India W Squad: ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್ಗೆ ಭಾರತ ತಂಡ ಪ್ರಕಟ; ಕನ್ನಡತಿ ನಿಕ್ಕಿ ಪ್ರಸಾದ್ ನಾಯಕಿ
ICC Under-19 Womens T20 World Cup 2025: 2025ರ ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್ಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ನಿಕ್ಕಿ ಪ್ರಸಾದ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಟೂರ್ನಿಯಲ್ಲಿ ಭಾರತ ಹಾಲಿ ಚಾಂಪಿಯನ್ ಆಗಿದೆ.
2025ರ ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಪ್ರಕಟಿಸಿದೆ. ಮಹಿಳಾ ಆಯ್ಕೆ ಸಮಿತಿಯು 15 ಸದಸ್ಯರ ತಂಡ ಆಯ್ಕೆ ಮಾಡಿದ್ದು, ಮೂವರು ಆಟಗಾರ್ತಿಯರನ್ನು ಸ್ಟ್ಯಾಂಡ್ಬೈ ಆಗಿ ನೇಮಕ ಮಾಡಲಾಗಿದೆ. ಈ ಮೆಗಾ ಟೂರ್ನಿಯು ಜನವರಿ 18ರಿಂದ ಆರಂಭವಾಗಲಿದೆ. ಫೈನಲ್ ಪಂದ್ಯ 2025ರ ಫೆಬ್ರವರಿ 2ರಂದು ನಡೆಯಲಿದೆ. ಇಡೀ ಟೂರ್ನಮೆಂಟ್ ಮಲೇಷ್ಯಾದಲ್ಲಿ ನಡೆಯಲಿದೆ. ಭಾರತ ತಂಡವು ಜನವರಿ 19 ರಿಂದ ತನ್ನ ಅಭಿಯಾನ ಆರಂಭಿಸಲಿದೆ. ಕರ್ನಾಟಕದ ಆಟಗಾರ್ತಿ ನಿಕ್ಕಿ ಪ್ರಸಾದ್ ನಾಯಕತ್ವ ವಹಿಸಿದ್ದಾರೆ.
ಮಹಿಳಾ ಅಂಡರ್-19 ಟಿ20 ವಿಶ್ವಕಪ್ನಲ್ಲಿ 4 ಗುಂಪುಗಳನ್ನು ರಚಿಸಲಾಗಿದೆ. ಪ್ರತಿ ಗುಂಪಿನಲ್ಲಿ 4 ತಂಡಗಳು ಇರಲಿವೆ. 'ಎ' ಗುಂಪಿನಲ್ಲಿ ಭಾರತ, ಆತಿಥೇಯ ಮಲೇಷ್ಯಾ ಅಂಡರ್-19, ವೆಸ್ಟ್ ಇಂಡೀಸ್ ಅಂಡರ್-19 ಮತ್ತು ಶ್ರೀಲಂಕಾ ಅಂಡರ್-19 ತಂಡಗಳು ಸ್ಥಾನ ಪಡೆದಿದೆ. ಕೌಲಾಲಂಪುರದ ಬೆಯುಮಾಸ್ ಓವಲ್ನಲ್ಲಿ ಭಾರತ ಅಂಡರ್-19 ಗ್ರೂಪ್ ಹಂತದ ಪಂದ್ಯಗಳು ನಡೆಯಲಿವೆ. ಭಾರತದ ಅಂಡರ್-19 ತಂಡ 2025ರ ಜನವರಿ 19ರಂದು ವೆಸ್ಟ್ ಇಂಡೀಸ್ ವಿರುದ್ಧ ತನ್ನ ಮೊದಲ ಪಂದ್ಯವನ್ನಾಡಲಿದೆ. 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಲಿ ಚಾಂಪಿಯನ್ ಆಗಿದ್ದು, ಇಂಗ್ಲೆಂಡ್ ವಿರುದ್ಧ ಫೈನಲ್ನಲ್ಲಿ ಜಯಭೇರಿ ಬಾರಿಸಿತ್ತು.
ಅಂಡರ್-19 ವಿಶ್ವಕಪ್ಗೆ ಭಾರತ ತಂಡ ಪ್ರಕಟ
ನಿಕ್ಕಿ ಪ್ರಸಾದ್ (ನಾಯಕಿ), ಸಾನಿಕಾ ಚಾಲ್ಕೆ (ಉಪ ನಾಯಕಿ), ಜಿ ತ್ರಿಶಾ, ಕಮಲಿನಿ ಜಿ (ವಿಕೆಟ್ ಕೀಪರ್), ಭಾವಿಕಾ ಅಹಿರ್ (ವಿಕೆಟ್ ಕೀಪರ್), ಈಶ್ವರಿ ಅವಸಾರೆ, ಮಿಥಿಲಾ ವಿನೋದ್, ಜೋಷಿತಾ ವಿಜೆ, ಸೋನಮ್ ಯಾದವ್, ಪರುನಿಕಾ ಸಿಸೋಡಿಯಾ, ಕೇಸರಿ ದೃತಿ, ಆಯುಷಿ ಶುಕ್ಲಾ, ಆನಂದಿತಾ ಕಿಶೋರ್, ಮೊಹಮ್ಮದ್ ಶಬ್ನಮ್ ಮತ್ತು ವೈಷ್ಣವಿ ಎಸ್
ಸ್ಟ್ಯಾಂಡ್ಬೈ ಆಟಗಾರರು: ನಂಧನ ಎಸ್, ಇರಾ ಜೆ, ಅನಾದಿ ಟಿ
ಗುಂಪು ಹಂತದ ಪಂದ್ಯಗಳ ನಂತರ ಪ್ರತಿ ಗುಂಪಿನಿಂದ ತಲಾ 3 ತಂಡಗಳು ಸೂಪರ್ 6 ಗೆ ಅರ್ಹತೆ ಪಡೆಯುತ್ತವೆ. ಬಳಿಕ 12 ತಂಡಗಳನ್ನು ತಲಾ 6 ತಂಡಗಳಂತೆ ಎರಡು ಗುಂಪುಗಳಾಗಿ ವಿಂಗಡಣೆ ಮಾಡಲಾಗುತ್ತದೆ. 'ಎ' ಮತ್ತು 'ಡಿ' ಗುಂಪಿನಲ್ಲಿರುವ ತಲಾ ಅಗ್ರ ಮೂರು ತಂಡಗಳನ್ನು ಸೇರಿಸಿ ಒಂದು ಗುಂಪು ಮಾಡಲಾಗುತ್ತದೆ. 'ಬಿ' ಮತ್ತು 'ಸಿ' ಗುಂಪಿನಲ್ಲಿರುವ ಅಗ್ರ ಮೂರು ಸ್ಥಾನ ಪಡೆದ ತಂಡಗಳನ್ನು ಸೇರಿಸಿ ಮತ್ತೊಂದು ಗುಂಪು ರಚಿಸಲಾಗುತ್ತದೆ. ಸೂಪರ್ ಸಿಕ್ಸ್ ಹಂತದ ವೇಳೆ ಎರಡು ಗುಂಪುಗಳಲ್ಲಿ ಅಗ್ರ 2 ಸ್ಥಾನ ಪಡೆದ ತಂಡಗಳು ಸೆಮಿಫೈನಲ್ಗೆ ಅರ್ಹತೆ ಪಡೆಯುತ್ತವೆ.
ಅಂಡರ್-19 ವಿಶ್ವಕಪ್ಗೆ ಇಂಗ್ಲೆಂಡ್ ತಂಡ
ಫೋಬೆ ಬ್ರೆಟ್, ಒಲಿವಿಯಾ ಬ್ರಿನ್ಸ್‌ಡೆನ್, ಟಿಲ್ಲಿ ಕಾರ್ಟೀನ್-ಕೋಲ್‌ಮನ್, ಟ್ರೂಡಿ ಜಾನ್ಸನ್, ಕೇಟೀ ಜೋನ್ಸ್, ಷಾರ್ಲೆಟ್ ಲ್ಯಾಂಬರ್ಟ್, ಅಬಿ ನಾರ್ಗ್ರೋವ್, ಈವ್ ಓ'ನೀಲ್, ಡೇವಿನಾ ಪೆರಿನ್, ಜೆಮಿಮಾ ಸ್ಪೆನ್ಸ್, ಷಾರ್ಲೆಟ್ ಸ್ಟಬ್ಸ್, ಅಮೃತಾ ಸುರೆನ್‌ಕುಮಾರ್, ಪ್ರಿಶಾ ಥಾನವಾಲಾ, ಎರಿನ್ ಥಾಮಸ್, ಗ್ರಾಫ್ ಥಾಮಸ್.
ಅಂಡರ್-19 ವಿಶ್ವಕಪ್ಗೆ ಆಸ್ಟ್ರೇಲಿಯಾ
ಕ್ಲೋಯ್ ಐನ್ಸ್‌ವರ್ತ್, ಲಿಲಿ ಬಾಸಿಂಗ್‌ಥ್‌ವೈಟ್, ಕಾವೊಮ್ಹೆ ಬ್ರೇ, ಎಲಾ ಬ್ರಿಸ್ಕೋ, ಮ್ಯಾಗಿ ಕ್ಲಾರ್ಕ್, ಹಸ್ರತ್ ಗಿಲ್, ಲೂಸಿ ಹ್ಯಾಮಿಲ್ಟನ್, ಆಮಿ ಹಂಟರ್, ಸಾರಾ ಕೆನಡಿ, ಎಲೀನರ್ ಲಾರೋಸಾ, ಗ್ರೇಸ್ ಲಿಯಾನ್ಸ್, ಇನೆಸ್ ಮೆಕ್‌ಕಿಯಾನ್, ಜೂಲಿಯೆಟ್ ಮಾರ್ಟನ್, ಟೆ ಕೇಟ್ ಪೆಯಿಲ್ಸನ್.