PKL Records: ಪ್ರೊ ಕಬಡ್ಡಿ ಲೀಗ್‌ ಇತಿಹಾಸದಲ್ಲಿ ನಿರ್ಮಾಣದವಾದ ಅತಿ ದೊಡ್ಡ ದಾಖಲೆ ಯಾವುದು ಗೊತ್ತಾ?
ಕನ್ನಡ ಸುದ್ದಿ  /  ಕ್ರೀಡೆ  /  Pkl Records: ಪ್ರೊ ಕಬಡ್ಡಿ ಲೀಗ್‌ ಇತಿಹಾಸದಲ್ಲಿ ನಿರ್ಮಾಣದವಾದ ಅತಿ ದೊಡ್ಡ ದಾಖಲೆ ಯಾವುದು ಗೊತ್ತಾ?

PKL Records: ಪ್ರೊ ಕಬಡ್ಡಿ ಲೀಗ್‌ ಇತಿಹಾಸದಲ್ಲಿ ನಿರ್ಮಾಣದವಾದ ಅತಿ ದೊಡ್ಡ ದಾಖಲೆ ಯಾವುದು ಗೊತ್ತಾ?

PKL Records: ಅದ್ಭುತ ಸಾಧನೆಗಳಿಂದಾಗಿ ಪಿಕೆಎಲ್ ಜನಪ್ರಿಯತೆಯೂ ಹೆಚ್ಚಿದೆ. ಪ್ರೊ ಕಬಡ್ಡಿ ಲೀಗ್‌ನ ಮುಂಬರುವ 11 ನೇ ಋತುವಿನಲ್ಲಿ ಕೂಡ ಈ ದೊಡ್ಡ ದಾಖಲೆಗಳನ್ನು ಮುರಿಯುವುದು ತುಂಬಾ ಕಷ್ಟ. ಇಂದು ನಾವು ಅಂತಹ ದೊಡ್ಡ 3 ದಾಖಲೆಗಳ ಬಗ್ಗೆ ಹೇಳಲಿದ್ದೇವೆ.

ಪ್ರೊ ಕಬಡ್ಡಿ ಲೀಗ್‌ ಇತಿಹಾಸದಲ್ಲಿ ನಿರ್ಮಾಣದವಾದ ಅತಿ ದೊಡ್ಡ ದಾಖಲೆ ಯಾವುದು ಗೊತ್ತಾ?
ಪ್ರೊ ಕಬಡ್ಡಿ ಲೀಗ್‌ ಇತಿಹಾಸದಲ್ಲಿ ನಿರ್ಮಾಣದವಾದ ಅತಿ ದೊಡ್ಡ ದಾಖಲೆ ಯಾವುದು ಗೊತ್ತಾ?

Pro Kabaddi League: ಪ್ರೊ ಕಬಡ್ಡಿ ಲೀಗ್‌ ಇತಿಹಾಸದಲ್ಲಿ ಆಟಗಾರರು ಇದುವರೆಗೆ ತಮ್ಮ ಹೆಸರಿಗೆ ಅನೇಕ ದಾಖಲೆಗಳನ್ನು ಸೇರಿಸಿಕೊಂಡಿದ್ದಾರೆ. ಪರ್ದೀಪ್ ನರ್ವಾಲ್ ಮತ್ತು ಪವನ್ ಸೆಹ್ರಾವತ್ ಅವರಂತಹ ಆಟಗಾರರು ಅದ್ಭುತ ಪ್ರದರ್ಶನ ನೀಡುವ ಮೂಲಕ ಅನೇಕ ರೆಕಾರ್ಡ್ ನಿರ್ಮಿಸಿದ್ದಾರೆ. ಈ ಅದ್ಭುತ ಸಾಧನೆಗಳಿಂದಾಗಿ ಪಿಕೆಎಲ್ ಜನಪ್ರಿಯತೆಯೂ ಹೆಚ್ಚಿದೆ. ಪ್ರೊ ಕಬಡ್ಡಿ ಲೀಗ್‌ನ ಮುಂಬರುವ 11 ನೇ ಋತುವಿನಲ್ಲಿ ಕೂಡ ಈ ದೊಡ್ಡ ದಾಖಲೆಗಳನ್ನು ಮುರಿಯುವುದು ತುಂಬಾ ಕಷ್ಟ. ಇಂದು ನಾವು ಅಂತಹ ದೊಡ್ಡ 3 ದಾಖಲೆಗಳ ಬಗ್ಗೆ ಹೇಳಲಿದ್ದೇವೆ.

ಮೊಹಮ್ಮದ್ರೇಜಾ ಶಾದ್ಲು ಸಾಧನೆ

ಮೊಹಮ್ಮದ್ರೇಜಾ ಶಾದ್ಲು ಪಿಕೆಎಲ್ 8 ಮತ್ತು ಪಿಕೆಎಲ್ 10 ರಲ್ಲಿ ಅತ್ಯುತ್ತಮ ಡಿಫೆಂಡರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಇದಲ್ಲದೇ ಪ್ರೊ ಕಬಡ್ಡಿ ಲೀಗ್ ಸೀಸನ್-9ರಲ್ಲಿ ಶಾದ್ಲು ದಾಖಲಿಸಿದ ದಾಖಲೆಯನ್ನು ಮುರಿಯುವುದು ತುಂಬಾ ಕಷ್ಟ. ಇವರು ಪಿಕೆಎಲ್‌ನ 9 ನೇ ಋತುವಿನಲ್ಲಿ ಪಾಟ್ನಾ ಪೈರೇಟ್ಸ್‌ಗಾಗಿ ಆಡುವಾಗ, ದಬಾಂಗ್ ಡೆಲ್ಲಿ ಕೆಸಿ ವಿರುದ್ಧದ ಪಂದ್ಯದಲ್ಲಿ ಹೆಚ್ಚು ಟ್ಯಾಕಲ್ ಪಾಯಿಂಟ್‌ಗಳನ್ನು ಗಳಿಸಿದ ಸಾಧನೆ ಮಾಡಿದರು. ಶಾಡ್ಲು 16 ಟ್ಯಾಕಲ್ ಪಾಯಿಂಟ್‌ಗಳನ್ನು ಗಳಿಸಿ ಒಟ್ಟು 8 ಸೂಪರ್ ಟ್ಯಾಕಲ್‌ಗಳನ್ನು ಗಳಿಸಿದ್ದರು. ಪಿಕೆಎಲ್ 9 ರಲ್ಲಿನ ಅವಧಿಯಲ್ಲಿ, 20 ಪಂದ್ಯಗಳಲ್ಲಿ 84 ಟ್ಯಾಕಲ್ ಪಾಯಿಂಟ್‌ಗಳನ್ನು ದಾಖಲಿಸುವ ಮೂಲಕ ಶಡ್ಲು ಋತುವಿನ 2ನೇ ಅತ್ಯಂತ ಯಶಸ್ವಿ ಡಿಫೆಂಡರ್ ಆಟಗಾರರಾಗಿದ್ದರು.

ಪವನ್ ಸೆಹ್ರಾವತ್

ಪ್ರೊ ಕಬಡ್ಡಿ ಲೀಗ್ ಸೀಸನ್ 6 ರಿಂದ ಪವನ್ ಸೆಹ್ರಾವತ್ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಪಿಕೆಎಲ್ 7 ರ ಸಮಯದಲ್ಲಿ, ಬೆಂಗಳೂರು ಬುಲ್ಸ್ ಪರ ಆಡುವಾಗ ಪವನ್ 24 ಪಂದ್ಯಗಳಲ್ಲಿ ಒಟ್ಟು 346 ರೇಡ್ ಪಾಯಿಂಟ್‌ಗಳನ್ನು ಗಳಿಸಿದರು. ಈ ವೇಳೆ ಹರಿಯಾಣ ಸ್ಟೀಲರ್ಸ್ ವಿರುದ್ಧದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಪವನ್ ದೊಡ್ಡ ದಾಖಲೆ ನಿರ್ಮಿಸಿದ್ದು, ಇದುವರೆಗೂ ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ. ಈ ಪಂದ್ಯದಲ್ಲಿ ಪವನ್ ಒಟ್ಟು 39 ರೇಡ್ ಪಾಯಿಂಟ್ಸ್ ಗಳಿಸಿದ್ದು, ಇದುವರೆಗಿನ ಪಂದ್ಯದಲ್ಲಿ ಆಟಗಾರನೊಬ್ಬ ಅತಿ ಹೆಚ್ಚು ರೇಡ್ ಪಾಯಿಂಟ್ ಗಳಿಸಿದ ದಾಖಲೆಯಾಗಿದೆ.

ಪರ್ದೀಪ್ ನರ್ವಾಲ್

ಪರ್ದೀಪ್ ನರ್ವಾಲ್ ಅವರು ಪ್ರೊ ಕಬಡ್ಡಿ ಲೀಗ್‌ನ 5 ನೇ ಸೀಸನ್‌ನಲ್ಲಿ ಪಾಟ್ನಾ ಪೈರೇಟ್ಸ್ ಪರ ಆಡುವಾಗ ನಾಯಕನಾಗಿ ಅದ್ಭುತ ಪ್ರದರ್ಶನ ನೀಡಿದ್ದರು. ಇಲ್ಲಿಯವರೆಗೂ ಪರ್ದೀಪ್ ದಾಖಲಿಸಿದ ದೊಡ್ಡ ದಾಖಲೆಯನ್ನು ಮುರಿಯಲು ಯಾವುದೇ ಆಟಗಾರನಿಗೆ ಸಾಧ್ಯವಾಗಿಲ್ಲ. ಪರ್ದೀಪ್ ನರ್ವಾಲ್ ಪಿಕೆಎಲ್ 5 ರಲ್ಲಿ ಒಟ್ಟು 26 ಪಂದ್ಯಗಳನ್ನು ಆಡುವಾಗ ಗರಿಷ್ಠ 369 ರೇಡ್ ಪಾಯಿಂಟ್‌ಗಳನ್ನು ಗಳಿಸಿದ್ದರು. ಪ್ರೊ ಕಬಡ್ಡಿ ಲೀಗ್‌ನ 10 ವರ್ಷಗಳ ಇತಿಹಾಸದಲ್ಲಿ, ಯಾವುದೇ ಆಟಗಾರನು ಒಂದು ಋತುವಿನಲ್ಲಿ ಈ ರೇಡ್ ಪಾಯಿಂಟ್‌ಗಳನ್ನು ಮುಟ್ಟಲು ಸಾಧ್ಯವಾಗಿಲ್ಲ. ಹೀಗಾಗಿ, ಈ ದಾಖಲೆಯನ್ನು ಮುರಿಯುವುದು ತುಂಬಾ ಕಷ್ಟವಾಗಿದೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.