ಕನ್ನಡ ಸುದ್ದಿ  /  Cricket  /  Bollywood Actress Katrina Kaif Watches Wpl Match In Delhi Supports Up Warriorz Poses To Photos With Fans Upw Vs Gg Jra

ಡಬ್ಲ್ಯುಪಿಎಲ್ ಪಂದ್ಯ ವೀಕ್ಷಿಸಿದ ಕತ್ರೀನಾ ಕೈಫ್; ಫ್ಯಾನ್ಸ್‌, ಯುಪಿ ವಾರಿಯರ್ಸ್ ತಂಡದೊಂದಿಗೆ ಫೋಟೋಗೆ ಪೋಸ್ ನೀಡಿದ ನಟಿ

ವಿಮೆನ್ಸ್ ಪ್ರೀಮಿಯರ್ ಲೀಗ್ ಪಂದ್ಯವನ್ನು ಬಾಲಿವುಡ್‌ ನಟಿ ಕತ್ರಿನಾ ಕೈಫ್ ವೀಕ್ಷಿಸಿದ್ದಾರೆ. ಅಭಿಮಾನಿಗಳೊಂದಿಗೆ ಫೋಟೋಗೆ ಪೋಸ್‌ ಕೊಟ್ಟಿದ್ದಾರೆ. ಗುಜರಾತ್‌ ಜೈಂಟ್ಸ್‌ ವಿರುದ್ಧದ ಪಂದ್ಯದಲ್ಲಿ ಯುಪಿ ವಾರಿಯರ್ಸ್‌ ತಂಡಕ್ಕೆ ಸಪೋರ್ಟ್‌ ಮಾಡಿದ ನಟಿ, ಮಂಗಳವಾರ ಮುಂಬೈಗೆ ಮರಳಿದ್ದಾರೆ.

ಡಬ್ಲ್ಯುಪಿಎಲ್ ಪಂದ್ಯ ವೀಕ್ಷಿಸಿ, ಯುಪಿ ವಾರಿಯರ್ಸ್ ತಂಡದೊಂದಿಗೆ ಫೋಟೋಗೆ ಪೋಸ್ ನೀಡಿದ ನಟಿ ಕತ್ರೀನಾ ಕೈಫ್
ಡಬ್ಲ್ಯುಪಿಎಲ್ ಪಂದ್ಯ ವೀಕ್ಷಿಸಿ, ಯುಪಿ ವಾರಿಯರ್ಸ್ ತಂಡದೊಂದಿಗೆ ಫೋಟೋಗೆ ಪೋಸ್ ನೀಡಿದ ನಟಿ ಕತ್ರೀನಾ ಕೈಫ್

ಡಬ್ಲ್ಯೂಪಿಎಲ್‌ ಕ್ರೇಜ್‌ ಬಾಲಿವುಡ್‌ ಸೆಲೆಬ್ರಿಟಿಗಳಿಗೂ ಮುಟ್ಟಿದೆ. ಹಿಂದಿ ನಟಿಮಣಿಯರು ವನಿತೆಯರ ಕ್ರಿಕೆಟ್‌ ವೀಕ್ಷಣೆಗೆ ಆಸಕ್ತಿ ತೋರುತ್ತಿದ್ದಾರೆ. ಖ್ಯಾತ ನಟಿ ಕತ್ರಿನಾ ಕೈಫ್ ಕೂಡಾ, ಮಾರ್ಚ್‌ 12ರ ಸೋಮವಾರ ದೆಹಲಿಯಲ್ಲಿ ನಡೆದ ಗುಜರಾತ್ ಜೈಂಟ್ಸ್ ಮತ್ತು ಯುಪಿ ವಾರಿಯರ್ಸ್ ನಡುವಿನ ವಿಮೆನ್ನ್‌ ಪ್ರೀಮಿಯರ್ ಲೀಗ್ ಪಂದ್ಯವನ್ನು ವೀಕ್ಷಿಸಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ನಟಿಯ ಹಲವಾರು ಫೋಟೋಗಳು ವೈರಲ್‌ ಆಗುತ್ತಿವೆ. ಕತ್ರೀನಾಗೆ ಅವರು ಸಹೋದರಿ ಇಸಾಬೆಲ್ಲೆ ಸಾಥ್ ನೀಡಿದ್ದಾರೆ. ಕತ್ರಿನಾ ಯುಪಿ ವಾರಿಯರ್ಸ್ ತಂಡಕ್ಕೆ ತಮ್ಮ ಬೆಂಬಲ ನೀಡಿದ್ದಾರೆ.

ವೈರಲ್‌ ವಿಡಿಯೋದಲ್ಲಿ ಕತ್ರಿನಾ ಸ್ಟೇಡಿಯಂ ಬಾಲ್ಕನಿಯಲ್ಲಿ ಕುಳಿತು ಅಭಿಮಾನಿಗಳತ್ತ ಮುಗುಳ್ನಕ್ಕಿದ್ದಾರೆ. ಅಭಿಮಾನಿಗಳತ್ತ ಕೈ ಬೀಸಿ ಅವರೊಂದಿಗೆ ಫೋಟೋ ಕ್ಲಿಕ್ಕಿಸಿದ್ದಾರೆ. ಇದೇ ವೇಳೆ ತಮ್ಮ ಅಭಿಮಾನಿಯೊಬ್ಬರಿಗೆ ಫೋನ್ ಹಸ್ತಾಂತರಿಸಿ ನಂತರ ಅವರತ್ತ ಕೈ ಬೀಸುತ್ತಿರುವುದು ವಿಡಿಯೋದಲ್ಲಿ ಕಾಣಬಹುದು.

ಪುಟ್ಟ ಬಾಲಕಿಯೊಂದಿಗೆ ಫೋಟೋಗೆ ಪೋಸ್

ಇದೇ ವೇಳೆ ಮೈದಾನದ ಹೊರಗೆ ಇಬ್ಬರು ಅವಳೊಂದಿಗೆ ಫೋಟೋಗೆ ಫೋಸ್‌ ನೀಡಿದ್ದಾರೆ. ಪುಟ್ಟ ಮಕ್ಕಳನ್ನು ತಮ್ಮ ಹತ್ತಿರಕ್ಕೆ ಕರೆಸಿಕೊಂಡು, ಕ್ಯಾಮರಾಗೆ ಪೋಸ್ ನೀಡಿದ್ದಾರೆ.

ಪಂದ್ಯ ವೀಕ್ಷಿಸಿದ ಮರುದಿನ, ಅಂದರೆ ಮಂಗಳವಾರ ಬೆಳಗ್ಗೆ ಕತ್ರಿನಾ ದೆಹಲಿಯಿಂದ ಮುಂಬೈಗೆ ಮರಳಿದ್ದಾರೆ. ಸನ್‌ಗ್ಲಾಸ್ ಧರಿಸಿದ್ದ ಕತ್ರಿನಾ, ಕ್ಯಾಮರಾ ಕಡೆ ಮುಗುಳ್ನಕ್ಕು ತಮ್ಮ ಕಾರಿನೊಳಗೆ ಹೋಗಿದ್ದಾರೆ.

ಕೊನೆಯ ಬಾರಿಗೆ ಕತ್ರಿನಾ ಮೇರಿ ಕ್ರಿಸ್‌ಮಸ್‌ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಶ್ರೀರಾಮ್ ರಾಘವನ್ ನಿರ್ದೇಶನದ ಈ ಚಿತ್ರದಲ್ಲಿ ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮೇರಿ ಕ್ರಿಸ್‌ಮಸ್ ರೊಮ್ಯಾನ್ಸ್, ಕ್ರೈಮ್ ಮತ್ತು ಸಸ್ಪೆನ್ಸ್ ಸಮ್ಮಿಲಿತವಾಗಿರುವ ಚಿತ್ರ.

ಕತ್ರೀನಾ ಬೆಂಬಲ ನೀಡಿದ ಯುಪಿ ವಾರಿಯರ್ಸ್ ತಂಡವು ತನ್ನ ಕೊನೆಯ ಲೀಗ್​ ಪಂದ್ಯದಲ್ಲಿ ಗೆಲುವಿನ ದಡ ಸೇರಲಿಲ್ಲ. ಪ್ಲೇಆಫ್​ ದೃಷ್ಟಿಯಿಂದ ಮಹತ್ವ ಪಡೆದಿದ್ದ ಪಂದ್ಯದಲ್ಲಿ ಯುಪಿ ವಿರುದ್ಧ ಗುಜರಾತ್ ಜೈಂಟ್ಸ್ 8 ರನ್​ಗಳಿಂದ ಗೆದ್ದು ಬೀಗಿತು. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 20 ಓವರ್​​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿತು. ಚೇಸಿಂಗ್‌ ವೇಳೆ ಬ್ಯಾಟಿಂಗ್‌ ಕುಸಿತ ಕಂಡ ಯುಪಿ, ದೀಪ್ತಿ ಶರ್ಮಾ ವೀರೋಚಿತ ಹೋರಾಟದ ಹೊರತಾಗಿಯೂ 8 ರನ್​ಗಳಿಂದ ಸೋಲು ಕಂಡಿತು.

IPL_Entry_Point