ಕನ್ನಡ ಸುದ್ದಿ  /  ಕ್ರಿಕೆಟ್  /  ಡೆಲ್ಲಿ ಕ್ಯಾಪಿಟಲ್ಸ್, ಭಾರತ ಕುರಿತು ಮನದಾಳ ಹಂಚಿಕೊಂಡ ಡೇವಿಡ್‌ ವಾರ್ನರ್‌;‌ ಐಪಿಎಲ್ ಆಡುವ ಕುರಿತು ಹೇಳಿಕೊಂಡ ಆಸೀಸ್‌ ಆಟಗಾರ

ಡೆಲ್ಲಿ ಕ್ಯಾಪಿಟಲ್ಸ್, ಭಾರತ ಕುರಿತು ಮನದಾಳ ಹಂಚಿಕೊಂಡ ಡೇವಿಡ್‌ ವಾರ್ನರ್‌;‌ ಐಪಿಎಲ್ ಆಡುವ ಕುರಿತು ಹೇಳಿಕೊಂಡ ಆಸೀಸ್‌ ಆಟಗಾರ

David Warner: ಡೆಲ್ಲಿ ಕ್ಯಾಪಿಟಲ್ಸ್ ಜೊತೆಗೆ ಮಾತನಾಡಿದ ಡೇವಿಡ್ ವಾರ್ನರ್, ಭಾರತ ಮತ್ತು ಐಪಿಎಲ್‌ ಕುರಿತು ತಮ್ಮ ಮನದಾಳ ಬಿಚ್ಚಿಟ್ಟರು. ಆಸ್ಟ್ರೇಲಿಯಾ ಪರ ತಮ್ಮ ಕೊನೆಯ ವಿಶ್ವಕಪ್ ಆಡುತ್ತಿರುವ ಕುರಿತು ಸುದೀರ್ಘವಾಗಿ ಮಾತನಾಡಿದರು.

ಡೆಲ್ಲಿ ಕ್ಯಾಪಿಟಲ್ಸ್, ಭಾರತ ಕುರಿತು ಮನದಾಳ ಹಂಚಿಕೊಂಡ ಡೇವಿಡ್‌ ವಾರ್ನರ್‌
ಡೆಲ್ಲಿ ಕ್ಯಾಪಿಟಲ್ಸ್, ಭಾರತ ಕುರಿತು ಮನದಾಳ ಹಂಚಿಕೊಂಡ ಡೇವಿಡ್‌ ವಾರ್ನರ್‌

ಆಸ್ಟ್ರೇಲಿಯಾದ ಸ್ಫೋಟಕ ಆರಂಭಿಕ ಆಟಗಾರ ಡೇವಿಡ್ ವಾರ್ನರ್, ತಮ್ಮ ಐಪಿಎಲ್‌ ಅನುಭವ ಹಾಗೂ ಭಾರತದ ಬಗೆಗಿನ ವಿಶೇಷ ಅಕ್ಕರೆಯ ಕುರಿತು ಮಾತನಾಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಜೊತೆಗಿನ ಪಾಡ್‌ಕಾಸ್ಟ್‌ನ ಇತ್ತೀಚಿನ ಸಂಚಿಕೆಯಲ್ಲಿ ಮಾತನಾಡಿದ ಅವರು, ಭಾರತದ ಬಗ್ಗೆ ತಮ್ಮ ಹೃದಯದಿಂದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ. ಸದ್ಯ ಯುಎಸ್‌ಎ ಹಾಗೂ ವೆಸ್ಟ್‌ ಇಂಡೀಸ್‌ನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಆಡುತ್ತಿರುವ ಅವರು, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದರೂ ಐಪಿಎಲ್‌ನಲ್ಲಿ ಆಡುವುದನ್ನು ಮುಂದುವರೆಸುವುದಾಗಿ ಘೋಷಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಐಪಿಎಲ್‌ನಲ್ಲಿ ಸುದೀರ್ಘ ವರ್ಷಗಳಿಂದ ಆಡುತ್ತಿರುವ ಅನುಭವಿ ಆಟಗಾರ, ಡೆಲ್ಲಿ ಫ್ರಾಂಚೈಸಿಯೊಂದಿಗಿನ ತಮ್ಮ ಆಟ, ಭಾರತದ ಮೇಲಿನ ಪ್ರೀತಿ, ಆಸ್ಟ್ರೇಲಿಯಾ ಪರ ತಮ್ಮ ಕೊನೆಯ ವಿಶ್ವಕಪ್ ಸೇರಿದಂತೆ ಹಲವು ವಿಷಯಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.

“ನನಗೆ ಸಾಧ್ಯವಾದಷ್ಟು ಐಪಿಎಲ್ ಮತ್ತು ಫ್ರ್ಯಾಂಚೈಸ್ ಕ್ರಿಕೆಟ್ ಆಡುವುದನ್ನು ಮುಂದುವರೆಸುವ ಸಮಯ ಇದು. ಒಂದು ದಶಕಕ್ಕೂ ಹೆಚ್ಚು ಕಾಲ ಆಡುವುದು ಮತ್ತು ತಂಡದಲ್ಲಿ ಸ್ಥಾನವನ್ನು ಉಳಿಸಿಕೊಳ್ಳುವುದು ತುಂಬಾ ಕಷ್ಟ. ಉತ್ತಮ ಸಾಮರ್ಥ್ಯ ಹೊಂದಿರುವ ಯುವ ಆಟಗಾರರನ್ನು ನಾವು ತಂಡಕ್ಕೆ ಕರೆತರಲು ಸಾಧ್ಯವಾದರೆ, ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಭವಿಷ್ಯದಲ್ಲಿ ಉತ್ತಮ ಸ್ಥಾನದಲ್ಲಿರುತ್ತದೆ ಎಂದು ನಾನು ಭಾವಿಸುತ್ತೇನೆ,” ಎಂದು ವಾರ್ನರ್ ಆಸ್ಟ್ರೇಲಿಯಾ ಪರ ತಮ್ಮ ಕೊನೆಯ ವಿಶ್ವಕಪ್ ಆಡುತ್ತಿರುವ ಕುರಿತು ಮಾತನಾಡಿದರು.

ಡೆಲ್ಲಿ ಕ್ಯಾಪಿಟಲ್ಸ್‌ಗೆ ಎಂದಿಗೂ ಕೃತಜ್ಞ

ಡೆಲ್ಲಿ ಕ್ಯಾಪಿಟಲ್ಸ್‌ ಪರ ಆಡುತ್ತಿರುವ ಕುರಿತು ಮಾತನಾಡಿದ ವಾರ್ನರ್, “ಡೆಲ್ಲಿ ನನ್ನ ಜೀವನದ ಪ್ರಮುಖ ಭಾಗವಾಗಿದೆ. ವೃತ್ತಿಜೀವನದ ಆರಂಭದಲ್ಲಿ ಫ್ರಾಂಚೈಸಿ ನನಗೆ ಅವಕಾಶ ನೀಡಿತು. ಈಗ ನನ್ನ ವೃತ್ತಿಜೀವನದ ಕೊನೆಯ ಹಂತದಲ್ಲೂ ನಾನು ಇದೇ ತಂಡದಲ್ಲಿದ್ದೇನೆ. ಹೀಗಾಗಿ ನಾನು ಎಂದೆಂದಿಗೂ ಫ್ರಾಂಚೈಸಿಗೆ ಕೃತಜ್ಞನಾಗಿದ್ದೇನೆ,” ಎಂದು ಹೇಳಿದರು.

“ನಾನು ಮೊದಲು ದೆಹಲಿಗೆ ಬಂದಾಗ; ಎಬಿ ಡಿವಿಲಿಯರ್ಸ್, ಗ್ಲೆನ್ ಮೆಕ್‌ಗ್ರಾತ್, ಪಾಲ್ ಕಾಲಿಂಗ್ವುಡ್, ಡೇನಿಯಲ್ ವೆಟ್ಟೋರಿ ಮತ್ತು ಆಂಡ್ರ್ಯೂ ಮೆಕ್ಡೊನಾಲ್ಡ್ ಅವರಂಥ ಆಟಗಾರರು ಇದ್ದರು. ಅವರು ಹಲವು ವಿಚಾರಗಳನ್ನು ಹಂಚಿಕೊಂಡರು. ವೃತ್ತಿಜೀವನವನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಹೇಳಿದರು” ಎಂದರು.

ಭಾರತದ ಕುರಿತು ಕೇಳಿದ ಪ್ರಶ್ನೆಗೆ ಮಾತನಾಡಿದ ಆಸ್ಟ್ರೇಲಿಯಾದ ಬ್ಯಾಟ್ಸ್ಮನ್, ತಾನು ಭಾರತವನ್ನು ಅತಿಯಾಗಿ ಪ್ರೀತಿಸುವುದಾಗಿ ಹೇಳಿದ್ದಾರೆ.

“ನಾನು ಐಪಿಎಲ್‌ ಆಡುವ ಸಲುವಾಗಿ ಮೊದಲ ಬಾರಿ ಭಾರತಕ್ಕೆ ಬಂದಾಗಲೇ, ನಾನು ಭಾರತವನ್ನು ಇಷ್ಟಪಡಲು ಆರಂಭಿಸಿದೆ. ಏಕೆಂದರೆ ನಾನು ಉತ್ತಮವಾಗಿ ಆಡಿದರೆ, ನಾನು ಇಲ್ಲಿ ದೀರ್ಘಕಾಲ ಇರಬಹುದೆಂದು ನನಗೆ ತಿಳಿದಿತ್ತು. ಆದರೆ, ಭಾರತ ಎಷ್ಟು ದೊಡ್ಡದು ಎಂಬುದು ಆಗ ನನಗೆ ತಿಳಿದಿರಲಿಲ್ಲ. ನಾನು ಭಾರತೀಯರನ್ನು ತುಂಬಾ ಪ್ರೀತಿಸುತ್ತೇನೆ, ಅದು ನಂಬಲಾಗದಷ್ಟು. ಇಲ್ಲಿ ಏಲ್ಲವೂ ಸಾಧ್ಯ. ಭಾರತೀಯರಂತೆ ಬೇರೆ ಯಾರೂ ಇಲ್ಲ. ಭಾರತೀಯರಿಗೆ ನೀವು ಯಾವುದೇ ಅಸಾಧ್ಯವಾದ ಕಾರ್ಯಗಳನ್ನು ಮಾಡಲು ಹೇಳಬಹುದು. ಅದನ್ನು ಅವರು ಸಾಧಿಸಿ ತೋರಿಸುತ್ತಾರೆ. ನಿಜಕ್ಕೂ ವಿಶೇಷ. ನಾನು ಭಾರತಕ್ಕೆ ಮರುಳಾಗಿದ್ದೇನೆ,” ಎಂದು ವಾರ್ನರ್‌ ವಿವರಿಸಿದ್ದಾರೆ.

ಟಿ20 ವರ್ಲ್ಡ್‌ಕಪ್ 2024