ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20 ವಿಶ್ವಕಪ್: ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾಗೆ 36 ರನ್‌ ಭರ್ಜರಿ ಜಯ; ಹಾಲಿ ಚಾಂಪಿಯನ್‌ಗೆ ಟೂರ್ನಿಯಿಂದ ಹೊರಬೀಳುವ ಭೀತಿ

ಟಿ20 ವಿಶ್ವಕಪ್: ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾಗೆ 36 ರನ್‌ ಭರ್ಜರಿ ಜಯ; ಹಾಲಿ ಚಾಂಪಿಯನ್‌ಗೆ ಟೂರ್ನಿಯಿಂದ ಹೊರಬೀಳುವ ಭೀತಿ

ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾದ ಉತ್ತಮ ಫಾರ್ಮ್‌ನಲ್ಲಿದೆ. ಸತತ ಎರಡು ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ವಿರುದ್ಧ ಯಾವುದೇ ಬ್ಯಾಟರ್‌ಗಳು 40 ರನ್ ಗಡಿ ದಾಟದಿದ್ದರೂ, ತಂಡ 200ಕ್ಕೂ ಹೆಚ್ಚು ರನ್‌ ಕಲೆ ಹಾಕಿ ಪ್ರಸಕ್ತ ಆವೃತ್ತಿಯಲ್ಲಿ ದಾಖಲೆ ಬರೆಯಿತು.

ಟಿ20 ವಿಶ್ವಕಪ್: ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾಗೆ 36 ರನ್‌ ಭರ್ಜರಿ ಜಯ;
ಟಿ20 ವಿಶ್ವಕಪ್: ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾಗೆ 36 ರನ್‌ ಭರ್ಜರಿ ಜಯ; (REUTERS)

ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ (Australia vs England) 36 ರನ್‌ಗಳಿಂದ ಭರ್ಜರಿ ಜಯ ಸಾಧಿಸಿದೆ. ಈ ಸೋಲಿನೊಂದಿಗೆ ಹಾಲಿ ಚಾಂಪಿಯನ್ಸ್ ಆಂಗ್ಲರು ಸೂಪರ್‌ ಫೋರ್‌ ಹಂತಕ್ಕೆ ಅರ್ಹತೆ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಪ್ಯಾಟ್‌ ಕಮಿನ್ಸ್‌ ಹಾಗೂ ಸ್ಪಿನ್ನರ್‌ ಆಡಂ ಜಂಪಾ ಮಾರಕ ಬೌಲಿಂಗ್‌ ದಾಳಿಯ ನೆರವಿನಿಂದ ಆಸೀಸ್‌ ಸುಲಭ ಜಯ ಸಾಧಿಸಿತು. ಅದಕ್ಕೂ ಮುನ್ನ ಬ್ಯಾಟಿಂಗ್‌ನಲ್ಲಿ ಕಾಂಗರೂಗಳ ಸಂಘಟಿತ ಹೋರಾಟವು ತಂಡಕ್ಕೆ ನೆರವಾಯ್ತು.

ಟ್ರೆಂಡಿಂಗ್​ ಸುದ್ದಿ

ಪಂದ್ಯದಲ್ಲಿ‌ ಮೊದಲು ಬ್ಯಾಟಿಂಗ್‌ ನಡೆಸಿದ ಆಸೀಸ್‌, 7 ವಿಕೆಟ್‌ ಕಳೆದುಕೊಂಡು 201 ರನ್‌ ಗಳಿಸಿತು. ಬೃಹತ್‌ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಲಷ್ಟೇ ಶಕ್ತವಾಯ್ತು. ಆ ಮೂಲಕ ಸತತ ಎರಡು ಗೆಲುವುಗಳೊಂದಿಗೆ ಆಸ್ಟ್ರೇಲಿಯಾ ಬಿ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಅತ್ತ ಸೋಲಿನ ಬಳಿಕ ಇಂಗ್ಲೆಂಡ್‌ ಸಂಕಷ್ಟಕ್ಕೆ ಸಿಲುಕಿದೆ. ಸ್ಕಾಟ್ಲೆಂಡ್ ವಿರುದ್ಧದ ಆರಂಭಿಕ ಪಂದ್ಯವು ಮಳೆಯಿಂದ ರದ್ದಾದ ಕಾರಣದಿಂದ ಜೋಸ್ ಬಟ್ಲರ್ ಪಡೆ ಇನ್ನೂ ಟೂರ್ನಿಯಲ್ಲಿ ಗೆಲುವಿನ ಅಭಿಯಾನ ಆರಂಭಿಸಲು ಸಾಧಿಸಿಲ್ಲ.

ಮೊದಲು ಬ್ಯಾಟಿಂಗ್‌ ನಡೆಸಿದ ಆಸೀಸ್‌ ಸ್ಫೋಟಕ ಪ್ರದರ್ಶನ ನೀಡಿತು. ಯಾವುದೇ ಬ್ಯಾಟರ್‌ಗಳು 40 ರನ್‌ ಗಡಿ ದಾಟಲಿಲ್ಲ. ಆದರೂ, ಪ್ರಸಕ್ತ ಪಂದ್ಯಾವಳಿಯಲ್ಲಿ ತಂಡವೊಂದು 200ಕ್ಕೂ ಹೆಚ್ಚು ರನ್‌ ಗಳಿಸಿದ ನಿದರ್ಶನಕ್ಕೆ ಆಸೀಸ್‌ ಸಾಕ್ಷಿಯಾಯ್ತು.

ಆಸೀಸ್‌ ಬೃಹತ್‌ ಮೊತ್ತ

ಕೆನ್ಸಿಂಗ್ಟನ್ ಓವಲ್‌ನಲ್ಲಿ ಮೊದಲು ಬ್ಯಾಟಿಂಗ್‌ಗಿಳಿದ ಆಸೀಸ್‌ ಪರ, ಆಟಗಾರರಾದ ಟ್ರಾವಿಸ್ ಹೆಡ್ ಮತ್ತು ವಾರ್ನರ್ ಆಕ್ರಮಣಕಾರಿ ಆಟವಾಡಿದರು. ಸ್ಪಿನ್ನರ್ ವಿಲ್‌ ಜಾಕ್ಸ್ ತಮ್ಮ ಮೊದಲ ಓವರ್‌ನಲ್ಲಿ ಮೂರು ಸಿಕ್ಸರ್‌ ಸಹಿತ 22 ರನ್ ಬಿಟ್ಟುಕೊಟ್ಟರು. ವೇಗಿ ಮಾರ್ಕ್ ವುಡ್ ಕೂಡ ತಮ್ಮ ಆರಂಭಿಕ ಓವರ್‌ನಲ್ಲಿ 22 ರನ್‌ ಬಿಟ್ಟುಕೊಟ್ಟರು. ವಾರ್ನರ್ 39 ರನ್‌ ಗಳಿಸಿ ಔಟಾದರೆ, ಹೆಡ್ 34 ರನ್‌ ಪೇರಿಸಿದರು. ಆ ಬಳಿಕ ಮ್ಯಾಕ್ಸ್‌ವೆಲ್ ಮತ್ತು ಮಿಚೆಲ್ ಮಾರ್ಷ್ ಜೊತೆಯಾಗಿ 10ನೇ ಓವರ್‌ನಲ್ಲಿ ತಂಡವನ್ನು ಶತಕದ ಗಡಿ ದಾಟಿಸಿದರು. ಸ್ಟೋಯ್ನಿಸ್ 30 ರನ್‌ ಮತ್ತು ಮ್ಯಾಥ್ಯೂ ವೇಡ್ 17 ರನ್‌ ಗಳಿಸಿ ಆಸ್ಟ್ರೇಲಿಯಾವನ್ನು 200ರ ಗಡಿ ದಾಟಿಸಿದರು.

ಬೃಹತ್‌ ಮೊತ್ತ ಚೇಸಿಂಗ್‌ಗಿಳಿದ ಇಂಗ್ಲೆಂಡ್‌ ಕೂಡಾ ಉತ್ತಮ ಆರಂಭ ಪಡೆಯಿತು. ಸಾಲ್ಟ್‌ ಮತ್ತು ಬಟ್ಲರ್‌ 73 ರನ್‌ಗಳ ಜೊತೆಯಾಟವಾಡಿದರು. ಸ್ಪಿನ್ನರ್ ಆಡಮ್ ಜಂಪಾ ತಮ್ಮ ಮೊದಲ ಎಸೆತದಲ್ಲಿ ಸಾಲ್ಟ್ (37) ಬಲಿ ಪಡೆದರು. ಮುಂದಿನ ಓವರ್‌ನಲ್ಲಿ ಆಂಗ್ಲ ನಾಯಕ ಬಟ್ಲರ್ (42) ಅವರ ಅಮೂಲ್ಯ ವಿಕೆಟ್ ಪಡೆದರು. ಮಾರ್ಕಸ್ ಸ್ಟೊಯ್ನಿಸ್ ಬೌಲಿಂಗ್‌ನಲ್ಲಿ ವಿಲ್ ಜಾಕ್ಸ್ 10 ರನ್‌ಗಳಿಗೆ ಔಟಾದರು. ಆ ನಂತರ ಗ್ಲೆನ್ ಮ್ಯಾಕ್ಸ್‌ವೆಲ್ ಓವರ್‌ನಲ್ಲಿ ಮೊಯಿನ್ ಅಲಿ ಮೂರು ಸಿಕ್ಸರ್‌ ಸಿಡಿಸಿದರು. ತಂಡಕ್ಕೆ ಜಾನಿ ಬೈರ್‌ಸ್ಟೋ ಕೊಡುಗೆ ಸಿಗಲಿಲ್ಲ.

ಗಳಿಸಬೇಕಾದ ರನ್‌ ರೇಟ್‌ ಹೆಚ್ಚಿದ್ದ ಕಾರಣ ತಂಡದಿಂದ ಗುರಿ ತಲುಪುವುದು ಕಷ್ಟವಾಯ್ತು. ಕಾಂಗರೂಗಳು ಶಿಸ್ತುಬದ್ಧ ಬೌಲಿಂಗ್ ದಾಳಿಗೆ ಆಂಗ್ಲರಗೆ ಬ್ಯಾಟ್‌ ಬೀಸಲು ಕಷ್ಟವಾಯ್ತು.

ಟಿ20 ವರ್ಲ್ಡ್‌ಕಪ್ 2024