ನಮಗೆ ಓಪನರ್ಸ್ ಬೇಕಿಲ್ಲ; ಕೆಎಲ್ ರಾಹುಲ್ ಕೈಬಿಟ್ಟಿದ್ದಕ್ಕೆ ಮೊದಲ ಬಾರಿಗೆ ಮೌನಮುರಿದ ಅಜಿತ್ ಅಗರ್ಕರ್
ಕನ್ನಡ ಸುದ್ದಿ  /  ಕ್ರಿಕೆಟ್  /  ನಮಗೆ ಓಪನರ್ಸ್ ಬೇಕಿಲ್ಲ; ಕೆಎಲ್ ರಾಹುಲ್ ಕೈಬಿಟ್ಟಿದ್ದಕ್ಕೆ ಮೊದಲ ಬಾರಿಗೆ ಮೌನಮುರಿದ ಅಜಿತ್ ಅಗರ್ಕರ್

ನಮಗೆ ಓಪನರ್ಸ್ ಬೇಕಿಲ್ಲ; ಕೆಎಲ್ ರಾಹುಲ್ ಕೈಬಿಟ್ಟಿದ್ದಕ್ಕೆ ಮೊದಲ ಬಾರಿಗೆ ಮೌನಮುರಿದ ಅಜಿತ್ ಅಗರ್ಕರ್

Ajit Agarkar on KL Rahul : ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಆಯ್ಕೆ ಮಾಡದಿರಲು ಕಾರಣ ಏನೆಂಬುದನ್ನು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಸ್ಪಷ್ಟನೆ ನೀಡಿದ್ದಾರೆ.

ನಮಗೆ ಓಪನರ್ಸ್ ಬೇಕಿಲ್ಲ; ಕೆಎಲ್ ರಾಹುಲ್ ಕೈಬಿಟ್ಟಿದ್ದಕ್ಕೆ ಮೊದಲ ಬಾರಿಗೆ ಮೌನಮುರಿದ ಅಜಿತ್ ಅಗರ್ಕರ್
ನಮಗೆ ಓಪನರ್ಸ್ ಬೇಕಿಲ್ಲ; ಕೆಎಲ್ ರಾಹುಲ್ ಕೈಬಿಟ್ಟಿದ್ದಕ್ಕೆ ಮೊದಲ ಬಾರಿಗೆ ಮೌನಮುರಿದ ಅಜಿತ್ ಅಗರ್ಕರ್

2024ರ ಟಿ20 ವಿಶ್ವಕಪ್‌ ಟೂರ್ನಿಗೆ (T20 World Cup 2024) ಪ್ರಕಟವಾದ 15 ಸದಸ್ಯರ ಭಾರತ ತಂಡದಲ್ಲಿ ವಿಕೆಟ್ ಕೀಪರ್​ ಬ್ಯಾಟರ್​ ಕೆಎಲ್ ರಾಹುಲ್ ಅವರಿ​ಗೆ (KL Rahul) ಅವಕಾಶ ನೀಡದಿರಲು ಕಾರಣ ಏನೆಂಬುದನ್ನು ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ (Ajit Agarkar) ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ (LSG) ನಾಯಕ ಕೆಎಲ್ ರಾಹುಲ್ ಅವಕಾಶ ವಂಚಿತ ಆಟಗಾರರಲ್ಲಿ ಒಬ್ಬರು. ಅದ್ಭುತ ಪ್ರದರ್ಶನ ನೀಡಿದ್ದರ ಹೊರತಾಗಿಯೂ ರಾಹುಲ್​ಗೆ ಸ್ಥಾನ ಪಡೆದಿಲ್ಲ.

ಓಪನರ್ಸ್ ಬೇಕಿರಲಿಲ್ಲ ಎಂದ ಅಜಿತ್ ಅಗರ್ಕರ್​

ಐಪಿಎಲ್​ನಲ್ಲಿ ಕೆಎಲ್ ರಾಹುಲ್ ಓಪನಿಂಗ್ ಮಾಡುತ್ತಿದ್ದಾರೆ. ಆದರೆ ನಾವು ಹುಡುಕಿದ್ದು ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳನ್ನು. ಈ ಕಾರಣಕ್ಕೆ ರಾಹುಲ್​ರನ್ನು ಆಯ್ಕೆ ಮಾಡಲಿಲ್ಲ. ನಮಗೆ ಬೇಕಾಗಿದ್ದದ್ದು ಮಧ್ಯಮ ಕ್ರಮಾಂಕದ ಆಯ್ಕೆಗಳು. ಹಾಗಾಗಿ, ಸ್ಯಾಮ್ಸನ್ ಮತ್ತು ಪಂತ್ ಅದಕ್ಕೆ ಸೂಕ್ತ ಎಂದು ನಾವು ಭಾವಿಸಿ ಸ್ಥಾನ ನೀಡಿದೆವು. ಸ್ಯಾಮ್ಸನ್ ಲೈನ್‌ಅಪ್‌ನಲ್ಲಿ ಎಲ್ಲಿ ಬೇಕಾದರೂ ಬ್ಯಾಟ್ ಮಾಡುತ್ತಾರೆ. ನಮಗೆ ಬೇಕಿರುವುದು ಸ್ಲಾಟ್‌ಗಳ ಬಗ್ಗೆಯೇ ಹೊರತು, ಯಾರು ಉತ್ತಮರು ಎಂಬುದರ ಬಗ್ಗೆ ಅಲ್ಲ ಎಂದು ಅಗರ್ಕರ್ ತಿಳಿಸಿದ್ದಾರೆ.

ಕೆಎಲ್ ರಾಹುಲ್ ಕ್ಲಾಸ್ ಮತ್ತು ಅದ್ಭುತ ಆಟಗಾರ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ರಿಷಭ್ ಪಂತ್ ಮತ್ತು ಸಂಜು ಸ್ಯಾಮ್ಸನ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಅವರು ಪರಿಪೂರ್ಣರಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಪ್ರಸಕ್ತ ಐಪಿಎಲ್​ ಋತುವಿನಲ್ಲಿ ಕೆಎಲ್ ರಾಹುಲ್ ಟಾಪ್-10ರಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪೈಕಿ ಸ್ಥಾನ ಪಡೆದುಕೊಂಡಿದ್ದಾರೆ. ಗರಿಷ್ಠ ಸ್ಕೋರರ್ ಪೈಕಿ ಕೆಎಲ್ ಪ್ರಸ್ತುತ 4ನೇ ಸ್ಥಾನದಲ್ಲಿದ್ದಾರೆ. 10 ಪಂದ್ಯಗಳಲ್ಲಿ 406 ರನ್‌ ಗಳಿಸಿದ್ದಾರೆ. ಸರಾಸರಿ 40.60ರ ಸರಾಸರಿಯಲ್ಲಿ ಕಾಯ್ದುಕೊಂಡಿದ್ದಾರೆ.

ಸ್ಲಾಟ್ ಹೊಂದಿಕೊಳ್ಳುವಿಕೆ ಮತ್ತು ಬಹು ಆಯಾಮದ ಕೌಶಲ್ಯಕ್ಕೆ ಹೆಸರುವಾಸಿಯಾದ ಕೆಎಲ್ ರಾಹುಲ್, ಇನ್ನಿಂಗ್ಸ್​ ಆರಂಭಿಸುವ, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಮತ್ತು ವಿಕೆಟ್ ಕೀಪಿಂಗ್ ಜವಾಬ್ದಾರಿ ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾರೆ. ಟೆಸ್ಟ್​ ಮತ್ತು ಏಕದಿನ ಕ್ರಿಕೆಟ್​ನಲ್ಲೂ ಮಧ್ಯಮ ಕ್ರಮಾಂಕದಲ್ಲೇ ಬ್ಯಾಟ್ ಬೀಸುತ್ತಾರೆ. ಆದರೆ ಐಪಿಎಲ್​ನಲ್ಲಿ ಓಪನರ್​ ಎಂಬ ಕಾರಣಕ್ಕೆ ಅವರನ್ನು ಕೈಬಿಡಲಾಗಿದೆ. ಇದು ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಟಿ20 ವಿಶ್ವಕಪ್​ ಟೂರ್ನಿಗೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್​), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್ , ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್

ಮೀಸಲು ಆಟಗಾರರು: ಶುಭ್ಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್.

Whats_app_banner