ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ Vs ಬಾಂಗ್ಲಾದೇಶ ವನಿತೆಯರ ಟಿ20 ಸರಣಿ ಏಪ್ರಿಲ್ 28ರಿಂದ ಆರಂಭ; ಎಲ್ಲಿ, ಎಷ್ಟೊತ್ತಿಗೆ? ನೇರಪ್ರಸಾರ ವಿವರ ಇಲ್ಲಿದೆ

ಭಾರತ vs ಬಾಂಗ್ಲಾದೇಶ ವನಿತೆಯರ ಟಿ20 ಸರಣಿ ಏಪ್ರಿಲ್ 28ರಿಂದ ಆರಂಭ; ಎಲ್ಲಿ, ಎಷ್ಟೊತ್ತಿಗೆ? ನೇರಪ್ರಸಾರ ವಿವರ ಇಲ್ಲಿದೆ

India Women Tour To Bangladesh 2024: ಏಪ್ರಿಲ್ 28ರ ಭಾನುವಾರದಿಂದ ಭಾರತ vs ಬಾಂಗ್ಲಾದೇಶ ಮಹಿಳೆಯರ ತಂಡಗಳ ನಡುವಿನ ಐದು ಪಂದ್ಯಗಳ ಟಿ20 ಸರಣಿ ಪ್ರಾರಂಭವಾಗಲಿದೆ. ಸರಣಿಯ ನೇರಪ್ರಸಾರ, ಪಂದ್ಯಗಳ ಸಮಯದ ವಿವರ ಇಲ್ಲಿದೆ.

ಭಾರತ vs ಬಾಂಗ್ಲಾದೇಶ ವನಿತೆಯರ ಟಿ20 ಸರಣಿ ಏಪ್ರಿಲ್ 28ರಿಂದ ಆರಂಭ; ಎಲ್ಲಿ, ಎಷ್ಟೊತ್ತಿಗೆ? ನೇರಪ್ರಸಾರ ವಿವರ ಇಲ್ಲಿದೆ
ಭಾರತ vs ಬಾಂಗ್ಲಾದೇಶ ವನಿತೆಯರ ಟಿ20 ಸರಣಿ ಏಪ್ರಿಲ್ 28ರಿಂದ ಆರಂಭ; ಎಲ್ಲಿ, ಎಷ್ಟೊತ್ತಿಗೆ? ನೇರಪ್ರಸಾರ ವಿವರ ಇಲ್ಲಿದೆ

ಮಹಿಳಾ ಪ್ರೀಮಿಯರ್ ಲೀಗ್ (WPL 2024) ಮುಕ್ತಾಯಗೊಂಡ ನಂತರ ಸ್ಮೃತಿ ಮಂಧಾನ (Smriti Mandhana), ಹರ್ಮನ್​ಪ್ರೀತ್ ಕೌರ್ (HarmanaPreet Kaur) ಸೇರಿ ಪ್ರಮುಖ ಆಟಗಾರ್ತಿಯರು ನ್ಯಾಷನಲ್ ಡ್ಯೂಟಿಗೆ ಸಜ್ಜಾಗಿದ್ದಾರೆ. ನೆರೆಯ ಬಾಂಗ್ಲಾದೇಶದಲ್ಲಿ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಗೆ (T20 World Cup) ತಯಾರಿಯ ಭಾಗವಾಗಿ ಭಾರತದ ವನಿತೆಯರ ತಂಡವು (India Women cricket team) ಐದು ಪಂದ್ಯಗಳ ಟಿ20 ಸರಣಿಗಾಗಿ ಬಾಂಗ್ಲಾದೇಶಕ್ಕೆ (India Women Tour To Bangladesh 2024) ಬಂದಿಳಿದಿದ್ದಾರೆ. ಏಪ್ರಿಲ್ 28ರಿಂದ ಈ ಚುಟುಕು ಸಿರೀಸ್ ಪ್ರಾರಂಭವಾಗಲಿದ್ದು, ಮೇ 9 ರಂದು ಕೊನೆಗೊಳ್ಳುತ್ತದೆ.

ಟ್ರೆಂಡಿಂಗ್​ ಸುದ್ದಿ

ಇದು ಕಳೆದ ಎರಡು ವರ್ಷಗಳಲ್ಲಿ ಬಾಂಗ್ಲಾದೇಶಕ್ಕೆ ಭಾರತದ ಎರಡನೇ ಪ್ರವಾಸವಾಗಿದೆ. ಭಾರತ ಟಿ20ಐ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತ್ತು. ಆದರೆ ಏಕದಿನ ಸರಣಿಯು 1-1 ರಿಂದ ಸಮಬಲ ಸಾಧಿಸಿತ್ತು. ಕೊನೆಯ ಏಕದಿನ ಟೈ ಆದ ನಂತರ ಭಾರತದ ನಾಯಕಿ ಹರ್ಮನ್​ಪ್ರೀತ್​ ಕೌರ್ ಅಂಪೈರಿಂಗ್ ಮಾನದಂಡಗಳನ್ನು ಪ್ರಶ್ನಿಸಿ ವಿವಾದಕ್ಕೆ ಒಳಗಾಗಿದ್ದರು. ಇದೀಗ ಉಭಯ ತಂಡಗಳ ನಡುವಿನ ಈ ಸರಣಿಯು ಹೆಚ್ಚು ರೋಮಾಂಚನ ಉಂಟು ಮಾಡುವ ನಿರೀಕ್ಷೆಯಿದೆ.

ಎರಡೂ ತಂಡಗಳು ಕೆಲವು ಹೊಸ ಮುಖಗಳಿಗೆ ಮಣೆ ಹಾಕಿವೆ. ಎಸ್ ಸಜನಾ ಮತ್ತು ಆಶಾ ಶೋಭನಾ ಅವರು ಇದೇ ಮೊದಲ ಬಾರಿಗೆ ಅವಕಾಶ ಪಡೆದಿದ್ದಾರೆ. ಬಾಂಗ್ಲಾದೇಶವು 15 ವರ್ಷದ ವೇಗದ ಬೌಲರ್​​ ಹಬೀಬಾ ಇಸ್ಲಾಂ ಅವರಿಗೆ ಅವಕಾಶ ನೀಡಿದೆ. ಹಾಗಾದರೆ, ಲೈವ್ ಸ್ಟ್ರೀಮಿಂಗ್ ವಿವರ, ಪಂದ್ಯದ ಸಮಯ, ವೇಳಾಪಟ್ಟಿ, ಸ್ಥಳಗಳು ಮತ್ತು ತಂಡಗಳು ಸೇರಿದಂತೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ ಇಲ್ಲಿದೆ.

ಭಾರತ vs ಬಾಂಗ್ಲಾದೇಶ ವೇಳಾಪಟ್ಟಿ

ಏಪ್ರಿಲ್ 28 - 1ನೇ ಟಿ20ಐ ಸಿಲ್ಹೆಟ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ಸಿಲ್ಹೆಟ್

ಏಪ್ರಿಲ್ 30 - 2ನೇ ಟಿ20ಐ ಸಿಲ್ಹೆಟ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ಸಿಲ್ಹೆಟ್

ಮೇ 2 - 3ನೇ ಟಿ20ಐ ಸಿಲ್ಹೆಟ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ಸಿಲ್ಹೆಟ್

ಮೇ 6 - 4 ನೇ ಟಿ20ಐ ಸಿಲ್ಹೆಟ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ಸಿಲ್ಹೆಟ್

ಮೇ 9 - ಟಿ20ಐ ಸಿಲ್ಹೆಟ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ಸಿಲ್ಹೆಟ್

ಭಾರತ vs ಬಾಂಗ್ಲಾದೇಶ ಪಂದ್ಯಗಳ ಸಮಯ

ಮೊದಲ ಎರಡು ಟಿ20ಐಗಳು ಸಂಜೆ 6ಕ್ಕೆ ಪ್ರಾರಂಭವಾಗುತ್ತವೆ. 3 ಮತ್ತು 4ನೇ ಟಿ20 ಪಂದ್ಯಗಳು ಮಧ್ಯಾಹ್ನ 1:30ಕ್ಕೆ ಶುರುವಾಗುತ್ತವೆ. ಇನ್ನು ಕೊನೆಯ ಟಿ20ಐ ಸಂಜೆ 6ರಿಂದ ಆರಂಭವಾಗುತ್ತದೆ.

ಭಾರತ vs ಬಾಂಗ್ಲಾದೇಶ ನೇರ ಪ್ರಸಾರ

ಫ್ಯಾನ್‌ಕೋಡ್ ಅಪ್ಲಿಕೇಶನ್​ನಲ್ಲಿ ಈ ಸರಣಿಯನ್ನು ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ನೀವು ಫ್ಯಾನ್​ಕೋಡ್​ ಅಪ್ಲಿಕೇಶನ್ ಡೌನ್‌ಲೋಡ್ ಮಾಡಬಹುದು ಅಥವಾ ವೆಬ್‌ಸೈಟ್‌ನಲ್ಲಿ ಲಾಗಿನ್​ ಆಗಬಹುದು. ಆದರೆ ಹಣ ಪಾವತಿಸಬೇಕಾಗುತ್ತದೆ.

ತಂಡಗಳು

ಭಾರತ ಮಹಿಳೆಯರ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ದಯಾಲನ್ ಹೇಮಲತಾ, ಸಜನಾ ಸಜೀವನ್, ರಿಚಾ ಘೋಷ್ (ವಿಕೆಟ್ ಕೀಪರ್​), ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ರಾಧಾ ಯಾದವ್, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ಅಮಂಜೋತ್ ಕೌರ್, ಶ್ರೇಯಾಂಕ ಪಾಟೀಲ್, ಸೈಕಾ ಇಶಾಕ್, ಆಶಾ ಶೋಭನಾ, ರೇಣುಕಾ ಸಿಂಗ್ ಠಾಕೂರ್, ಟಿಟಾಸ್ ಸಾಧು.

ಬಾಂಗ್ಲಾದೇಶದ ಮಹಿಳೆಯರ ತಂಡ: ನಿಗರ್ ಸುಲ್ತಾನಾ ಜೋಟಿ (ನಾಯಕಿ), ನಹಿದಾ ಅಕ್ತರ್​ (ಉಪನಾಯಕಿ), ಮುರ್ಷಿದಾ ಖಾತುನ್, ಸೋಭಾನಾ ಮೊಸ್ಟರಿ, ಶೋರ್ನಾ ಅಕ್ತರ್​, ರಿತು ಮೋನಿ, ರಬೇಯಾ ಖಾನ್, ಸುಲ್ತಾನಾ ಖಾತುನ್, ಫಾಹಿಮಾ ಖಾತುನ್, ಮಾರುಫಾ ಅಕ್ತರ್, ಫರಿಹಾ ಇಸ್ಲಾಂ ತ್ರಿಸ್ನಾ, ಶೋರಿಫಾ ಖಾತುನ್, ದಿಲಾರಾ ಅಕ್ತರ್, ರುಬ್ಯಾ ಹೈದರ್ ಜೆಲಿಕ್, ಹಬೀಬಾ ಇಸ್ಲಾಂ ಪಿಂಕಿ.

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

IPL_Entry_Point