ಸೋಲಿನ ಸುಳಿಯಲ್ಲಿ ಬೆಂಗಳೂರು ಬುಲ್ಸ್, ಅಂಪಟ್ಟಿಯಲ್ಲಿ ಕೊನೆಯ ಸ್ಥಾನ ಫಿಕ್ಸ್; ಪಿಕೆಎಲ್ 11ರ ಪಾಯಿಂಟ್ ಟೇಬಲ್
Bengaluru Bulls: ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಜೈಪುರ ಪಿಂಕ್ ಪ್ಯಾಂಥರ್ಸ್ 29-42 ಅಂಕಗಳ ಅಂತರದಿಂದ ಗೆಲುವು ಸಾಧಿಸಿತು. ಎರಡನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ವಿರುದ್ಧ ಬೆಂಗಾಲ್ ವಾರಿಯರ್ಸ್ 44-29 ಅಂಕಗಳಿಂದ ಗೆಲುವು ಸಾಧಿಸಿತು. ಪಿಕೆಎಲ್ 11ರ ಪಾಯಿಂಟ್ ಟೇಬಲ್ ಇಲ್ಲಿದೆ.
ಪ್ರೊ ಕಬಡ್ಡಿ ಲೀಗ್‌ನಲ್ಲಿ ಬೆಂಗಳೂರು ಬುಲ್ಸ್ ಇನ್ನೂ ಸೋಲಿನ ಸುಳಿಯಿಂದ ಹೊರಬಂದಿಲ್ಲ. ಪಿಕೆಎಲ್ ಟೂರ್ನಿಯ 104ನೇ ಪಂದ್ಯದಲ್ಲಿಯೂ ಬೆಂಗಾಲ್ ವಾರಿಯರ್ಸ್ 44-29 ಅಂಕಗಳಿಂದ ಹೀನಾಯ ಸೋಲು ಕಂಡಿದೆ. ಇದು ಗೂಳಿಗಳ ಬಳಗಕ್ಕೆ ಟೂರ್ನಿಯಲ್ಲಿ 14ನೇ ಸೋಲು. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಬುಲ್ಸ್, ಈ ಬಾರಿ ಗೆದ್ದಿದ್ದು ಕೇವಲ ಎರಡು ಪಂದ್ಯಗಳನ್ನು ಮಾತ್ರ. ಅತ್ತ ಬೆಂಗಾಲ್ ತಂಡ ಆಡಿದ 17 ಪಂದ್ಯಗಳಲ್ಲಿ 5 ಜಯ ಹಾಗೂ 10 ಪಂದ್ಯಗಳಲ್ಲಿ ಸೋಲು ಕಂಡಿದೆ. ತಂಡವು 37 ಅಂಕಗಳೊಂದಿಗೆ ಪಾಯಿಂಟ್ ಟೇಬಲ್‌ನಲ್ಲಿ 10ನೇ ಸ್ಥಾನದಲ್ಲಿದೆ.
ಪುಣೆಯಲ್ಲಿ ನಡೆಯುತ್ತಿರುವ 11ನೇ ಆವೃತ್ತಿ ಪ್ರೊ ಕಬಡ್ಡಿ ಟೂರ್ನಿಯಲ್ಲಿ, ಮಂಗಳವಾರ (ಡಿಸೆಂಬರ್ 10) ಎರಡು ಪಂದ್ಯಗಳು ನಡೆದವು. ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಜೈಪುರ ಪಿಂಕ್ ಪ್ಯಾಂಥರ್ಸ್ 29-42 ಅಂಕಗಳ ಅಂತರದಿಂದ ಗೆಲುವು ಸಾಧಿಸಿತು. ಎರಡನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ಸೋಲು ಕಂಡಿತು.
ಮೊದಲಾರ್ಧದಲ್ಲಿಯೇ ತಂಡ ಕಳಪೆ ಆರಂಭ ಪಡೆಯಿತು. ತಂಡದ ಲೆಕ್ಕಾಚಾರಗಳು ತಲೆಕೆಳಗಾದವು. ಮೊದಲ ಸುತ್ತಿನ ಅಂತ್ಯಕ್ಕೆ ಬೆಂಗಳೂರು 12-22 ಅಂಕಗಳಿಂದ ಹಿನ್ನಡೆ ಅನುಭವಿಸಿತು. ಲಯಕ್ಕೆ ಮರಳಿದ ಪರ್ದೀಪ್ ನರ್ವಾಲ್ ಏಕಾಂಗಿ ಆಟವಾಡಿದರು. ಭರ್ಜರಿ ರೈಡಿಂಗ್‌ನೊಂದಿಗೆ 14 ಅಂಕ ಕಲೆ ಹಾಕಿದರು.
ಬೆಂಗಾಲ್ ಪರ ರೈಡಿಂಗ್‌ನಲ್ಲಿ ಮಿಂಚಿದ ವಿಶ್ವಾಸ್ 14 ಅಂಕ ಕಲೆ ಹಾಕಿದರು. ಪ್ರಣಯ್ ವಿನಯ್ 9 ರೈಡ್ ಪಾಯಿಂಟ್ ಗಳಿಸಿದರು. ಟ್ಯಾಕಲ್‌ನಲ್ಲಿ ಮತ್ತೆ ಮಿಂಚಿತ ಫಜೆಲ್ ಅತ್ರಾಚಲಿ ಮತ್ತು ನಿತೇಶ್ ಕುಮಾರ್ ತಲಾ 7 ಟ್ಯಾಕಲ್ ಪಾಯಿಂಟ್ ಗಳಿಸಿದರು. ರೈಡಿಂಗ್ ಹಾಗೂ ಟ್ಯಾಕಲ್‌ನಲ್ಲಿ ತಂಡದ ಸಾಂಘಿಕ ಹೋರಾಟ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿತು. ಆದರೆ, ಬುಲ್ಸ್ ಟ್ಯಾಕಲ್ ಬರೀ ಸಪ್ಪೆಯಾಗಿತ್ತು. ಕೇವಲ 8 ಅಂಕ ಮಾತ್ರ ಡಿಫೆನ್ಸ್‌ನಲ್ಲಿ ಬಂತು.
ಜೈಪುರ ಪಿಂಕ್ ಪ್ಯಾಂಥರ್ಸ್ ಜಯಭೇರಿ
ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಭರ್ಜರಿ ಜಯ ಸಾಧಿಸಿತು. ಜೈಪುರ 42-29 ಅಂಕಗಳೊಂದಿಗೆ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ಅಂಕಪಟ್ಟಿಯಲ್ಲಿ ಆರನೇ ಸ್ಥಾನ ಪಡೆಯಿತು. ತಂಡವು ಆಡಿದ 18 ಪಂದ್ಯಗಳಲ್ಲಿ 9ರಲ್ಲಿ ಗೆಲುವು ಸಾಧಿಸಿ 54 ಅಂಕಗಳನ್ನು ಪಡೆದಿದೆ. ಗುಜರಾತ್ ತಂಡ 18 ಪಂದ್ಯಗಳಲ್ಲಿ 5ರಲ್ಲಿ ಗೆದ್ದು 34 ಅಂಕಗಳೊಂದಿಗೆ 11ನೇ ಸ್ಥಾನದಲ್ಲಿದೆ.
ಪಿಕೆಎಲ್ ಅಂಕಪಟ್ಟಿ
1. ಹರಿಯಾಣ ಸ್ಟೀಲರ್ಸ್ - 72
2. ಪಾಟ್ನಾ ಪೈರೇಟ್ಸ್ - 58
3. ಯುಪಿ ಯೋಧಾಸ್ - 56
4. ದಬಾಂಗ್ ಡೆಲ್ಲಿ - 56
5. ಯು ಮುಂಬಾ - 55
6. ಜೈಪುರ ಪಿಂಕ್ ಪ್ಯಾಂಥರ್ಸ್ - 54
7. ತೆಲುಗು ಟೈಟಾನ್ಸ್ - 54
8. ಪುಣೇರಿ ಪಲ್ಟನ್ - 49
9. ತಮಿಳು ತಲೈವಾಸ್ - 38
10. ಬೆಂಗಾಲ್ ವಾರಿಯರ್ಸ್ - 37
11. ಗುಜರಾತ್ ಜೈಂಟ್ಸ್ - 34
12. ಬೆಂಗಳೂರು ಬುಲ್ಸ್ - 19