ಭಾರತ ದಕ್ಷಿಣ ಆಫ್ರಿಕಾ ಕ್ರಿಕೆಟ್ ಟಿ 20 ಸರಣಿ ಕೊನೆಯ ಪಂದ್ಯ: ಮತ್ತೆ ಅಬ್ಬರಿಸಿದ ಸಂಜು ಸ್ಯಾಮ್ಸನ್‌- ತಿಲಕ್‌ ವರ್ಮ, ದಾಖಲೆಯ ಜೋಡಿ ಶತಕ
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ ದಕ್ಷಿಣ ಆಫ್ರಿಕಾ ಕ್ರಿಕೆಟ್ ಟಿ 20 ಸರಣಿ ಕೊನೆಯ ಪಂದ್ಯ: ಮತ್ತೆ ಅಬ್ಬರಿಸಿದ ಸಂಜು ಸ್ಯಾಮ್ಸನ್‌- ತಿಲಕ್‌ ವರ್ಮ, ದಾಖಲೆಯ ಜೋಡಿ ಶತಕ

ಭಾರತ ದಕ್ಷಿಣ ಆಫ್ರಿಕಾ ಕ್ರಿಕೆಟ್ ಟಿ 20 ಸರಣಿ ಕೊನೆಯ ಪಂದ್ಯ: ಮತ್ತೆ ಅಬ್ಬರಿಸಿದ ಸಂಜು ಸ್ಯಾಮ್ಸನ್‌- ತಿಲಕ್‌ ವರ್ಮ, ದಾಖಲೆಯ ಜೋಡಿ ಶತಕ

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಕ್ರಿಕೆಟ್‌ ಪಂದ್ಯದ ಟಿ20 ಸರಣಿಯ ಕೊನೆ ಪಂದ್ಯದಲ್ಲಿ ಟಾಸ್‌ ನಲ್ಲಿ ಗೆದ್ದ ಪ್ರವಾಸಿ ಭಾರತ ಮೊದಲು ಬ್ಯಾಟ್‌ ಮಾಡಲು ನಿರ್ಧರಿಸಿದೆ.

ಭಾರತ ಹಾಗೂ ದಕ್ಷಿಣ  ಆಫ್ರಿಕಾ ನಡುವಿನ  ಟಿ20 ಕ್ರಿಕೆಟ್‌ ಸರಣಿಯ ಕೊನೆಯ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ಮೊದಲು ಬ್ಯಾಟಿಂಗ್‌ ಆಯ್ದುಕೊಂಡಿತು.
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟಿ20 ಕ್ರಿಕೆಟ್‌ ಸರಣಿಯ ಕೊನೆಯ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ಮೊದಲು ಬ್ಯಾಟಿಂಗ್‌ ಆಯ್ದುಕೊಂಡಿತು.

ಜೋಹಾನ್ಸ್‌ ಬರ್ಗ್‌: ಪ್ರವಾಸಿ ಭಾರತ ತಂಡವು ದಕ್ಷಿಣಾ ಆಫ್ರಿಕಾ ವಿರುದ್ದದ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಆಯ್ದುಕೊಂಡಿದೆ. ದಕ್ಷಿಣ ಆಫ್ರಿಕಾದ ಜೋಹ್ಸಾನ್‌ಬರ್ಗ್‌ನಲ್ಲಿ ನಡೆಯುತ್ತಿರುವ ನಾಲ್ಕು ಟಿ20 ಪಂದ್ಯಗಳ ಸರಣಿಯ ಅಂತಿಮ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತವು ಮೊದಲು ಬ್ಯಾಟ್‌ ಮಾಡಲು ನಿರ್ಧರಿಸಿದೆ. ಈಗಾಗಲೇ ಎರಡು ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿ ಸರಣಿಯಲ್ಲಿ 2-1 ರಲ್ಲಿ ಮುನ್ನಡೆ ಸಾಧಿಸಿದೆ. ಮೊದಲು ಹಾಗೂ ಮೂರನೇ ಪಂದ್ಯವನ್ನು ಭಾರತ ಗೆದ್ದರೆ, ಆತಿಥೇಯ ದಕ್ಷಿಣ ಆಫ್ರಿಕಾ ಎರಡನೇ ಪಂದ್ಯ ಗೆದ್ದಿತ್ತು. ಇದರಿಂದ ಈ ಪಂದ್ಯ ಗೆದ್ದರೆ ಸರಣಿ ಭಾರತದ ಪರವಾಗಿ ಆಗಲಿದೆ. ಒಂದು ವೇಳೆ ಸೋತರೆ ಸರಣಿ ಸಮವಾಗಲಿದೆ.

ದಕ್ಷಿಣ ಆಫ್ರಿಕಾ ವಿರುದ್ದದ ಟಿ20 ಸರಣಿಯಲ್ಲಿ ಭಾರತ ಮೊದಲ ಪಂದ್ಯವನ್ನು ಭಾರೀ ಅಂತರದಿಂದ ಗೆದ್ದು ಆತ್ಮವಿಶ್ವಾಸದಿಂದ ಬೀಗಿತ್ತು. ಆದರೆ ಎರಡನೇ ಪಂದ್ಯದಲ್ಲಿ ಸೋತು ಸರಣಿಯನ್ನು ಸಮ ಮಾಡಿಕೊಂಡಿತ್ತು.

ದಕ್ಷಿಣ ಆಫ್ರಿಕಾ ಭಾರತಕ್ಕೆ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿತ್ತು. ಮೂರನೇ ಪಂದ್ಯದಲ್ಲಿ ರೋಚಕ ಹಂತ ತಲುಪಿ ಭಾರತ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೇ ಸರಣಿಯಲ್ಲಿ ಮುನ್ನಡೆ ಕಾಯ್ದುಕೊಂಡಿತ್ತು. ಈಗ ನಾಲ್ಕನೇ ಪಂದ್ಯವನ್ನೂ ಅದೇ ವಿಶ್ವಾಸದಲ್ಲಿ ಗೆದ್ದು ಸರಣಿ ಜಯಿಸುವ ಉಮೇದಿನಲ್ಲಿ ಭಾರತ ತಂಡವಿದೆ.

ಮಳೆಯ ಆತಂಕ

ಈ ನಡುವೆ ಕೊನೆಯ ಪಂದ್ಯಕ್ಕೆ ಮಳೆಯ ಆತಂಕವೂ ಇದೆ. ಈಗಾಗಲೇ ಜೋಹಾನ್ಸ್‌ ಬರ್ಗ್‌ನಲ್ಲಿ ಮಳೆಯಾಗಿದ್ದು, ಈ ಕಾರಣದಿಂದ ಪಂದ್ಯಕ್ಕೆ ವರುಣ ಅಡ್ಡಿಯಾಗಬಹುದಾ ಎನ್ನುವ ಭಯವೂ ಆಟಗಾರನ್ನು ಕಾಡುತ್ತಿದೆ.

ಭಾರತ ತಂಡದಲ್ಲಿ ಬದಲಾವಣೆ ಇಲ್ಲ

ಕೊನೆಯ ಪಂದ್ಯಕ್ಕೂ ಭಾರತ ತಂಡ ಆಟಗಾರರ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕಳೆದ ಪಂದ್ಯದಲ್ಲಿ ಆಡಿದವರೇ ಈ ಪಂದ್ಯದಲ್ಲೂ ಆಡಲಿದ್ದಾರೆ.

ಸೂರ್ಯಕುಮಾರ್ ಯಾದವ್( ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ರಮಣದೀಪ್ ಸಿಂಗ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ ತಂಡದಲ್ಲಿರುವ ಆಟಗಾರರು.

ಭರ್ಜರಿ ಆರಂಭ

ಈ ನಡುವೆ ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಭಾರತ ತಂಡವು ಉತ್ತಮ ಆರಂಭ ನೀಡಿದೆ. ಸಂಜು ಸ್ಯಾಮ್ಸನ್‌ ಹಾಗೂ ಅಭಿಷೇಕ್‌ ಶರ್ಮಾ ಐದು ಓವರ್‌ಗಳಲ್ಲಿಯೇ 73 ರನ್‌ ಗಳಿಸಿತ್ತು. ಈ ನಡುವೆ ಉತ್ತಮ ಆರಂಭಕ್ಕೆ ಸಂಜು ಸ್ಯಾಮ್ಸನ್‌ಗೆ ಸಾಥ್‌ ನೀಡಿದ ಅಭಿಷೇಕ್‌ ಶರ್ಮಾ(32) ಮಿಂಚಿ ಬೇಗನೇ ನಿರ್ಗಮಿಸಿದರು. 15 ಎಸೆತೆಗಳಲ್ಲಿ 4 ಸಿಕ್ಸರ್‌ ಸಿಡಿಸಿ ಶರ್ಮಾ ಗಮನ ಸೆಳೆದರು. ಈ ಜೋಡಿಯನ್ನು ಮುರಿದವರು ದಕ್ಷಿಣ ಆಫ್ರಿಕಾದ ಲುಥೋ ಸಿಪಾಮ್ಲ. ಮತ್ತೊಂದು ತುದಿಯಲ್ಲಿ ಸ್ಯಾಮ್ಸನ್‌ ತಮ್ಮ ಎಂದಿನ ಶೈಲಿಯಲ್ಲಿಯೇ ಬ್ಯಾಟಿಂಗ್‌ ಶಕ್ತಿ ತೋರುತ್ತಿದ್ದಾರೆ. ಭಾರೀ ಬ್ಯಾಟಿಂಗ್‌ನೊಂದಿಗೆ ಅರ್ಧಶತಕವನ್ನೂ ದಾಖಲಿಸಿ ತಂಡವನ್ನು ನೂರರ ಗಡಿ ದಾಟಿಸಿದರು.

ಆನಂತರ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಸಂಜು ಹಾಗೂ ತಿಲಕ್‌ ವರ್ಮ ಶತಕವನ್ನು ದಾಖಲಿಸಿದರು. ಇಬ್ಬರ ಸ್ಫೋಟಕ ಬ್ಯಾಟಿಂಗ್‌ ಮೂಲಕ ಹರಿಣಗಳನ್ನು ಚೆಂಡಾಡಿದರು. ಇದರಿಂದ ಭಾರತ ಉತ್ತಮ ಮೊತ್ತ ಪೇರಿಸುವ ವಿಶ್ವಾಸವನ್ನು ಮೂಡಿಸಿ 20 ಓವರ್‌ಗಳಲ್ಲಿ 283 ರನ್‌ ಗಳಿಸಿತು. ಒಂದೇ ವಿಕೆಟ್‌ ನಷ್ಟಕ್ಕೆ ಭಾರೀ ಮೊತ್ತ ಸೇರಿಸಲು ಇಬ್ಬರ ಭರ್ಜರಿ ಹಾಗೂ ದಾಖಲೆಗಳ ಪ್ರದರ್ಶನ ಕಾರಣವಾಯಿತು.

Whats_app_banner