PKL 11: ಪ್ರೊ ಕಬಡ್ಡಿ ಲೀಗ್‌ 11 ಆರಂಭಕ್ಕೆ ಒಂದೇ ದಿನ ಬಾಕಿ: ನೀವು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ ಇಲ್ಲಿದೆ
ಕನ್ನಡ ಸುದ್ದಿ  /  ಕ್ರೀಡೆ  /  Pkl 11: ಪ್ರೊ ಕಬಡ್ಡಿ ಲೀಗ್‌ 11 ಆರಂಭಕ್ಕೆ ಒಂದೇ ದಿನ ಬಾಕಿ: ನೀವು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ ಇಲ್ಲಿದೆ

PKL 11: ಪ್ರೊ ಕಬಡ್ಡಿ ಲೀಗ್‌ 11 ಆರಂಭಕ್ಕೆ ಒಂದೇ ದಿನ ಬಾಕಿ: ನೀವು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ ಇಲ್ಲಿದೆ

Pro kabaddi season 11: ಪಿಕೆಎಲ್ 11ರ ಮೊದಲ ಪಂದ್ಯ ತೆಲುಗು ಟೈಟಾನ್ಸ್ ಮತ್ತು ಬೆಂಗಳೂರು ಬುಲ್ಸ್ ನಡುವೆ ಅಕ್ಟೋಬರ್ 18 ರಂದು ರಾತ್ರಿ 8 ಗಂಟೆಗೆ ನಡೆಯಲಿದೆ. ಈ ಎರಡು ದೈತ್ಯರ ನಡುವಿನ ಪಂದ್ಯ ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ. ಪಿಕೆಎಲ್‌ ಕುರಿತು ಹೆಚ್ಚಿನ ವಿವರ ಇಲ್ಲಿದೆ. (ವರದಿ: ವಿನಯ್‌ ಭಟ್‌)

ಪಿಕೆಎಲ್ 11ರ ಮೊದಲ ಪಂದ್ಯ ತೆಲುಗು ಟೈಟಾನ್ಸ್ ಮತ್ತು ಬೆಂಗಳೂರು ಬುಲ್ಸ್ ನಡುವೆ ಅಕ್ಟೋಬರ್ 18 ರಂದು ರಾತ್ರಿ 8 ಗಂಟೆಗೆ ನಡೆಯಲಿದೆ.
ಪಿಕೆಎಲ್ 11ರ ಮೊದಲ ಪಂದ್ಯ ತೆಲುಗು ಟೈಟಾನ್ಸ್ ಮತ್ತು ಬೆಂಗಳೂರು ಬುಲ್ಸ್ ನಡುವೆ ಅಕ್ಟೋಬರ್ 18 ರಂದು ರಾತ್ರಿ 8 ಗಂಟೆಗೆ ನಡೆಯಲಿದೆ.

ಪ್ರೊ ಕಬಡ್ಡಿ ಲೀಗ್ ಸೀಸನ್ 11 ರ ಆರಂಭಕ್ಕೆ ಕೇವಲ ಒಂದು ದಿನ ಮಾತ್ರ ಬಾಕಿ ಉಳಿದಿದೆ. ಅಭಿಮಾನಿಗಳು ಹಾಗೂ ಎಲ್ಲಾ ತಂಡಗಳು ರಣ ರೋಚಕ ಕದನ ವೀಕ್ಷಿಸಲು ಕಾತರದಿಂದ ಕಾಯುತ್ತಿದ್ದಾರೆ. ಪಿಕೆಎಲ್ ಸೀಸನ್ 11 ಪಂದ್ಯಗಳು ಪ್ರಾರಂಭವಾಗುವ ಮೊದಲು, ಕಬಡ್ಡಿ ಅಭಿಮಾನಿಯಾಗಿ ನೀವು ತಿಳಿದುಕೊಳ್ಳಬೇಕಾದ ಹಲವು ಪ್ರಮುಖ ಮಾಹಿತಿಗಳಿವೆ. ಇಂದು ನಾವು ಪ್ರೊ ಕಬಡ್ಡಿ ಸೀಸನ್ 11 ಗೆ ಸಂಬಂಧಿಸಿದ ಕೆಲವು ಪ್ರಮುಖ ವಿಷಯಗಳನ್ನು ನಿಮಗೆ ಹೇಳಲಿದ್ದೇವೆ.

ಪ್ರೊ ಕಬಡ್ಡಿ ಲೀಗ್‌ನ 11 ನೇ ಋತುವಿನ ಮೊದಲ ಪಂದ್ಯ ಯಾವ ಎರಡು ತಂಡಗಳ ನಡುವೆ ನಡೆಯಲಿದೆ?

ಪಿಕೆಎಲ್ 11ರ ಮೊದಲ ಪಂದ್ಯ ತೆಲುಗು ಟೈಟಾನ್ಸ್ ಮತ್ತು ಬೆಂಗಳೂರು ಬುಲ್ಸ್ ನಡುವೆ ಅಕ್ಟೋಬರ್ 18 ರಂದು ರಾತ್ರಿ 8 ಗಂಟೆಗೆ ನಡೆಯಲಿದೆ. ಈ ಎರಡು ದೈತ್ಯರ ನಡುವಿನ ಪಂದ್ಯ ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ. ತೆಲುಗು ಟೈಟಾನ್ಸ್‌ ಅನ್ನು ಪವನ್ ಸೆಹ್ರಾವತ್ ಮುನ್ನಡೆಸಿದರೆ ಮತ್ತೊಂದೆಡೆ, ಬೆಂಗಳೂರು ಬುಲ್ಸ್ ಜವಾಬ್ದಾರಿಯನ್ನು ಪರ್ದೀಪ್ ನರ್ವಾಲ್‌ಗೆ ವಹಿಸಲಾಗಿದೆ.

ಪ್ರೊ ಕಬಡ್ಡಿ ಲೀಗ್ 11 ರ ಅತ್ಯಂತ ದುಬಾರಿ ಆಟಗಾರ ಯಾರು?

ಪಿಕೆಎಲ್​ನ 11 ನೇ ಋತುವಿನ ಹರಾಜಿನಲ್ಲಿ ಸಚಿನ್ ತನ್ವಾರ್ ಅತ್ಯಂತ ದುಬಾರಿ ಆಟಗಾರ ಎಂದು ಬಿಡ್ ಮಾಡಲಾಯಿತು. ತಮಿಳ್ ತಲೈವಾಸ್ ರೈಡರ್ ಸಚಿನ್ ಅವರನ್ನು 2.15 ಕೋಟಿ ರೂಪಾಯಿಗೆ ಖರೀದಿಸುವಲ್ಲಿ ಯಶಸ್ವಿಯಾಗಿದೆ. ಪಿಕೆಎಲ್‌ನಲ್ಲಿ ತಲೈವಾಸ್‌ ಪರ ಆಡುತ್ತಿರುವುದು ಇದೇ ಮೊದಲು.

ಪ್ರೊ ಕಬಡ್ಡಿ ಲೀಗ್ ಋತುವಿನಲ್ಲಿ ಯಾವ ಆಟಗಾರರು ನಾಯಕರಾಗಲಿದ್ದಾರೆ?

  • ಪುಣೇರಿ ಪಲ್ಟನ್ - ಅಸ್ಲಂ ಇನಾಮದಾರ್
  • ಹರಿಯಾಣ ಸ್ಟೀಲರ್ಸ್ - ಜೈದೀಪ್ ದಹಿಯಾ
  • ಪಾಟ್ನಾ ಪೈರೇಟ್ಸ್ - ಶುಭಂ ಶಿಂಧೆ
  • ಜೈಪುರ ಪಿಂಕ್ ಪ್ಯಾಂಥರ್ಸ್ - ಅರ್ಜುನ್ ದೇಶ್ವಾಲ್
  • ಗುಜರಾತ್ ಜೈಂಟ್ಸ್ - ನೀರಜ್ ಕುಮಾರ್
  • ದಬಾಂಗ್ ದೆಹಲಿ ಕೆಸಿ - ನವೀನ್ ಕುಮಾರ್ ಮತ್ತು ಅಶು ಮಲಿಕ್
  • ಬೆಂಗಾಲ್ ವಾರಿಯರ್ಸ್ - ಫಾಜೆಲ್ ಅತ್ರಾಚಲಿ
  • ಯು ಮುಂಬಾ - ಸುನಿಲ್ ಕುಮಾರ್
  • ತಮಿಳು ತಲೈವಾಸ್ - ಸಾಗರ್ ರಾಠಿ
  • ಯುಪಿ ಯೋಧಾಸ್ - ಸುರೇಂದರ್ ಗಿಲ್
  • ತೆಲುಗು ಟೈಟಾನ್ಸ್ - ಪವನ್ ಸೆಹ್ರಾವತ್

ಇದನ್ನೂ ಓದಿ: PKL 11: ಈ ಬಾರಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಬಲಿಷ್ಠ ತಂಡ ಯಾವುದು? ಅತಿ ಹೆಚ್ಚು ಪಂದ್ಯ ಗೆಲ್ಲುವ 3 ತಂಡಗಳು ಇಲ್ಲಿದೆ

ಪ್ರೊ ಕಬಡ್ಡಿ ಲೀಗ್‌ನ 11 ನೇ ಋತುವಿನ ಪಂದ್ಯಗಳು ಯಾವ ನಗರಗಳಲ್ಲಿ ನಡೆಯಲಿವೆ?

ಪಿಕೆಎಲ್ ಸೀಸನ್-11ರ ಎಲ್ಲಾ ಪಂದ್ಯಗಳನ್ನು ಒಟ್ಟು ಮೂರು ನಗರಗಳಲ್ಲಿ ಆಯೋಜಿಸಲಾಗಿದೆ. ಬಿಡುಗಡೆಯಾದ ವೇಳಾಪಟ್ಟಿಯ ಪ್ರಕಾರ, ಲೀಗ್ ಪಂದ್ಯಗಳು ಹೈದರಾಬಾದ್‌ನಲ್ಲಿ ಪ್ರಾರಂಭವಾಗಿ ಪುಣೆಯಲ್ಲಿ ಕೊನೆಗೊಳ್ಳುತ್ತವೆ.

  1. ಹೈದರಾಬಾದ್ ಲೆಗ್ - 18 ಅಕ್ಟೋಬರ್ ನಿಂದ 9 ನವೆಂಬರ್.
  2. ನೋಯ್ಡಾ ಲೆಗ್ - 10 ನವೆಂಬರ್ ನಿಂದ 1 ಡಿಸೆಂಬರ್.
  3. ಪುಣೆ ಲೆಗ್ - 3 ಡಿಸೆಂಬರ್ ನಿಂದ 24 ಡಿಸೆಂಬರ್.

  • ವರದಿ: ವಿನಯ್ ಭಟ್.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.