Viral Video: ಟಾಕ್ಸಿಕ್‌ ಯಶ್‌ಗೆ ಮ್ಯಾಕ್ಸ್‌ ಸುದೀಪನ ಅಪ್ಪುಗೆ; ಸ್ಯಾಂಡಲ್‌ವುಡ್‌ ಸ್ಟಾರ್‌ ನಟರ ಹಗ್‌ ವಿಡಿಯೋ ವೈರಲ್‌
ಕನ್ನಡ ಸುದ್ದಿ  /  ಮನರಂಜನೆ  /  Viral Video: ಟಾಕ್ಸಿಕ್‌ ಯಶ್‌ಗೆ ಮ್ಯಾಕ್ಸ್‌ ಸುದೀಪನ ಅಪ್ಪುಗೆ; ಸ್ಯಾಂಡಲ್‌ವುಡ್‌ ಸ್ಟಾರ್‌ ನಟರ ಹಗ್‌ ವಿಡಿಯೋ ವೈರಲ್‌

Viral Video: ಟಾಕ್ಸಿಕ್‌ ಯಶ್‌ಗೆ ಮ್ಯಾಕ್ಸ್‌ ಸುದೀಪನ ಅಪ್ಪುಗೆ; ಸ್ಯಾಂಡಲ್‌ವುಡ್‌ ಸ್ಟಾರ್‌ ನಟರ ಹಗ್‌ ವಿಡಿಯೋ ವೈರಲ್‌

UI ಸಿನಿಮಾದ ಸೆಲೆಬ್ರಿಟಿ ಶೋ ಪ್ರದರ್ಶನದಲ್ಲಿ ಸ್ಯಾಂಡಲ್‌ವುಡ್‌ ತಾರೆಯರು ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ ರಾಕಿಂಗ್ ಸ್ಟಾರ್ ಯಶ್‌ ಹಾಗೂ ಕಿಚ್ಚ ಸುದೀಪ್ ಅಪ್ಪಿಕೊಂಡಿರುವ ವಿಡಿಯೋ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಪುಳಕಗೊಂಡಿದ್ದಾರೆ.

UI ಸೆಲೆಬ್ರಿಟಿ ಶೋನಲ್ಲಿ ಎದುರಾದ ಸ್ಯಾಂಡಲ್‌ವುಡ್‌ ಸ್ಟಾರ್ಸ್‌
UI ಸೆಲೆಬ್ರಿಟಿ ಶೋನಲ್ಲಿ ಎದುರಾದ ಸ್ಯಾಂಡಲ್‌ವುಡ್‌ ಸ್ಟಾರ್ಸ್‌

UI ಸಿನಿಮಾದ ಸೆಲೆಬ್ರಿಟಿ ಶೋ ಪ್ರದರ್ಶನದಲ್ಲಿ ಕನ್ನಡದ ಹಲವು ಸಿನಿಮಾ ನಟಿಯರು, ನಟರು ಭಾಗವಹಿಸಿದ್ದಾರೆ. ರಾಕಿಂಗ್‌ ಸ್ಟಾರ್ ಯಶ್‌, ಸುದೀಪ್ ಸೇರಿದಂತೆ ಸಾಕಷ್ಟು ಸಿನಿಮಾ ಸ್ಟಾರ್‌ಗಳು ಜೊತೆಯಾಗಿ ಸಿನಿಮಾ ನೋಡಿದ್ದಾರೆ. ಈ ಸಂದರ್ಭದಲ್ಲಿ ಯಶ್‌ ಹಾಗೂ ಕಿಚ್ಚ ಸುದೀಪ್ ಇಬ್ಬರೂ ಅಪ್ಪಿಕೊಂಡ ವಿಡಿಯೋ ವೈರಲ್ ಆಗುತ್ತಿದೆ. ಕನ್ನಡದ ಸ್ಟಾರ್‌ ನಟರ ಇಂತಹ ಅಪರೂಪದ ಕನ್ನಡ ಸಿನಿಮಾ ಅಭಿಮಾನಿಗಳು ಸಂತಸಪಟ್ಟಿದ್ದಾರೆ. ಕಿಚ್ಚ ಸುದೀಪ್ ಯುಐ ಸಿನಿಮಾದ ನಟ- ನಿರ್ದೇಶಕ ಉಪೇಂದ್ರ ಅವರನ್ನೂ ಹಗ್ ಮಾಡಿ ವಿಶ್‌ ಮಾಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ ಉಪೇಂದ್ರ, ಕಿಚ್ಚ ಸುದೀಪ್ ಹಾಗೂ ಯಶ್‌ ಕಾಣಿಸಿಕೊಂಡಿದ್ದಾರೆ. ಇನ್ನು ರಾಧಿಕಾ ಕೂಡ ಈ ಶೋದಲ್ಲಿ ಭಾಗಿಯಾಗಿದ್ದರು. ಎಲ್ಲರೂ ‘ಯುಐ’ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ. ಸಿನಿಮಾ ನೋಡಿದ ನಂತರ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಯುಐ ಸಿನಿಮಾವನ್ನು ನೋಡಿದ ಯಶ್‌ ಉಪೇಂದ್ರ ಅವರು ಸಿನಿಮಾವನ್ನು ವಿಭಿನ್ನವಾಗಿ ತೋರಿಸಿದ್ದಾರೆ. ಪ್ರತಿಯೊಂದಕ್ಕೂ ಆಳವಾದ ಅರ್ಥವಿದೆ ಎಂದು ಹೇಳಿದ್ದಾರೆ. ಅವರ ಜೊತೆಯೇ ಕುಳಿತು ಸಿನಿಮಾ ನೋಡಿದ್ದು ಖುಷಿಯಾಯ್ತು ಎಂದಿದ್ದಾರೆ.

“ಉಪ್ಪಿ ಸರ್ ಸಿನಿಮಾ ಎಂದರೆ ಅದು ವಿಭಿನ್ನವಾಗಿಯೇ ಇರುತ್ತದೆ. ಎಂದಿನಂತೆ ಈ ಸಿನಿಮಾ ಕೂಡ ಆಳವಾದ ಅರ್ಥಗಳಿಂದ ಸಾಂಕೇತಿಕವಾಗಿ ಏನನ್ನೊ ತಿಳಿಸುತ್ತಾ ನೇರವಾಗಿ ಏನನ್ನೂ ಹೇಳದೇ ಎಲ್ಲವನ್ನೂ ಅರ್ಥ ಮಾಡಿಸಿದ್ದಾರೆ. ಇದು ಸರಿಯೋ? ತಪ್ಪೋ ಎಂಬ ಪ್ರಶ್ನೆಯನ್ನು ಕಥೆಯೇ ಹುಟ್ಟಿ ಹಾಕುತ್ತದೆ ಎಂದು ಯಶ್‌ ಹೇಳಿದ್ದಾರೆ” ಈ ಬಗ್ಗೆ ಪಿಂಕ್‌ವಿಲ್ಲಾ ವರದಿ ಮಾಡಿದೆ.

ಈ ಸೆಲೆಬ್ರಿಟಿ ಶೋದಲ್ಲಿ ಕಿಚ್ಚ ಸುದೀಪ್ ಕೂಡ ಇದ್ದರು. ಅಧಿಕೃತ ಪ್ರೊಡಕ್ಷನ್ ಹೌಸ್ ಹಂಚಿಕೊಂಡ ಕೆಲವು ಕ್ಯಾಂಡಿಡ್ ಫೋಟೋಗಳಲ್ಲಿ, ಎರಡು ಕನ್ನಡ ಐಕಾನ್‌ಗಳು ಪ್ರೀತಿಯ ಸಂಭಾಷಣೆ ನಡೆಸುತ್ತಿರುವ ಮತ್ತು ಹಗ್ ಮಾಡಿಕೊಂಡಿರುವ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗುತ್ತಿದೆ. ಇಂದು ಮುಂಜಾನೆ, ಕಿಚ್ಚ ಸುದೀಪ್ ಅವರು ಎಕ್ಸ್ ಸಿನಿಮಾ ನೋಡಿ ಬಂದು ವಿಮರ್ಶೆ ಬರೆದಿದ್ದಾರೆ.

ಈಗಷ್ಟೇ #UiTheMovie ವೀಕ್ಷಿಸಿದ್ದೇನೆ. ಸ್ಕ್ರಿಪ್ಟ್ @nimmaupendra ಸರ್ ಮಾತ್ರ ದೃಶ್ಯೀಕರಿಸಬಹುದು ಮತ್ತು ನಿರೂಪಿಸಬಹುದು. ಅವರ ಆಲೋಚನಾ ಪ್ರಕ್ರಿಯೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು ಆಶ್ಚರ್ಯವಾಗುತ್ತದೆ. ಇಡೀ ತಂಡಕ್ಕೆ ಅಭಿನಂದನೆಗಳು ಮತ್ತು ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.

Whats_app_banner