ಪಿಕೆಎಲ್ನಲ್ಲಿ ಈ ಹಿಂದಿನ ವಿಜೇತರು, ರನ್ನರ್ಅಪ್ ಯಾರು; ಈವರೆಗೂ ಪ್ರಶಸ್ತಿಯೇ ಗೆಲ್ಲದ ತಂಡಗಳು ಯಾವುವು?
Pro Kabaddi League 2024: ಯಶಸ್ವಿ 10 ಆವೃತ್ತಿ ಪೂರೈಸಿರುವ ಪ್ರೊ ಕಬಡ್ಡಿ ಲೀಗ್ನಲ್ಲಿ 7 ತಂಡಗಳು ಪ್ರಶಸ್ತಿ ಗೆದ್ದಿವೆ. ಹಾಗಾದರೆ ಯಾವ ತಂಡ, ಯಾವ ವರ್ಷ, ಯಾರ ವಿರುದ್ಧ ಟ್ರೋಫಿ ಜಯಿಸಿದೆ. ಯಾವ ತಂಡಗಳು ಇನ್ನೂ ಚಾಂಪಿಯನ್ ಆಗಿಲ್ಲ ಎಂಬುದರ ವಿವರ ಇಂತಿದೆ.
11ನೇ ಆವೃತ್ತಿಯ ಬಹುನಿರೀಕ್ಷಿತ ಪ್ರೊ ಕಬಡ್ಡಿ ಲೀಗ್ (Pro Kabaddi League 2024) ಕೆಲವೇ ದಿನಗಳಷ್ಟೇ ಬಾಕಿ ಇದೆ. 3 ತಿಂಗಳ ಕಾಲ ನಾನ್ಸ್ಟಾಪ್ ಮನರಂಜನೆ ಪಡೆಯಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅಕ್ಟೋಬರ್ 18ರಿಂದ ಡಿಸೆಂಬರ್ 24ರ ತನಕ ಲೀಗ್ ಪಂದ್ಯಗಳು ನಡೆಯಲಿವೆ. ಆ ಬಳಿಕ ಪ್ಲೇಆಫ್ ಪಂದ್ಯಗಳ ದಿನಾಂಕ ನಿಗದಿ ಆಗಲಿದೆ. 2014ರಲ್ಲಿ ಪ್ರಾರಂಭವಾದ ಈ ಲೀಗ್ ಯಶಸ್ವಿ 10 ಸೀಸನ್ ಪೂರ್ಣಗೊಳಿಸಿದೆ. ಈಗ 11ನೇ ಆವೃತ್ತಿಗೆ ಕಾಲಿಟ್ಟಿದ್ದು, ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟು ಹಾಕಿದೆ.
2014ರಲ್ಲಿ ಆರಂಭಗೊಂಡ ಪಿಕೆಎಲ್ ವಿಶ್ವಮಟ್ಟದಲ್ಲಿ ಜನಪ್ರಿಯತೆ ಗಳಿಸಿದೆ. ಉದ್ಘಾಟನಾ ಆವೃತ್ತಿಯಲ್ಲಿ 435 ಮಿಲಿಯನ್ ವೀಕ್ಷಕರನ್ನು ಸೆಳೆದಿತ್ತು. ಇದು ಐಪಿಎಲ್ಗಿಂತ ಕೆಲವೇ ಮಿಲಿಯನ್ಗಳು ಕಡಿಮೆ ಎಂಬುದು ವಿಶೇಷ. ಹಾಗಾದರೆ ಒಟ್ಟು 10 ಆವೃತ್ತಿಗಳ ಪೈಕಿ ಯಾವ ತಂಡ, ಯಾವ ವರ್ಷ, ಯಾರ ವಿರುದ್ಧ ಗೆದ್ದು ಟ್ರೋಫಿಗೆ ಮುತ್ತಿಕ್ಕಿದೆ ಎಂಬುದನ್ನು ಈ ಮುಂದೆ ನೋಡೋಣ.
ಪಿಕೆಎಲ್ ಯಶಸ್ವಿ ತಂಡ ಯಾವುದು?
2014ರಿಂದ ಇದುವರೆಗೆ ನಡೆದ ಒಟ್ಟು 10 ಸೀಸನ್‌ಗಳಲ್ಲಿ 7 ತಂಡಗಳು ಪ್ರಶಸ್ತಿ ಗೆದ್ದಿವೆ. ಪಾಟ್ನಾ ಪೈರೇಟ್ಸ್ ತಂಡವು ಹ್ಯಾಟ್ರಿಕ್ ಗೆಲುವಿನೊಂದಿಗೆ ಪ್ರೊ ಕಬಡ್ಡಿ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡವಾಗಿ ಹೊರಹೊಮ್ಮಿದೆ. ಉಳಿದಂತೆ, ಉದ್ಘಾಟನಾ ಆವೃತ್ತಿ ಮತ್ತು ಹಾಲಿ ಚಾಂಪಿಯನ್ ಪಟ್ಟ ಪಡೆದಿರುವ ಜೈಪುರ್ ಪಿಂಕ್ ಪ್ಯಾಂಥರ್ಸ್ 2ನೇ ಯಶಸ್ವಿ ತಂಡ ಎನಿಸಿದೆ. ಬೆಂಗಳೂರು ಬುಲ್ಸ್ ತಂಡವು ರೋಹಿತ್ ಕುಮಾರ್ ಸಾರಥ್ಯದಲ್ಲಿ 2018ರ ಆವೃತ್ತಿಯಲ್ಲಿ ಚಾಂಪಿಯನ್ ಆಗಿತ್ತು.
11ನೇ ಆವೃತ್ತಿಯಲ್ಲಿ ಭಾಗವಹಿಸುವ ತಂಡಗಳು
ಬೆಂಗಾಲ್ ವಾರಿಯರ್ಸ್, ಬೆಂಗಳೂರು ಬುಲ್ಸ್, ದಬಾಂಗ್ ಡೆಲ್ಲಿ, ಗುಜರಾತ್ ಜೈಂಟ್ಸ್, ಹರಿಯಾಣ ಸ್ಟೀಲರ್ಸ್, ಜೈಪುರ ಪಿಂಕ್ ಪ್ಯಾಂಥರ್ಸ್, ಪಾಟ್ನಾ ಪೈರೇಟ್ಸ್, ಪುಣೇರಿ ಪಲ್ಟನ್, ತಮಿಳು ತಲೈವಾಸ್, ತೆಲುಗು ಟೈಟಾನ್ಸ್, ಯು ಮುಂಬಾ, ಯುಪಿ ಯೋಧಾಸ್.
ಯಾವ ತಂಡಗಳು ಇನ್ನೂ ಚಾಂಪಿಯನ್ ಆಗಿಲ್ಲ?
ಗುಜರಾತ್ ಜೈಂಟ್ಸ್
ಹರಿಯಾಣ ಸ್ಟೀಲರ್ಸ್
ತಮಿಳು ತಲೈವಾಸ್
ತೆಲುಗು ಟೈಟಾನ್ಸ್
ಯುಪಿ ಯೋಧಾ
ಆರಂಭಿಕ ಪಂದ್ಯ ಯಾವ ತಂಡಗಳ ನಡುವೆ?
11ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ತೆಲುಗು ಟೈಟಾನ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಈ ಪಂದ್ಯವು ಹೈದರಾಬಾದ್ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಸಂಜೆ 8 ಗಂಟೆಗೆ ಶುರುವಾಗಲಿದೆ ಸೆಣಸಾಟ ನಡೆಸಲಿವೆ. ಕಳೆದ ಬಾರಿ ಲೀಗ್‌ನ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್-ತೆಲುಗು ಟೈಟಾನ್ಸ್ ನಡುವೆ ನಡೆದಿತ್ತು.
ಲೈವ್ ಸ್ಟ್ರೀಮಿಂಗ್ ವಿವರ
ಪ್ರೊ ಕಬಡ್ಡಿ ಲೀಗ್ 2024 ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವಾಗಲಿದೆ ಮತ್ತು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಲೈವ್ ಸ್ಟ್ರೀಮ್ ಇರಲಿದೆ.
ವರ್ಷ | ಪಿಕೆಎಲ್ ಸೀಸನ್ | ವಿಜೇತರು | ರನ್ನರ್-ಅಪ್ | ಫಲಿತಾಂಶ | ಗೆಲುವಿನ ಅಂತರ |
---|---|---|---|---|---|
2014 | 1 | ಜೈಪುರ ಪಿಂಕ್ ಪ್ಯಾಂಥರ್ಸ್ | ಯು ಮುಂಬಾ | 35-24 | 11 |
2015 | 2 | ಯು ಮುಂಬಾ | ಬೆಂಗಳೂರು ಬುಲ್ಸ್ | 36-30 | 06 |
2016 | 3 | ಪಾಟ್ನಾ ಪೈರೇಟ್ಸ್ | ಯು ಮುಂಬಾ | 31-28 | 03 |
2016 | 4 | ಪಾಟ್ನಾ ಪೈರೇಟ್ಸ್ | ಜೈಪುರ ಪಿಂಕ್ ಪ್ಯಾಂಥರ್ಸ್ | 37-29 | 08 |
2017 | 5 | ಪಾಟ್ನಾ ಪೈರೇಟ್ಸ್ | ಗುಜರಾತ್ ಜೈಂಟ್ಸ್ | 55-38 | 17 |
2018 | 6 | ಬೆಂಗಳೂರು ಬುಲ್ಸ್ | ಗುಜರಾತ್ ಜೈಂಟ್ಸ್ | 38-33 | 05 |
2019 | 7 | ಬೆಂಗಾಲ್ ವಾರಿಯರ್ಸ್ | ದಬಾಂಗ್ ಡೆಲ್ಲಿ | 39-34 | 05 |
2021-22 | 8 | ದಬಾಂಗ್ ಡೆಲ್ಲಿ ಕೆಸಿ | ಪಾಟ್ನಾ ಪೈರೇಟ್ಸ್ | 37-36 | 01 |
2022 | 9 | ಜೈಪುರ ಪಿಂಕ್ ಪ್ಯಾಂಥರ್ಸ್ | ಪುಣೇರಿ ಪಲ್ಟನ್ | 33-29 | 04 |
2023 | 10 | ಪುಣೇರಿ ಪಲ್ಟನ್ | ಹರಿಯಾಣ ಸ್ಟೀಲರ್ಸ್ | 28-25 | 03 |