Lakshmi Baramma Serial: ಕೀರ್ತಿ ಆಡಿದ ಎಲ್ಲ ಮಾತುಗಳನ್ನೂ ನೆರವೇರಿಸಲು ಸಾಧ್ಯ ಇಲ್ಲ; ಈಗ ಇಕ್ಕಟ್ಟಿನಲ್ಲಿರೋದು ಲಕ್ಷ್ಮೀ
ಕನ್ನಡ ಸುದ್ದಿ  /  ಮನರಂಜನೆ  /  Lakshmi Baramma Serial: ಕೀರ್ತಿ ಆಡಿದ ಎಲ್ಲ ಮಾತುಗಳನ್ನೂ ನೆರವೇರಿಸಲು ಸಾಧ್ಯ ಇಲ್ಲ; ಈಗ ಇಕ್ಕಟ್ಟಿನಲ್ಲಿರೋದು ಲಕ್ಷ್ಮೀ

Lakshmi Baramma Serial: ಕೀರ್ತಿ ಆಡಿದ ಎಲ್ಲ ಮಾತುಗಳನ್ನೂ ನೆರವೇರಿಸಲು ಸಾಧ್ಯ ಇಲ್ಲ; ಈಗ ಇಕ್ಕಟ್ಟಿನಲ್ಲಿರೋದು ಲಕ್ಷ್ಮೀ

Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕೀರ್ತಿ ಮರೆತು ಹೋಗಿರುವ ಎಲ್ಲ ವಿಷಯಗಳನ್ನು ಮತ್ತೆ ನೆನಪಿಗೆ ತರುವ ಕೆಲಸ ನಡೆಯುತ್ತಿದೆ. ಆದರೆ ಕೀರ್ತಿ ಇದಕ್ಕೆ ಪೂರ್ತಿಯಾಗಿ ಸಹಕರಿಸುತ್ತಿಲ್ಲ. ಲಕ್ಷ್ಮೀ ತನ್ನ ಪ್ರಯತ್ನ ಬಿಡುತ್ತಿಲ್ಲ.

ಕೀರ್ತಿ ಆಡಿದ ಎಲ್ಲ ಮಾತುಗಳನ್ನೂ ನೆರವೇರಿಸಲು ಸಾಧ್ಯ ಇಲ್ಲ
ಕೀರ್ತಿ ಆಡಿದ ಎಲ್ಲ ಮಾತುಗಳನ್ನೂ ನೆರವೇರಿಸಲು ಸಾಧ್ಯ ಇಲ್ಲ

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕೀರ್ತಿ ಹಾಗೂ ಲಕ್ಷ್ಮೀ ಇಬ್ಬರೂ ಒಂದೊಳ್ಳೆ ಸ್ನೇಹಿತೆಯರ ರೀತಿ ನಡೆದುಕೊಳ್ಳುತ್ತಾ ಇದ್ದಾರೆ. ವೈಷ್ಣವ್ ಜೊತೆ ಹೋದಾಗ ಕೀರ್ತಿ ಸತ್ಯ ಹೇಳುತ್ತಾಳೆ ಎಂದು ಲಕ್ಷ್ಮೀ ಭಯಪಟ್ಟುಕೊಂಡಿದ್ದಳು. ಆದರೆ ಸಂಪೂರ್ಣವಾಗಿ ಹಾಗೆ ಆಗಿಲ್ಲ. ಲಕ್ಷ್ಮೀ ಬಗ್ಗೆ ಕೀರ್ತಿ ಕೋಪ ಮಾಡಿಕೊಂಡು ರೂಮಿನ ತುಂಬೆಲ್ಲಾ ರಂಪಾಟ ಮಾಡಿಟ್ಟಿರುತ್ತಾಳೆ. ಗೊಂಬೆಗಳನ್ನು ಬಿಸಾಡಿ. ಹೂವಿನ ಪಾಟ್ ಒಡೆದು ಹಾಕಿರುತ್ತಾಳೆ. ಅದನ್ನು ನೋಡಿದರೆ ಬೇಕು ಎಂದೇ ಇಷ್ಟೆಲ್ಲ ಮಾಡಿದ ರೀತಿ ಇತ್ತು. ಅದನ್ನು ನೋಡಿ ಸುಪ್ರಿತಾಗೆ ಶಾಕ್ ಆಗುತ್ತದೆ.

ಕೀರ್ತಿ ರಂಪಾಟ

ಅವಳಿಗೆ ಕೀರ್ತಿ ಮೇಲೆ ಅನುಮಾನ ಕೂಡ ಬರುತ್ತದೆ. ಇದು ಮಗುವಿನ ಮನಸ್ಸಾಗಿ ಬದಲಾದ ಕೀರ್ತಿ ಮಾಡಿದ ಕೆಲಸವೋ ಅಥವಾ ಎಲ್ಲ ನೆನಪಿದ್ದು ಕೋಪ ಬಂದು ಕೀರ್ತಿಯೇ ಈ ರೀತಿ ಮಾಡಿದ್ದಾಳೋ ಎಂದು ಅವಳಿಗೆ ಅರ್ಥ ಆಗುವುದಿಲ್ಲ. ನಂತರ ಲಕ್ಷ್ಮೀ ಬಂದು ನಿನ್ನೆ ಆದ ಘಟನೆಗಳ ಬಗ್ಗೆ ಸಾರಿ ಕೇಳುತ್ತಾಳೆ. ಲಕ್ಷ್ಮೀ ಸಾರಿ ಕೇಳಿದರೂ ಅಷ್ಟು ಬೇಗ ಕೀರ್ತಿ ಅವಳನ್ನು ಕ್ಷಮಿಸುವುದಿಲ್ಲ. ನೀನು ಬಸ್ಕಿ ಹೊಡೆಯಬೇಕು ಎಂದು ಹೇಳುತ್ತಾಳೆ. ಲಕ್ಷ್ಮೀ ಅವಳ ಮಾತನ್ನು ಕೇಳಿ ಹತ್ತು ಬಸ್ಕಿ ಹೊಡೆಯುತ್ತಾಳೆ. ಅದಾದ ನಂತರದಲ್ಲಿ ನಾನೂ ನಿಮ್ಮ ಮನೆಗೆ ಬರುತ್ತೇನೆ ಎಂದು ಹೇಳುತ್ತಾಳೆ.

ಆದರೆ ಲಕ್ಷ್ಮೀಗೆ ಇದು ಸುಲಭದ ಕೆಲಸ ಅಥವಾ ಕೇಳಬಹುದಾದ ಮಾತು ಎಂದು ಅನಿಸುವುದಿಲ್ಲ. ಅವಳು ಭಯಪಡುತ್ತಾಳೆ. ಇಲ್ಲ ನೀನು ಇಲ್ಲೇ ಇರಬೇಕು ಎಂದು ಕೀರ್ತಿಯನ್ನು ಒಪ್ಪಿಸುವ ಪ್ರಯತ್ನ ಮಾಡುತ್ತಾಳೆ. ಕೀರ್ತಿ ಡ್ರಾಮಾ ಮಾಡ್ತಾ ಇದ್ದಾಳೆ ಅಂತ ಸ್ಟೋರಿ ಇನ್ನು 10 ವರ್ಷ ಏಳಿತರೆ ಎಂದು ಪುಷ್ಪಾ ಎನ್ನುವವರು ಕಾಮೆಂಟ್ ಮಾಡಿದ್ದಾರೆ.

ಕೀರ್ತಿಗೆ ನೆನಪು ಬರೋದು ಯಾವಾಗ?
ಕಾವೇರಿ ಕೀರ್ತಿಯನ್ನು ಬೆಟ್ಟದಿಂದ ತಳ್ಳಿದಾಗಿನಿಂದ ಕೀರ್ತಿಗೆ ನೆನಪಿಲ್ಲ. ಹಳೆಯ ಯಾವ ಘಟನೆಯ ಬಗ್ಗೆ ಪ್ರಶ್ನೆ ಕೇಳಿದರೂ ಅವಳಿಗೆ ಈಗ ನೆನಪಿಲ್ಲ. ಅವಳಿಗೆ ಯಾವಾಗ ಹಳೆ ನೆನಪು ಬರುತ್ತದೆಯೋ ಆಗ ಕಥೆ ಇನ್ನಷ್ಟು ಟ್ವಿಸ್ಟ್‌ ಪಡೆದುಕೊಳ್ಳುತ್ತದೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ.

ಲಕ್ಷ್ಮೀ ಬಾರಮ್ಮ ಪಾತ್ರವರ್ಗ

ವೈಷ್ಣವ್ ಪಾತ್ರದಲ್ಲಿ ಶಮಂತ್‌ ಗೌಡ (ಬ್ರೋ ಗೌಡ)

ಕೀರ್ತಿ ಪಾತ್ರದಲ್ಲಿ ತನ್ವಿ ರಾವ್‌

ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್‌

ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ

ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.

Whats_app_banner