Chanakya Niti: ಚಾಣಕ್ಯರ ಪ್ರಕಾರ ವಯಸ್ಸು 20 ದಾಟಿದ ಮೇಲೆ ತಪ್ಪಿಯೂ ಈ ರೀತಿ ಮಾಡಬಾರದು, ಜೀವನವಿಡಿ ಪಶ್ಚಾತ್ತಾಪ ಪಡಬೇಕಾಗುತ್ತೆ
ಮನುಷ್ಯನಿಗೆ ವಯಸ್ಸು ಹೆಚ್ಚಾಗುತ್ತಿದ್ದಂತೆ ತಿಳುವಳಿಕೆ ಬರಬೇಕು. ನಾವು ವಯಸ್ಸಿಗೆ ತಕ್ಕಂತೆ ಬದಲಾಗುತ್ತಿರಬೇಕು. ಚಾಣಕ್ಯರ ಪ್ರಕಾರ ವಯಸ್ಸು 20 ದಾಟಿದ ಮೇಲೆ ಈ ತಪ್ಪುಗಳನ್ನು ಎಂದಿಗೂ ಮಾಡಬಾರದು. ಇದರಿಂದ ಕೆಟ್ಟ ದಿನಗಳ ಆರಂಭವಾಗುತ್ತಿವೆ ಎಂದೇ ಅರ್ಥ. ಅಂತಹ ತಪ್ಪುಗಳು ಯಾವುವು ನೋಡಿ.
ಆಚಾರ್ಯ ಚಾಣಕ್ಯರು ಮೌರ್ಯ ಸಾಮ್ರಾಜ್ಯದ ಮಹಾನ್ ವಿದ್ವಾಂಸ, ತತ್ವಜ್ಞಾನಿ. ಗುಪ್ತರ ಆಳ್ವಿಕೆಯಲ್ಲಿ ಇವರ ಮಹತ್ವದ ಪಾತ್ರ ವಹಿಸಿದ್ದರು. ಅವರ ಮಾತಗಳನ್ನು ಅನುಸರಿಸಿ ಚಂದ್ರಗುಪ್ತ ಮೌರ್ಯ ಮಹಾರಾಜನಾಗುತ್ತಾನೆ ಎಂದು ಹೇಳಲಾಗುತ್ತದೆ. ಅವರ ನಾಯಕತ್ವದಲ್ಲಿ, ಗುಪ್ತ ಸಾಮ್ರಾಜ್ಯವು ವ್ಯಾಪಕವಾಗಿ ವಿಸ್ತರಿಸುತ್ತದೆ. ಆಚಾರ್ಯ ಚಾಣಕ್ಯರು ಮಹಾನ್ ಗ್ರಂಥಗಳ ಪಂಡಿತರಾಗಿದ್ದರು. ಅವರು ನೀತಿಶಾಸ್ತ್ರ ಎಂಬ ಪುಸ್ತಕವನ್ನು ರಚಿಸಿದ್ದಾರೆ, ಅದು ಇಂದಿಗೂ ಪ್ರಸ್ತುತವಾಗಿದೆ.
ಆಚಾರ್ಯ ಚಾಣಕ್ಯರು ಜೀವನದ ಯಶಸ್ಸಿನ ಸೂತ್ರವನ್ನೂ ನೀಡಿದ್ದಾರೆ. ಈ ನಿಯಮಗಳನ್ನು ಅನುಸರಿಸುವ ಮೂಲಕ ಸಾಮಾನ್ಯ ವ್ಯಕ್ತಿ ತನ್ನ ಜೀವನದಲ್ಲಿ ಯಶಸ್ವಿ ವ್ಯಕ್ತಿಯಾಗಬಹುದು. ಚಾಣಕ್ಯ ನೀತಿಯಲ್ಲಿ 20 ವರ್ಷ ದಾಟಿದ ನಂತರ ಜೀವನದಲ್ಲಿ ಯಾವ ತಪ್ಪು ಮಾಡಬಾರದು ಎಂಬ ಸಲಹೆ ನೀಡಿದ್ದಾರೆ ಚಾಣಕ್ಯ. ಯುವಕರು 20 ವರ್ಷದ ನಂತರ ಈ ತಪ್ಪುಗಳನ್ನು ಮಾಡಿದರೆ, ಭವಿಷ್ಯದಲ್ಲಿ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಚಾಣಕ್ಯ ಹೇಳಿದ್ದಾರೆ. ಅಂತಹ ತಪ್ಪುಗಳು ಯಾವುವು ನೋಡಿ.
ಸಮಯ ವ್ಯರ್ಥ ಮಾಡಬೇಡಿ
ಆಚಾರ್ಯ ಚಾಣಕ್ಯ ತಮ್ಮ ನೀತಿಶಾಸ್ತ್ರದಲ್ಲಿ 20 ವರ್ಷದ ನಂತರ ಸಮಯವನ್ನು ವ್ಯರ್ಥ ಮಾಡಬೇಡಿ ಎಂದು ಸಲಹೆ ನೀಡುತ್ತಾರೆ. ಸಮಯ ಬಹಳ ಅಮೂಲ್ಯವಾದುದು. ಅದನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಒಮ್ಮೆ ಕಾಲ ಕಳೆದರೆ ಮತ್ತೆ ಬರುವುದಿಲ್ಲ. ವಿನಾಕಾರಣ ಸಮಯ ವ್ಯರ್ಥ ಮಾಡುವ ಜನರು ತಮ್ಮ ಜೀವನದುದ್ದಕ್ಕೂ ಸಮಸ್ಯೆಗಳನ್ನು ಎದುರಿಸುತ್ತಾರೆ. ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಮಯಪಾಲನೆ ಮುಖ್ಯ. ಅದರಲ್ಲೂ 20ನೇ ವಯಸ್ಸಿನ ನಂತರ ಒಂದಿಷ್ಟು ವರ್ಷ ಸಮಯವನ್ನು ವ್ಯರ್ಥ ಮಾಡದೇ ಬದುಕಿನ ಗುರಿ ಮುಟ್ಟುವಲ್ಲಿ ಶ್ರಮಿಸಬೇಕು ಎಂದು ಚಾಣಕ್ಯ ಹೇಳಿದ್ದಾರೆ.
ಸೋಮಾರಿಯಾಗಬೇಡಿ
ಆಚಾರ್ಯ ಚಾಣಕ್ಯರ ಪ್ರಕಾರ, 20 ವರ್ಷ ವಯಸ್ಸಿನ ನಂತರ ವ್ಯಕ್ತಿಯು ತಾನು ಮಾಡುವ ಕೆಲಸದ ಬಗ್ಗೆ ಜಾಗರೂಕರಾಗಿರಬೇಕು. ನೀವು ಅಸಡ್ಡೆ ಅಥವಾ ನಿರ್ಲಕ್ಷ್ಯ ವಹಿಸಿದರೆ ಅದರ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದ ಸೋಮಾರಿತನವನ್ನು ತಪ್ಪಿಸಿ. ದೇವರು ಸೋಮಾರಿಗಳಿಗೆ ಎಂದಿಗೂ ಸಹಾಯ ಮಾಡುವುದಿಲ್ಲ ಎಂದು ಹೇಳಲಾಗುತ್ತದೆ. ಇದಕ್ಕಾಗಿ, ನಿಮ್ಮ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡಿ. ಇದು ಜೀವನದ ಯಶಸ್ಸಿನ ಗುಟ್ಟು ಎಂಬುದು ಸುಳ್ಳಲ್ಲ.
ಹಣವನ್ನು ವ್ಯರ್ಥ ಮಾಡದಿರಿ
ಚಾಣಕ್ಯ ನೀತಿಯ ಪ್ರಕಾರ, 20 ವರ್ಷ ವರ್ಷದ ನಂತರ ವ್ಯಕ್ತಿಯು ಬುದ್ಧಿವಂತಿಕೆಯಿಂದ ಹಣವನ್ನು ಖರ್ಚು ಮಾಡಬೇಕು. ವಿಶೇಷವಾಗಿ ಯುವಕರು ಹಣದ ಮಹತ್ವವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಇಂದಿನ ಕಾಲದಲ್ಲಿ ದುಡ್ಡ ಅತಿ ಅವಶ್ಯ. ಹಣ ಉಳಿಸುವುದು ಭವಿಷ್ಯದಲ್ಲಿ ಉಪಯೋಗಕ್ಕೆ ಬರುತ್ತದೆ.
ಅತಿಯಾದ ಕೋಪ ಸಲ್ಲ
ಆಚಾರ್ಯ ಚಾಣಕ್ಯರು ನೀತಿ ಶಾಸ್ತ್ರದಲ್ಲಿ ಕೋಪವು ಮನುಷ್ಯನ ದೊಡ್ಡ ಶತ್ರು ಎಂದು ಹೇಳುತ್ತಾರೆ. ಮನುಷ್ಯನ ಆಲೋಚನೆ ಮತ್ತು ತಿಳುವಳಿಕೆ ಕೋಪದಲ್ಲಿ ಕೊನೆಗೊಳ್ಳುತ್ತದೆ. 20 ವರ್ಷ ವಯಸ್ಸಿನ ನಂತರ ಪ್ರತಿಕ್ರಿಯಿಸುವಾಗ ದಯವಿಟ್ಟು ಇದನ್ನು ಪರಿಗಣಿಸಿ. ಯೌವನದಲ್ಲಿ ಕೋಪ ಹೆಚ್ಚು. ಇದನ್ನು ನಿಯಂತ್ರಿಸುವುದು ಸುಲಭವಲ್ಲ. ಇದಕ್ಕಾಗಿ ಯೋಗ ಮತ್ತು ಧ್ಯಾನವನ್ನು ಅಭ್ಯಾಸ ಮಾಡಬಹುದು. ಆ ಮೂಲಕ ಕೋಪ ನಿಗ್ರಹಿಸುವ ಪ್ರಯತ್ನ ಮಾಡಬೇಕು.
(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)
ವಿಭಾಗ