ಕೆಎಲ್ ರಾಹುಲ್ ಸೇರಿ ಭಾರತ ಟಿ20 ವಿಶ್ವಕಪ್ ತಂಡದ ಭಾಗವಾಗದ ಪ್ರಮುಖ ಐವರು ಆಟಗಾರರು - T20 World Cup 2024-cricket news from rinku singh to kl rahul 5 players to miss out from indias main squad for t20 world cup 2024 prs ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಕೆಎಲ್ ರಾಹುಲ್ ಸೇರಿ ಭಾರತ ಟಿ20 ವಿಶ್ವಕಪ್ ತಂಡದ ಭಾಗವಾಗದ ಪ್ರಮುಖ ಐವರು ಆಟಗಾರರು - T20 World Cup 2024

ಕೆಎಲ್ ರಾಹುಲ್ ಸೇರಿ ಭಾರತ ಟಿ20 ವಿಶ್ವಕಪ್ ತಂಡದ ಭಾಗವಾಗದ ಪ್ರಮುಖ ಐವರು ಆಟಗಾರರು - T20 World Cup 2024

T20 World Cup 2024 : 2024ರ ಟಿ20 ವಿಶ್ವಕಪ್ ಟೂರ್ನಿಗೆ ರೋಹಿತ್​ ಶರ್ಮಾ ನೇತೃತ್ವದಲ್ಲಿ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಆದರೆ ಮುಖ್ಯ ತಂಡದ ಭಾಗವಾಗದ ಪ್ರಮುಖ ಆಟಗಾರರ ಪಟ್ಟಿ ಇಲ್ಲಿದೆ.

ಕೆಎಲ್ ರಾಹುಲ್ ಸೇರಿ ಭಾರತ ಟಿ20 ವಿಶ್ವಕಪ್ ತಂಡದ ಭಾಗವಾಗದ ಪ್ರಮುಖ ಐವರು ಆಟಗಾರರು
ಕೆಎಲ್ ರಾಹುಲ್ ಸೇರಿ ಭಾರತ ಟಿ20 ವಿಶ್ವಕಪ್ ತಂಡದ ಭಾಗವಾಗದ ಪ್ರಮುಖ ಐವರು ಆಟಗಾರರು

ಮುಂಬರುವ ಟಿ20 ವಿಶ್ವಕಪ್ 2024 ಟೂರ್ನಿಗೆ (T20 World Cup 2024) ಭಾರತ ತಂಡವನ್ನು (Indian Cricket Team) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಕಟಿಸಿದೆ. ಅನುಭವಿ ರೋಹಿತ್ ಶರ್ಮಾ (Rohit Sharma) ತಂಡವನ್ನು ಮುನ್ನಡೆಸಲಿದ್ದು, ಹಾರ್ದಿಕ್ ಪಾಂಡ್ಯ (Hardik Pandya) ಉಪನಾಯಕನಾಗಿ ನೇಮಕಗೊಂಡಿದ್ದಾರೆ. ಆದರೆ ಕನ್ನಡಿಗ ಕೆಎಲ್ ರಾಹುಲ್ (KL Rahul) ಅವರು ಅವಕಾಶ ನೀಡದಿರುವುದು ಅಚ್ಚರಿ ಮೂಡಿಸಿದೆ. ಅಳೆದು ತೂಗಿ ತಂಡವನ್ನು ಆಯ್ಕೆ ಮಾಡಿದ ನಂತರ ಕೆಲ ಆಟಗಾರರಿಗೆ ಅವಕಾಶ ನೀಡದಿರುವ ಕುರಿತು ಚರ್ಚೆ ನಡೆಯುತ್ತಿದೆ.

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ತಂಡವನ್ನು ಹೆಸರಿಸುವ ಮೊದಲು ಅಹಮದಾಬಾದ್‌ನ ಹೋಟೆಲ್ ಐಟಿಸಿ ನರ್ಮದಾದಲ್ಲಿ ಆಯ್ಕೆ ಸಮಿತಿಯೊಂದಿಗೆ ಸಭೆ ನಡೆಸಿದರು. ಯುಜ್ವೇಂದ್ರ ಚಹಲ್ ತಂಡಕ್ಕೆ ಮರಳಿದ್ದರೆ, ರಿಂಕು ಸಿಂಗ್ ಮತ್ತು ಶುಭ್ಮನ್ ಗಿಲ್ ಮೀಸಲು ಆಟಗಾರನಾಗಿದ್ದಾರೆ. ವಿಶ್ವಕಪ್ 2024 ಟೂರ್ನಿಗೆ ಮುಖ್ಯ ತಂಡದ ಭಾಗವಾಗದ ಪ್ರಮುಖ ಆಟಗಾರರ ಆಟಗಾರರ ಪಟ್ಟಿ ಇಲ್ಲಿದೆ.

2024ರ ಟಿ20 ವಿಶ್ವಕಪ್​ಗೆ ಅವಕಾಶ 5 ಆಟಗಾರರು

1. ರಿಂಕು ಸಿಂಗ್: ಇಂಟರ್‌ನ್ಯಾಷನಲ್ ಸರ್ಕ್ಯೂಟ್‌ನಲ್ಲಿ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಗೊತ್ತುಪಡಿಸಿದ ಫಿನಿಶರ್ ಎಂಬ ಟ್ಯಾಗ್ ಗಳಿಸಿರುವ ರಿಂಕು ಸಿಂಗ್​, ಭವಿಷ್ಯದಲ್ಲಿ ಭಾರತಕ್ಕೆ ಪ್ರಮುಖ ಆಟಗಾರನಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ನಡೆಯುತ್ತಿರುವ ಐಪಿಎಲ್‌ನಲ್ಲಿ ಅದೇ ಅದ್ಭುತ ಪ್ರದರ್ಶಿಸಲು ಸಾಧ್ಯವಾಗದ ಕಾರಣ ಜಾಗತಿಕ ಟೂರ್ನಿಯ ಮುಖ್ಯ ತಂಡದ ಭಾಗವಾಗಿಲ್ಲ. ಆದರೆ ಮೀಸಲು ತಂಡದಲ್ಲಿದ್ದಾರೆ.

2. ಶುಭ್ಮನ್ ಗಿಲ್: ಐಪಿಎಲ್ 2023ರಲ್ಲಿ ಗುಜರಾತ್ ಟೈಟಾನ್ಸ್‌ ಪರ ಗಿಲ್ ಅವರು 3 ಶತಕ, 4 ಅರ್ಧ ಶತಕ ಸಹಿತ 890 ರನ್‌ ಗಳಿಸಿದ್ದರು. ಆದರೆ 2024ರ ಸೀಸನ್‌ಗೆ ಜಿಟಿ ನಾಯಕನಾಗಿ ನೇಮಕಗೊಂಡ ನಂತರ, ಅಂತಹದ್ದೇ ಪ್ರದರ್ಶನ ತೋರುತ್ತಿಲ್ಲ. 10 ಪಂದ್ಯಗಳಲ್ಲಿ ಕೇವಲ 320 ರನ್ ಗಳಿಸಿದ್ದಾರೆ. ಟಿ20 ವಿಶ್ವಕಪ್​ಗೆ ಗಿಲ್ ಬ್ಯಾಕಪ್ ಓಪನರ್ ಆಗಬೇಕಿತ್ತು. ಆದರೆ ಟಿ20ಐನಲ್ಲಿ ನಿರೀಕ್ಷಿತ ಪ್ರದರ್ಶನ ತೊರದ ಕಾರಣ ಅವರನ್ನು ಕೈಬಿಟ್ಟಿದ್ದಾರೆ. ಆದರೆ ಮೀಸಲು ಆಟಗಾರನಾಗಿ ಅವಕಾಶ ಪಡೆದಿದ್ದಾರೆ.

3. ಕೆಎಲ್ ರಾಹುಲ್: 2022ರ ಟಿ20 ವಿಶ್ವಕಪ್​ ಸೆಮಿಫೈನಲ್​ನಲ್ಲಿ ಭಾರತದ ಪರ ಕೊನೆಯ ಟಿ20ಐ ಆಡಿರುವ ಕೆಎಲ್ ರಾಹುಲ್ ಇದೀಗ ಟಿ20 ವಿಶ್ವಕಪ್​ಗೆ ಅವಕಾಶ ಪಡೆಯುವಲ್ಲಿ ವಿಫಲರಾಗಿದ್ದಾರೆ. ಐಪಿಎಲ್ 2024ರ ಕೊನೆಯ ಕೆಲವು ಪಂದ್ಯಗಳಲ್ಲಿ ಉತ್ತಮ ರನ್ ರೇಟ್‌ನಲ್ಲಿ ರನ್ ಗಳಿಸಿದ್ದರೂ, ಕೆಎಲ್ ರಾಹುಲ್ ಮುಖ್ಯ ತಂಡ ಅಥವಾ ಮೀಸಲು ಭಾಗವಾಗದೇ ಇರುವುದು ಅಚ್ಚರಿ ಮೂಡಿಸಿದೆ.

4. ರವಿ ಬಿಷ್ಣೋಯ್: ಲಕ್ನೋ ಸೂಪರ್ ಜೈಂಟ್ಸ್ ಸ್ಪಿನ್ನರ್ ರವಿ ಬಿಷ್ಣೋಯ್ ಅವರು ಟೂರ್ನಿಯ ನಡೆಯುತ್ತಿರುವ ಐಪಿಎಲ್​ನಲ್ಲಿ ಕಳಪೆ ಪ್ರದರ್ಶನ ತೋರಿದ್ದಾರೆ. ಏತನ್ಮಧ್ಯೆ, ಐಪಿಎಲ್​ನಲ್ಲಿ 200 ವಿಕೆಟ್ ಪಡೆದ ಯುಜ್ವೇಂದ್ರ ಚಹಾಲ್, ಈ ವರ್ಷವೂ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಟಿ20ಐಗಳಲ್ಲಿ ಒಂದು ವರ್ಷದಿಂದಲೂ ಬಿಷ್ಣೋಯ್ ಮೇಲೆ ಗಮನ ಹರಿಸಿದರೂ ಆಯ್ಕೆ ಸಮಿತಿಯು ಆತನಿಗೆ ಅವಕಾಶ ನೀಡಿಲ್ಲ. ಸದ್ಯ ಬಿಷ್ಣೋಯ್ ಟಿ20 ಬೌಲಿಂಗ್ ರ್ಯಾಂಕಿಂಗ್​ನಲ್ಲಿ 6ನೇ ಸ್ಥಾನದಲ್ಲಿದ್ದಾರೆ.

5. ಇಶಾನ್ ಕಿಶನ್: ಮುಂಬೈ ಇಂಡಿಯನ್ಸ್‌ ತಂಡದಲ್ಲಿ ರೋಹಿತ್ ಶರ್ಮಾ ಅವರ ಆರಂಭಿಕ ಪಾಲುದಾರ ಇಶಾನ್ ಕಿಶನ್ ಅವರು ಆಯ್ಕೆ ಆಗದಿರುವುದು ನಿರೀಕ್ಷಿತ. ಐಪಿಎಲ್​ನಲ್ಲಿ 165 ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್‌ನಲ್ಲಿ 212 ರನ್ ಗಳಿಸಿರುವ ಕಿಶನ್, ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಗೂ ಮುನ್ನ ರಾಷ್ಟ್ರೀಯ ತಂಡದಿಂದ ವಿರಾಮ ಪಡೆದರು. ಆದರೆ ಅಂದಿನಿಂದ ಭಾರತ ತಂಡದ ಭಾಗವಾಗಿಲ್ಲ. ಇಶಾನ್​ಗೆ ಅವಕಾಶ ನೀಡುವುದಿಲ್ಲ ಎಂಬುದು ಮೊದಲೇ ನಿರ್ಧಾರವಾಗಿತ್ತು.

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ