Anil Kumble, Rahul Dravid: 2018ರಲ್ಲಿ ಪಕ್ಷ ಸೇರುವಂತೆ ರಾಹುಲ್​​ ದ್ರಾವಿಡ್​​, ಅನಿಲ್​​ ಕುಂಬ್ಳೆ ಸಂಪರ್ಕಿಸಿದ್ದ ಬಿಜೆಪಿ-cricket news bharatiya janata party approached rahul dravid anil kumble to join the party in 2018 prs ,ಕ್ರೀಡೆ ಸುದ್ದಿ
ಕನ್ನಡ ಸುದ್ದಿ  /  ಕ್ರೀಡೆ  /  Anil Kumble, Rahul Dravid: 2018ರಲ್ಲಿ ಪಕ್ಷ ಸೇರುವಂತೆ ರಾಹುಲ್​​ ದ್ರಾವಿಡ್​​, ಅನಿಲ್​​ ಕುಂಬ್ಳೆ ಸಂಪರ್ಕಿಸಿದ್ದ ಬಿಜೆಪಿ

Anil Kumble, Rahul Dravid: 2018ರಲ್ಲಿ ಪಕ್ಷ ಸೇರುವಂತೆ ರಾಹುಲ್​​ ದ್ರಾವಿಡ್​​, ಅನಿಲ್​​ ಕುಂಬ್ಳೆ ಸಂಪರ್ಕಿಸಿದ್ದ ಬಿಜೆಪಿ

ಅದು 2018. ಕರ್ನಾಟಕದ ವಿಧಾನಸಭಾ ಚುನಾವಣೆಗೆ ರಾಜ್ಯ ಬಿಜೆಪಿ ಘಟಕ ಸಿದ್ಧತೆ ನಡೆಸಿತ್ತ. ಆ ವೇಳೆ ಕರ್ನಾಟಕದ ದಿಗ್ಗಜ ಕ್ರಿಕೆಟಿಗರನ್ನು ಭಾರತೀಯ ಜನತಾ ಪಾರ್ಟಿ (BJP) ಸಂಪರ್ಕಿಸಿತ್ತು. ಆದಾಗ್ಯೂ, ಕೇಸರಿ ಪಕ್ಷಕ್ಕೆ ಸೇರುವ ಪ್ರಸ್ತಾಪಗಳನ್ನು ಇಬ್ಬರೂ ತಿರಸ್ಕರಿಸಿದ್ದರು.

ಅನಿಲ್​ ಕುಂಬ್ಳೆ, ರಾಹುಲ್​ ದ್ರಾವಿಡ್​​
ಅನಿಲ್​ ಕುಂಬ್ಳೆ, ರಾಹುಲ್​ ದ್ರಾವಿಡ್​​

ರಾಜಕೀಯ ಕ್ಷೇತ್ರದಲ್ಲಿ ಕ್ರಿಕೆಟಿಗರು ಕಾಣಿಸಿಕೊಂಡಿರುವುದೇ ಕನಿಷ್ಠ. ಅಪರೂಪದಲ್ಲಿ ಅಪರೂಪ. ಗೌತಮ್​ ಗಂಭೀರ್ (Gautam Gambhir), ಮನೋಜ್​ ತಿವಾರಿ (Manoj Tiwari), ನವಜೋತ್​​ ಸಿಂಗ್​ ಸಿಧು (Navjot Singh Sidhu), ಮೊಹಮ್ಮದ್​ ಅಜರುದ್ದೀನ್ (Mohammad Azharuddin)​, ಮೊಹಮ್ಮದ್​ ಕೈಫ್ (Mohammad Kaif)​​​ ಸೇರಿದಂತೆ ಕೆಲವೇ ಕೆಲವು ಕ್ರಿಕೆಟಿಗರು ರಾಜಕೀಯ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಕರ್ನಾಟಕದ ಕ್ರಿಕೆಟಿಗರು ಈ ಕ್ಷೇತ್ರಕ್ಕೆ ಹೆಜ್ಜೆ ಇಟ್ಟಿಲ್ಲ ಎನ್ನುವುದೇ ವಿಶೇಷ. ಆದರೆ ಈ ಪ್ರಯತ್ನ ನಡೆದಿತ್ತು.

ಹೌದು. ಅದು 2018. ಕರ್ನಾಟಕದ ವಿಧಾನಸಭಾ ಚುನಾವಣೆಗೆ (Karnataka Elections) ರಾಜ್ಯ ಬಿಜೆಪಿ ಘಟಕ ಸಿದ್ಧತೆ ನಡೆಸಿತ್ತ. ಆ ವೇಳೆ ಕರ್ನಾಟಕದ ದಿಗ್ಗಜ ಕ್ರಿಕೆಟಿಗರನ್ನು ಭಾರತೀಯ ಜನತಾ ಪಾರ್ಟಿ (Bharatiya Janata Party) ಸಂಪರ್ಕಿಸಿತ್ತು. ಅಂದಿನ ವಿಧಾನಸಭಾ ಚುನಾವಣೆಯಲ್ಲಿ ಯುವಕರನ್ನು ಸೆಳೆಯುವ ಮತ್ತು ರಾಜ್ಯದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರವನ್ನು ಉರುಳಿಸುವ ಪ್ರಯತ್ನವಾಗಿತ್ತು.

ಕರ್ನಾಟಕದ ಸೂಪರ್​ ಸ್ಟಾರ್​ ಆಟಗಾರರಾದ ಅನಿಲ್​​ ಕುಂಬ್ಳೆ (Anil Kumble) ಮತ್ತು ರಾಹುಲ್​ ದ್ರಾವಿಡ್​ (Rahul Dravid) ಅವರನ್ನು ಪಕ್ಷಕ್ಕೆ ಸೇರುವಂತೆ ಬಿಜೆಪಿ ಸಂಪರ್ಕಿಸಿತ್ತು. ಇಬ್ಬರನ್ನು ಪಕ್ಷಕ್ಕೆ ಸೆಳೆಯಲು ಭಾರಿ ಕಸರತ್ತನ್ನೇ ನಡೆಸಿತ್ತು. ಈ ಬಗ್ಗೆ ಮಾತುಕತೆ ನಡೆಸಿತ್ತು. ಜೊತೆಗೆ ಇಬ್ಬರಲ್ಲಿ ಒಬ್ಬರನ್ನಾದರೂ ಲೋಕಸಭೆ ಅಥವಾ ರಾಜ್ಯಸಭೆಗೆ ಕಣಕ್ಕಿಳಿಸುವ ಭರವಸೆ ನೀಡಿತ್ತು. ಆದಾಗ್ಯೂ, ಕೇಸರಿ ಪಕ್ಷಕ್ಕೆ ಸೇರುವ ಪ್ರಸ್ತಾಪಗಳನ್ನು ಇಬ್ಬರೂ ತಿರಸ್ಕರಿಸಿದ್ದರು.

ಇವರಿಬ್ಬರನ್ನು ಓಲೈಸಲು ಪಕ್ಷವು, ಹಲವು ಪ್ರಯತ್ನಗಳು ನಡೆದಿದ್ದವು. ಕ್ರೀಡಾ ಕ್ಷೇತ್ರದ ಮೇಲೆ ಒಲವು ಹೆಚ್ಚಿದ ಕಾರಣ ರಾಹುಲ್​ ದ್ರಾವಿಡ್​ ಮತ್ತು ಅನಿಲ್​ ಕುಂಬ್ಳೆ ಬಿಜೆಪಿ ಮನವೊಲಿಕೆಗೆ ಸೊಪ್ಪು ಹಾಕಲಿಲ್ಲ. ಸುದೀರ್ಘ ಮಾತುಕತೆ ನಡೆಸಿದ್ದ ಬಿಜೆಪಿಗೆ, ದಿಗ್ಗಜ ಕ್ರಿಕೆಟಿಗರು ಸೇರುವುದಿಲ್ಲ ಎಂದು ಕಡ್ಡಿ ತುಂಡರಿಸಿದಂತೆ ಹೇಳಿದ್ದರು. 2018ರ ಮೇ 12ರಂದು ವಿಧಾನ ಸಭೆ ಚುನಾವಣೆಗೆ ನಿಗದಿಯಾಗಿತ್ತು. ಅಧಿಕಾರಕ್ಕೆ ಏರಲೇಬೇಕಾದ ಆಸೆಯಲ್ಲಿದ್ದ ಬಿಜೆಪಿ, ಚುನಾವಣೆಗೂ ತಿಂಗಳ ಮೊದಲೇ ಈ ಕ್ರಿಕೆಟಿಗರನ್ನು ಸಂಪರ್ಕಿಸಿತ್ತು.

2018ರ ಮೇ 12ರಂದು ಒಂದೇ ಹಂತದಲ್ಲಿ 15ನೇ ವಿಧಾನಸಭೆಗೆ ಚುನಾವಣೆ ನಡೆದಿತ್ತು. ಮೇ 15 ರಂದು ಚುನಾವಣೆ ಫಲಿತಾಂಶ ಹೊರಬಿದ್ದಿತ್ತು. ವಿಧಾನಸಭೆಗೆ ಅತಂತ್ರ ಪ್ರಜಾ ತೀರ್ಪು ಹೊರಬಿದ್ದಿತ್ತು ಬಿಜೆಪಿ 104, ಕಾಂಗ್ರೆಸ್‌ 80, ಜೆಡಿಎಸ್ 37, ಕೆಪಿಜೆಪಿ 1, ಬಿಎಸ್‌ಪಿ 1, ಪಕ್ಷೇತರ 1 ಸ್ಥಾನ ಗೆದ್ದಿದ್ದವು. ಚುನಾವಣೆಯಲ್ಲಿ 104 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿದ್ದ ಬಿಜೆಪಿ ಸ್ವತಂತ್ರ್ಯವಾಗಿ ಅಧಿಕಾರ ಬರಲು ಸಾಧ್ಯವಾಗಲಿಲ್ಲ. ಆದರೆ ಕಾಂಗ್ರೆಸ್​ ಮತ್ತು ಜೆಡಿಎಸ್​​ ಒಟ್ಟಿಗೆ ಮೈತ್ರಿ ಸರ್ಕಾರ ನಡೆಸಿದ್ದವು.

ದ್ರಾವಿಡ್ ಮತ್ತು ಕುಂಬ್ಳೆ ಭಾರತದ ಕ್ರಿಕೆಟ್​​ನ ದೊಡ್ಡ ಹೆಸರುಗಳು. ದ್ರಾವಿಡ್ 344 ಏಕದಿನ ಅಂತರಾಷ್ಟ್ರೀಯ ಪಂದ್ಯಗಳಲ್ಲಿ 10,889 ರನ್ ಮತ್ತು 164 ಟೆಸ್ಟ್‌ಗಳಲ್ಲಿ 13,288 ರನ್ ಗಳಿಸಿದ್ದರು. ಲೆಗ್ ಸ್ಪಿನ್ ಬೌಲರ್ ಕುಂಬ್ಳೆ 271 ಏಕದಿನಗಳಲ್ಲಿ 337 ವಿಕೆಟ್‌ ಮತ್ತು 132 ಟೆಸ್ಟ್‌ಗಳಲ್ಲಿ 619 ವಿಕೆಟ್‌ ಕಬಳಿಸಿದ್ದಾರೆ.

mysore-dasara_Entry_Point