ಎಲ್ಲವನ್ನೂ ಮರೆತು ಸಿದ್ದುವನ್ನು ಗಂಡನಾಗಿ ಒಪ್ಪಿಕೋ, ಭಾವನಾಗೆ ಬುದ್ಧಿ ಹೇಳಿದ ಶ್ರೀನಿವಾಸ್‌; ಲಕ್ಷ್ಮೀ ನಿವಾಸ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಎಲ್ಲವನ್ನೂ ಮರೆತು ಸಿದ್ದುವನ್ನು ಗಂಡನಾಗಿ ಒಪ್ಪಿಕೋ, ಭಾವನಾಗೆ ಬುದ್ಧಿ ಹೇಳಿದ ಶ್ರೀನಿವಾಸ್‌; ಲಕ್ಷ್ಮೀ ನಿವಾಸ ಧಾರಾವಾಹಿ

ಎಲ್ಲವನ್ನೂ ಮರೆತು ಸಿದ್ದುವನ್ನು ಗಂಡನಾಗಿ ಒಪ್ಪಿಕೋ, ಭಾವನಾಗೆ ಬುದ್ಧಿ ಹೇಳಿದ ಶ್ರೀನಿವಾಸ್‌; ಲಕ್ಷ್ಮೀ ನಿವಾಸ ಧಾರಾವಾಹಿ

Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಡಿಸೆಂಬರ್‌ 23ರ ಎಪಿಸೋಡ್‌ನಲ್ಲಿ ಸಿದ್ದೇಗೌಡನನ್ನು ಗಂಡನಾಗಿ ಒಪ್ಪಿಕೋ ಎಂದು ಶ್ರೀನಿವಾಸ್‌ ಮಗಳಿಗೆ ಬುದ್ಧಿ ಹೇಳುತ್ತಾನೆ. ಇತ್ತ ಜಯಂತ್‌, ಜಾಹ್ನವಿಗೆ ತೊಂದರೆ ಕೊಟ್ಟವರಿಗೆ ಹೊಡೆಯುತ್ತಾನೆ. ಅದನ್ನು ನೋಡಿದ ಫಾದರ್‌ ಗಾಬರಿ ಆಗುತ್ತಾರೆ.

ಲಕ್ಷ್ಮೀ ನಿವಾಸ ಧಾರಾವಾಹಿ ಡಿಸೆಂಬರ್‌ 23ರ ಎಪಿಸೋಡ್‌
ಲಕ್ಷ್ಮೀ ನಿವಾಸ ಧಾರಾವಾಹಿ ಡಿಸೆಂಬರ್‌ 23ರ ಎಪಿಸೋಡ್‌ (PC: Zee Kannada)

Lakshmi Nivasa Serial:ಸ್ಕೂಲ್‌ನಲ್ಲಿ ಪೇರೆಂಟ್ಸ್‌ ಮೀಟಿಂಗ್‌ಗೆ ಅಪ್ಪ-ಅಮ್ಮ ಇಬ್ಬರೂ ಬರಲು ಹೇಳಿದ್ದಾರೆಂದು ಖುಷಿ, ಭಾವನಾಗೆ ತಿಳಿಸುತ್ತಾಳೆ. ನೀವು ಒಬ್ಬರೇ ಅಲ್ಲ, ಸಿದ್ದು ಅಂಕಲ್‌ ಕೂಡಾ ಬರಬೇಕು ಎಂದು ಖುಷಿ ಹಟ ಮಾಡುತ್ತಾಳೆ. ಮಗುವಿಗೆ ಸಮಾಧಾನ ಮಾಡಲು ನಾನು ಖಂಡಿತ ಬರುತ್ತೇನೆ ಎನ್ನುತ್ತಾನೆ. ಸಿದ್ದುವಿನ ವರ್ತನೆಗೆ ಭಾವನಾ ಕೋಪಗೊಳ್ಳುತ್ತಾಳೆ. ನಾನು ಮಗುವಿನ ಖುಷಿಗೆ ಬರುತ್ತಿರುವುದು ಬೇರೆ ಉದ್ದೇಶ ಇಲ್ಲ ಎನ್ನುತ್ತಾನೆ.

ಸಿದ್ದುವನ್ನು ಅಪ್ಪ ಎಂದು ಕರೆದ ಖುಷಿ

ಭಾವನಾ ಹಾಗೂ ಸಿದ್ದು ಜೊತೆಯಾಗಿ ಖುಷಿ ಸ್ಕೂಲ್‌ಗೆ ಹೋಗುತ್ತಾರೆ. ಖುಷಿ ಟೀಚರ್‌ ಇವರು ಯಾರು ಎಂದು ಕೇಳಿದಾಗ ಖುಷಿ, ಭಾವನಾ ಅಮ್ಮ, ಸಿದ್ದು ಅಪ್ಪ ಎಂದು ಪರಿಚಯ ಮಾಡುತ್ತಾಳೆ. ಅದನ್ನು ಕೇಳಿ ಸಿದ್ದುವಿಗೆ ಖುಷಿ ಆದರೆ, ಭಾವನಾಗೆ ಮುಜುಗರವಾಗುತ್ತದೆ. ಖುಷಿ, ಕ್ಲಾಸ್‌ನಲ್ಲಿ ಬಹಳ ಒಳ್ಳೆ ಸ್ಟೂಡೆಂಟ್‌, ಚೆನ್ನಾಗಿ ಓದುತ್ತಾಳೆ. ಯಾರ ತಂಟೆಗೂ ಹೋಗುವುದಿಲ್ಲ , ಆದರೆ ಅವಳ ಕಾಲಿನದ್ದೇ ಸಮಸ್ಯೆ, ಅವಳಿಗೂ ಎಲ್ಲಾ ಮಕ್ಕಳಂತೆ ಓಡಾಡಿಕೊಂಡು ಆಟ ಆಡಬೇಕು ಎಂಬ ಆಸೆ ಇದೆ, ಆದರೆ ಅವಳ ಕಾಲು ಅದಕ್ಕೆ ಸ್ಪಂದಿಸುತ್ತಿಲ್ಲ, ಬೇಗನೆ ಟ್ರೀಟ್‌ಮೆಂಟ್‌ ಕೊಡಿಸಿ ಎಂದು ಟೀಚರ್‌ ಸಲಹೆ ನೀಡುತ್ತಾರೆ. ಅವರ ಮಾತನ್ನು ಕೇಳಿ ಸಿದ್ದು, ಸರಿ ಮೇಡಂ ಎಷ್ಟು ದುಡ್ಡು ಖರ್ಚಾದರೂ ಸರಿ ನಾನು ಟ್ರೀಟ್‌ಮೆಂಟ್‌ ಕೊಡಿಸುವೆ ಎನ್ನುತ್ತಾನೆ.

ಎಲ್ಲರೂ ಹೊರಗೆ ಬರುತ್ತಾರೆ. ಪದೇ ಪದೆ ಖುಷಿ, ಸಿದ್ದುವನ್ನು ಅಪ್ಪ ಎಂದು ಹೇಳುವುದಕ್ಕೆ ಕೋಪ ಮಾಡಿಕೊಳ್ಳುವ ಭಾವನಾ, ಖುಷಿ ಈ ರೀತಿ ಏಕೆ ಮಾಡುತ್ತಿದ್ದೀಯ? ನಿನಗೆ ನಾನು ಅಮ್ಮ, ಆದರೆ ಸಿದ್ದುವನ್ನು ಏಕೆ ಅಪ್ಪ ಎನ್ನುತ್ತಿದ್ದೀಯ? ಅವರು ನಿನಗೆ ಅಂಕಲ್‌, ಅವರನ್ನು ಅಪ್ಪ ಹೇಳು ಅಂತ ನಿನಗೆ ಯಾರು ಹೇಳಿಕೊಟ್ಟಿದ್ದು? ಎಂದು ರೇಗುತ್ತಾಳೆ. ಆದರೆ ಖುಷಿ ಅದಕ್ಕೆ ಒಪ್ಪುವುದಿಲ್ಲ. ನನ್ನ ಫ್ರೆಂಡ್ಸ್‌ಗೆ ಅಪ್ಪ ಅಮ್ಮ ಇಬ್ಬರೂ ಇದ್ದಾರೆ, ನನಗೂ ಅಪ್ಪ ಅಮ್ಮ ಇಬ್ಬರೂ ಬೇಕು ಎನ್ನುತ್ತಾಳೆ. ದಯವಿಟ್ಟು ಮಗುವನ್ನು ಬೈಯ್ಯಬೇಡಿ ಎಂದು ಮನವಿ ಮಾಡುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಶ್ರೀನಿವಾಸ್‌ ಬರುತ್ತಾನೆ. ನೀವಿಬ್ಬರೂ ಮಾತನಾಡುತ್ತಿರಿ, ಅಲ್ಲಿವರೆಗೂ ನಾನು ಮಗುವನ್ನು ಆಟವಾಡಿಸುತ್ತೇನೆ ಎಂದು ಖುಷಿಯನ್ನು ಕರೆದುಕೊಂಡು ದೂರ ಹೋಗುತ್ತಾನೆ.

ಮಗಳಿಗೆ ಬುದ್ಧಿ ಹೇಳಿದ ಶ್ರೀನಿವಾಸ್

ಸ್ಕೂಲ್‌ಗೆ ಪೇರೆಂಟ್ಸ್‌ ಮೀಟಿಂಗ್‌ಗೆ ಬರುತ್ತಿದ್ದೀರಿ ಎಂದು ಲಕ್ಷ್ಮೀ ಹೇಳಿದಳು ಅದಕ್ಕೆ ಇಬ್ಬರನ್ನೂ ಮಾತನಾಡಿಸೋಣ ಎಂದು ಬಂದೆ. ಖುಷಿ ನಿನ್ನೆಯಿಂದ ಬಹಳ ಖುಷಿಯಾಗಿದ್ದಾಳೆ. ಅದಕ್ಕೆ ಕಾರಣ ಸಿದ್ದು, ಸ್ಕೂಲ್‌ಗೆ ಅಪ್ಪ-ಅಮ್ಮ ಬರುತ್ತಾರೆಂದು ನಿನ್ನೆಯಿಂದ ಹೇಳುತ್ತಲೇ ಇದ್ದಾಳೆ. ಸಿದ್ದು ಆ ಮಗುವನ್ನು ಕೂಡಾ ಅಷ್ಟೇ ಇಷ್ಟಪಡುತ್ತಾನೆ. ಪ್ರೀತಿಸುವವರನ್ನು ಕಳೆದುಕೊಳ್ಳಬಾರದು ಎಂಬ ಕಾರಣಕ್ಕೆ ಸಿದ್ದು ನಿನಗೆ ತಾಳಿ ಕಟ್ಟಿದ್ದಾನೆ. ಅದರನ್ನು ಬಿಟ್ಟು ಅವನು ನಿನ್ನ ಜೊತೆ ಎಂದಿಗಾದರೂ ಕೆಟ್ಟದಾಗಿ ನಡೆದುಕೊಂಡಿದ್ದಾನಾ ಯೋಚನೆ ಮಾಡು. ಪ್ರೀತಿಸುತ್ತಿದ್ದೇವೆ ಎಂಬ ಕಾರಣಕ್ಕೆ ಮಗುವನ್ನು ಯಾರು ಸ್ವೀಕರಿಸುತ್ತಾರೆ. ಆದರೆ ಸಿದ್ದು ಆ ರೀತಿ ಅಲ್ಲ, ಅವನು ನೀನು, ಮಗು ಇಬ್ಬರೂ ಬೇಕು, ನೀನು ಒಬ್ಬಳೇ ಇದ್ದಾಗ ಯೋಚನೆ ಮಾಡು, ಸಿದ್ದುವನ್ನು ಗಂಡನಾಗಿ ಒಪ್ಪಿಕೋ ಎಂದು ಬುದ್ಧಿ ಹೇಳುತ್ತಾನೆ.‌

ಹೋಟೆಲ್‌ನಲ್ಲಿ ವೆಂಕಿಯನ್ನು ನೋಡಿ ಶಾಕ್‌ ಆದ ಫಾದರ್‌

ಇತ್ತ ಜಯಂತ್‌, ಜಾನು, ವೆಂಕಿ, ಚೆಲ್ವಿಯನ್ನು ಶಾಪಿಂಗ್‌ ಕರೆತರುತ್ತಾನೆ. ನಂತರ ಎಲ್ಲರೂ ಹೋಟೆಲ್‌ಗೆ ಊಟಕ್ಕೆ ಹೋಗುತ್ತಾರೆ. ಜಾನುಗೆ ದಾರಿ ಬಿಡದೆ ಸತಾಯಿಸಿದ ಕಾರಣ ಜಯಂತ್‌ ಇಬ್ಬರನ್ನು ಮನ ಬಂದಂತೆ ಹೊಡೆಯುತ್ತಾನೆ. ಅದನ್ನು ಫಾದರ್‌ ನೋಡುತ್ತಾರೆ. ಜೊತೆಗೆ ವೆಂಕಿಯನ್ನೂ ನೋಡುತ್ತಾರೆ. ಅವನು ಅರ್ಜುನ್‌ ತಾನೇ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾನೆ. ಆದರೆ ಎಲ್ಲರೆದುರು ಫಾದರ್‌ ಸತ್ಯ ಹೇಳಬಾರದೆಂದು ಜಯಂತ್‌ ಎಚ್ಚರಿಸುತ್ತಾನೆ. ಮನೆಯಲ್ಲಿ ಆಕಸ್ಮಿಕವಾಗಿ ವೆಂಕಿಗೆ ಸ್ಕೂಲ್‌ ಫೋಟೋ ಸಿಗುತ್ತದೆ. ಜಯಂತ್‌ ಬಾಲ್ಯದ ಫೋಟೋ ನೋಡಿ ವೆಂಕಿ ಅಳುತ್ತಾನೆ. ಎಲ್ಲ ಗೊತ್ತಿದ್ದರೂ ಜಯಂತ್‌ ಮಾತ್ರ, ನಾನೇ ಅದು ಮಾತ್ರ ಹೇಳದೆ ನಿಜ ಮುಚ್ಚಿಡುತ್ತಾನೆ.

ಅಪ್ಪನ ಸಲಹೆಯಂತೆ ಭಾವನಾ, ಸಿದ್ದುವನ್ನು ಗಂಡನಾಗಿ ಒಪ್ಪಿಕೊಳ್ಳುತ್ತಾಳಾ? ಜಯಂತ್‌ ನನ್ನ ಬಾಲ್ಯದ ಸ್ನೇಹಿತ ಎಂಬ ಸತ್ಯ ವೆಂಕಿಗೆ ತಿಳಿಯುತ್ತಾ? ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.

ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು

ಸಿದ್ದೇಗೌಡ್ರು- ಧನಂಜಯ

ಭಾವನಾ- ದಿಶಾ ಮದನ್

ಲಕ್ಷ್ಮೀ- ನಟಿ ಶ್ವೇತಾ

ಶ್ರೀನಿವಾಸ್‌ - ಅಶೋಕ್ ಜೆಂಬೆ

ಹರೀಶ್‌ - ಅಜಯ್ ರಾಜ್

ಸಿಂಚನ - ರೂಪಶ್ರೀ

ಜಾಹ್ನವಿ - ಚಂದನ ಆನಂತಕೃಷ್ಣ

ಜಯಂತ್‌ - ದೀಪಕ್ ಸುಬ್ರಮಣ್ಯ

ಸಂತೋಷ್‌ - ಮಧು ಹೆಗಡೆ

ವೀಣಾ - ಲಕ್ಷ್ಮೀ ಹೆಗಡೆ

Whats_app_banner