PKL Season 11: ಪಿಕೆಎಲ್ನಲ್ಲಿ ಇತಿಹಾಸ ನಿರ್ಮಿಸಿದ ಆಶು ಮಲಿಕ್: ಈವರೆಗೆ ಯಾರೂ ಮಾಡಿರದ ಸಾಧನೆ
Ashu Malik: ಪ್ರೊ ಕಬಡ್ಡಿ ಲೀಗ್ 2024ರ 50 ನೇ ಪಂದ್ಯವು ದಬಾಂಗ್ ಡೆಲ್ಲಿ ಕೆಸಿ ಮತ್ತು ಪುಣೇರಿ ಪಲ್ಟನ್ ನಡುವೆ ನೋಯ್ಡಾದಲ್ಲಿ ನಡೆಯಿತು. ಈ ಪಂದ್ಯದ ಮೊದಲು ಆಶು ಮಲಿಕ್ ಖಾತೆಯಲ್ಲಿ 9 ಪಂದ್ಯಗಳಿಂದ 97 ರೇಡ್ ಪಾಯಿಂಟ್‌ಗಳಿದ್ದವು ಮತ್ತು 100 ರೇಡ್ ಪಾಯಿಂಟ್‌ಗಳನ್ನು ಪೂರ್ಣಗೊಳಿಸಲು ಅವರಿಗೆ 3 ಪಾಯಿಂಟ್‌ಗಳ ಅಗತ್ಯವಿತ್ತು.
ಪ್ರೊ ಕಬಡ್ಡಿ ಲೀಗ್ 11ನೇ ಸೀಸನ್‌ನಲ್ಲಿ (PKL Season 11) ದಬಾಂಗ್ ಡೆಲ್ಲಿ ಕೆಸಿ ನಾಯಕ ಆಶು ಮಲಿಕ್ (Ashu Malik) ಇತಿಹಾಸ ಸೃಷ್ಟಿಸಿದ್ದಾರೆ. ಇವರು 11ನೇ ಋತುವಿನಲ್ಲಿ 100 ರೇಡ್ ಅಂಕಗಳನ್ನು ಪೂರೈಸಿದ್ದು, ಈ ಋತುವಿನಲ್ಲಿ ಈ ಸಾಧನೆ ಮಾಡಿದ ಮೊದಲ ರೈಡರ್ ಎನಿಸಿಕೊಂಡಿದ್ದಾರೆ. ಪುಣೇರಿ ಪಲ್ಟಾನ್ ವಿರುದ್ಧದ ಪಂದ್ಯದಲ್ಲಿ ಅವರು ತಮ್ಮ ಶತಕವನ್ನು ಪೂರ್ಣಗೊಳಿಸಿದರು.
ಪ್ರೊ ಕಬಡ್ಡಿ ಲೀಗ್ 2024ರ 50 ನೇ ಪಂದ್ಯವು ದಬಾಂಗ್ ಡೆಲ್ಲಿ ಕೆಸಿ ಮತ್ತು ಪುಣೇರಿ ಪಲ್ಟನ್ ನಡುವೆ ನೋಯ್ಡಾದಲ್ಲಿ ನಡೆಯಿತು. ಈ ಪಂದ್ಯದ ಮೊದಲು ಆಶು ಮಲಿಕ್ ಖಾತೆಯಲ್ಲಿ 9 ಪಂದ್ಯಗಳಿಂದ 97 ರೇಡ್ ಪಾಯಿಂಟ್‌ಗಳಿದ್ದವು. ಮತ್ತು 100 ರೇಡ್ ಪಾಯಿಂಟ್‌ಗಳನ್ನು ಪೂರ್ಣಗೊಳಿಸಲು ಅವರಿಗೆ 3 ಪಾಯಿಂಟ್‌ಗಳ ಅಗತ್ಯವಿತ್ತು. ಆಶು ತಮ್ಮ ಪ್ರಚಂಡ ಫಾರ್ಮ್ ಅನ್ನು ಇಲ್ಲೂ ಮುಂದುವರೆಸಿ ಪುಣೆಯ ಬಲಿಷ್ಠ ರಕ್ಷಣೆಯ ವಿರುದ್ಧ ತಮ್ಮ ರೈಡಿಂಗ್ ಕೌಶಲ್ಯವನ್ನು ತೋರಿಸಿದರು.
ಆಶು 100 ರೇಡ್ ಪಾಯಿಂಟ್‌ಗಳನ್ನು ಪೂರ್ಣಗೊಳಿಸಿದ್ದಲ್ಲದೆ, ಪಂದ್ಯದಲ್ಲಿ ದಬಾಂಗ್ ಡೆಲ್ಲಿಗಾಗಿ ಅದ್ಭುತ ಪುನರಾಗಮನವನ್ನು ಮಾಡಿದರು. ಅಂತಿಮವಾಗಿ ಉಭಯ ತಂಡಗಳ ನಡುವೆ ನಡೆದ ರೋಚಕ ಪಂದ್ಯ ಟೈ ಆಗಿತ್ತು. ಆಶು ಮಲಿಕ್ ಈ ಪಂದ್ಯದಲ್ಲಿ 26 ರೇಡ್‌ಗಳನ್ನು ಮಾಡಿದರು. ಅದರಲ್ಲಿ ಅವರು 17 ರೇಡ್ ಪಾಯಿಂಟ್‌ಗಳನ್ನು ಗಳಿಸಿದರು.
ಪ್ರೊ ಕಬಡ್ಡಿ ಲೀಗ್‌ನ 11ನೇ ಸೀಸನ್‌ನಲ್ಲಿ ದಬಾಂಗ್ ಡೆಲ್ಲಿ ಕೆಸಿ ನಾಯಕ ಅಶು ಮಲಿಕ್ ಅವರ ಪ್ರದರ್ಶನ ಹೇಗಿದೆ?
ಆಶು ಮಲಿಕ್ ಅವರು ಪ್ರೊ ಕಬಡ್ಡಿ 2024 ರಲ್ಲಿ 10 ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು 115 ಅಂಕಗಳನ್ನು ಗಳಿಸಿದ್ದಾರೆ. ರೈಡಿಂಗ್ ಮೂಲಕ 114 ಅಂಕ ಹಾಗೂ ಟ್ಯಾಕಲ್ ಮೂಲಕ ಒಂದು ಅಂಕ ಗಳಿಸಿದ್ದಾರೆ. ಅವರು 9 ಸೂಪರ್ 10 ಮತ್ತು ಎರಡು ಸೂಪರ್ ರೈಡ್‌ಗಳನ್ನು ಗಳಿಸಿದ್ದಾರೆ. ಆಶು ಪ್ರತಿ ಪಂದ್ಯಕ್ಕೆ ಸರಾಸರಿ 11.4 ಅಂಕ ಗಳಿಸುತ್ತಿದ್ದಾರೆ. ನವೀನ್ ಕುಮಾರ್ ಅನುಪಸ್ಥಿತಿಯಲ್ಲಿ ಅವರು ದೆಹಲಿಯ ರೇಡಿಂಗ್‌ನ ಭಾರವನ್ನು ಹೊತ್ತಿದ್ದು, ಈ ಋತುವಿನಲ್ಲಿ ಇದುವರೆಗೆ ಗರಿಷ್ಠ ರೇಡ್ ಪಾಯಿಂಟ್‌ಗಳನ್ನು ಗಳಿಸಿದ್ದಾರೆ.
ಇವರಲ್ಲದೆ, ಪಾಟ್ನಾ ಪೈರೇಟ್ಸ್‌ನ ದೇವಾಂಕ್ (8 ಪಂದ್ಯಗಳಲ್ಲಿ 93), ಜೈಪುರ ಪಿಂಕ್ ಪ್ಯಾಂಥರ್ಸ್‌ನ ಅರ್ಜುನ್ ದೇಶ್ವಾಲ್ (8 ಪಂದ್ಯಗಳಲ್ಲಿ 91), ತೆಲುಗು ಟೈಟಾನ್ಸ್‌ನ ಪವನ್ ಸೆಹ್ರಾವತ್ (8 ಪಂದ್ಯಗಳಲ್ಲಿ 88) ಮತ್ತು ಯು ಮುಂಬಾದ ಅಜಿತ್ ಚವಾಣ್ (9 ಪಂದ್ಯಗಳಲ್ಲಿ 83) ಪ್ರೊ ಕಬಡ್ಡಿ ಲೀಗ್‌ನ ಈ ಋತುವಿನಲ್ಲಿ ಶೀಘ್ರದಲ್ಲೇ 100 ರೇಡ್ ಪಾಯಿಂಟ್‌ಗಳನ್ನು ಪೂರ್ಣಗೊಳಿಸುವ ಸಾಧ್ಯತೆ ಇದೆ.