ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ; ಹಾವಿಗೂ ಚಿಕಿತ್ಸೆ ಕೊಡಿಸಿದ್ನಾ, ಮುಂದೆ ನಡೆದಿದ್ದೇನು?
Snake Bite: ಹುಬ್ಬಳ್ಳಿಯ ಕುಂದಗೋಳ ತಾಲೂಕಿನ ಇಂಗಳಗಿ ಗ್ರಾಮದ ಫಕೀರಪ್ಪ ಅಣ್ಣಿಗೇರಿ ಎಂಬ ಯುವಕ ತನಗೆ ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದಿದ್ದಾನೆ.
ಹುಬ್ಬಳ್ಳಿ: ತಂದೆಯೊಂದಿಗೆ ಹೊಲದಲ್ಲಿ ಕೆಲಸ ಮಾಡುತ್ತಿದ ವೇಳೆ ಯುವಕನಿಗೆ ಹಾವು ಕಚ್ಚಿದೆ. ಕೂಡಲೇ ಅದೇ ಹಾವಿನೊಂದಿಗೆ ಕೆಎಂಸಿಗೆ ಬಂದು ಚಿಕಿತ್ಸೆಗೆ ದಾಖಲಾದ ಘಟನೆ ಕುಂದಗೋಳ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದಿದೆ.
ಹಾವು ಕಚ್ಚಿಸಿಕೊಂಡ ಫಕೀರಪ್ಪ ಅಣ್ಣಿಗೇರಿ ಎಂಬ ಯುವಕ, ಬುಧವಾರ ಸಂಜೆ 5 ಗಂಟೆ ಸುಮಾರಿಗೆ ತನ್ನ ತಂದೆ ಜೊತೆ ಶೇಂಗಾ ಕೀಳಲು ಹೋಗಿದ್ದ. ಈ ವೇಳೆ ಯುವಕನಿಗೆ ಹಾವು ಕಚ್ಚಿದೆ. ಹಾವು ಕಚ್ಚಿದ ಕೂಡಲೇ ಹಾವಿನ ತಲೆ ಜಜ್ಜಿ ಕೊಂದಿದ್ದಾನೆ.
ನಂತರ ತಂದೆ ಜೊತೆ ಆಸ್ಪತ್ರೆಗೆ ಬಂದು ಅಡ್ಮಿಟ್ ಆಗಿದ್ದಾನೆ. ವೈದ್ಯರಿಗೆ ಹಾವನ್ನ ತೋರಿಸಿ, ಇದೆ ಹಾವು ಕಚ್ಚಿದೆ ಚಿಕಿತ್ಸೆ ಕೊಡಿ ಎಂದು ದಾಖಲಾಗಿದ್ದಾನೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಯುವಕನಿಗೆ ಚಿಕಿತ್ಸೆ ಮುಂದುವರಿದಿದೆ.
ಸ್ಮಶಾನದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ; ಪ್ರತಿಭಟನೆ
ಹುಬ್ಬಳ್ಳಿ: ನಗರದ ಮಂಟೂರು ರಸ್ತೆಯಲ್ಲಿರುವ ಸತ್ಯಹರಿಶ್ಚಂದ್ರ ಸ್ಮಶಾನ ಭೂಮಿಯಲ್ಲಿ ಅಕ್ರಮವಾಗಿ ಇಂದಿರಾ ಕ್ಯಾಂಟಿನ್ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಶ್ರೀ ಸತ್ಯಹರಿಶ್ಚಂದ್ರ ರುದ್ರಭೂಮಿ ಅಭಿವೃದ್ಧಿ ಹಾಗೂ ರಕ್ಷಣಾ ಸಮಿತಿಯಿಂದ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕದಲ್ಲಿ ಈರುಳ್ಳಿ ದರ ಮತ್ತೆ ಏರುಮುಖ
ಬೆಂಗಳೂರು: ಕರ್ನಾಟಕದಲ್ಲಿ ಈರುಳ್ಳಿ ದರ ಇಳಿಕೆಯ ಲಕ್ಷಣಗಳೇ ಕಾಣಿಸುತ್ತಿಲ್ಲ. ಕೆಲವು ದಿನಗಳಿಂದ ಈರುಳ್ಳಿ ದರ ಏರುಗತಿಯಲ್ಲೇ ಸಾಗಿದ್ದು. ಇನ್ನಷ್ಟು ಹೆಚ್ಚಳವಾಗುವ ಮುನ್ಸೂಚನೆ ಸಿಗುತ್ತಿದೆ. ಈಗ ಕರ್ನಾಟಕದ ಬೆಂಗಳೂರು,ಮೈಸೂರು, ಹುಬ್ಬಳ್ಳಿ ಸೇರಿದಂತೆ ಹಲವು ಕಡೆಗಳಲ್ಲಿ ಈರುಳ್ಳಿ ದರ ಕೆಜಿಗೆ 60 ರೂ. ತಲುಪಿದೆ. ಈ ವಾರಾಂತ್ಯದ ಹೊತ್ತಿಗೆ ದರ ಕೆಜಿಗೆ 70 ರೂ. ದಾಟುವ ಆತಂಕವೂ ಇದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿ ಕ್ಲಿಕ್ ಮಾಡಿ.