Ishan kishan: ದುಲೀಪ್ ಟ್ರೋಫಿಯಿಂದ ಇಶಾನ್ ಕಿಶನ್ ಹಿಂದೆ ಸರಿಯಲು ಕಾರಣ ಬಹಿರಂಗ; ಆದರೂ ತರಾಟೆ ತೆಗೆದುಕೊಂಡ ನೆಟ್ಟಿಗರು
ಕನ್ನಡ ಸುದ್ದಿ  /  ಕ್ರೀಡೆ  /  Ishan Kishan: ದುಲೀಪ್ ಟ್ರೋಫಿಯಿಂದ ಇಶಾನ್ ಕಿಶನ್ ಹಿಂದೆ ಸರಿಯಲು ಕಾರಣ ಬಹಿರಂಗ; ಆದರೂ ತರಾಟೆ ತೆಗೆದುಕೊಂಡ ನೆಟ್ಟಿಗರು

Ishan kishan: ದುಲೀಪ್ ಟ್ರೋಫಿಯಿಂದ ಇಶಾನ್ ಕಿಶನ್ ಹಿಂದೆ ಸರಿಯಲು ಕಾರಣ ಬಹಿರಂಗ; ಆದರೂ ತರಾಟೆ ತೆಗೆದುಕೊಂಡ ನೆಟ್ಟಿಗರು

ಪ್ರಸಕ್ತ ಸಾಲಿನ ದುಲೀಪ್​ ಟ್ರೋಫಿಯಿಂದ ಇಶಾನ್​ ಕಿಶನ್​ ಹಿಂದೆ ಸರಿಯಲು ಕಾರಣ ಏನೆಂಬುದು ಬಹಿರಂಗವಾಗಿದೆ. ಸದ್ಯ ಅವರು ಬೆಂಗಳೂರಿನ ಎನ್​ಸಿಎಗೆ ಮರಳಲು ಸಜ್ಜಾಗಿದ್ದಾರೆ.

ಭಾರತ ಕ್ರಿಕೆಟ್ ತಂಡದ ವಿಕೆಟ್​ ಕೀಪರ್​ ಇಶಾನ್​ ಕಿಶನ್
ಭಾರತ ಕ್ರಿಕೆಟ್ ತಂಡದ ವಿಕೆಟ್​ ಕೀಪರ್​ ಇಶಾನ್​ ಕಿಶನ್

ಪೂರ್ವ ವಲಯ ತಂಡವನ್ನು (East Zone Team) ಮುನ್ನಡೆಸಲು ಅವಕಾಶ ಸಿಗಲಿಲ್ಲ ಎಂಬ ಕಾರಣಕ್ಕಾಗಿ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‌ಮನ್ ಇಶಾನ್ ಕಿಶನ್ (Team India Batsman Ishan Kishan) ಭಾರತದಲ್ಲಿ ನಡೆಯಲಿರುವ ದೇಶೀಯ ಕ್ರಿಕೆಟ್​​ ಲೀಗ್ ದುಲೀಪ್ ಟ್ರೋಫಿಯಿಂದ (Duleep Trohpy) ಹಿಂದೆ ಸರಿದಿರುವುದು ಏಕೆ ಎಂಬ ಅಸಲಿ ಕಾರಣ ಈಗ ಬಹಿರಂಗವಾಗಿದೆ.

ಟೀಕೆ ವ್ಯಕ್ತವಾಗಿತ್ತು

ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಮುಕ್ತಾಯದ ಬೆನ್ನಲ್ಲೇ ಜೂನ್ 28ರಿಂದ ಶುರುವಾಗಲಿರುವ ದುಲೀಪ್ ಟ್ರೋಫಿಯಲ್ಲಿ ಪೂರ್ವ ವಲಯ ತಂಡದ ಆಡುವಂತೆ ವಲಯ ಆಯ್ಕೆ ಸಮಿತಿ ಸಂಚಾಲಕ ದೇಬಶಿಶ್ ಚಕ್ರವರ್ತಿ, ಕಿಶನ್​ರನ್ನು ಕೇಳಿದ್ದರು. ಆದರೆ ಇಶಾನ್ ಈ ಮನವಿ ತಿರಸ್ಕರಿಸಿದ್ದರು. ದೇಶೀಯ ಕ್ರಿಕೆಟ್ ಆಡಲ್ಲ ಎಂದು ಹೇಳಿದ್ದರು. ಇಂತಹ ವರ್ತನೆ ಏಕೆ ಎಂದು ನೆಟ್ಟಿಗರು ಪ್ರಶ್ನಿಸಿದ್ದರು.

ದೇಬಶಿಶ್ ಚಕ್ರವರ್ತಿಯಿಂದ ಮಾಹಿತಿ

ಈ ಯುವ ಕ್ರಿಕೆಟಿಗ ಕೆಂಪು ಚೆಂಡು ಕ್ರಿಕೆಟ್​ ಮೇಲಿನ ಆಸಕ್ತಿ ಕಳೆದುಕೊಂಡಿದ್ದಾನೆ. ಇದೇ ಕಾರಣಕ್ಕೆ ದೇಶೀಯ ಕ್ರಿಕೆಟ್​​ನಲ್ಲಿ ಕಣಕ್ಕಿಳಿಯುವುದಿಲ್ಲ ಎಂದು ಎಂದು ಹೇಳಿದ್ದಾರೆ ಎಂಬ ಟೀಕೆಗಳು ಕೇಳಿ ಬಂದಿದ್ದವು. ಕ್ಯಾಪ್ಟನ್ಸಿ ಕೊಟ್ಟಿಲ್ಲ ಎಂಬ ಕಾರಣಕ್ಕೆ ಹಿಂದೆ ಸರಿದಿದ್ದಾರೆ ಎಂದು ಆಯ್ಕೆ ಸಮಿತಿ ಸಂಚಾಲಕ ದೇಬಶಿಶ್ ಚಕ್ರವರ್ತಿಯೇ ಮಾಹಿತಿ ನೀಡಿದ್ದರು. ತಂಡದ ನಾಯಕನಾಗಿದ್ದ ಅಭಿಮನ್ಯು ಈಶ್ವರ್​ ಕೂಡ ಮಾತನಾಡಿದ್ದರು.

ದುಲೀಪ್​ ಟ್ರೋಫಿ ಆಡಲ್ಲ

ಅಭಿಮನ್ಯು ಕೂಡ ಇಶಾನ್‌ಗೆ ಕರೆ ಮಾಡಿ ದುಲೀಪ್ ಟ್ರೋಫಿ ಆಡುವಂತೆ ಸೂಚಿಸಿದ್ದರು. ಆದರೆ, ಇಶಾನ್ ಅದಕ್ಕೆ ಒಪ್ಪಲಿಲ್ಲ. ದೇಶೀಯ ಟೂರ್ನಿಗಳನ್ನು ಆಡಲ್ಲ ಎಂದು ಅವರು ಹೇಳಿದರಂತೆ. ಇಶಾನ್​ ಗಾಯವಾಗಿದೆಯೆಂದೋ ಅಥವಾ ಬೇರೋಂದು ಕಾರಣ ಹೇಳುತ್ತಾರೆ ಎಂದು ನಾವು ಭಾವಿಸಿದ್ದೆವು. ಆದರೆ ದುಲೀಪ್ ಟ್ರೋಫಿಯನ್ನು ಆಡಲು ಇಷ್ಟ ಇಲ್ಲ ಎಂದು ದೇಬಶಿಶ್ ಚಕ್ರವರ್ತಿ ಹೇಳಿದ್ದರು.

ವಿಂಡೀಸ್​ ಸರಣಿಗೆ ಸಜ್ಜು

ಸದ್ಯ ಬಂದಿರುವ ಮಾಹಿತಿ ಪ್ರಕಾರ, ಮುಂಬರುವ ವೆಸ್ಟ್ ಇಂಡೀಸ್ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಇಶಾನ್ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ. ವಿಂಡೀಸ್ ಸರಣಿಗೆ ಸಂಪೂರ್ಣ ಫಿಟ್ ಆಗಲು ಬಯಸಿರುವ ಈ ಯುವ ಆಟಗಾರ, ಬೆಂಗಳೂರಿನ ಎನ್​ಸಿಎಯಲ್ಲಿ ತರಬೇತಿ ಪಡೆಯಲು ಸಿದ್ಧರಾಗಿದ್ದಾರೆ. ಕಿಶನ್ ತಮ್ಮ ಫಿಟ್‌ನೆಸ್ ಸುಧಾರಿಸಲು ಎನ್‌ಸಿಎಗೆ ಮರಳಲು ಸಜ್ಜಾಗಿದ್ದಾರೆ.

ಮತ್ತೆ ಟೀಕೆ

ಕಿಶನ್​ ತಮ್ಮ ಕೊನೆಯ ಪಂದ್ಯವನ್ನು ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ಪರ ಮೇ 26ರಂದು ಆಡಿದ್ದರು. ಆ ಬಳಿಕ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗಾಗಿ ಲಂಡನ್​ಗೆ ಹೋದರೂ, ಬೆಂಚ್​ಗೆ ಸೀಮಿತವಾಗಿದ್ದರು. ತಮ್ಮ ಫಿಟ್​ನೆಸ್​ ಕಾಪಾಡಿಕೊಳ್ಳಲು ಎನ್​​ಸಿಎಗೆ ಹೋಗಬೇಕೆಂದೇನಿಲ್ಲ. ದುಲೀಪ್​ ಟ್ರೋಫಿ ಆಡಿದ್ರೆ ಸಾಕಿತ್ತು. ರಾಷ್ಟ್ರೀಯ ತಂಡದಲ್ಲಿ ಆಡುತ್ತಿದ್ದೇನೆಂಬ ಅಹಂ ನಿಮಗೆ ಎಂದು ನೆಟ್ಟಿಗರು ಟೀಕಿಸಿದ್ದಾರೆ.

ಸದ್ಯದ ಮಾಹಿತಿ ಪ್ರಕಾರ ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸದ ಭಾರತ ತಂಡದಲ್ಲಿ ಕಿಶನ್ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ. ಇದಕ್ಕಾಗಿಯೇ ಈ ನಿರ್ಧಾರ ತೆಗೆದುಕೊಂಡರು ಎನ್ನಲಾಗಿದೆ. ಏತನ್ಮಧ್ಯೆ, ಡಬ್ಲ್ಯುಟಿಸಿ ಫೈನಲ್ ನಂತರ, ಟೀಮ್​​ ಇಂಡಿಯಾಗೆ ಒಂದು ತಿಂಗಳ ಕಾಲ ವಿಶ್ರಾಂತಿ ಸಿಕ್ಕಿದೆ. ನಂತರ ಭಾರತ ತಂಡ ಪೂರ್ಣ ಸರಣಿಗಾಗಿ ವಿಂಡೀಸ್ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದಲ್ಲಿ ಭಾರತ 2 ಟೆಸ್ಟ್, 3 ಏಕದಿನ ಮತ್ತು 5 ಟಿ20 ಪಂದ್ಯಗಳನ್ನು ಆಡಲಿದೆ.

ಜೂನ್​ 27ರಂದು ತಂಡದ ಆಯ್ಕೆ

ಕೆರಿಬಿಯನ್ನರ ನಾಡಿಗೆ ತೆರಳಲಿರುವ ಭಾರತ ತಂಡವನ್ನು ಜೂನ್​ 27ರಂದು ಆಯ್ಕೆ ಮಾಡಲಾಗುತ್ತದೆ. ಹಿರಿಯ ಆಟಗಾರರಾದ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಸೇರಿದಂತೆ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಅಲ್ಲದೆ, ಐಪಿಎಲ್​ನಲ್ಲಿ ಆರ್ಭಟಿಸಿದ ಯುವ ಆಟಗಾರರಿಗೂ ಅವಕಾಶ ಸಾಧ್ಯತೆ ಹೆಚ್ಚಿದೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.