Pardeep Narwal: ಪಿಕೆಎಲ್​ ಇತಿಹಾಸ ನಿರ್ಮಿಸಿದ ಬೆಂಗಳೂರು ಕ್ಯಾಪ್ಟನ್ ಪರ್ದೀಪ್ ನರ್ವಾಲ್: ಈವರೆಗೆ ಯಾರೂ ಮಾಡಿಲ್ಲ ಈ ಸಾಧನೆ
ಕನ್ನಡ ಸುದ್ದಿ  /  ಕ್ರೀಡೆ  /  Pardeep Narwal: ಪಿಕೆಎಲ್​ ಇತಿಹಾಸ ನಿರ್ಮಿಸಿದ ಬೆಂಗಳೂರು ಕ್ಯಾಪ್ಟನ್ ಪರ್ದೀಪ್ ನರ್ವಾಲ್: ಈವರೆಗೆ ಯಾರೂ ಮಾಡಿಲ್ಲ ಈ ಸಾಧನೆ

Pardeep Narwal: ಪಿಕೆಎಲ್​ ಇತಿಹಾಸ ನಿರ್ಮಿಸಿದ ಬೆಂಗಳೂರು ಕ್ಯಾಪ್ಟನ್ ಪರ್ದೀಪ್ ನರ್ವಾಲ್: ಈವರೆಗೆ ಯಾರೂ ಮಾಡಿಲ್ಲ ಈ ಸಾಧನೆ

Bengaluru Bulls: ಪ್ರೊ ಕಬಡ್ಡಿ ಲೀಗ್‌ನಲ್ಲಿ ಪರ್ದೀಪ್ ನರ್ವಾಲ್ ಒಟ್ಟು 172 ಪಂದ್ಯಗಳಲ್ಲಿ 1711 ಅಂಕಗಳನ್ನು ಹೊಂದಿದ್ದಾರೆ. ಈ ಮೂಲಕ 10 ವರ್ಷಗಳ ಪಿಕೆಎಲ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪಿಕೆಎಲ್​ ಇತಿಹಾಸ ನಿರ್ಮಿಸಿದ ಬೆಂಗಳೂರು ಕ್ಯಾಪ್ಟನ್ ಪರ್ದೀಪ್ ನರ್ವಾಲ್
ಪಿಕೆಎಲ್​ ಇತಿಹಾಸ ನಿರ್ಮಿಸಿದ ಬೆಂಗಳೂರು ಕ್ಯಾಪ್ಟನ್ ಪರ್ದೀಪ್ ನರ್ವಾಲ್

ಪ್ರೊ ಕಬಡ್ಡಿ ಲೀಗ್‌ 11 ನೇ ಸೀಸನ್‌ನ ಆರನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಸೋಲನ್ನು ಎದುರಿಸಬೇಕಾಯಿತು. ಆದರೆ ತಂಡದ ನಾಯಕ ಪರ್ದೀಪ್ ನರ್ವಾಲ್ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಡುಬ್ಕಿ ಕಿಂಗ್ ಈ ಲೀಗ್‌ನಲ್ಲಿ 1700 ರೇಡ್ ಪಾಯಿಂಟ್‌ಗಳನ್ನು ಪೂರ್ಣಗೊಳಿಸಿದ್ದಾರೆ ಮತ್ತು 10 ವರ್ಷಗಳ ಪಿಕೆಎಲ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಬೆಂಗಳೂರು ಬುಲ್ಸ್ ಮತ್ತು ಗುಜರಾತ್ ಜೈಂಟ್ಸ್ ನಡುವಿನ ಪಿಕೆಎಲ್ 11ರ ಆರನೇ ಪಂದ್ಯ ಹೈದರಾಬಾದ್‌ನಲ್ಲಿ ನಡೆಯಿತು. ಈ ಪಂದ್ಯಕ್ಕೂ ಮುನ್ನ 1693 ರೇಡ್ ಪಾಯಿಂಟ್​ಗಳನ್ನು ಹೊಂದಿದ್ದ ಪರ್ದೀಪ್ ಅವರಿಗೆ 7 ಅಂಕಗಳ ಅಗತ್ಯವಿತ್ತು. ಪರ್ದೀಪ್ ಮೊದಲಾರ್ಧದಲ್ಲಿ ನೀರಜ್-ಡಿ ಬಾಲಾಜಿಯನ್ನು ಒಂದೇ ದಾಳಿಯಲ್ಲಿ ಔಟ್ ಮಾಡಿದರು. ಇದರೊಂದಿಗೆ ಇತಿಹಾಸದ ಪುಟಗಳಲ್ಲಿ ಅವರ ಹೆಸರನ್ನು ನೋಂದಾಯಿಸಿದರು. ಅವರು 172 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಪ್ರೊ ಕಬಡ್ಡಿ ಲೀಗ್‌ನಲ್ಲಿ ಪರ್ದೀಪ್ ನರ್ವಾಲ್ ಒಟ್ಟು 172 ಪಂದ್ಯಗಳಲ್ಲಿ 1711 ಅಂಕಗಳನ್ನು ಹೊಂದಿದ್ದಾರೆ. ರೇಡಿಂಗ್ ಮೂಲಕ 1702 ಅಂಕ ಹಾಗೂ ಟ್ಯಾಕ್ಲಿಂಗ್ ಮೂಲಕ 9 ಅಂಕ ಗಳಿಸಿದ್ದಾರೆ. ಅವರು 85 ಸೂಪರ್ 10 ಗಳನ್ನು ಹೊಡೆದಿದ್ದಾರೆ, 104 ಸೂಪರ್ ರೈಡ್‌ಗಳನ್ನು ಸಹ ಪಡೆದಿದ್ದಾರೆ. ಈ ಲೀಗ್‌ನ 10 ವರ್ಷಗಳ ಇತಿಹಾಸದಲ್ಲಿ, ಯಾವುದೇ ಆಟಗಾರನು ಈ ಸಾಧನೆ ಮಾಡಿಲ್ಲ.

ಪಿಕೆಎಲ್ 11ನೇ ಸೀಸನ್‌ನಲ್ಲಿ ಬೆಂಗಳೂರು ಬುಲ್ಸ್ ಪ್ರದರ್ಶನ ಹೇಗಿದೆ?

ಪ್ರೊ ಕಬಡ್ಡಿ ಲೀಗ್ 2024 ರಲ್ಲಿ ಬೆಂಗಳೂರು ಬುಲ್ಸ್ ಉತ್ತಮ ಆರಂಭವನ್ನು ಹೊಂದಿಲ್ಲ. ಇದುವರೆಗೆ ಎರಡು ಪಂದ್ಯಗಳನ್ನು ಆಡಿದ್ದು, ಎರಡರಲ್ಲೂ ಸೋಲು ಕಂಡಿದೆ. ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ 37-29 ಮತ್ತು 2ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ 36-32 ಅಂತರದಲ್ಲಿ ಸೋಲು ಕಂಡಿತ್ತು. ಎರಡು ಪಂದ್ಯಗಳ ನಂತರ ಬುಲ್ಸ್ ಕೇವಲ ಒಂದು ಅಂಕವನ್ನು ಹೊಂದಿದೆಯಷ್ಟೆ, ಏಳನೇ ಸ್ಥಾನದಲ್ಲಿದೆ.

ಬೆಂಗಳೂರು ಕ್ಯಾಪ್ಟನ್ ಪರ್ದೀಪ್ ನರ್ವಾಲ್
ಬೆಂಗಳೂರು ಕ್ಯಾಪ್ಟನ್ ಪರ್ದೀಪ್ ನರ್ವಾಲ್

ತಂಡದ ನಾಯಕ ಪರ್ದೀಪ್ ನರ್ವಾಲ್ ಕೂಡ ಇಲ್ಲಿಯವರೆಗೆ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಎರಡು ಪಂದ್ಯಗಳ ನಂತರ, ಅವರು ಕೇವಲ 12 ಅಂಕಗಳನ್ನು ಹೊಂದಿದ್ದಾರೆ ಮತ್ತು ಈ ಎರಡು ಪಂದ್ಯಗಳಲ್ಲಿ ಅವರು ಒಂದೇ ಒಂದು ಸೂಪರ್ 10 ಅನ್ನು ಹೊಡೆಯಲು ಸಾಧ್ಯವಾಗಲಿಲ್ಲ.

ಗುಜರಾತ್ ಜೈಂಟ್ಸ್ ವಿರುದ್ಧದ ಮೊದಲಾರ್ಧದಲ್ಲಿ ಪರ್ದೀಪ್ ನರ್ವಾಲ್ ಫಾರ್ಮ್‌ಗೆ ಮರಳುವ ಲಕ್ಷಣ ಕಂಡುಬಂತು ಮತ್ತು 8 ಅಂಕಗಳನ್ನು ಗಳಿಸಿದರು. ಆದಾಗ್ಯೂ, ದ್ವಿತೀಯಾರ್ಧದಲ್ಲಿ ಅವರ ಪ್ರದರ್ಶನ ಕಳಪೆಯಾಗಿತ್ತು. ಕೇವಲ ಒಂದು ಅಂಕವನ್ನು ಗಳಿಸಲು ಸಾಧ್ಯವಾಯಿತು. ಬೆಂಗಳೂರಿನ ಮುಂದಿನ ಪಂದ್ಯ ಅಕ್ಟೋಬರ್ 22 ರಂದು ಯುಪಿ ಯೋಧಾಸ್ ವಿರುದ್ಧ ನಡೆಯಲಿದೆ.

ವರದಿ: ವಿನಯ್ ಭಟ್

ಪರ್ದೀಪ್ ನರ್ವಾಲ್
ಪರ್ದೀಪ್ ನರ್ವಾಲ್
Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.