ಕನ್ನಡ ಸುದ್ದಿ  /  ಕ್ರಿಕೆಟ್  /  ರೋಹಿತ್ ಶರ್ಮಾ ಉತ್ತರಾಧಿಕಾರಿಯಾಗಿ ಹಾರ್ದಿಕ್ ಪಾಂಡ್ಯ ಹೆಸರಿಸದಂತೆ ಬಿಸಿಸಿಐಗೆ ಎಚ್ಚರಿಸಿದ ಆ್ಯಡಂ ಗಿಲ್​ಕ್ರಿಸ್ಟ್

ರೋಹಿತ್ ಶರ್ಮಾ ಉತ್ತರಾಧಿಕಾರಿಯಾಗಿ ಹಾರ್ದಿಕ್ ಪಾಂಡ್ಯ ಹೆಸರಿಸದಂತೆ ಬಿಸಿಸಿಐಗೆ ಎಚ್ಚರಿಸಿದ ಆ್ಯಡಂ ಗಿಲ್​ಕ್ರಿಸ್ಟ್

Adam Gilchrist on Hardik Pandya : ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರಿಗೆ ಉತ್ತರಾಧಿಕಾರಿ ಹಾರ್ದಿಕ್ ಪಾಂಡ್ಯ ಹೆಸರಿಸುವ ವಿಷಯದಲ್ಲಿ ಆ್ಯಡಂ ಗಿಲ್​ಕ್ರಿಸ್ಟ್​ ಅವರು ಬಿಸಿಸಿಐಗೆ ದೊಡ್ಡ ಎಚ್ಚರಿಕೆ ನೀಡಿದ್ದಾರೆ.

ರೋಹಿತ್ ಶರ್ಮಾ ಉತ್ತರಾಧಿಕಾರಿಯಾಗಿ ಹಾರ್ದಿಕ್ ಪಾಂಡ್ಯ ಹೆಸರಿಸದಂತೆ ಬಿಸಿಸಿಐಗೆ ಎಚ್ಚರಿಸಿದ ಆ್ಯಡಂ ಗಿಲ್​ಕ್ರಿಸ್ಟ್
ರೋಹಿತ್ ಶರ್ಮಾ ಉತ್ತರಾಧಿಕಾರಿಯಾಗಿ ಹಾರ್ದಿಕ್ ಪಾಂಡ್ಯ ಹೆಸರಿಸದಂತೆ ಬಿಸಿಸಿಐಗೆ ಎಚ್ಚರಿಸಿದ ಆ್ಯಡಂ ಗಿಲ್​ಕ್ರಿಸ್ಟ್

2024ರ ಇಂಡಿಯನ್ ಪ್ರೀಮಿಯರ್​ ಲೀಗ್​ನಲ್ಲಿ (IPL 2024) ಹಾರ್ದಿಕ್ ಪಾಂಡ್ಯ (Hardik Pandya) ನೇತೃತ್ವದಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ಒಂದೆರಡು ಪಂದ್ಯಗಳಲ್ಲಿ ಆರ್ಭಟಿಸಿದರೂ ಅದೇ ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಈವೆರೆಗೂ ಆಡಿರುವ 8 ಪಂದ್ಯಗಳಲ್ಲಿ 3 ರಲ್ಲಿ ಗೆದ್ದು, 5ರಲ್ಲಿ ಸೋಲನುಭವಿಸಿದೆ. ಆದರೆ ಅತ್ಯಂತ ಯಶಸ್ವಿ ತಂಡವಾದ ಮುಂಬೈ ಕಳಪೆ ಪ್ರದರ್ಶನಕ್ಕೆ ನಾಯಕ ಹಾರ್ದಿಕ್ ಅವರೇ ಕಾರಣ ಎಂದು ಕ್ರಿಕೆಟ್ ವಲಯದಲ್ಲಿ ಟೀಕೆ ವ್ಯಕ್ತವಾಗಿದೆ.

ಹಾರ್ದಿಕ್ ಪಾಂಡ್ಯ ಅವರ ಪುನರಾಗಮನ ಮತ್ತು ಈ ಬಾರಿ ನಾಯಕನಾಗಿ ಮುಂಬೈ ಇಂಡಿಯನ್ಸ್ ಹೊಸ ಅಧ್ಯಾಯವನ್ನು ಪ್ರಾರಂಭಿಸಬೇಕಿತ್ತು. ಆದರೆ, ಅದು ಸಂಪೂರ್ಣ ಅವ್ಯವಸ್ಥೆಯಿಂದ ತುಂಬಿದೆ. ತಂಡವನ್ನು ಮನಬಂದಂತೆ ಮುನ್ನಡೆಸುತ್ತಿದ್ದಾರೆ. ಐದು ಬಾರಿಯ ಚಾಂಪಿಯನ್ ತಂಡವು ಪ್ರಸ್ತುತ ಐಪಿಎಲ್ 2024ರ ಪಾಯಿಂಟ್ಸ್ ಟೇಬಲ್​ನಲ್ಲಿ 8 ಪಂದ್ಯಗಳಲ್ಲಿ 6 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದೆ. ಗುಜರಾತ್ ಟೈಟಾನ್ಸ್ ಅನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿದ್ದ ಹಾರ್ದಿಕ್, ಈಗ ಗೆಲುವಿಗೆ ಪರದಾಡುತ್ತಿದ್ದಾರೆ.

ರೋಹಿತ್​ಗೆ ಉತ್ತರಾಧಿಕಾರಿ ಹಾರ್ದಿಕ್

ಮುಂಬೈ ನಾಯಕತ್ವದಲ್ಲಿ ಆಲ್​​ರೌಂಡರ್​​ ಪಳಗಬೇಕಿದೆ. ಕಾರ್ಯತಂತ್ರಾತ್ಮಕವಾಗಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ಇದರಿಂದ ಟೀಕೆಗೆ ಗುರಿಯಾಗಿದ್ದಾರೆ. ಇದರ ಬೆನ್ನಲ್ಲೇ ಮಾಜಿ ಕ್ರಿಕೆಟಿಗರು ಭಾರತ ತಂಡದಲ್ಲಿ (Team India) ರೋಹಿತ್​ ಶರ್ಮಾಗೆ ಉತ್ತರಾಧಿಕಾರಿಯಾಗಿ ಹಾರ್ದಿಕ್​ ಅವರನ್ನು ಹೆಸರಿಸಬೇಡಿ ಎಂದು ಬಿಸಿಸಿಐಗೆ (BCCI) ಮನವಿ ಮಾಡಿದ್ದಾರೆ. ಭಾರತ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿರುವ ಹಾರ್ದಿಕ್​, ವೈಟ್​ಬಾಲ್ ಕ್ರಿಕೆಟ್​​ನಲ್ಲಿ ರೋಹಿತ್​ ಶರ್ಮಾಗೆ ಉತ್ತರಾಧಿಕಾರಿ ಎನ್ನಲಾಗಿದೆ.

ಹಾರ್ದಿಕ್ ನಾಯಕತ್ವದ ಕುರಿತು ಪ್ರತಿಕ್ರಿಯಿಸಿರುವ ಕಾಮೆಂಟೇಟರ್ ಸೈಮನ್ ಡೌಲ್, ಇಷ್ಟು ದೊಡ್ಡ ಮತ್ತು ಯಶಸ್ವಿಯಾದ ಫ್ರಾಂಚೈಸಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಕಠಿಣ ವಿಷಯ. ಹಾರ್ದಿಕ್ ಅವರು ನಿಸ್ಸಂಶಯವಾಗಿ ಗುಜರಾತ್ ತಂಡದಲ್ಲಿ ಉತ್ತಮ ನಾಯಕತ್ವದ ಕೌಶಲ್ಯಗಳನ್ನು ಹೊಂದಿದ್ದರು. ನೀವು ಅವುಗಳನ್ನು ಕಳೆದುಕೊಳ್ಳಬೇಡಿ. ಆದರೆ ಅವರು ಇನ್ನೂ ಕಲಿಯುವುದು ಸಾಕಷ್ಟಿದೆ ಎಂದು ತಿಳಿಸಿದ್ದಾರೆ. ಡೌಲ್ ಬಳಿಕ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆ್ಯಡಂ ಗಿಲ್​ಕ್ರಿಸ್ಟ್ (Adam Gilchrist) ಕೂಡ ಪ್ರತಿಕ್ರಿಯಿಸಿದ್ದಾರೆ.

ಹಾರ್ದಿಕ್ ಪಾಂಡ್ಯ ಕುರಿತು ಗಿಲ್​ಕ್ರಿಸ್ಟ್ ಹೇಳಿಕೆ

ಗಿಲ್​ಕ್ರಿಸ್ಟ್ ಹೇಳಿದ್ದು ಹೀಗೆ.. ಹಾರ್ದಿಕ್​ ಕಾರ್ಯತಂತ್ರಾತ್ಮಕವಾಗಿ ಸರಿಯಾಗಿ ತಂಡವನ್ನು ಮುನ್ನಡೆಸುತ್ತಿರುವುದು ನಾನು ನೋಡಿಲ್ಲ. ಕೆಲ ಬ್ಯಾಟಿಂಗ್ ಸ್ಥಾನಗಳಲ್ಲಿ ಬದಲಾವಣೆ, ಕೆಲವು ಸಮಯಗಳಲ್ಲಿ ಕೆಲವು ಬೌಲಿಂಗ್ ಬದಲಾವಣೆ ಮಾಡಿದ್ದಾರೆ. ಅದು ತುಂಬಾ ಸಲ ಅನವಶ್ಯಕ ಎಂದು ಅನಿಸುತ್ತದೆ. ಒಟ್ಟಾರೆ ಕಾರ್ಯತಂತ್ರ, ನಾಯಕನಾಗಿ ಅವರು ಸರಿಯಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ ಎಂದು ನಾನು ಭಾವಿಸುವುದಿಲ್ಲ ಎಂದು ಆಸೀಸ್ ಮಾಜಿ ಕ್ರಿಕೆಟಿಗ ಹೇಳಿದ್ದಾರೆ.

ಮುಂಬೈ ಇಂಡಿಯನ್ಸ್ ಜೊತೆಗಿನ ಪಾಂಡ್ಯ ಅವರ ನಾಯಕತ್ವವು ಬಿಸಿಸಿಐಗೆ ದೊಡ್ಡ ತಲೆನೋವಾಗಬಹುದು. ಅವರನ್ನು ರೋಹಿತ್ ಶರ್ಮಾ ಅವರ ಉತ್ತರಾಧಿಕಾರಿಯಾಗಿ ಬಿಸಿಸಿಐ ನೋಡುತ್ತಿರಬಹುದು. ಆದರೆ, ಅವರ ನಾಯಕತ್ವದಲ್ಲಿ ಇನ್ನೂ ಕಲಿಯಬೇಕು. ಹಾಗಾಗಿ ಅವರನ್ನು ರೋಹಿತ್​ಗೆ ಉತ್ತರಾಧಿಕಾರಿಯಾಗಿ ಹೆಸರಿಸಬೇಡಿ ಎಂದು ಬಿಸಿಸಿಐಗೆ ಗಿಲ್ಲಿ ಎಚ್ಚರಿಸಿದ್ದಾರೆ. ಹಾರ್ದಿಕ್ ಅವರನ್ನು 2022ರಲ್ಲಿ ಮುಂಬೈ, ಬಿಡುಗಡೆ ಮಾಡಿತ್ತು. ಹರಾಜಿಗೂ ಮುನ್ನ ಡೈರೆಕ್ಟ್​ ಟ್ರೇಡ್​ ಮೂಲಕ ಗುಜರಾತ್ ಪಾಲಾಗಿದ್ದರು.

ಆದರೆ ಅದೇ ವರ್ಷ ಗುಜರಾತ್​​ಗೆ ತನ್ನ ನಾಯಕತ್ವದಲ್ಲಿ ಟ್ರೋಫಿ ಗೆದ್ದುಕೊಟ್ಟಿದ್ದರು. 2023ರಲ್ಲಿ ತಂಡವನ್ನು ರನ್ನರ್​​ಅಪ್​ಗೆ ಮುನ್ನಡೆಸಿದ್ದರು. 2024ರ ಐಪಿಎಲ್​ಗೂ ಮುನ್ನ ಜಿಟಿ ಅಭಿಮಾನಿಗಳಿಗೆ ಭಾರಿ ಆಘಾತವನ್ನುಂಟು ಮಾಡಿದ ಪಾಂಡ್ಯ, ಹರಾಜಿಗೆ ಮುನ್ನ ಟ್ರೇಡ್​ ಮೂಲಕ ಮತ್ತೆ ಮುಂಬೈ ಸೇರಿದರು. ಮುಂಬೈ ಇಂಡಿಯನ್ಸ್ ಶನಿವಾರ ತನ್ನ ಮುಂಬರುವ ಪಂದ್ಯದಲ್ಲಿ ರಿಷಭ್ ಪಂತ್ ಅವರ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದ್ದು, ಗೆಲುವಿನ ಹಾದಿಗೆ ಮರಳಲು ಎದುರು ನೋಡುತ್ತಿದೆ.

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

IPL_Entry_Point