ಬಾಂಗ್ಲಾದೇಶ ಸರಣಿಗೂ ಮುನ್ನ ಶುಭ್ಮನ್ ಗಿಲ್​ಗೆ ಆಘಾತ ನೀಡಲಿರುವ ಬಿಸಿಸಿಐ; ಇಶಾನ್​ ಕಿಶನ್​ ಟೀಮ್ ಇಂಡಿಯಾಗೆ ರಿ ಎಂಟ್ರಿ!-india v bangladesh 2024 selectors to rest shubman gill for bangladesh t20is ishan kishan in fray for return prs ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಬಾಂಗ್ಲಾದೇಶ ಸರಣಿಗೂ ಮುನ್ನ ಶುಭ್ಮನ್ ಗಿಲ್​ಗೆ ಆಘಾತ ನೀಡಲಿರುವ ಬಿಸಿಸಿಐ; ಇಶಾನ್​ ಕಿಶನ್​ ಟೀಮ್ ಇಂಡಿಯಾಗೆ ರಿ ಎಂಟ್ರಿ!

ಬಾಂಗ್ಲಾದೇಶ ಸರಣಿಗೂ ಮುನ್ನ ಶುಭ್ಮನ್ ಗಿಲ್​ಗೆ ಆಘಾತ ನೀಡಲಿರುವ ಬಿಸಿಸಿಐ; ಇಶಾನ್​ ಕಿಶನ್​ ಟೀಮ್ ಇಂಡಿಯಾಗೆ ರಿ ಎಂಟ್ರಿ!

Shubman Gill: ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಶುಭ್ಮನ್ ಗಿಲ್ ಅವರಿಗೆ ಬಿಸಿಸಿಐ ಆಘಾತ ನೀಡಲು ನಿರ್ಧರಿಸಿದ್ದು, ಸರಣಿಯಿಂದ ಹೊರಗಿಡಲು ತೀರ್ಮಾನಿಸಿದೆ. ಇದರ ನಡುವೆ ಇಶಾನ್ ಕಿಶನ್ ಅವರಿಗೆ ತಂಡದಲ್ಲಿ ಅವಕಾಶ ನೀಡಲು ಬಿಸಿಸಿಐ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.

ಶುಭ್ಮನ್ ಗಿಲ್ ಮತ್ತು ಇಶಾನ್​ ಕಿಶನ್ ಅಭ್ಯಾಸ ನಡೆಸುವ ಸಂದರ್ಭದ ಕ್ಷಣ.
ಶುಭ್ಮನ್ ಗಿಲ್ ಮತ್ತು ಇಶಾನ್​ ಕಿಶನ್ ಅಭ್ಯಾಸ ನಡೆಸುವ ಸಂದರ್ಭದ ಕ್ಷಣ. (ಹಳೆಯ ಚಿತ್ರ)

Shubman Gill: ಬಾಂಗ್ಲಾದೇಶ ವಿರುದ್ಧದ ಟೆಸ್ಟ್​ ಸರಣಿಗೂ ಮುನ್ನವೇ ಯುವ ಆಟಗಾರ ಶುಭ್ಮನ್ ಗಿಲ್ ಅವರಿಗೆ ಬಿಸಿಸಿಐ ಆಘಾತ ನೀಡಲಿದೆ ಎಂದು ವರದಿಯಾಗಿದೆ. ಬಾಂಗ್ಲಾದೇಶ ಸರಣಿಯಿಂದಲೇ ಹೊರಗಿಡಲು ಬಿಸಿಸಿಐ ನಿರ್ಧರಿಸಿದೆ ಎಂದು ಸುದ್ದಿಯಾಗಿದೆ. ಇದೇ ವೇಳೆ ಶಿಸ್ತು ಕ್ರಮದ ಕಾರಣದಿಂದ ಟೀಮ್ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡಿರುವ ಎಡಗೈ ಬ್ಯಾಟರ್​ ಇಶಾನ್​ ಕಿಶನ್ ಮರು ಪ್ರವೇಶ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಶುಭ್ಮನ್ ಗಿಲ್​​ಗಿಲ್ಲ ಅವಕಾಶ

ತವರಿನಲ್ಲಿ ಬಾಂಗ್ಲಾದೇಶ ವಿರುದ್ಧ ಎರಡು ಟೆಸ್ಟ್ ಪಂದ್ಯ, 3 ಟಿ20ಐ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಆಡಲಿದೆ. ಈ ಸಿರೀಸ್​​​​ನ ಪ್ರಥಮ ಟೆಸ್ಟ್​ 19 ರಿಂದ ಟೆಸ್ಟ್​ ಪ್ರಾರಂಭವಾಗಲಿದೆ. ಈಗಾಗಲೇ ಟೆಸ್ಟ್ ಸರಣಿಗೆ ಭಾರತ ತಂಡವು ಪ್ರಕಟಗೊಂಡಿದ್ದು, ಶುಭ್ಮನ್ ಗಿಲ್ ಸಹ ಸ್ಥಾನ ಪಡೆದಿದ್ದಾರೆ. ಇನ್ನು ಇನ್ನೊಂದು ವಾರದೊಳಗೆ 2ನೇ ಟೆಸ್ಟ್​​ ಜೊತೆಗೆ ಮೂರು ಪಂದ್ಯಗಳ ಟಿ20ಐ ಸರಣಿಗೂ ತಂಡ ಪ್ರಕಟವಾಗಲಿದೆ.

ಮೊದಲ ಟೆಸ್ಟ್​​​ನಲ್ಲಿ ಆಡಲಿರುವ ಶುಭ್ಮನ್ ಗಿಲ್ ಅವರು ಎರಡನೇ ಟೆಸ್ಟ್​ಗೂ ಅವಕಾಶ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಟಿ20ಐ ಸರಣಿಗೆ ಅವರಿಗೆ ಅವಕಾಶ ನೀಡದಿರಲು ಸೆಲೆಕ್ಟರ್ಸ್​ ಚಿಂತನೆ ನಡೆಸಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಗಿಲ್​ರನ್ನು ಪಕ್ಕಕ್ಕಿಡಲು ಫಾರ್ಮ್​​ನಲ್ಲಿ ಇಲ್ಲ ಎಂಬ ಕಾರಣವಲ್ಲ. ಕೇವಲ ವಿಶ್ರಾಂತಿ ನೀಡಲು ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬಾಂಗ್ಲಾದೇಶ ಎದುರಿನ ಟಿ20 ಸರಣಿಯು ಅಕ್ಟೋಬರ್​​​​ನಲ್ಲಿ ಆರಂಭ ಆಗಲಿದೆ. ಅಕ್ಟೋಬರ್​​ 7 ರಿಂದ 13ರ ತನಕ ಮೂರು ಟಿ20ಐ ಪಂದ್ಯ ನಡೆಯಲಿದೆ. ಬಾಂಗ್ಲಾದೇಶ ಎದುರಿನ ಟಿ20 ಸರಣಿ ಮುಕ್ತಾಯಗೊಂಡ ಮೂರು ದಿನಗಳ ನಂತರ ನ್ಯೂಜಿಲೆಂಡ್ ಎದುರಿನ ಟೆಸ್ಟ್​​ ಸರಣಿಯು ಆರಂಭಗೊಳ್ಳಲಿದೆ. ಹಾಗಾಗಿ ಟಿ20ಐ ಸರಣಿಗೆ ಗಿಲ್​ಗೆ ವಿಶ್ರಾಂತಿ ನೀಡಲು ಬಿಸಿಸಿಐ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಆದರೆ ಕಿವೀಸ್ ಸರಣಿಯಲ್ಲಿ ಗಿಲ್ ಕಣಕ್ಕಿಳಿಯುವುದು ಪಕ್ಕ ಎನ್ನಲಾಗಿದೆ.

ಇಶಾನ್ ಕಿಶನ್ ರಿ ಎಂಟ್ರಿ

ಹತ್ತತ್ರ ಒಂದು ವರ್ಷದಿಂದ ಭಾರತೀಯ ಕ್ರಿಕೆಟ್ ತಂಡಕ್ಕೆ ದೂರ ಆಗಿರುವ ಇಶಾನ್ ಕಿಶನ್, ಟೀಮ್ ಇಂಡಿಯಾಗೆ ಮರು ಪ್ರವೇಶ ಮಾಡಲಿದ್ದಾರೆ ಎಂದು ವರದಿಯಾಗಿದೆ. ದುಲೀಪ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಇಶಾನ್, ಬಾಂಗ್ಲಾ ಎದುರಿನ ಟಿ20ಐ ಸರಣಿಗೆ ಭಾರತೀಯ ತಂಡಕ್ಕೆ ಮರಳುವ ಸಾಧ್ಯತೆ ದಟ್ಟವಾಗಿದೆ ಎಂದು ವರದಿಗಳು ಹೇಳುತ್ತಿವೆ. ಈ ಟಿ20 ಸರಣಿಗೆ ರಿಷಭ್ ಪಂತ್​​ಗೂ ವಿಶ್ರಾಂತಿ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.

ರಿಷಭ್ ಪಂತ್ ಸ್ಥಾನಕ್ಕಾಗಿ ಇಶಾನ್ ಕಿಶನ್ ಅವಕಾಶ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ದುಲೀಪ್ ಟ್ರೋಫಿಯಲ್ಲಿ ಇಶಾನ್ ಕಿಶನ್ ಅದ್ಭುತ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಇಂಡಿಯಾ ಸಿ ಪರ ಕಣಕ್ಕಿಳಿದ ಎಡಗೈ ಬ್ಯಾಟರ್​​ 126 ಎಸೆತಗಳಲ್ಲಿ 114 ರನ್ ಗಳಿಸಿದ್ದಾರೆ. ಅಲ್ಲದೆ, ಇದಕ್ಕೂ ಮುನ್ನ ಬುಚ್ಚಿಬಾಬು ಟೂರ್ನಮೆಂಟ್​​ನಲ್ಲೂ ಶತಕ ಸಿಡಿಸಿ ಅಬ್ಬರಿಸಿದ್ದರು. ಹೀಗಾಗಿ, ಅವರಿಗೆ ಅವಕಾಶ ನೀಡಲು ಬಿಸಿಸಿಐ ಚಿಂತಿಸಿದೆ. ಆದರೆ ಆತ ಕಳೆದ ವರ್ಷದ ಕೊನೆಯದಿಂದ ಈವರೆಗೂ ಭಾರತ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿಲ್ಲ.

ಕಳೆದ ವರ್ಷದ ಕೊನೆಯಲ್ಲಿ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಮಾನಸಿಕ ಆಯಾಸೆವೆಂದು ಹೇಳಿ ವಿಶ್ರಾಂತಿ ಪಡೆದಿದ್ದರು. ಆದರೆ ಅವರು ದುಬೈನಲ್ಲಿ ಪಾರ್ಟಿಗೆ ಹೋಗಿದ್ದರು. ಆದರೆ, ರಣಜಿ ಟ್ರೋಫಿ ಆಡುವಂತೆ ಸೂಚಿಸಿದ್ದರೂ ಕಣಕ್ಕಿಳಿಯದೆ ರಹಸ್ಯವಾಗಿ ಹಾರ್ದಿಕ್ ಪಾಂಡ್ಯ ಜೊತೆಗೆ ಐಪಿಎಲ್​ಗೆ ಸಿದ್ಧತೆ ನಡೆಸಿದ್ದರು. ಇದು ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿತ್ತು. ಹಾಗಾಗಿ ಅವರಿಗೆ ಅವಕಾಶ ನೀಡದೆ ಶಿಕ್ಷೆ ನೀಡಿತ್ತು. ಕೇಂದ್ರ ಗುತ್ತಿಗೆ ಪಟ್ಟಿಯಿಂದಲೂ ಕೈಬಿಟ್ಟಿತ್ತು.

mysore-dasara_Entry_Point