ಕನ್ನಡ ಸುದ್ದಿ  /  ಕ್ರಿಕೆಟ್  /  ವೇಷ ಧರಿಸಿ 5 ವರ್ಷ ಡೇಟಿಂಗ್ ನಡೆಸಿದ್ದ ಸಚಿನ್; ಪತ್ರಕರ್ತೆ ಎಂದು ಪರಿಚಯಿಸಿ ಡಾಕ್ಟರ್​ನನ್ನು ಮದುವೆಯಾದ ಕ್ರಿಕೆಟಿಗ!

ವೇಷ ಧರಿಸಿ 5 ವರ್ಷ ಡೇಟಿಂಗ್ ನಡೆಸಿದ್ದ ಸಚಿನ್; ಪತ್ರಕರ್ತೆ ಎಂದು ಪರಿಚಯಿಸಿ ಡಾಕ್ಟರ್​ನನ್ನು ಮದುವೆಯಾದ ಕ್ರಿಕೆಟಿಗ!

Sachin Tendulkar : ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಪರಾಕ್ರಮ ಜಗತ್ತಿಗೆ ಗೊತ್ತಿದ್ದರೂ ಅವರ ವೈಯಕ್ತಿಕ ಜೀವನ, ವಿಶೇಷವಾಗಿ ಅಂಜಲಿ ತೆಂಡೂಲ್ಕರ್​ ಅವರೊಂದಿಗಿನ ಪ್ರೇಮಕಥೆಯು ಒಂದು ಶ್ರೇಷ್ಠ ಪ್ರಣಯ ಕಾದಂಬರಿಯಂತೆ ತೆರೆದುಕೊಳ್ಳುವ ನಿರೂಪಣೆಯಾಗಿದೆ.

ವೇಷ ಧರಿಸಿ ಅಂಜಲಿ ಜೊತೆ 5 ವರ್ಷ ಡೇಟಿಂಗ್ ನಡೆಸಿದ್ದ ಸಚಿನ್
ವೇಷ ಧರಿಸಿ ಅಂಜಲಿ ಜೊತೆ 5 ವರ್ಷ ಡೇಟಿಂಗ್ ನಡೆಸಿದ್ದ ಸಚಿನ್

ಕ್ರಿಕೆಟ್ ಮಾಂತ್ರಿಕ ಮತ್ತು 'ಕ್ರಿಕೆಟ್ ದೇವರು' ಸಚಿನ್ ತೆಂಡೂಲ್ಕರ್ (Sachin Tendulkar) ಅವರು ಮೈದಾನದಲ್ಲಿ ಕೇವಲ ದಾಖಲೆಗಳನ್ನು ಮಾತ್ರವಲ್ಲದೆ ಅಂಜಲಿ ತೆಂಡೂಲ್ಕರ್ (Anjali Tendulkar) ಅವರೊಂದಿಗೆ ಮೋಡಿ ಮಾಡುವ ಪ್ರೇಮಕಥೆ ಹೊಂದಿದ್ದಾರೆ. ಸಚಿನ್ ಕ್ರಿಕೆಟ್ ಪರಾಕ್ರಮ ಜಗತ್ತಿಗೆ ಗೊತ್ತಿದ್ದರೂ ಅವರ ವೈಯಕ್ತಿಕ ಜೀವನ, ವಿಶೇಷವಾಗಿ ಅಂಜಲಿಯೊಂದಿಗಿನ ಅವರ ಪ್ರೇಮಕಥೆಯು ಒಂದು ಶ್ರೇಷ್ಠ ಪ್ರಣಯ ಕಾದಂಬರಿಯಂತೆ ತೆರೆದುಕೊಳ್ಳುವ ಸಂತೋಷಕರ ನಿರೂಪಣೆಯಾಗಿದೆ.

ಟ್ರೆಂಡಿಂಗ್​ ಸುದ್ದಿ

ಸಚಿನ್-ಅಂಜಲಿ ಮೊದಲ ಭೇಟಿ

ನವೆಂಬರ್ 10, 1967 ರಂದು ಜನಿಸಿದ ಅಂಜಲಿ ಅವರು ಲೆಜೆಂಡರಿ ಕ್ರಿಕೆಟಿಗ ಸಚಿನ್ ಅವರ ಪತ್ನಿ. ಸೆಲೆಬ್ರಿಟಿ ಕ್ರಿಕೆಟಿಗನ ಪತ್ನಿ ಆಗಿರುವುದರ ಹೊರತಾಗಿ ಅಂಜಲಿ ಭಾರತೀಯ ಶಿಶುವೈದ್ಯೆ, ಲೋಕೋಪಕಾರಿ. ಅಲ್ಲದೆ, ಸಾರಾ ಹಾಗೂ ಅರ್ಜುನ್ ತೆಂಡೂಲ್ಕರ್ ಎಂಬ ಇಬ್ಬರು ಮಕ್ಕಳ ತಾಯಿ. ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಚಿನ್ ಮತ್ತು ಅಂಜಲಿಗೆ ಮೊದಲ ಬಾರಿಗೆ ಭೇಟಿಯಾಗಿದ್ದರು. 1990ರಲ್ಲಿ ಸಚಿನ್ ತನ್ನ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರವಾಸ ಮುಗಿಸಿ ವಾಪಸ್ ಬರುತ್ತಿದ್ದ ಅವಧಿಯಲ್ಲಿ ಅಂತಾರಾಷ್ಟ್ರೀಯ ಪ್ರವಾಸ ಕೈಗೊಂಡಿದ್ದ ತನ್ನ ತಾಯಿಯನ್ನು ಬರಮಾಡಿಕೊಳ್ಳಲು ಅಂಜಲಿ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದರು.

ಆದರೆ, ಈ ವೇಳೆ ಸಚಿನ್-ಅಂಜಲಿ ಆಕಸ್ಮಿಕವಾಗಿ ಭೇಟಿಯಾಗಿದ್ದರು. ಆಗಿನ್ನೂ ಸಚಿನ್​ಗೆ 18 ವರ್ಷ ಆಗಿತ್ತು. ಅಂಜಲಿಗೆ 24 ವರ್ಷವಾಗಿತ್ತು. ಆದರೆ ಆಗ ಸಚಿನ್ ಯಾರೆಂದು ಅಂಜಲಿಗೆ ಗೊತ್ತಿರಲಿಲ್ಲವಂತೆ. ಹೀಗಂತ ಅವರೇ ಸ್ಪಷ್ಟಪಡಿಸಿದ್ದಾರೆ. ಇಬ್ಬರೂ ಪರಸ್ಪರ ಚೆನ್ನಾಗಿ ಪರಿಚಯ ಮಾಡಿಕೊಂಡರು. ನಂತರ ಉತ್ತಮ ಸ್ನೇಹಿತರಾದರು. ಸ್ಟಾರ್ ದಂಪತಿಯ ಸ್ನೇಹ ಪ್ರೀತಿಗೆ ತಿರುಗಿತು.

5 ವರ್ಷಗಳ ಕಾಲ ಡೇಟಿಂಗ್, ಕದ್ದುಮುಚ್ಚಿ ಓಡಾಟ

ಆಗ ಅಂಜಲಿ ವೈದ್ಯಕೀಯ ಅಧ್ಯಯನ ನಡೆಸುತ್ತಿದ್ದರು. ಸಚಿನ್ ಆಗಷ್ಟೇ ಕ್ರಿಕೆಟ್ ವೃತ್ತಿಜೀವನ ಪ್ರಾರಂಭಿಸಿದ್ದರು. ಆದರೆ ಅಂಜಲಿಗೆ ಕ್ರಿಕೆಟ್​ ಮೇಲೆ ಆಸಕ್ತಿ ಕಡಿಮೆ ಇತ್ತು. ಕ್ರೀಡೆ ಮತ್ತು ವಿಶೇಷವಾಗಿ ಕ್ರಿಕೆಟ್ ಬಗ್ಗೆ ಆಕೆಗೆ ಜ್ಞಾನ ಇರಲಿಲ್ಲ. ಡೇಟಿಂಗ್ ಪ್ರಾರಂಭಿಸಿದ ವೇಳೆ ಅಂಜಲಿ ಕ್ರಿಕೆಟ್ ಬಗ್ಗೆ ತನ್ನ ಜ್ಞಾನ ಹೆಚ್ಚಿಸಲು ಸಾಕಷ್ಟು ಪ್ರಯತ್ನ ನಡೆಸಿದ್ದರು. ಕ್ರಿಕೆಟ್‌ಗೆ ಸಂಬಂಧಿಸಿದ ಜ್ಞಾನದ ಕೊರತೆಯು ಸಚಿನ್ ಅವರನ್ನು ಪ್ರೀತಿಸುವಂತೆ ಮಾಡಿತು ಎಂದು ಅಂಜಲಿ ಈ ಹಿಂದೆ ಹೇಳಿದ್ದರು.

ಈ ಜೋಡಿ 5 ವರ್ಷಗಳ ಕಾಲ ಡೇಟಿಂಗ್ ನಡೆಸಿದ್ದರು. ಪ್ರಸಿದ್ಧ ವ್ಯಕ್ತಿಯಾಗಿದ್ದ ಕಾರಣ ನಿರಂತರ ಡೇಟ್​ ನಡೆಸಿದ್ದರೂ ಕದ್ದುಮುಚ್ಚಿ ಓಡಾಡುವಂತಾಗಿತ್ತು. ಜನರು ತನ್ನನ್ನು ಗುರುತಿಸಿದರೆ ಆನಂದದ ಕ್ಷಣಗಳನ್ನು ಕಳೆಯಲು ಕಷ್ಟವಾಗುತ್ತದೆಂದು ವೇಷಧರಿಸಿ ಸಚಿನ್, ಅಂಜಲಿಯೊಂದಿಗೆ ಡೇಟಿಂಗ್ ನಡೆಸಿದ್ದರು. ವೇಷ ಧರಿಸಿ, ಗಡ್ಡ ಮತ್ತು ಸ್ಪೆಕ್ಸ್ ಹಾಕಿಕೊಂಡು ಸಿನಿಮಾ ನೋಡಲು ಹೋಗಿದ್ದೂ ಇದೆ.

ಪತ್ರಕರ್ತೆ ಎಂದು ಪರಿಚಯಿಸಿದ್ದ ಸಚಿನ್

ಸಚಿನ್​ ಅವರು ತಮ್ಮ ಮನೆಯಲ್ಲಿ ಅಂಜಲಿ ಅವರನ್ನು ಪತ್ರಕರ್ತೆ ಎಂದು ಪರಿಚಯ ಮಾಡಿಸಿದ್ದರು. ತನ್ನನ್ನು ಸಂದರ್ಶಿಸಲು ಬಂದಿರುವುದಾಗಿ ಹೇಳಿದ್ದರು. ಪ್ರಸಿದ್ಧ ಕೈಗಾರಿಕೋದ್ಯಮಿ ಅಶೋಕ್ ಮೆಹ್ತಾ ಅವರ ಪುತ್ರಿ ಅಂಜಲಿ 5 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ ಮೇ 24, 1995 ರಂದು ಸಚಿನ್ ಅವರನ್ನು ವಿವಾಹವಾದರು. ನ್ಯೂಜಿಲೆಂಡ್‌ನಲ್ಲಿ ನಿಶ್ಚಿತಾರ್ಥ ನಡೆದಿತ್ತು.

ತನಗಿಂತ 6 ವರ್ಷ ಚಿಕ್ಕವಳು ಅಂಜಲಿ

ಅಂಜಲಿ ಅವರು ಸಚಿನ್ ಅವರಿಗಿಂತ 6 ವರ್ಷ ಹಿರಿಯರು. ಅಂಜಲಿ ಅವರು ಅಕ್ಟೋಬರ್ 12, 1997ರಂದು ಸಾರಾ ಮತ್ತು ಸೆಪ್ಟೆಂಬರ್ 24, 1999ರಂದು ಅರ್ಜುನ್ ತೆಂಡೂಲ್ಕರ್​​ಗೆ ಜನ್ಮ ನೀಡಿದರು. ತನ್ನ ಪತಿಯೊಂದಿಗೆ ಸಂತೋಷದ ವೈವಾಹಿಕ ಜೀವನ ನಡೆಸಲು ಮತ್ತು ಮಕ್ಕಳೊಂದಿಗೆ ಕಾಲ ಕಳೆಯಲು ವೈದ್ಯಕೀಯ ವೃತ್ತಿಜೀವನ ತೊರೆದರು ಅಂಜಲಿ. ತನ್ನ ಪತಿ ಮತ್ತು ಮಕ್ಕಳನ್ನು ನೋಡಿಕೊಳ್ಳುವುದು ತನಗೆ ಹೆಚ್ಚಿನ ಸಂತೋಷವನ್ನು ನೀಡುತ್ತದೆ. ತಮ್ಮ ವೃತ್ತಿಯನ್ನು ತೊರೆಯುವ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಅಂಜಲಿ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು.

IPL_Entry_Point