IPL 2024 Latest Updates: ಮಾರ್ಚ್‌ 24ರ ಐಪಿಎಲ್‌ ಪಂದ್ಯಗಳ ಲೇಟೆಸ್ಟ್ ಅಪ್ಡೇಟ್; ಟಾಸ್‌, ಫಲಿತಾಂಶ ಸೇರಿ ಸಂಪೂರ್ಣ ವಿವರ
ಕನ್ನಡ ಸುದ್ದಿ  /  ಕ್ರಿಕೆಟ್  /  Ipl 2024 Latest Updates: ಮಾರ್ಚ್‌ 24ರ ಐಪಿಎಲ್‌ ಪಂದ್ಯಗಳ ಲೇಟೆಸ್ಟ್ ಅಪ್ಡೇಟ್; ಟಾಸ್‌, ಫಲಿತಾಂಶ ಸೇರಿ ಸಂಪೂರ್ಣ ವಿವರ

IPL 2024 Latest Updates: ಮಾರ್ಚ್‌ 24ರ ಐಪಿಎಲ್‌ ಪಂದ್ಯಗಳ ಲೇಟೆಸ್ಟ್ ಅಪ್ಡೇಟ್; ಟಾಸ್‌, ಫಲಿತಾಂಶ ಸೇರಿ ಸಂಪೂರ್ಣ ವಿವರ

Indian Premier League 2024 Updates: ಐಪಿಎಲ್‌ 2024ರ ಆವೃತ್ತಿಯ ಮೂರನೇ ದಿನವಾದ ಇಂದು (ಮಾರ್ಚ್‌ 24, ಭಾನುವಾರ) 2 ಪಂದ್ಯಗಳು ನಡೆಯುತ್ತಿವೆ. ಮೊದಲ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಎರಡನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ಎದುರಾಗುತ್ತಿವೆ.

ಮಾರ್ಚ್‌ 24ರ ಐಪಿಎಲ್‌ ಪಂದ್ಯಗಳ ಲೇಟೆಸ್ಟ್ ಅಪ್ಡೇಟ್
ಮಾರ್ಚ್‌ 24ರ ಐಪಿಎಲ್‌ ಪಂದ್ಯಗಳ ಲೇಟೆಸ್ಟ್ ಅಪ್ಡೇಟ್

IPL 2024 Latest Updates in Kannada: ಇಂಡಿಯನ್‌ ಪ್ರೀಮಿಯರ್‌ ಲೀಗ್‌ 17ನೇ ಆವೃತ್ತಿಗೆ ಅದ್ಧೂರಿ ಚಾಲನೆ ಸಿಕ್ಕಿದ್ದು, ಮಾರ್ಚ್‌ 24ರ ಭಾನುವಾರ ಅಭಿಮಾನಿಗಳಿಗೆ ಡಬಲ್‌ ಧಮಾಕಾ. ವಾರದ ರಜೆಯ ಭಾನುವಾರ ಎರಡೆರಡು ಪಂದ್ಯಗಳು ನಡೆಯುತ್ತಿವೆ. ಮೊದಲ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಜೈಪುರದಲ್ಲಿ ಮುಖಾಮುಖಿಯಾಗುತ್ತಿವೆ. ಅಹಮದಾಬಾದ್‌ನಲ್ಲಿ ನಡೆಯಲಿರುವ ಎರಡನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಹಣಾಹಣಿ ನಡೆಸುತ್ತಿವೆ. ಈ ದಿನದ ಐಪಿಎಲ್‌ ಪಂದ್ಯಗಳ ಸಂಪೂರ್ಣ ಅಪ್ಡೇಟ್‌ ಇಲ್ಲಿದೆ.

ಲಕ್ನೋ ಬಗ್ಗುಬಡಿದು ಗೆಲುವಿನ ಅಭಿಯಾನ ಆರಂಭಿಸಿದ ರಾಜಸ್ಥಾನ ರಾಯಲ್ಸ್

ಐಪಿಎಲ್‌ 2024ರ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಗೆಲುವಿನ ಅಭಿಯಾನ ಆರಂಭಿಸಿದೆ. ತವರು ಮೈದಾನಲ್ಲಿ ನಡೆದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ ಪಡೆಯು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 20 ರನ್‌ಗಳ ಗೆಲುವು ಸಾಧಿಸಿದೆ. ಕೊನೆಯವರೆಗೂ ರೋಚಕ ಹಾಗೂ ತೀವ್ರ ಪೈಪೋಟಿಯೊಂದಿಗೆ ಸಾಗಿದ ಪಂದ್ಯದಲ್ಲಿ ಕೆಎಲ್‌ ರಾಹುಲ್‌ ಬಳಗವು ವೀರೋಚಿತ ಸೋಲು ಕಂಡಿತು. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಗುಜರಾತ್ ವಿರುದ್ಧ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಫೀಲ್ಡಿಂಗ್‌

ಅಹ್ಮದಾಬಾದ್​ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯುತ್ತಿರುವ ಐಪಿಎಲ್​ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಪರಸ್ಪರ ಮುಖಾಮುಖಿಯಾಗಿವೆ. ಪಂದ್ಯದಲ್ಲಿ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಲಕ್ನೋ ವಿರುದ್ಧ ಟಾಸ್‌ ಗೆದ್ದ ರಾಜಸ್ಥಾನ ರಾಯಲ್ಸ್‌ ಬ್ಯಾಟಿಂಗ್‌; ಹೀಗಿದೆ ಆಡುವ ಬಳಗ

ರಾಜಸ್ಥಾನ್ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಐಪಿಎಲ್‌ 2024ರ ಪಂದ್ಯಾವಳಿಯಲ್ಲಿ ಮಾರ್ಚ್‌ 24ರ ಭಾನುವಾರ ಅಭಿಯಾನ ಆರಂಭಿಸುತ್ತಿವೆ. ಜೈಪುರದ ಸವಾಯಿ ಮಾನ್‌ಸಿಂಗ್‌ ಸ್ಟೇಡಿಯಂನಲ್ಲಿ ಪ್ರಸಕ್ತ ಆವೃತ್ತಿಯ ನಾಲ್ಕನೇ ಪಂದ್ಯ ನಡೆಯುತ್ತಿದ್ದು, ಪಂದ್ಯದಲ್ಲಿ ಟಾಸ್‌ ಗೆದ್ದ ಆತಿಥೇಯ ರಾಜಸ್ಥಾನ ತಂಡವು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದೆ. ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಮುಂಬೈ-ಗುಜರಾತ್ ಪಂದ್ಯದ ಪಿಚ್ ಮತ್ತು ಹವಾಮಾನ ವರದಿ

ಐಪಿಎಲ್​ನ ಪ್ರಸಕ್ತ ಆವೃತ್ತಿಯ ಐದನೇ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ - ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ವಿಶ್ವದ ಅತಿದೊಡ್ಡ ಮೈದಾನವಾದ ನರೇಂದ್ರ ಮೋದಿ ಕ್ರೀಡಾಂಗಣವು ಈ ಮದಗಜಗಳ ಕಾದಾಟಕ್ಕೆ ಸಾಕ್ಷಿಯಾಗಲಿದೆ. ನೂತನ ನಾಯಕರೊಂದಿಗೆ ಉಭಯ ತಂಡಗಳು ಯಾವ ರೀತಿಯ ಪ್ರದರ್ಶನ ನೀಡಲಿವೆ ಎಂಬುದು ಕುತೂಹಲ ಮೂಡಿಸಿದೆ. ಸಂಪೂರ್ಣ ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ರಾಜಸ್ಥಾನ vs ಲಕ್ನೋ; ಪಿಚ್‌ ಹಾಗೂ ಹವಾಮಾನ ವರದಿ

ರಾಜಸ್ಥಾನ ತಂಡದ ತವರು ಮೈದಾನ ಜೈಪುರದ ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ಈ ತಂಡಗಳು ಮುಖಾಮುಖಿಯಾಗುತ್ತಿವೆ. ಹರಾಜಿನ ನಂತರ ಉಭಯ ತಂಡಗಳು ಮತ್ತಷ್ಟು ಬಲಿಷ್ಠವಾಗಿದ್ದು, ಟೂರ್ನಿಯಲ್ಲಿ ಮೊದಲ ಗೆಲುವಿಗೆ ಹವಣಿಸುತ್ತಿವೆ. ಪ್ರಸಕ್ತ ಆವೃತ್ತಿಯ ನಾಲ್ಕನೇ ಪಂದ್ಯ ಇದಾಗಿದ್ದು, ಭಾನುವಾರದ ಡಬಲ್‌ ಹೆಡರ್‌ ಪಂದ್ಯಗಳಲ್ಲಿ ಮೊದಲ ಪಂದ್ಯವು ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದೆ. ಪಿಚ್‌ ಹಾಗೂ ಹವಾಮಾನ ವರದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Whats_app_banner