CT Ravi: ಸಭಾಪತಿಗಳ ರೂಲಿಂಗ್ ಮೀರಿ ಪೊಲೀಸ್ ದೂರು ದಾಖಲಾಗಿದೆ, ನ್ಯಾಯಕ್ಕಾಗಿ ಹೋರಾಟ ಮುಂದುವರಿಯಲಿದೆ: ಸಿಟಿ ರವಿ, ವಿಡಿಯೋ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Ct Ravi: ಸಭಾಪತಿಗಳ ರೂಲಿಂಗ್ ಮೀರಿ ಪೊಲೀಸ್ ದೂರು ದಾಖಲಾಗಿದೆ, ನ್ಯಾಯಕ್ಕಾಗಿ ಹೋರಾಟ ಮುಂದುವರಿಯಲಿದೆ: ಸಿಟಿ ರವಿ, ವಿಡಿಯೋ

CT Ravi: ಸಭಾಪತಿಗಳ ರೂಲಿಂಗ್ ಮೀರಿ ಪೊಲೀಸ್ ದೂರು ದಾಖಲಾಗಿದೆ, ನ್ಯಾಯಕ್ಕಾಗಿ ಹೋರಾಟ ಮುಂದುವರಿಯಲಿದೆ: ಸಿಟಿ ರವಿ, ವಿಡಿಯೋ

Dec 24, 2024 07:24 PM IST Umesh Kumar S
twitter
Dec 24, 2024 07:24 PM IST

CT Ravi: ವಿಧಾನ ಪರಿಷತ್‌ ಸಭಾಂಗಣದಲ್ಲಿ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಪರಿಷತ್ ಸಭಾಪತಿಗಳ ರೂಲಿಂಗ್‌ ಅಂತಿಮ. ಅದನ್ನು ಮೀರಿ ಪೊಲೀಸ್ ದೂರು ದಾಖಲಾಗಿದೆ. ಬಂಧನ ತೋರಿಸದೇ ಊರೆಲ್ಲ ಸುತ್ತಾಡಿಸಿದ್ದಾರೆ,ಶಾರೀರಿಕ, ಮಾನಸಿಕ ಕಿರುಕುಳ ಕೊಟ್ಟಿದ್ದಾರೆ ಇದೆಲ್ಲವೂ ನ್ಯಾಯವಾ ಎಂದು ವಿಧಾನ ಪರಿಷತ್ ಸದಸ್ಯ, ಬಿಜೆಪಿ ನಾಯಕ ಸಿಟಿ ರವಿ ಪ್ರಶ್ನಿಸಿದ್ದಾರೆ. ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲದ ಅಧಿವೇಶನದ ಕೊನೆಯ ದಿನ (ಡಿಸೆಂಬರ್ 19) ವಿಧಾನ ಪರಿಷತ್‌ ಕಲಾಪ ಮುಂದೂಡಲ್ಪಟ್ಟ ಬಳಿಕ ಸಭಾಂಗಣದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಸದಸ್ಯ ಸಿಟಿ ರವಿ ನಡುವೆ ವಾಕ್ಸಮರ ನಡೆದಿತ್ತು. ಆಗ ಸಿಟಿ ರವಿ ಅವಾಚ್ಯ ಪದ ಬಳಿಸಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಅದರ ವಿರುದ್ಧ ಪೊಲೀಸ್ ದೂರು ದಾಖಲಾಗಿರುವಂಥದ್ದು. ಅದೇ ರೀತಿ, ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಸಿಟಿ ರವಿ ಮೇಲೆ ಹಲ್ಲೆ ಯತ್ನ ಮಾಡಿದ್ದು, ಆ ಬಗ್ಗೆ ಸಿಟಿ ರವಿ ದೂರು ನೀಡಿದ್ದಾರೆ. ಆದರೆ ಎಫ್‌ಐಆರ್ ದಾಖಿಸಿಲ್ಲ ಎಂಬ ಆರೋಪ ವ್ಯಕ್ತವಾಗಿದೆ. 

More