VIDEO: ನಂಜನಗೂಡಿನಲ್ಲಿ ಪಂಚ ರಥೋತ್ಸವ ಸಂಭ್ರಮ: ಭಕ್ತಿ ಭಾವದಲ್ಲಿ ಮಿಂದೆದ್ದ ಶ್ರೀಕಂಠನ ಭಕ್ತರು
- Nanjanagudu Pancha Maharathotsava: ಕರ್ನಾಟಕದ ಪುರಾಣ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದಾಗಿರುವ ದಕ್ಷಿಣ ಕಾಶಿ ನಂಜನಗೂಡಿನ ನಂಜುಂಡೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು (ಮಾರ್ಚ್ 22, ಶುಕ್ರವಾರ) ಪಂಚ ಮಹಾರಥೋತ್ಸವ ನಡೆಯಿತು. ಲಕ್ಷಾಂತರ ಮಂದಿ ಭಕ್ತರ ಹರ್ಷೋದ್ಗಾರಗಳ ನಡುವೆ ಶ್ರದ್ದಾ ಭಕ್ತಿಯಿಂದ ರಥೋತ್ಸವ ನೆರವೇರಿತು. ಬೆಳಿಗ್ಗೆ 6:30 ರಿಂದ 6:50 ರೊಳಗಿನ ಶುಭ ಮೀನ ಲಗ್ನದಲ್ಲಿ ಈ ಬಾರಿಯ ಪಂಚಮಹಾರಥೋತ್ಸವ ಅದ್ದೂರಿಯಾಗಿ ಜರುಗಿತು. ಪಂಚ ಮಹಾರಥೋತ್ಸವ ನಡೆಯುವ ಏಕೈಕ ಪುರಾಣ ಪ್ರಸಿದ್ದ ಪುಣ್ಯಕ್ಷೇತ್ರ ಎಂಬ ಹೆಗ್ಗಳಿಕೆಯನ್ನು ನಂಜನಗೂಡು ಹೊಂದಿದೆ.