ಬಾರ್ಡರ್ ಗವಾಸ್ಕರ್ ಟ್ರೋಫಿ-ಸೌತ್ ಆಫ್ರಿಕಾ ಸರಣಿಗೆ ಬಲಿಷ್ಠ ಭಾರತ ತಂಡ ಪ್ರಕಟ; ಮೂವರು ಕನ್ನಡಿಗರಿಗೆ ಅವಕಾಶ
ಕನ್ನಡ ಸುದ್ದಿ  /  ಕ್ರಿಕೆಟ್  /  ಬಾರ್ಡರ್ ಗವಾಸ್ಕರ್ ಟ್ರೋಫಿ-ಸೌತ್ ಆಫ್ರಿಕಾ ಸರಣಿಗೆ ಬಲಿಷ್ಠ ಭಾರತ ತಂಡ ಪ್ರಕಟ; ಮೂವರು ಕನ್ನಡಿಗರಿಗೆ ಅವಕಾಶ

ಬಾರ್ಡರ್ ಗವಾಸ್ಕರ್ ಟ್ರೋಫಿ-ಸೌತ್ ಆಫ್ರಿಕಾ ಸರಣಿಗೆ ಬಲಿಷ್ಠ ಭಾರತ ತಂಡ ಪ್ರಕಟ; ಮೂವರು ಕನ್ನಡಿಗರಿಗೆ ಅವಕಾಶ

Indias squad: ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿ ಮತ್ತು ಸೌತ್ ಆಫ್ರಿಕಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ.

ಬಾರ್ಡರ್ ಗವಾಸ್ಕರ್ ಟ್ರೋಫಿ-ಸೌತ್ ಆಫ್ರಿಕಾ ಸರಣಿಗೆ ಬಲಿಷ್ಠ ಭಾರತ ತಂಡ ಪ್ರಕಟ
ಬಾರ್ಡರ್ ಗವಾಸ್ಕರ್ ಟ್ರೋಫಿ-ಸೌತ್ ಆಫ್ರಿಕಾ ಸರಣಿಗೆ ಬಲಿಷ್ಠ ಭಾರತ ತಂಡ ಪ್ರಕಟ

ಬಹುನಿರೀಕ್ಷಿತ 2024-25ರ ಬಾರ್ಡರ್ ಗವಾಸ್ಕರ್ ಟ್ರೋಫಿಗೆ ಬಲಿಷ್ಠ ಭಾರತ ತಂಡವನ್ನು ಬಿಸಿಸಿಐ ಘೋಷಿಸಿದೆ. ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಸರಣಿಗೆ ರೋಹಿತ್​ ಶರ್ಮಾ ತಂಡವನ್ನು ಮುನ್ನಡೆಸಲಿದ್ದು, ಜಸ್ಪ್ರೀತ್ ಬುಮ್ರಾ ಉಪನಾಯಕನಾಗಿದ್ದಾರೆ. ಆದರೆ ಮೊಹಮ್ಮದ್ ಶಮಿ ಈ ಸರಣಿಗೆ ಕಂಬ್ಯಾಕ್ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ಇನ್ನೂ ಫಿಟ್ ಆಗಿಲ್ಲ. ಅಕ್ಷರ್ ಪಟೇಲ್ ಅಥವಾ ಕುಲದೀಪ್ ಯಾದವ್‌ಗೂ ಅವಕಾಶ ನೀಡದೆ ಅಜಿತ್ ಅಗರ್ಕರ್ ನೇತೃತ್ವದ ಸೆಲೆಕ್ಷನ್ ಕಮಿಟಿ ಅಚ್ಚರಿ ಮೂಡಿಸಿದೆ. ಮೂವರು ಅನ್​ಕ್ಯಾಪ್ಡ್​ ಪ್ಲೇಯರ್​​ಗಳಿಗೂ ಮಹತ್ವದ ಸರಣಿಗೆ ಚಾನ್ಸ್ ನೀಡಲಾಗಿದೆ. ನ್ಯೂಜಿಲೆಂಡ್ ಪುಣೆ ವಿರುದ್ಧದ ಟೆಸ್ಟ್​ನಲ್ಲಿ ಮಿಂಚಿದ ವಾಷಿಂಗ್ಟನ್ ಸುಂದರ್​​ಗೂ ಮಣೆ ಹಾಕಲಾಗಿದೆ.

ದೀರ್ಘಕಾಲದ ತೊಡೆಸಂದು ಸಮಸ್ಯೆಯಿಂದಾಗಿ ಕುಲ್ದೀಪ್ ಆಯ್ಕೆಗೆ ಲಭ್ಯವಿಲ್ಲ ಎಂದು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಬಹಿರಂಗಪಡಿಸಿದೆ. ಮೊಹಮ್ಮದ್ ಶಮಿ ಫಿಟ್ನೆಸ್ ಕುರಿತು ಊಹಾಪೋಹಗಳ ನಡುವೆ ತಂಡದಲ್ಲಿ ಹೆಸರಿಸಲಾಗಿಲ್ಲ. ಸ್ಟಾರ್ ಭಾರತೀಯ ವೇಗಿ 2023ರ ಕ್ರಿಕೆಟ್ ವಿಶ್ವಕಪ್ ಫೈನಲ್ ನಂತರ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಆಡಿಲ್ಲ. ಮುಂದಿನ ತಿಂಗಳು ರಣಜಿ ಟ್ರೋಫಿಯಲ್ಲಿ ಕಂಬ್ಯಾಕ್​ಗೆ ಸಿದ್ಧರಾಗಿದ್ದಾರೆ. ಋತುರಾಜ್ ಗಾಯಕ್ವಾಡ್ ತಂಡದಲ್ಲಿ ಸ್ಥಾನದಲ್ಲಿ ಪಡೆಯುತ್ತಾರೆ ಎನ್ನಲಾಗಿತ್ತು. ಆದರೆ, ಅವರ ಬದಲಿಗೆ ಅಭಿಮನ್ಯು ಈಶ್ವರನ್ ಸ್ಥಾನ ಪಡೆದಿದ್ದಾರೆ. ಐಪಿಎಲ್​ನಲ್ಲಿ ಅಬ್ಬರಿಸಿದ ಹರ್ಷಿತ್ ರಾಣಾ ಟೆಸ್ಟ್​ಗೂ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.

ನಿತೀಶ್ ಕುಮಾರ್ ರೆಡ್ಡಿ ಅವರು ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಚೊಚ್ಚಲ ಪಂದ್ಯಕ್ಕೆ ಸಜ್ಜಾಗುತ್ತಿರುವ ಮತ್ತೊಬ್ಬ ಆಟಗಾರರಾಗಿದ್ದಾರೆ. ಏಕೆಂದರೆ ಭಾರತ ರೆಡ್-ಬಾಲ್ ಕ್ರಿಕೆಟ್‌ನಲ್ಲಿ ಸೀಮ್ ಬೌಲಿಂಗ್ ಆಲ್‌ರೌಂಡರ್​​ಗಾಗಿ ಹುಡುಕಾಟ ನಡೆಸುತ್ತಿದೆ. ಆದರೆ ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ ಸೇರಿದಂತೆ ಅನುಭವಿಗಳಿಗೆ ಅವಕಾಶ ನೀಡಲು ಚರ್ಚೆ ನಡೆದಿತ್ತು. ಆದರೆ ಇದೀಗ ಅವರಿಗೆ ನಿರಾಸೆಯಾಗಿದೆ. ಶ್ರೇಯಸ್ ಅಯ್ಯರ್ ಕೂಡ ಅವಕಾಶ ವಂಚಿತರಾಗಿದ್ದಾರೆ. ಇದೇ ವೇಳೆ ಮುಂದಿನ ತಿಂಗಳು ನಡೆಯುವ ಸೌತ್ ಆಫ್ರಿಕಾ ವಿರುದ್ಧ ಟಿ20ಐ ಸರಣಿಗೂ ತಂಡವನ್ನು ಪ್ರಕಟಿಸಲಾಗಿದೆ. ಆದರೆ ಇಶಾನ್ ಕಿಶನ್ ತಂಡಕ್ಕೆ ಕಂಬ್ಯಾಕ್ ಮಾಡಲು ಮತ್ತೆ ವಿಫಲರಾಗಿದ್ದಾರೆ.

ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರಿಷಭ್ ಪಂತ್ (ವಿಕೆಟ್ ಕೀಪರ್​), ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್​), ಆರ್ ಅಶ್ವಿನ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್.

ಮೀಸಲು ಆಟಗಾರರು: ಮುಖೇಶ್ ಕುಮಾರ್, ನವದೀಪ್ ಸೈನಿ, ಖಲೀಲ್ ಅಹ್ಮದ್.

ದಕ್ಷಿಣ ಆಫ್ರಿಕಾ ವಿರುದ್ಧದ 4 ಟಿ20ಐಗಳಿಗೆ ಭಾರತ ತಂಡ

ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್​), ರಿಂಕು ಸಿಂಗ್, ತಿಲಕ್ ವರ್ಮಾ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರಮಣದೀಪ್ ಸಿಂಗ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್ , ಅರ್ಷದೀಪ್ ಸಿಂಗ್, ವಿಜಯ್​ಕುಮಾರ್​ ವೈಶಾಕ್, ಅವೇಶ್ ಖಾನ್, ಯಶ್ ದಯಾಳ್.

1) ಗಾಯದ ಕಾರಣ ಮಯಾಂಕ್ ಯಾದವ್ ಮತ್ತು ಶಿವಂ ದುಬೆ ಆಯ್ಕೆಗೆ ಲಭ್ಯರಿಲ್ಲ.

2) ರಿಯಾನ್ ಪರಾಗ್ ಆಯ್ಕೆಗೆ ಅಲಭ್ಯರಾಗಿದ್ದಾರೆ. ಅವರು ದೀರ್ಘಕಾಲದ ಬಲ ಭುಜದ ಗಾಯದ ಸಮಸ್ಯೆ ತುತ್ತಾಗಿದ್ದಾರೆ.

3) ಮೂವರು ಕನ್ನಡಿಗರು: ಕೆಎಲ್ ರಾಹುಲ್, ಪ್ರಸಿದ್ಧ್ ಕೃಷ್ಣ, ವಿಜಯ್​ಕುಮಾರ್​ ವೈಶಾಕ್

ಬಾರ್ಡರ್ ಗವಾಸ್ಕರ್ ಟ್ರೋಫಿ I 2024-25
ಕ್ರ.ಸಂದಿನಾಂಕಪಂದ್ಯಸ್ಥಳ
1ನವೆಂಬರ್ 221ನೇ  ಟೆಸ್ಟ್ಪರ್ತ್ ಸ್ಟೇಡಿಯಂ
2ಡಿಸೆಂಬರ್ 062ನೇ  ಪರೀಕ್ಷೆ (D/N)ಅಡಿಲೇಡ್ ಓವಲ್
3ಡಿಸೆಂಬರ್ 143ನೇ  ಟೆಸ್ಟ್ಗಬ್ಬಾ, ಬ್ರಿಸ್ಬೇನ್
4ಡಿಸೆಂಬರ್ 264ನೇ  ಟೆಸ್ಟ್MCG, ಮೆಲ್ಬೋರ್ನ್
5ಜನವರಿ 035ನೇ  ಟೆಸ್ಟ್SCG, ಸಿಡ್ನಿ

ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ I 2024
ಕ್ರ.ಸಂದಿನಾಂಕಪಂದ್ಯಸ್ಥಳ
1ನವೆಂಬರ್ 081ನೇ  ಟಿ20ಐಡರ್ಬನ್
2ನವೆಂಬರ್ 102ನೇ  ಟಿ20ಐಗ್ಕೆಬರ್ಹಾ
3ನವೆಂಬರ್ 133ನೇ  ಟಿ20ಐಸೆಂಚುರಿಯನ್
4ನವೆಂಬರ್ 154ನೇ  ಟಿ20ಐಜೋಹಾನ್ಸ್‌ಬರ್ಗ್

Whats_app_banner