RRB NTPC: ಡಿಗ್ರಿ ಮುಗಿಸಿದ್ದೀರಾ? ರೈಲ್ವೆ ಎನ್​ಟಿಪಿಸಿ 8113 ಹುದ್ದೆಗೆ ಅರ್ಜಿ ಹಾಕಿ; ಲಿಂಕ್, ಅರ್ಜಿ ಸಲ್ಲಿಸುವ ವಿವರ
ಕನ್ನಡ ಸುದ್ದಿ  /  ಜೀವನಶೈಲಿ  /  Rrb Ntpc: ಡಿಗ್ರಿ ಮುಗಿಸಿದ್ದೀರಾ? ರೈಲ್ವೆ ಎನ್​ಟಿಪಿಸಿ 8113 ಹುದ್ದೆಗೆ ಅರ್ಜಿ ಹಾಕಿ; ಲಿಂಕ್, ಅರ್ಜಿ ಸಲ್ಲಿಸುವ ವಿವರ

RRB NTPC: ಡಿಗ್ರಿ ಮುಗಿಸಿದ್ದೀರಾ? ರೈಲ್ವೆ ಎನ್​ಟಿಪಿಸಿ 8113 ಹುದ್ದೆಗೆ ಅರ್ಜಿ ಹಾಕಿ; ಲಿಂಕ್, ಅರ್ಜಿ ಸಲ್ಲಿಸುವ ವಿವರ

RRB NTPC Recruitment 2024: ಭಾರತೀಯ ರೈಲ್ವೆ ಇಲಾಖೆಯು 8,113 ಎನ್‌ಟಿಪಿಸಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿ ಹಾಕಬಹುದು. ಕೊನೆಯ ದಿನಾಂಕ ಯಾವಾಗ, ವೇತನ ಎಷ್ಟಿದೆ? ಅರ್ಜಿ ಸಲ್ಲಿಸುವುದೇಗೆ? ಇಲ್ಲಿದೆ ಸಂಪೂರ್ಣ ವಿವರ.

ರೈಲ್ವೆ ಎನ್​ಟಿಪಿಸಿ 8113 ಹುದ್ದೆಗೆ ಅರ್ಜಿ ಹಾಕಿ
ರೈಲ್ವೆ ಎನ್​ಟಿಪಿಸಿ 8113 ಹುದ್ದೆಗೆ ಅರ್ಜಿ ಹಾಕಿ

RRB NTPC Recruitment 2024: ಪದವಿ ವಿದ್ಯಾಭ್ಯಾಸದ ವಿದ್ಯಾರ್ಥಿಗಳಿಗೆ ರೈಲ್ವೆ ಮಂಡಳಿ ಗುಡ್​ನ್ಯೂಸ್ ನೀಡಿದೆ. ಒಟ್ಟು 8,113 ಹುದ್ದೆಗಳಿಗೆ ರೈಲ್ವೆಯ ನೇಮಕಾತಿ ಮಂಡಳಿ ಅರ್ಜಿ ಆಹ್ವಾನಿಸಿದೆ. ಹಾಗಾಗಿ ಪದವಿ ಪೂರ್ಣಗೊಳಿಸಿದ್ದರೆ ಈ ಕೇಂದ್ರ ಸರ್ಕಾರದ ಹುದ್ದೆಗೇರಲು ಅರ್ಜಿ ಸಲ್ಲಿಸಬಹುದು. ಸೆಪ್ಟೆಂಬರ್ 14ರಿಂದ ಅರ್ಜಿ ಆಹ್ವಾನ ಆರಂಭಗೊಂಡಿದ್ದು, ಅಕ್ಟೋಬರ್​ 13ರ ತನಕ ಅರ್ಜಿ ಹಾಕಲು ಅವಕಾಶ ಇದೆ. ಹಾಗಿದ್ದರೆ 8,113 ಹುದ್ದೆಗಳಲ್ಲಿ ಯಾವ್ಯಾವ ವಿಭಾಗಗಳಿವೆ, ಅರ್ಜಿ ವಿಧಾನ ಹೇಗೆ, ಅರ್ಜಿ ಸಲ್ಲಿಸುವುದೇಗೆ? ಇಲ್ಲಿದೆ ವಿವರ.

ಭಾರತೀಯ ರೈಲ್ವೆನಲ್ಲಿ ಎನ್​​ಟಿಪಿಸಿ-ನಾನ್‌ ಟೆಕ್ನಿಕಲ್ ಪಾಪ್ಯುಲರ್ ಕೆಟಗರಿಯ (Non-Technical Popular Categories) 8113 ಪೋಸ್ಟ್​​ಗಳಿಗೆ ಅರ್ಜಿ ಆಹ್ವಾನಿಸಿದೆ. ತಮ್ಮ ಪದವಿ ಪೂರ್ಣಗೊಳಿಸಿ ಮತ್ತು ಭಾರತೀಯ ರೈಲ್ವೆಯಲ್ಲಿ ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವ ಅಭ್ಯರ್ಥಿಗಳು ಇದೊಂದು ಸುವರ್ಣಾವಕಾಶ ಎಂದರೂ ತಪ್ಪಾಗಲ್ಲ. ಇಲ್ಲಿ ಸ್ಟೇಷನ್‌ ಮಾಸ್ಟರ್, ಗೂಡ್ಸ್‌ ಟ್ರೈನ್ ಮ್ಯಾನೇಜರ್, ಜೂನಿಯರ್ ಅಕೌಂಟ್ ಅಸಿಸ್ಟಂಟ್‌ ಕಮ್ ಟೈಪಿಸ್ಟ್‌, ಸೀನಿಯರ್ ಕ್ಲರ್ಕ್‌ ಕಮ್ ಟೈಪಿಸ್ಟ್‌ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.

ಪದವಿ ಓದಿದವರಿಗೆ ಯಾವುದಕ್ಕೆಲ್ಲಾ ಅರ್ಜಿ ಸಲ್ಲಿಸಬಹುದು (8113 ಹುದ್ದೆಗಳು)

  • ಗೂಡ್ಸ್​ ಟ್ರೈನ್ ಮ್ಯಾನೇಜರ್ - 3144 ಹುದ್ದೆ, ವೇತನ ಆರಂಭ- 29,200 (5ನೇ ವೇತನ ಆಯೋಗ)
  • ಚೀಫ್ ಕಮರ್ಷಿಯಲ್ ಕಮ್ ಟಿಕೆಟ್ ಸೂಪರ್ ವೈಸರ್​ - 1736 ಹುದ್ದೆ, ವೇತನ ಆರಂಭ - 35,400 (ವೇತನ ಆಯೋಗ-6)
  • ಸೀನಿಯರ್​ ಕ್ಲರ್ಕ್​ ಕಮ್ ಟೈಪಿಸ್ಟ್ - 732 ಹುದ್ದೆ, ವೇತನ ಆರಂಭ- 29,200 (5ನೇ ವೇತನ ಆಯೋಗ)
  • ಜೂನಿಯರ್ ಅಕೌಂಟ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್ - 1507 ಹುದ್ದೆ, ವೇತನ ಆರಂಭ- 29,200 (5ನೇ ವೇತನ ಆಯೋಗ)
  • ಸ್ಟೇಷನ್ ಮಾಸ್ಟರ್​ - 994, 1736 ಹುದ್ದೆ, ವೇತನ ಆರಂಭ - 35,400 (ವೇತನ ಆಯೋಗ-6)

ಅರ್ಜಿ ಸಲ್ಲಿಕೆ-ಕೊನೆಯ ದಿನಾಂಕ: ರೈಲ್ವೆ ಎನ್‌ಟಿಪಿಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆರಂಭವಾದ ದಿನಾಂಕ: 14-09-2024 ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13-10-2024ರ ರಾತ್ರಿ 11-59 ಗಂಟೆ ತನಕ.

ರೈಲ್ವೆ ಎನ್‌ಟಿಪಿಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆಗಳೇನು: 2025ರ ಜನವರಿ 1ಕ್ಕೆ ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 36 ವರ್ಷ ವಯಸ್ಸು ಮೀರಿರಬಾರದು. ಆನ್​ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಒಬಿಸಿ ವರ್ಗದವರಿಗೆ 3 ವರ್ಷ, ಎಸ್‌ಸಿ/ಎಸ್‌ಟಿ/ ಪ್ರವರ್ಗ-1 ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಐದು ವರ್ಷ ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯ ಆಗಲಿವೆ.

ವೇತನ: ಕರ್ನಾಟಕ ರಾಜ್ಯದ ರೈಲ್ವೆ ಉದ್ಯೋಗ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕಾದ ವೆಬ್​ಸೈಟ್ ವಿಳಾಸ; www.rrbbnc.gov.in. ಸಿಬಿಟಿ ಪರೀಕ್ಷೆ ಬರೆದವರಿಗೆ ಅರ್ಜಿ ಶುಲ್ಕ ಮರುಪಾವತಿ ಇರಲಿದೆ. ತಿಂಗಳಿಗೆ ವೇತನ 34 ಸಾವಿರದಿಂದ 1,12,400 ರವರೆಗೂ ಇದೆ.

ಅರ್ಜಿ ಶುಲ್ಕ ಮಾಹಿತಿ: ಸಾಮಾನ್ಯ ಅರ್ಹತೆ/ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 500 ರೂಪಾಯಿ. ಎಸ್‌ಸಿ/ಎಸ್‌ಟಿ/ಮಾಜಿ ಸೈನಿಕ/ಪಿಡಬ್ಲ್ಯೂಡಿ/ಮಹಿಳಾ/ಟ್ರಾನ್ಸ್‌ಜೆಂಡರ್/ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 250 ರೂಪಾಯಿ.

ಪದವಿ ಅರ್ಹತೆಯ ಅಭ್ಯರ್ಥಿಗಳು ರೈಲ್ವೆ ಎನ್‌ಟಿಪಿಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ ಹೇಗೆ?

ಹಂತ 1: ಆರ್‌ಆರ್‌ಬಿ ಕರ್ನಾಟಕ ಪ್ರಾದೇಶಿಕ ವೆಬ್‌ಸೈಟ್‌ https://www.rrbbnc.gov.in/ ಗೆ ಓಪನ್ ಮಾಡಿ.

ಹಂತ 2: ಮುಖಪುಟ ಓಪನ್ ಆದ ನಂತರ ಮೇಲ್ಭಾಗದಲ್ಲಿಯೇ - Click Here To Apply For CEN 05/2024' ಎಂದಿರುವ ಲಿಂಕನ್ನು ಒತ್ತಿ.

ಹಂತ 3: ಆರ್​​ಆರ್​​​ಬಿ ನೇಮಕಾತಿಯ ಹೊಸ ಪುಟ ಓಪನ್ ಆಗುತ್ತದೆ.

ಹಂತ 4: ಈ ಪುಟದ ಮೇಲಿರುವ 'Apply' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಆಗ 2 ಆಯ್ಕೆಗಳು ಕಾಣುತ್ತವೆ.

ಹಂತ 5: ನೀವು ಇದೇ ಮೊದಲು ರೈಲ್ವೆ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡುತ್ತಿದ್ದರೆ 'Create An Account' ಆಯ್ಕೆ ಮಾಡಿ.

ಹಂತ 6: ಆ ಬಳಿಕ ಆನ್‌ಲೈನ್‌ ರಿಜಿಸ್ಟ್ರೇಷನ್‌ ಫಾರ್ಮ್‌ ತೆರೆದುಕೊಳ್ಳುತ್ತದೆ.

ಹಂತ 7: ಅಲ್ಲಿ ಕೇಳುವ ಸಂಪೂರ್ಣ ವೈಯಕ್ತಿಕ ಮಾಹಿತಿಯನ್ನು ನೀಡಿ ನೋಂದಣಿ ಮಾಡಿಕೊಳ್ಳಿ.

ಹಂತ 8: ನೋಂದಣಿಗೂ ಮುನ್ನ ಫಿಲ್ ಮಾಡಿರುವ ಮಾಹಿತಿಯನ್ನು ಒಮ್ಮೆ ಪರಿಶೀಲಿಸುವುದು ಉತ್ತಮ.

ಹಂತ 9: ಬಳಿಕ ಮತ್ತೆ ನೋಂದಣಿ ಸಂಖ್ಯೆ, ಪಾಸ್‌ವರ್ಡ್‌ ಹಾಕಿ ಲಾಗಿನ್ ಆಗಬೇಕು. ಆ ಮೂಲಕ ಅಪ್ಲಿಕೇಶನ್ ಸಲ್ಲಿಸಿ.

ಹಂತ 10: ಅರ್ಜಿ ಸಲ್ಲಿಸುವುದಕ್ಕೂ ನೀವು ಯಾವುದಕ್ಕೆ ಯಾವ ಹುದ್ದೆಗೆ ಅರ್ಜಿ ಸಲ್ಲಿಸಬೇಕು ಎಂಬುದನ್ನು ಆಯ್ಕೆ ಮಾಡಬೇಕು. ಬೇಕಿರುವ ಮಾಹಿತಿಯನ್ನು ತುಂಬಬೇಕು.

ಹಂತ 11: ಮೊದಲೇ ಆರ್‌ಆರ್‌ಬಿ ವೆಬ್‌ಸೈಟ್‌ನಲ್ಲಿ ನೋಂದಣಿ ಆಗಿದ್ದರೆ 'Already Have An Account' ಎಂಬುದನ್ನು ಕ್ಲಿಕ್ ಮಾಡಿ.

ಹಂತ 12: ರಿಜಿಸ್ಟ್ರೇಷನ್‌ ನಂಬರ್, ಪಾಸ್‌ವರ್ಡ್‌ ನೀಡಿ ಲಾಗಿನ್‌ ಆಗುವ ಮೂಲಕವೂ ಅರ್ಜಿ ಸಲ್ಲಿಸಬಹುದು.

Whats_app_banner