LIVE UPDATES
ಊಟಕ್ಕಿಲ್ಲದ ಉಪ್ಪಿನಕಾಯಿ; ಬೈಕ್‌ನಲ್ಲಿ ಶವ ಸಾಗಿಸಿದ ಪ್ರಕರಣಕ್ಕೆ ಈಗ ಎಚ್ಚೆತ್ತುಕೊಂಡ್ರಂತೆ ಅಧಿಕಾರಿಗಳು
Karnataka News Live September 19, 2024 : ಊಟಕ್ಕಿಲ್ಲದ ಉಪ್ಪಿನಕಾಯಿ; ಬೈಕ್‌ನಲ್ಲಿ ಶವ ಸಾಗಿಸಿದ ಪ್ರಕರಣಕ್ಕೆ ಈಗ ಎಚ್ಚೆತ್ತುಕೊಂಡ್ರಂತೆ ಅಧಿಕಾರಿಗಳು
Sep 19, 2024 10:40 PM IST
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
ಕರ್ನಾಟಕ News Live: ಊಟಕ್ಕಿಲ್ಲದ ಉಪ್ಪಿನಕಾಯಿ; ಬೈಕ್‌ನಲ್ಲಿ ಶವ ಸಾಗಿಸಿದ ಪ್ರಕರಣಕ್ಕೆ ಈಗ ಎಚ್ಚೆತ್ತುಕೊಂಡ್ರಂತೆ ಅಧಿಕಾರಿಗಳು
- Tumakuru News: ಬೈಕ್‌ನಲ್ಲಿ ವೃದ್ಧನ ಶವ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿ ಎಚ್ಚೆತ್ತುಕೊಂಡ ಅಧಿಕಾರಿಗಳು, ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವೈಎನ್ ಹೊಸಕೋಟೆ ಗ್ರಾಮದ ಸರ್ಕಾರಿ ಆಸ್ಪತ್ರೆಗೆ ಆ್ಯಂಬುಲೆನ್ಸ್ ಸೇವೆ ಒದಗಿಸಿದ್ದಾರೆ.
ಕರ್ನಾಟಕ News Live: ಬಿಜೆಪಿ ಶಾಸಕ ಮುನಿರತ್ನಗೆ ಜಾಮೀನು ಭಾಗ್ಯ; ಪ್ರಜ್ವಲ್ ರೇವಣ್ಣ ಪ್ರಕರಣದ ವಾದ-ಪ್ರತಿವಾದ ಮುಕ್ತಾಯ, ಆದೇಶವಷ್ಟೇ ಬಾಕಿ
- ಬಿಜೆಪಿ ಶಾಸಕ ಮುನಿರತ್ನಗೆ ಷರತ್ತುಬದ್ದ ಜಾಮೀನು ನೀಡಲಾಗಿದೆ. ಸೆಪ್ಟೆಂಬರ್ 20ರಂದು ಜೈಲಿನಿಂದ ಬಿಡುಗಡೆ ಆಗಲಿದ್ದಾರೆ. ಇದರ ಜೊತೆಗೆ ಪ್ರಜ್ವಲ್ ರೇವಣ್ಣ ಮೇಲಿನ ಅತ್ಯಾಚಾರ ಪ್ರಕರಣದ ವಾದ ಪ್ರತಿವಾದ ಮುಕ್ತಾಯವಾಗಿದ್ದು ನ್ಯಾಯಾಲಯ ಆದೇಶ ಕಾಯ್ದಿರಿಸಿದೆ. (ವರದಿ-ಎಚ್. ಮಾರುತಿ)
ಕರ್ನಾಟಕ News Live: ಸೆಪ್ಟೆಂಬರ್ 21ರ ಶನಿವಾರ ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ; ನೀವಿರುವ ಏರಿಯಾನೂ ಇರಬಹುದು, ಪರಿಶೀಲಿಸಿ
- Power Cut In Bengaluru: ಕೆವಿಎ ಸಹಕಾರ ನಗರ ಕೇಂದ್ರದಲ್ಲಿ ನಿರ್ವಹಣಾ ಕೆಲಸದ ಕಾರಣ ಸೆಪ್ಟೆಂಬರ್ 27ರ ಶನಿವಾರ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಪ್ರಕಟಿಸಿದೆ. ಯಾವುದೇ ಸಮಸ್ಯೆ ಮತ್ತು ಗೊಂದಲಕ್ಕಾಗಿ ಬೆಸ್ಕಾಂ ಸಹಾಯವಾಣಿ 1912 ಗೆ ಕರೆ ಮಾಡಬಹುದು.
ಕರ್ನಾಟಕ News Live: ಕರ್ನಾಟಕದಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೆ ಸಮ್ಮತಿ, ಕೆಲವು ಷರತ್ತುಗಳು ಅನ್ವಯ; ಪಶ್ಚಿಮಘಟ್ಟ ಭಾಗದ ಜನಪ್ರತಿನಿಧಿಗಳ ಸಲಹೆ ಏನು
- ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿ ಕಸ್ತೂರಿ ರಂಗನ್ ವರದಿ ಜಾರಿಗೆ ಕುರಿತಂತೆ ಬೆಂಗಳೂರಿನಲ್ಲಿ ಪ್ರಮುಖ ಸಭೆ ನಡೆಯಿತು. ಈ ಕುರಿತು ಪಶ್ಚಿಮ ಘಟ್ಟಗಳ ಭಾಗದ ಸಚಿವರು, ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕ News Live: ಸ್ಟ್ಯಾನ್ ಪೋರ್ಡ್ ವಿಶ್ವವಿಜ್ಞಾನಿಗಳ ಪಟ್ಟಿಯಲ್ಲಿ ದಾವಣಗೆರೆಯ ಪ್ರೊ.ಪ್ರಸನ್ನ ಕುಮಾರ್, ಡಾ.ವರುಣ್, ಪುನೀತ್ ಸಹಿತ ಐವರ ಹೆಸರು
- ವಿಶ್ವ ವಿಜ್ಞಾನಿಗಳ ಪಟ್ಟಿಯಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯ ಗಣಿತಶಾಸ್ತ್ರ ಪ್ರಾಧ್ಯಾಪಕರಾದ ಪ್ರೊ.ಪ್ರಸನ್ನಕುಮಾರ್, ಸಂಶೋಧಕರಾದ ಡಾ. ಆರ್.ಜೆ.ಪುನೀತ್ ಗೌಡ, ಡಾ.ಆರ್.ನವೀನ್ ಕುಮಾರ್ , ಡಾ. ಜೆ.ಕೆ.ಮಧುಕೇಶ್ ಮತ್ತು ಡಾ. ಆರ್.ಎಸ್.ವರುಣ್ ಕುಮಾರ್ ಹೆಸರೂ ಇದೆ.
ಕರ್ನಾಟಕ News Live: ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ; ಹಾವಿಗೂ ಚಿಕಿತ್ಸೆ ಕೊಡಿಸಿದ್ನಾ, ಮುಂದೆ ನಡೆದಿದ್ದೇನು?
- Snake Bite: ಹುಬ್ಬಳ್ಳಿಯ ಕುಂದಗೋಳ ತಾಲೂಕಿನ ಇಂಗಳಗಿ ಗ್ರಾಮದ ಫಕೀರಪ್ಪ ಅಣ್ಣಿಗೇರಿ ಎಂಬ ಯುವಕ ತನಗೆ ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದಿದ್ದಾನೆ.
ಕರ್ನಾಟಕ News Live: ಬಾಗಲಕೋಟೆ, ವಿಜಯಪುರ ಮಾರ್ಗದಲ್ಲಿ ಸೆಪ್ಟೆಂಬರ್ 22ರಿಂದ 4 ದಿನಗಳ ಕಾಲ ರೈಲುಗಳ ಸಂಚಾರ ವ್ಯತ್ಯಯ
- ವಿಜಯಪುರ ಹಾಗೂ ಬಾಗಲಕೋಟೆ ನಡುವಿನ ಕೂಡಗಿ ನಿಲ್ದಾಣದ ಸಮೀಪ ಕಾಮಗಾರಿ ಕಾರಣದಿಂದ ಎರಡು ನಗರಗಳ ನಡುವಿನ ಹಲವು ರೈಲುಗಳ ಸಂಚಾರದಲ್ಲಿ ನಾಲ್ಕು ದಿನಗಳ ಕಾಲ ವ್ಯತ್ಯಯವಾಗಲಿದೆ.
ಕರ್ನಾಟಕ News Live: BMTC Digital Pass: ಬಿಎಂಟಿಸಿ ಡಿಜಿಟಲ್ ಬಸ್ ಪಾಸ್ ಪಡೆಯುವುದು ಹೇಗೆ? ವಜ್ರ, ವೋಲ್ವೊ, ಸಾಮಾನ್ಯ ಬಸ್ ಪಾಸ್ ದರವೆಷ್ಟು? ಇಲ್ಲಿದೆ ವಿವರ
- BMTC Digital Pass: ಈಗ ಮೊಬೈಲ್‌ನಲ್ಲಿ ಟುಮಾಕ್ ಆಪ್ ಮೂಲಕ ಬಿಎಂಟಿಸಿಯ ದೈನಿಕ, ಸಾಪ್ತಾಹಿಕ, ವಾರ್ಷಿಕ ಬಸ್ ಪಾಸ್ ಪಡೆಯಬಹುದು. ಬಿಎಂಟಿಸಿ ಡಿಜಿಟಲ್ ಬಸ್ ಪಾಸ್ ಪಡೆಯುವ ವಿಧಾನ, ವಾರ, ತಿಂಗಳು ಮತ್ತು ದಿನದ ಪಾಸ್‌ಗಳ ದರ ವಿವರ ಇಲ್ಲಿದೆ.
ಕರ್ನಾಟಕ News Live: ಅಂತರಾಷ್ಟ್ರೀಯ ಹಾವು ಕಡಿತದ ಜಾಗೃತಿ ದಿನ ಇಂದು; ಭಾರತವೇ ಹೆಚ್ಚು ಹಾವಿನ ಅನಾಹುತ ಎದುರಿಸುವ ದೇಶ, ಹಾವು ಕಡಿದಾಗ ತಕ್ಷಣವೇ ಏನು ಮಾಡಬೇಕು
- ಭಾರತದಲ್ಲಿ ಹಾವಿನ ಕಡಿತದಿಂದ ಸಾಯುವವರ ಸಂಖ್ಯೆ ವಿಶ್ವದಲ್ಲೇ ಅಧಿಕ. ನಿರಂತರ ಜಾಗೃತಿ ನಂತರವೂ ಹಾವು ಕಡಿತವನ್ನು ಗಂಭೀರವಾಗಿ ತೆಗೆದುಕೊಳ್ಳುವವರು ಕಡಿಮೆ. ಆರು ವರ್ಷದಿಂದ ಹಾವಿನ ಕಡಿತ ಜಾಗೃತಿ ಮೂಡಿಸಲು ಅಂತರಾಷ್ಟ್ರೀಯ ಹಾವು ಕಡಿತ ಜಾಗೃತಿ ದಿನವನ್ನೂ ಆಚರಿಸಲಾಗುತ್ತಿದೆ.
ಕರ್ನಾಟಕ News Live: ವಿಜಯಪುರದ ಹಳೆ ಡಿಸಿ ಆಫೀಸ್‌ಗೆ ಬೈ; ಬರಲಿದೆ 55.60 ಕೋಟಿ ರೂ. ವೆಚ್ಚ ಬೃಹತ್ ಡಿಸಿ ಕಚೇರಿ, ಹೀಗಿದೆ ಹೊಸ ಕಟ್ಟಡದ ಯೋಜನೆ
- ಆದಿಲ್ ಶಾಹಿಗಳ ನಾಡು ವಿಜಯಪುರದಲ್ಲಿ ಹೊಸ ಜಿಲ್ಲಾಧಿಕಾರಿಗಳ ಕಚೇರಿ ನಿರ್ಮಾಣಕ್ಕೆ ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಯೋಜನೆ ವಿವರ ಇಲ್ಲಿದೆ.
ಕರ್ನಾಟಕ News Live: ಕರ್ನಾಟಕದಲ್ಲಿ ಈರುಳ್ಳಿ ದರ ಮತ್ತೆ ಏರುಮುಖ, 70 ರೂ. ತಲುಪಿದ ಕೆಜಿ ಬೆಲೆ; ಕೇಂದ್ರ ಸರ್ಕಾರದ ಈರುಳ್ಳಿ ಸಂಚಾರಿ ವಾಹನ ಬರುವುದು ಯಾವಾಗ?
- ಈರುಳ್ಳಿ ದರಗಳು ಕರ್ನಾಟಕದಲ್ಲಿ ಹಬ್ಬಗಳ ಸಾಲಿನ ಮುನ್ನವೇ ಹೆಚ್ಚಿದೆ. ಈಗಾಗಲೇ ಈರುಳ್ಳಿ ಕೆಜಿ ದರ 70 ರೂ.ಗಳನ್ನು ತಲುಪಿದ್ದು, ಇನ್ನಷ್ಟು ಹೆಚ್ಚಳವಾಗುವ ಆತಂಕವಿದೆ.
ಕರ್ನಾಟಕ News Live: ಸಿದ್ದರಾಮಯ್ಯ ತವರು ಕ್ಷೇತ್ರದ ಇಮ್ಮಾವಿನಲ್ಲೇ ಕರ್ನಾಟಕ ಫಿಲ್ಮ್ ಸಿಟಿ; ಮತ್ತೆ 50 ಎಕರೆ ಮಂಜೂರಿಗೆ ಅನುಮತಿ, ಮೊದಲನೇ ಹಂತ ಆರಂಭಕ್ಕೆ ಸೂಚನೆ
- ಫಿಲ್ಮ್ ಸಿಟಿ ಯೋಜನೆಯನ್ನು ಕೂಡಲೇ ಆರಂಭಿಸುವಂತೆ ಸೂಚಿಸಿರುವ ಸಿಎಂ ಸಿದ್ದರಾಮಯ್ಯ ಅವರು ಎರಡನೇ ಹಂತಕ್ಕೆ ನೀಡಲು ಹೆಚ್ಚುವರಿ ಭೂಮಿ ಗುರುತಿಸುವಂತೆಯೂ ಸೂಚನೆ ನೀಡಿದ್ದಾರೆ.
ಕರ್ನಾಟಕ News Live: ಚಾಮರಾಜನಗರ, ಚಿಕ್ಕಮಗಳೂರು, ಶಿರಾಲಿ, ವಿಜಯಪುರದಲ್ಲಿ ಕನಿಷ್ಠ ಉಷ್ಣಾಂಶದಲ್ಲಿ ಕುಸಿತ; ಬೆಂಗಳೂರಲ್ಲಿ ಹೇಗಿದೆ ಹವಾಮಾನ
- ಕರ್ನಾಟಕದ ಹಲವು ಭಾಗಗಳಲ್ಲಿ ನಿಧಾನವಾಗಿ ಚಳಿ ಪ್ರಮಾಣ ಅಧಿಕವಾಗುತ್ತಿದೆ. ಬೆಳಿಗ್ಗೆ ಸಮಯದಲ್ಲಿ ಚಳಿಯ ಅನುಭವ ಹೆಚ್ಚಾಗಿದೆ. ಮಳೆ ಪ್ರಮಾಣವೂ ಬಹುತೇಕ ಕಡೆ ತಗ್ಗಿದೆ.