದ ಫೇಲ್ಯೂರ್ ಆದ್ರೂ ಕೆಡಿ ಮೂವಿಯಿಂದ ಧ್ರುವ ಸರ್ಜಾಗೆ ಯಶಸ್ಸು ಸಿಗಲಿ" "ಹಾಡು ಸಖತ್ ಇದೆ" "ಈ ಗೀತೆಗೆ ಮಾತ್ರ ಚಿತ್ರಮಂದಿರದಲ್ಲಿ "ಶಿವತಾಂಡವಾನೇ""ದೌಲತ್ತಲ್ಲಿ ಮೆರೆದವರೆಲ್ಲ ಹಿಸ್ಟರಿಲಿ ಉಳಿದೇ ಇಲ್ಲ.. ಕಾಲೇಳೆಯಕ್ಕೆ ಬಂದವರೆಲ್ಲ ಕಾಲ ಕೆಳಗೆ ಉಳಿದವರೆಲ್ಲ..ಲೈನ್ ಬೆಂಕಿ" ಎಂದೆಲ್ಲ ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ.