Karnataka News Live October 1, 2024 : ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ ಸ್ನೇಹಮಯಿ ಕೃಷ್ಣಗೆ ಸಂಕಷ್ಟ; ಕೋರ್ಟ್‌ನಿಂದ ಅರೆಸ್ಟ್ ವಾರೆಂಟ್ ಜಾರಿ
Oct 01, 2024 09:14 PM IST
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
- Snehamayi Krishna: ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ದೂರುದಾರ ಹಾಗೂ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಈಗ ಸಂಕಷ್ಟ ಎದುರಿಸಿದ್ದಾರೆ. ಅವರ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. 9 ವರ್ಷ ಹಳೆ ಪ್ರಕರಣದ ವಿಚಾರಣೆಗೆ ಹಾಜರಾಗದ ಕಾರಣಕ್ಕೆ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಲಾಗಿದೆ.
- ಚುನಾವಾಣಾ ಬಾಂಡ್ ಅಕ್ರಮ ಪ್ರಕರಣ ಸಂಬಂಧ ಸಚಿವೆ ನಿರ್ಮಲಾ ಸೀತಾರಾಮನ್ ಮೇಲಿನ ಎಫ್ಐಆರ್‌ಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಹೀಗಾಗಿ ಸಚಿವೆ ಜೊತೆಗೆ ನಳಿನ್ ಕುಮಾರ್ ಕಟೀಲ್ ಹಾಗೂ ಬಿವೈ ವಿಜಯೇಂದ್ರ ಕೂಡಾ ನಿರಾಳರಾಗಿದ್ದಾರೆ. ಅಕ್ಟೋಬರ್ 22ರಂದು ಪ್ರಕರಣದ ವಿಚಾರಣೆ ನಡೆಯಲಿದೆ. (ವರದಿ: ಎಚ್.ಮಾರುತಿ).
- ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ದರ್ಶನ್ ತೂಗುದೀಪ ಹಾಗೂ ಪವಿತ್ರಾ ಗೌಡಗೆ ಇನ್ನೂ ಜಾಮೀನು ಸಿಕ್ಕಿಲ್ಲ. ಸದ್ಯ ನ್ಯಾಯಾಲಯವು ಪ್ರಕರಣದ ತನಿಖೆಯನ್ನು ಅಕ್ಟೋಬರ್ 4ಕ್ಕೆ ಮುಂದೂಡಿದೆ. ಬೇಲ್ ಸಿಗುವ ಭರವಸೆಯಲ್ಲಿ ಆರೋಪಿಗಳಿದ್ದಾರೆ. (ವರದಿ-ಎಚ್.ಮಾರುತಿ)
ನವರಾತ್ರಿ ಬಂತೆಂದರೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಹುಲಿವೇಷದ ಸದ್ದು ಕೇಳಿಬರುತ್ತದೆ. ಮಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಹುಲಿವೇಷಕ್ಕೆ ಭಾರಿ ಡಿಮಾಂಡ್ ಶುರುವಾಗಿದೆ. ದಶಕಗಳ ಹಿಂದೆ ಹಿರಿಯರ ತಂಡ ವೇಷ ಹಾಕುತ್ತಿದ್ದರೆ, ಈಗ ಬಾಲಕರೂ ಹಿಂದೆ ಉಳಿದಿಲ್ಲ. (ವರದಿ: ಹರೀಶ ಮಾಂಬಾಡಿ, ಮಂಗಳೂರು)
- Protest News: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸರ್ಕಾರದ ವಿರುದ್ಧ ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರು ಮಂಗಳೂರಿನ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ನಟಿ ಭೂಮಿ ಪಡ್ನೇಕರ್ ತನ್ನ ಉಡುಗೆ ತೊಡುಗೆಯಲ್ಲಿ ಪ್ರಯೋಗ ಮಾಡಲು ಯಾವುದೇ ಹಿಂಜರಿಕೆ ಹೊಂದಿಲ್ಲ. ಆದರೆ, ಅವರು ಧರಿಸಿರುವ ಉಡುಗೆಯನ್ನು ನೆಟ್ಟಿಗರು ನಾಗಿನಿ ಉಡುಗೆ ಎನ್ನಬಹುದು. ಆದರೆ, ಇದು ತುಳುನಾಡಿನ ಭೂತಾರಾಧನೆಗೆ ಮಾಡಿದ ಅವಮಾನವೇ? ಇವರು ಧರಿಸಿರುವುದು ಹೆಣ್ಣು ದೈವಗಳು ಬಳಸುವ ಎದೆತಟ್ಟ ಅಥವಾ ತುಳುವಿನಲ್ಲಿ ಮಿರೆಕಟ್ಟು ಎಂಬ ಕವಚದಿಂದ ಸ್ಪೂರ್ತಿ ಪಡೆದದ್ದೇ?
- Muda Land Scam: ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ನಿವೇಶನ ವಾಪಸ್ ನೀಡುವ ಪತ್ರವನ್ನು ಮುಡಾ ಆಯುಕ್ತರಿಗೆ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ತಲುಪಿಸಿದ್ದಾರೆ. ಈ ಬಗ್ಗೆ ಆಯುಕ್ತ ರಘುನಂದನ್ ಪ್ರತಿಕ್ರಿಯಿಸಿದ್ದಾರೆ.
- MUDA Land Scam: ಮುಡಾ ಪ್ರಕರಣಕ್ಕೆ ಸಂಬಂಧಿಸಿ ಜಮೀನಿನ ದಾಖಲೆಗಳನ್ನು ದೂರುದಾರ ಸ್ನೇಹಮಯಿ ಕೃಷ್ಣ ಅವರು ಲೋಕಾಯಕ್ತಕ್ಕೆ ಸಲ್ಲಿಸಿದ್ದಾರೆ. ಜೊತೆಗೆ ಜಮೀನಿನ ಮಹಜರು ಕೂಡ ಮುಗಿದಿದೆ.
- BBMP E-Khata: ಇಂದಿನಿಂದ (ಅಕ್ಟೋಬರ್ 1ರಿಂದ) ಫೇಸ್‌ಲೆಸ್, ಸಂಪರ್ಕರಹಿತ ಹಾಗೂ ಆನ್ಲೈನ್ ಮೂಲಕ ಇ-ಖಾತಾ ವಿತರಣಾ ವ್ಯವಸ್ಥೆಯನ್ನು ಪರೀಕ್ಷಾರ್ಥವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪ್ರಾರಂಭಿಸುತ್ತಿದೆ.
- Bengaluru Police: ಸೆಪ್ಟೆಂಬರ್ 30ರಂದು ಸೋಮವಾರ ಬೆಂಗಳೂರು ನಗರದಾದ್ಯಂತ ಒಟ್ಟು 3,924 ಶಾಲಾ ಬಸ್ಸುಗಳನ್ನು ಪರಿಶೀಲಿಸಲಾಗಿದ್ದು, 21 ಚಾಲಕರು ಕುಡಿದು ವಾಹನ ಚಲಾಯಿಸಿ ಸಿಕ್ಕಿಬಿದ್ದಿದ್ದಾರೆ.
- Hasanamba Temple: ಹಾಸನದ ಹಾಸನಾಂಬೆ ದರ್ಶನಕ್ಕೆ ದಿನಾಂಕ ಘೋಷಣೆಯಾಗಿದ್ದು, ಅಕ್ಟೋಬರ್ 24 ರಿಂದ ನವೆಂಬರ್ 3ರ ತನಕ ಭಕ್ತರಿಗೆ ಅವಕಾಶ ನೀಡಲಾಗಿದೆ. ಆದರೆ ಮೊದಲ ಮತ್ತು ಕೊನೆ ದಿನ ಹೊರತುಪಡಿಸಿ ಉಳಿದ 9 ದಿನಗಳಲ್ಲಿ 24 ಗಂಟೆಗಳ ಕಾಲವೂ ಬಾಗಿಲು ತೆರೆದಿರುತ್ತದೆ.
ತುಮಕೂರು ನಗರದಲ್ಲಿ ಚಿನ್ನದ ನಾಣ್ಯ ಖರೀದಿ ಈಗ ಬಹಳ ಸುಲಭ. ತುಮಕೂರು ಮರ್ಚೆಂಟ್ಸ್ ಕ್ರೆಡಿಟ್ ಕೋ-ಆಪರೇಟೀವ್ ಸಂಸ್ಥೆಯು ಸ್ಥಾಪಿಸಿದ ಎಟಿಎಂ ಸದ್ಯ ಚರ್ಚೆಯಲ್ಲಿದೆ. ತುಮಕೂರಿನ ಟಿಎಂಸಿಸಿ ಗೋಲ್ಡ್ ಕಾಯಿನ್ ಎಟಿಎಂ ಜನಮನ ಸೆಳೆದಿದ್ದು, ಅದರ ವಿವರ ಇಲ್ಲಿದೆ.
- MUDA Site Scam: ಮುಡಾ ಆಯುಕ್ತರಿಗೆ ಪತ್ರ ಬರೆದು 14 ಸೈಟ್ಗಳು ವಾಪಸ್ ನೀಡುವ ತೆಗೆದುಕೊಂಡ ಬಳಿಕ ಪತ್ನಿ ಪಾರ್ವತಿ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯ, ನನ್ನ ಮೇಲಿನ ನನ್ನ ಪತ್ನಿ ನನ್ನ ವಿರುದ್ಧದ ದ್ವೇಷದ ರಾಜಕಾರಣಕ್ಕೆ ಬಲಿಯಾಗಿ ಮಾನಸಿಕವಾಗಿ ಹಿಂಸೆ ಅನುಭವಿಸಿದ್ದಾರೆ ಎಂದು ಹೇಳಿದ್ದಾರೆ.
- Heavy rain in Karnataka: ಅಕ್ಟೋಬರ್ 1ರಂದು ಕರ್ನಾಟಕದ ವಿವಿಧೆಡೆ ಭಾರಿ ಮಳೆಯಾಗುವ ಸಾಧ್ಯತೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದೇ ಮಳೆ ಮುಂದಿನ ನಾಲ್ಕೈದು ದಿನಗಳ ಕಾಲ ಮುಂದುವರಿಯಲಿದೆ.