logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ದೀಪಾವಳಿ ವಿಶೇಷ: ಜೀವನಲ್ಲಿ ಸಮೃದ್ಧಿ, ಐಶ್ವರ್ಯ ಪ್ರಾಪ್ತಿಗೆ ಕುಬೇರ ಲಕ್ಷ್ಮಿ ಪೂಜೆ ಮಾಡುವುದು ಹೇಗೆ? ಈ ಅಂಶಗಳು ತಿಳಿದಿರಲಿ

ದೀಪಾವಳಿ ವಿಶೇಷ: ಜೀವನಲ್ಲಿ ಸಮೃದ್ಧಿ, ಐಶ್ವರ್ಯ ಪ್ರಾಪ್ತಿಗೆ ಕುಬೇರ ಲಕ್ಷ್ಮಿ ಪೂಜೆ ಮಾಡುವುದು ಹೇಗೆ? ಈ ಅಂಶಗಳು ತಿಳಿದಿರಲಿ

Raghavendra M Y HT Kannada

Oct 03, 2024 09:14 AM IST

google News

ದೀಪಾವಳಿ ಅಮಾವಾಸ್ಯೆಯಂದು ಕುಬೇರ ಲಕ್ಷ್ಮಿ ಪೂಜೆ ಮಾಡುವ ವಿಧಾನವನ್ನು ತಿಳಿಯಿರಿ

    • 2024ರ ದೀಪಾವಳಿಯಲ್ಲಿ ಕುಬೇರ ಲಕ್ಷ್ಮಿ ಪೂಜೆ ಮಾಡುವುದರಿಂದ ಏನೆಲ್ಲಾ ಲಾಭಗಳಿವೆ? ಪೂಜೆ ಮಾಡುವ ವಿಧಾನ, ನೈವೇದ್ಯ ಹೇಗಿರಬೇಕು, ಹಬ್ಬದ ಶುಭ ಸಯಮ ಸೇರಿ ಪ್ರಮುಖ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ. (ಬರಹ: ಎಚ್ ಸತೀಶ್, ಜ್ಯೋತಿಷಿ)
ದೀಪಾವಳಿ ಅಮಾವಾಸ್ಯೆಯಂದು ಕುಬೇರ ಲಕ್ಷ್ಮಿ ಪೂಜೆ ಮಾಡುವ ವಿಧಾನವನ್ನು ತಿಳಿಯಿರಿ
ದೀಪಾವಳಿ ಅಮಾವಾಸ್ಯೆಯಂದು ಕುಬೇರ ಲಕ್ಷ್ಮಿ ಪೂಜೆ ಮಾಡುವ ವಿಧಾನವನ್ನು ತಿಳಿಯಿರಿ

ಬೆಳಕಿನ ಹಬ್ಬ ದೀಪಾವಳಿಗೆ ದಿನಗಣನೆ ಆರಂಭವಾಗಿದೆ. ಪ್ರತಿಯೊಬ್ಬ ಮನುಷ್ಯನಲ್ಲಿನ ಅಜ್ಞಾನವೆಂಬ ಕತ್ತಲೆಯನ್ನು ಸರಿಸಿ ಜ್ಞಾನವೆಂಬ ಬೆಳಕನ್ನು ತುಂಬಿಸುವಂತೆ ಬೇಡುವ ಈ ದೀಪಗಳ ಹಬ್ಬಕ್ಕೆ ಜನರು ಕೂಡ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ಹಬ್ಬ, ಪೂಜೆ ಯಾವ ರೀತಿ ಇರಬೇಕೆಂಬ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಹಬ್ಬದಲ್ಲಿನ ಪೂಜೆಯ ವಿವರವನ್ನು ಇಲ್ಲಿ ನೀಡಲಾಗಿದೆ. 2024ರ ದೀಪಾವಳಿ ಅಕ್ಟೋಬರ್ ತಿಂಗಳ 30ರ ಬುಧವಾರದ ದಿನ ಆರಂಭವಾಗುತ್ತದೆ. ಅಂದು ನೀರು ತುಂಬುವ ಹಬ್ಬ, 31 ರಂದು ನರಕಚತುರ್ದಶಿ ಆಚರಣೆ ಇರುತ್ತದೆ ಅದ್ದರಿಂದ ಆ ದಿನ ಬೆಳಗಿನ ವೇಳೆ ಸೂರ್ಯೋದಯಕ್ಕೆ ಮುನ್ನ ಅಂದರೆ ಬೆಳಗಿನ ಜಾವ 4.30 ರಿಂದ 5.45 ರ ನಡುವೆ ಅಭ್ಯಂಜನ ಸ್ನಾನವನ್ನು ಮಾಡಬೇಕು. ಆ ದಿನದಂದೆ ಧನಲಕ್ಷ್ಮಿ ಪೂಜೆಯನ್ನು ಮಾಡಬೇಕಾಗುತ್ತದೆ. ಅಕ್ಟೋಬರ್ 31ರ ಗುರುವಾರ ಬೆಳಗ್ಗೆ 6.30 ರಿಂದ 7.30 ರ ಅವಧಿಯಲ್ಲಿ ಕುಬೇರ ಲಕ್ಷ್ಮಿ ಪೂಜೆಯನ್ನು ಮಾಡಬೇಕು.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆ ಇದೆ, ವ್ಯವಹಾರದಲ್ಲಿ ಸುಧಾರಣೆ ಕಂಡುಬರುತ್ತೆ

Dec 21, 2024 04:43 PM

24ನೇ ಜನವರಿ 2025ಕ್ಕೆ ಸೂರ್ಯ-ಬುಧ ಸಂಯೋಗದಿಂದ ಬುಧಾದಿತ್ಯ ರಾಜಯೋಗ: ರಾಶಿಯವರ ಜೀವನ ಆಗ ಪಾವನ, ಅದೃಷ್ಟವೋ ಅದೃಷ್ಟ

Dec 20, 2024 05:22 PM

ನಾಳಿನ ದಿನ ಭವಿಷ್ಯ: ನೀವು ಇಷ್ಟಪಡುವ ಜನರೊಂದಿಗೆ ಸಮಯ ಕಳೆಯುತ್ತೀರಿ, ಕೆಲಸಗಳು ಸುಗಮವಾಗಿ ನಡೆಯುತ್ತವೆ

Dec 20, 2024 03:29 PM

ಮಾಸ ಶಿವರಾತ್ರಿಯಿಂದ ಬದಲಾಗಲಿದೆ 3 ರಾಶಿಯವರ ಜೀವನ: ಮಾರ್ಗಶಿರ ಮಾಸದಲ್ಲಿ ಈ ವ್ರತವನ್ನು ಯಾವ ದಿನ ಆಚರಿಸಲಾಗುತ್ತದೆ?

Dec 19, 2024 06:44 PM

ಅಪರಿಚಿತ ವ್ಯಕ್ತಿಗಳನ್ನು ನಂಬಿ ಮೋಸ ಹೋಗದಿರಿ, ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ; ನಾಳಿನ ದಿನಭವಿಷ್ಯ

Dec 18, 2024 05:02 PM

Sun Transit: 2025ರಲ್ಲಿ ಮಕರ ರಾಶಿಗೆ ಸೂರ್ಯನ ಪ್ರವೇಶ; ಈ 3 ರಾಶಿಯವರಿಗೆ ಹೊಸ ವರ್ಷ ತರಲಿದೆ ಅದೃಷ್ಟ, ಇಷ್ಟಗಳೆಲ್ಲವೂ ನೆರವೇರುವ ಕಾಲ

Dec 18, 2024 10:14 AM

ಕುಬೇರ ಲಕ್ಷ್ಮಿ ಪೂಜೆ ಕುರಿತು ತಿಳಿಯಬೇಕಾದ ಅಂಶಗಳು

ದೀಪಾವಳಿಯ ಅಮಾವಾಸ್ಯೆಯಂದು ಲಕ್ಷ್ಮಿ ಪೂಜೆ ಮಾಡುತ್ತೇವೆ. ಇದನ್ನು ಮುಖ್ಯವಾಗಿ ಹಣಕಾಸಿನ ಅನುಕೂಲಕ್ಕಾಗಿ ಮಾಡುತ್ತೇವೆ. ಆದ್ದರಿಂದಲೇ ಇದನ್ನು ಧನಲಕ್ಷ್ಮಿ ಪೂಜೆ ಎಂದು ಕರೆಯುತ್ತೇವೆ. ಈ ಪೂಜೆಯು ಇತ್ತೀಚಿನ ದಿನಗಳಲ್ಲಿ ಕುಬೇರ ಲಕ್ಷ್ಮಿ ಪೂಜೆ ಎಂಬ ಹೆಸರಿನಿಂದ ಜನಪ್ರಿಯವಾಗಿದೆ. ಮುಖ್ಯವಾದ ಅಂಶವೆಂದರೆ ನೋಟಿನ ಕಂತೆಯನ್ನು ಇಟ್ಟು ಅದನ್ನು ಪೂಜಿಸಬೇಕೆಂದು ಯಾವುದೇ ಧರ್ಮ ಗ್ರಂಥಗಳಲ್ಲಿಯೂ ತಿಳಿಸಿಲ್ಲ. ಶುಭ ಕಾರ್ಯಕ್ರಮವಾಗಲಿ ಅಥವಾ ಅಶುಭ ಕಾರ್ಯಕ್ರಮವಾಗಲಿ ಶಾಸ್ತ್ರ ಸಂಪ್ರದಾಯವನ್ನು ಪೂರೈಸಲು ಹಣದ ನಾಣ್ಯಗಳನ್ನು ಬಳಸುತ್ತೇವೆ. ಆದ್ದರಿಂದ ಹಣದ ನಾಣ್ಯಗಳನ್ನು ಶ್ರೀಲಕ್ಷ್ಮಿಗೆ ಹೋಲಿಸಲಾಗುತ್ತದೆ.

ಪುರಾತನದ ಇತಿಹಾಸವನ್ನು ಗ್ರಹಿಸಿದಲ್ಲಿ ರಾಜ ಮಹಾರಾಜರ ಕಾಲದಲ್ಲಿ ಚಿನ್ನದ ವರಹಗಳಿಂದ ಶ್ರೀಲಕ್ಷ್ಮಿಯನ್ನು ಪೂಜಿಸುತ್ತಿದ್ದರು. ಹಾಗೆಯೆ ಚಿನ್ನದ ವಹಗಳನ್ನು ಲಕ್ಷ್ಮಿಗೆ ಹೋಲಿಸುತ್ತಿದ್ದರು. ಪ್ರಸಕ್ತ ಸನ್ನಿವೇಶದಲ್ಲಿ ಕನಿಷ್ಠ ಪಕ್ಷ ಚಿನ್ನದ ಬಣ್ಣವುಳ್ಳ ನಾಣ್ಯಗಳನ್ನು ಪೂಜೆಗೆ ಬಳಸುವುದು ಒಳ್ಳೆಯದು. ಕೇವಲ ಹಣವನ್ನು ಇಟ್ಟು ಪೂಜೆ ಮಾಡುವುದು ತಪ್ಪು. ಅದರ ಬದಲಾಗಿ ಬೆಳ್ಳಿಯ ಕಲಶವನ್ನು ತೆಗೆದುಕೊಂಡು ಅದನ್ನು ಸುಣ್ಣ, ಅರಿಶಿಣ, ಕುಂಕುಮದಿಂದ ಅಲಂಕರಿಸಬೇಕು. ಅದರಲ್ಲಿ ಪಂಚ ಫಲಗಳು ಅಂದರೆ ಐದು ರೀತಿಯ ಹಣ್ಣುಗಳನ್ನು ಹಾಕಬೇಕು. ಕಳಸಕ್ಕೆ ಮುಕ್ಕಾಲು ಮಟ್ಟದವರೆಗು ನೀರನ್ನು ಹಾಕಿ, ಅದರಲ್ಲಿ ಅರಿಶಿಣ,ಕುಂಕುಮ ಹಳದಿ ಬಣ್ಣದ ಅಕ್ಷತೆಯಿಂದ ಪೂಜಿಸಬೇಕು.

ಆ ಕಳಶದಲ್ಲಿ ಲಕ್ಷ್ಮಿ ದೇವಿಯನ್ನು ಆಹ್ವಾನಿಸಬೇಕು. ಪೂಜೆಗೆ ಆತ್ಮೀಯರನ್ನು ಆಹ್ವಾನಿಸಬೇಕು. ಪೂಜೆಯು ಮುಗಿದ ಬಳಿಕ ಬಂದಿರುವ ಸ್ತ್ರೀ ಪುರುಷರಿಗೆ ತಾಂಬೂಲ ನೀಡಬೇಕು. ಲಕ್ಷ್ಮಿಯ ಪೂಜೆಯನ್ನು ಮಾಡಿ, ತಾಂಬೂಲದಲ್ಲಿ ಹಣವನ್ನು ಇಟ್ಟು ಕೊಟ್ಟರೆ ದಾರಿದ್ರ್ಯ ಹೋಗಬಹುದು ಎಂಬ ನಂಬಿಕೆ ಇದೆ. ಆದರೆ ಅದು ತಪ್ಪಾದ ನಂಬಿಕೆ. ದೀಪಾವಳಿ ಹಬ್ಬ ಪೂರ್ಣವಾದ ನಂತರ ಆ ನೀರನ್ನು ಹಸಿರು ಗಿಡಗಳಿಗೆ ಹಾಕಬೇಕು. ತುಳಿಯುವ ಕಡೆ ಹಾಕಬಾರದು. ನೀರಿನಲ್ಲಿ ಅರಿಶಿಣವಿದ್ದಲ್ಲಿ ಅದು ಆಮ್ಮೀಯ ತತ್ವವನ್ನು ಹೊಂದಿರುತ್ತದೆ ಆದ್ದರಿಂದ ಎಚ್ಚರಿಕೆಯಿಂದ ಗಿಡಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು.

ಕಳಸದ ಮುಂದೆ ಎರಡು ವಿಳ್ಳೆದೆಲೆಯನ್ನ, ಆ ವೀಳ್ಯದೆಲೆಯ ತುದಿ ದೇವರ ಕಡೆ ಇರುವಂತೆ ಇರಬೇಕು. ಆನಂತರ ಲಕ್ಷ್ಮಿ ಅಷ್ಟೋತ್ತರದಿಂದ ಕುಂಕುಮರ್ಚನೆಯನ್ನು ಮಾಡಬೇಕು. ವಿಳ್ಳೆದೆಲೆಯ ಮೇಲೆ ಕುಂಕುಮಾರ್ಚನೆಯನ್ನು ಮಾಡುವುದು ಹೆಚ್ಚು ಶ್ರೇಯಸ್ಕರ. ಈ ಕುಂಕುಮವನ್ನು ಹಣೆಯಲ್ಲಿ ಧರಿಸಿ ಸ್ವಲ್ಪ ಕುಂಕುಮವನ್ನು ಕಾಗದದಲ್ಲಿ ಸುತ್ತಿಟ್ಟು ಬೀರುವಿನಲ್ಲಿ ಇಟ್ಟಲ್ಲಿ ಹಣಕಾಸಿನ ಕೊರತೆಯೂ ನಿವಾರಣೆಯಾಗುತ್ತದೆ. ಆ ದಿನ ನಮ್ಮ ಶತ್ರುಗಳೇ ಬಂದರೂ ಅವರನ್ನು ಬರೀಗೈಯಲ್ಲಿ ಕಳುಹಿಸಬಾರದು.

ಕುಬೇರ ಲಕ್ಷ್ಮಿ ಪೂಜೆಯ ನೈವೇದ್ಯದ ಬಗ್ಗೆ ತಿಳಿದಿರಲಿ

ದೇವರ ನೈವೇದ್ಯಕ್ಕಾಗಿ ಮುಖ್ಯವಾಗಿ ಪಾಯಸ ಮತ್ತು ಮೊಸರನ್ನವನ್ನು ಮಾಡಬೇಕು. ಸಂಪೂರ್ಣವಾಗಿ ಮಾಡಿದ ಅಡುಗೆಯನ್ನು ಖಾಲಿ ಮಾಡಬಾರದು. ಒಂದು ಪುಟ್ಟ ಬಟ್ಟಲಿನಲ್ಲಿ ಸಾರು ಬೆರೆಸಿದ ಸ್ವಲ್ಪ ಅನ್ನವನ್ನು ಅಡಿಗೆ ಮನೆಯಲ್ಲಿ ಇಡಬೇಕು. ಇದನ್ನು ತುಪ್ಪದಿಂದ ಪ್ರೋಕ್ಷಿಸಬೇಕು. ಇದರಿಂದಾಗಿ ಲಕ್ಷ್ಮೀಮಾತೆಯು ಸಂತುಷ್ಟಳಾಗಿ ಆ ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತಾಳೆ ಎಂದು ಹೇಳಲಾಗಿದೆ. ಮುಂಜಾನೆ ಲಕ್ಷ್ಮಿಯು ಮನೆಯನ್ನು ಪ್ರವೇಶಿಸುತ್ತಾಳೆ ಎಂಬ ನಂಬಿಕೆ ಇದೆ. ಆದ್ದರಿಂದ ಮನೆಯ ಮುಂಬಾಗಿಲಿನಲ್ಲಿ ಚಪ್ಪಲಿ, ಪೊರಕೆ ಅಥವಾ ಕಸವನ್ನು ಹಾಕಬಾರದು. ಹೊಸಿಲನ್ನು ತುಳಿಯಬಾರದು. (ಬರಹ: ಎಚ್ ಸತೀಶ್, ಜ್ಯೋತಿಷಿ)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ