ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಈಗ ಐಸಿಸಿ ಮುಖ್ಯಸ್ಥ: ಅಮಿತ್ ಶಾ ಪುತ್ರ ಪಡೆಯುವ ವೇತನ ಎಷ್ಟು, ಸೌಲಭ್ಯಗಳೇನು?-bcci secretary jay shah now icc chief do you know how much salary amit shah son will get vbt ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಈಗ ಐಸಿಸಿ ಮುಖ್ಯಸ್ಥ: ಅಮಿತ್ ಶಾ ಪುತ್ರ ಪಡೆಯುವ ವೇತನ ಎಷ್ಟು, ಸೌಲಭ್ಯಗಳೇನು?

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಈಗ ಐಸಿಸಿ ಮುಖ್ಯಸ್ಥ: ಅಮಿತ್ ಶಾ ಪುತ್ರ ಪಡೆಯುವ ವೇತನ ಎಷ್ಟು, ಸೌಲಭ್ಯಗಳೇನು?

BCCI Secretary Jay Shah: ಜಯ್ ಶಾ ಅವರು 2019ರಲ್ಲಿ ಬಿಸಿಸಿಐ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಅಂದಿನಿಂದ ಈ ಹುದ್ದೆ ನಿರ್ವಹಿಸುತ್ತಿದ್ದಾರೆ. ಈಗ ಅವರು ಈ ಹುದ್ದೆಯನ್ನು ತೊರೆದು ಐಸಿಸಿಯ ಕಮಾಂಡ್ ತೆಗೆದುಕೊಳ್ಳಲಿದ್ದಾರೆ. ಐಸಿಸಿ ಅಧ್ಯಕ್ಷರ ಅಧಿಕಾರಾವಧಿಯು 2 ವರ್ಷಗಳು. (ವರದಿ: ವಿನಯ್ ಭಟ್)

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಈಗ ಐಸಿಸಿ ಮುಖ್ಯಸ್ಥ
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಈಗ ಐಸಿಸಿ ಮುಖ್ಯಸ್ಥ

Jay Shah: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ಜಯ್ ಶಾ ಈಗ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಮುಖ್ಯಸ್ಥರಾಗಲಿದ್ದಾರೆ. ಐಸಿಸಿಯ ಮುಂದಿನ ಅಧ್ಯಕ್ಷರಾಗಿ ಜಯ್ ಶಾ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಪರಿಷತ್ತಿನ ಅತ್ಯಂತ ಕಿರಿಯ ಅಧ್ಯಕ್ಷರೂ ಆಗಲಿದ್ದಾರೆ. ಕೇವಲ 35 ವರ್ಷ ವಯಸ್ಸಿನ ಜಯ್ ಶಾ ಅವರು ಡಿಸೆಂಬರ್ 1 ರಿಂದ ಈ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ. ಪ್ರಸ್ತುತ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಜಾಗಕ್ಕೆ ಶಾ ಬರಲಿದ್ದಾರೆ. ಈ ಘೋಷಣೆಯೊಂದಿಗೆ, ಜಯ್ ಶಾ ಅವರು ಐಸಿಸಿ ಅಧ್ಯಕ್ಷರಾಗಿ ಎಷ್ಟು ಸಂಭಾವನೆ ಪಡೆಯುತ್ತಾರೆ ಎಂದು ಅನೇಕ ಜನರು ಹುಡುಕುತ್ತಿದ್ದಾರೆ.

ಜಯ್ ಶಾ 2019ರಲ್ಲಿ ಬಿಸಿಸಿಐ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಅಂದಿನಿಂದ ಈ ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ. ಈಗ ಅವರು ಈ ಹುದ್ದೆಯನ್ನು ತೊರೆದು ಐಸಿಸಿಯ ಕಮಾಂಡ್ ತೆಗೆದುಕೊಳ್ಳಲಿದ್ದಾರೆ. ಐಸಿಸಿ ಅಧ್ಯಕ್ಷರ ಅಧಿಕಾರಾವಧಿಯು 2 ವರ್ಷಗಳು ಆದರೆ, ಯಾವುದೇ ಅಧ್ಯಕ್ಷರು ಗರಿಷ್ಠ 3 ಅವಧಿಗಳನ್ನು ಪಡೆಯಬಹುದು. ಹೀಗಾಗಿ ಶಾ ಮುಂದಿನ ಕೆಲವು ವರ್ಷಗಳವರೆಗೆ ಐಸಿಸಿ ಅಧಿಕಾರವನ್ನು ಹೊಂದಿರುತ್ತಾರೆ. ಆದರೆ ಅವರು ಐಸಿಸಿ ಅಧ್ಯಕ್ಷರಾಗಿ ಸಂಬಳ ಪಡೆಯುತ್ತಾರೆಯೇ?

ಬಿಸಿಸಿಐಯಿಂದ ಎಷ್ಟು ಗಳಿಸುತ್ತಾರೆ?

ಮೊದಲು ಬಿಸಿಸಿಐ ಬಗ್ಗೆ ಮಾತನಾಡೋಣ. ಭಾರತೀಯ ಕ್ರಿಕೆಟ್ ಮಂಡಳಿಯಲ್ಲಿ ಅಧ್ಯಕ್ಷ, ಕಾರ್ಯದರ್ಶಿ, ಉಪಾಧ್ಯಕ್ಷ ಮತ್ತು ಖಜಾಂಚಿ 'ಗೌರವ' ಹುದ್ದೆಗಳಾಗಿವೆ. ಈ ಹುದ್ದೆಗಳನ್ನು ಹೊಂದಿರುವ ಅಧಿಕಾರಿಗಳು ಯಾವುದೇ ಮಾಸಿಕ ಅಥವಾ ವಾರ್ಷಿಕ ವೇತನವನ್ನು ಪಡೆಯುವುದಿಲ್ಲ. ಅಂದರೆ ಅವರಿಗೆ ನಿಗದಿತ ಸಂಬಳವಿಲ್ಲ. ಇದರ ಹೊರತಾಗಿಯೂ, ಅವರು ತಮ್ಮ ಕೆಲಸದ ವೆಚ್ಚವನ್ನು ಮಂಡಳಿಯಿಂದ ಪಾವತಿಸುತ್ತಾರೆ. ಈ ಅಧಿಕಾರಿಗಳಿಗೆ ವಿವಿಧ ರೀತಿಯ ಭತ್ಯೆ ಮತ್ತು ವೆಚ್ಚಗಳನ್ನು ನೀಡಲಾಗುತ್ತದೆ, ಇದನ್ನು ಕಳೆದ ವರ್ಷ ಮಂಡಳಿಯು ಹೆಚ್ಚಿಸಿದೆ. ಅಧ್ಯಕ್ಷರು ಮತ್ತು ಕಾರ್ಯದರ್ಶಿ ಸೇರಿದಂತೆ ಎಲ್ಲಾ ದೊಡ್ಡ ಗೌರವಾನ್ವಿತ ಅಧಿಕಾರಿಗಳು ಟೀಮ್ ಇಂಡಿಯಾಗೆ ಸಂಬಂಧಿಸಿದ ಐಸಿಸಿ ಸಭೆಗಳಿಗೆ ಅಥವಾ ವಿದೇಶಿ ಪ್ರವಾಸಗಳಿಗೆ ಪ್ರತಿದಿನ 1000 ಡಾಲರ್ ಅಂದರೆ ಸುಮಾರು 82 ಸಾವಿರ ರೂಪಾಯಿಗಳನ್ನು ಪಡೆಯುತ್ತಾರೆ.

ಅಲ್ಲದೆ, ವಿಮಾನಗಳಲ್ಲಿ ಫಸ್ಟ್ ಕ್ಲಾಸ್​ನಲ್ಲಿ ಪ್ರಯಾಣಿಸುವ ಸೌಲಭ್ಯ ಪಡೆಯುತ್ತಾರೆ. ಅದೇ ರೀತಿ, ಭಾರತದೊಳಗೆ ವಿವಿಧ ಸಭೆಗಳಲ್ಲಿ ಭಾಗವಹಿಸಲು, ಒಬ್ಬರಿಗೆ ದಿನಕ್ಕೆ 40,000 ರೂ. ಭತ್ಯೆ ಮತ್ತು ಪ್ರಯಾಣದ ಸೌಲಭ್ಯವೂ ಸಿಗುತ್ತದೆ. ಇದಲ್ಲದೇ ಆಡಳಿತ ಮಂಡಳಿ ಸಭೆ ಹೊರತುಪಡಿಸಿ ಬೇರೆ ಬೇರೆ ಕೆಲಸಗಳಿಗೆ ಬೇರೆ ಬೇರೆ ನಗರಗಳಿಗೆ ತೆರಳಲು ದಿನಕ್ಕೆ 30 ಸಾವಿರ ರೂ. ಇದಲ್ಲದೆ, ದೇಶ ಅಥವಾ ವಿದೇಶದಲ್ಲಿರುವ ಅಧಿಕಾರಿಗಳು ತಮಗಾಗಿ ಹೋಟೆಲ್ ಸೂಟ್ ಕೊಠಡಿಗಳನ್ನು ಸಹ ಕಾಯ್ದಿರಿಸಬಹುದು, ಅದರ ವೆಚ್ಚವನ್ನು ಮಂಡಳಿಯು ಭರಿಸುತ್ತದೆ.

ಜಯ್ ಶಾಗೆ ಐಸಿಸಿ ಸಂಬಳ?

ಜಯ್ ಶಾ ಬಿಸಿಸಿಐನಿಂದ ಸಂಬಳ ಪಡೆಯುವುದಿಲ್ಲ. ಆದರೆ ವಿದೇಶದಲ್ಲಿ ನಡೆಯುವ ಮಂಡಳಿಯ ಸಭೆಗಳು ಮತ್ತು ಐಸಿಸಿ ಸಭೆಗಳಿಗೆ ಹಾಜರಾಗಲು ಅವರು ಉತ್ತಮ ಮೊತ್ತವನ್ನು ಪಡೆಯುತ್ತಾರೆ. ಐಸಿಸಿಯಲ್ಲೂ ಇದೇ ಅವಕಾಶವಿದೆ. ಅಲ್ಲಿಯೂ ಅಧ್ಯಕ್ಷ, ಉಪಾಧ್ಯಕ್ಷರಂತಹ ಅಧಿಕಾರಿಗಳಿಗೆ ನಿಗದಿತ ವೇತನ ಎಂಬುದಿಲ್ಲ. ಅವರು ವಿವಿಧ ಸಭೆಗಳು ಮತ್ತು ಕೆಲಸದ ಆಧಾರದ ಮೇಲೆ ಭತ್ಯೆಗಳು ಮತ್ತು ಸೌಲಭ್ಯಗಳನ್ನು ಪಡೆಯುತ್ತಾರೆ. ಆದಾಗ್ಯೂ, ಇಲ್ಲಿಯವರೆಗೆ ಐಸಿಸಿ ತನ್ನ ಅಧಿಕಾರಿಗಳಿಗೆ ಭತ್ಯೆ ಅಥವಾ ಇತರ ಸೌಲಭ್ಯಗಳಾಗಿ ಎಷ್ಟು ಹಣವನ್ನು ನೀಡುತ್ತದೆ ಎಂಬುದನ್ನು ಬಹಿರಂಗ ಪಡಿಸಿಲ್ಲ.