7,720 ದಿನ, 188 ಪಂದ್ಯ, 704 ವಿಕೆಟ್; 21 ವರ್ಷಗಳ ಟೆಸ್ಟ್ ಕರಿಯರ್​ಗೆ ಗೆಲುವಿನೊಂದಿಗೆ ಗುಡ್​ಬೈ ಹೇಳಿದ ಜೇಮ್ಸ್ ಆ್ಯಂಡರ್ಸನ್
ಕನ್ನಡ ಸುದ್ದಿ  /  ಕ್ರಿಕೆಟ್  /  7,720 ದಿನ, 188 ಪಂದ್ಯ, 704 ವಿಕೆಟ್; 21 ವರ್ಷಗಳ ಟೆಸ್ಟ್ ಕರಿಯರ್​ಗೆ ಗೆಲುವಿನೊಂದಿಗೆ ಗುಡ್​ಬೈ ಹೇಳಿದ ಜೇಮ್ಸ್ ಆ್ಯಂಡರ್ಸನ್

7,720 ದಿನ, 188 ಪಂದ್ಯ, 704 ವಿಕೆಟ್; 21 ವರ್ಷಗಳ ಟೆಸ್ಟ್ ಕರಿಯರ್​ಗೆ ಗೆಲುವಿನೊಂದಿಗೆ ಗುಡ್​ಬೈ ಹೇಳಿದ ಜೇಮ್ಸ್ ಆ್ಯಂಡರ್ಸನ್

James Anderson retire: ಇಂಗ್ಲೆಂಡ್ ತಂಡದ ಹಿರಿಯ ವೇಗಿ ಜೇಮ್ಸ್ ಆ್ಯಂಡರ್ಸನ್​ ಅವರು ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್​ಗೆ ಗುಡ್​ಬೈ ಹೇಳಿದ್ದಾರೆ. ಲಾರ್ಡ್ಸ್​ನಲ್ಲಿ ವೆಸ್ಟ್​ ಇಂಡೀಸ್ ಎದುರು ಗೆದ್ದ ಇಂಗ್ಲೆಂಡ್ ಜಿಮ್ಮಿಗೆ ಸ್ಮರಣೀಯ ವಿದಾಯ ನೀಡಿದೆ.

7,720 ದಿನ, 188 ಪಂದ್ಯ, 704 ವಿಕೆಟ್; 21 ವರ್ಷಗಳ ಟೆಸ್ಟ್ ಕರಿಯರ್​ಗೆ ಗೆಲುವಿನೊಂದಿಗೆ ಗುಡ್​ಬೈ ಹೇಳಿದ ಜೇಮ್ಸ್ ಆ್ಯಂಡರ್ಸನ್
7,720 ದಿನ, 188 ಪಂದ್ಯ, 704 ವಿಕೆಟ್; 21 ವರ್ಷಗಳ ಟೆಸ್ಟ್ ಕರಿಯರ್​ಗೆ ಗೆಲುವಿನೊಂದಿಗೆ ಗುಡ್​ಬೈ ಹೇಳಿದ ಜೇಮ್ಸ್ ಆ್ಯಂಡರ್ಸನ್

ಐತಿಹಾಸಿಕ ಲಾರ್ಡ್ಸ್​ ಕ್ರಿಕೆಟ್ ಸ್ಟೇಡಿಯಂನಲ್ಲಿ (Lords Cricket Stadium) ಜರುಗಿದ ವೆಸ್ಟ್ ಇಂಡೀಸ್​ ವಿರುದ್ಧ ಮೊದಲನೇ ಟೆಸ್ಟ್​ ಪಂದ್ಯದಲ್ಲಿ ಇಂಗ್ಲೆಂಡ್ (England vs West Indies), ಇನ್ನಿಂಗ್ಸ್​ ಹಾಗೂ 114 ರನ್​ಗಳ ಗೆಲುವು ಸಾಧಿಸಿದೆ. ಆ ಮೂಲಕ ಸಾರ್ವಕಾಲಿಕ ಶ್ರೇಷ್ಠ ಹಾಗೂ ಇಂಗ್ಲೆಂಡ್ ಹಿರಿಯ ವೇಗಿ ಜೇಮ್ಸ್ ಆ್ಯಂಡರ್ಸನ್ ಅವರಿ​ಗೆ ಸ್ಟೋಕ್ಸ್ ಪಡೆ ಗೆಲುವಿನ ವಿದಾಯ ನೀಡಿದೆ. 21 ವರ್ಷ, 1 ತಿಂಗಳು, 19 ದಿನಗಳ ಕಾಲ ಟೆಸ್ಟ್​ ಕ್ರಿಕೆಟ್​ಗೆ ಆಂಗ್ಲರ ಪರ ಸೇವೆ ಸಲ್ಲಿಸಿದ್ದ ಜಿಮ್ಮಿ​, ಸುದೀರ್ಘ ವೃತ್ತಿ ಬದುಕಿಗೆ ತೆರೆ ಎಳೆದಿದ್ದಾರೆ.

ಟೆಸ್ಟ್​ ಕ್ರಿಕೆಟ್ ವೃತ್ತಿಜೀವನ ಆರಂಭಿಸಿದ್ದ ಲಾರ್ಡ್ಸ್​ ಮೈದಾನದಲ್ಲೇ ತನ್ನ ಕೊನೆಯ ಟೆಸ್ಟ್​ ಪಂದ್ಯವನ್ನಾಡಿದ್ದಾರೆ. ವೆಸ್ಟ್ ಇಂಡೀಸ್​ ವಿರುದ್ಧದ ಮೊದಲ ಟೆಸ್ಟ್​ ಆರಂಭಕ್ಕೂ ಮೊದಲೇ ಆ್ಯಂಡರ್ಸನ್​ ಇದು ನನ್ನ ಕೊನೆಯ ಪಂದ್ಯ ಎಂದು ಘೋಷಿಸಿದ್ದರು. 2003ರ ಮೇ 22ರಂದು ಲಾರ್ಡ್ಸ್​​ನಲ್ಲೇ ಜಿಂಬಾಬ್ವೆ ವಿರುದ್ಧ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಈಗ 2024 ಜುಲೈ 10ರಂದು ಆರಂಭಗೊಂಡ ಟೆಸ್ಟ್​ ಪಂದ್ಯವು ಅವರ ಪಾಲಿಗೆ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿದೆ.

ಕೊನೆಯ ಪಂದ್ಯದಲ್ಲೂ ವಿಕೆಟ್ ಬೇಟೆ

ಮೂರೇ ದಿನಕ್ಕೆ ಮುಕ್ತಾಯಗೊಂಡ ಈ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್​, ಅಮೋಘ ಗೆಲುವು ದಾಖಲಿಸಲು ಜೇಮ್ಸ್ ಆ್ಯಂಡರ್ಸನ್​ ಪ್ರಮುಖ ಪಾತ್ರವಹಿಸಿದರು. ಅಲ್ಲದೆ, ವಿಕೆಟ್ ಬೇಟೆಯಾಡುವ ಮೂಲಕ ಗಮನ ಸೆಳೆದರು. ಒಟ್ಟಾರೆ 22 ವರ್ಷಗಳ ಕಾಲ (2002ರಲ್ಲಿ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ) ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿರುವ ಜೇಮ್ಸ್, ತನ್ನ ಕೊನೆ ಟೆಸ್ಟ್​ನಲ್ಲೂ ನಾಲ್ಕು ವಿಕೆಟ್ ಕಿತ್ತರು. ಮೊದಲ ಇನ್ನಿಂಗ್ಸ್​​ನಲ್ಲಿ 1 ವಿಕೆಟ್​ ಪಡೆದರೆ, ಎರಡನೇ ಇನ್ನಿಂಗ್ಸ್​ನಲ್ಲಿ 3 ವಿಕೆಟ್​ ಕಬಳಿಸಿದರು. ಇದರೊಂದಿಗೆ ಅವರ ಟೆಸ್ಟ್​ ಸಂಖ್ಯೆ 704ಕ್ಕೆ ಏರಿತು.

ಟೆಸ್ಟ್​ ಪಂದ್ಯದ ಸಂಕ್ಷಿಪ್ತ ವಿವರ

ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್​​: 121/10 (ಗಸ್ ಆಟ್ಕಿನ್ಸನ್ 45/7)

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್: 371/10 (ಜಾಕ್ ಕ್ರಾವ್ಲಿ 76, ಓಲ್ಲಿ ಪೋಪ್ 57, ರೂಟ್ 68, ಹ್ಯಾರಿ ಬ್ರೂಕ್ 50, ಜೆಮಿ ಸ್ಮಿತ್ 70)

ವೆಸ್ಟ್ ಇಂಡೀಸ್ 2ನೇ ಇನ್ನಿಂಗ್ಸ್: 136/10 (ಗಸ್ ಆಟ್ಕಿನ್ಸನ್ 61/5, ಜೇಮ್ಸ್ ಆ್ಯಂಡರ್ಸನ್ 32/3)

ಜೇಮ್ಸ್ ಆ್ಯಂಡರ್ಸನ್ ವೃತ್ತಿಜೀವನ

ಆ್ಯಂಡರ್ಸನ್ ಅವರ ಟೆಸ್ಟ್ ವೃತ್ತಿಜೀವನ ಅಮೋಘವಾಗಿದೆ. ಲಾಂಗೆಸ್ಟ್ ಫಾರ್ಮಾಟ್​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವಿಶ್ವದ ಮೊದಲ ವೇಗದ ಬೌಲರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೆ, ಅತ್ಯಧಿಕ ಟೆಸ್ಟ್​ ಪಡೆದ ಬೌಲರ್​ಗಳ ಪೈಕಿ ವಿಶ್ವದ ಮೂರನೇ ಬೌಲರ್​ ಆಗಿದ್ದಾರೆ. ಮೊದಲ ಎರಡು ಸ್ಥಾನಗಳಲ್ಲಿ ಮುತ್ತಯ್ಯ ಮುರಳೀಧರನ್ (800), ಶೇನ್ ವಾರ್ನ್ (708)​ ಸ್ಥಾನ ಪಡೆದಿದ್ದಾರೆ. ಇವರಿಬ್ಬರೂ ಸ್ಪಿನ್ನರ್​ಗಳು. ಈ ಹಿಂದೆಯೇ ಏಕದಿನ, ಟಿ20ಐ ಕ್ರಿಕೆಟ್​ಗೆ ವಿದಾಯ ಹೇಳಿದ್ದ ಜಿಮ್ಮಿ, ಟೆಸ್ಟ್‌ನಲ್ಲಿ 700 ವಿಕೆಟ್‌ ಕಬಳಿಸಿದ ಏಕೈಕ ವೇಗಿಯೂ ಆಗಿದ್ದಾರೆ.

ಸಚಿನ್ ತೆಂಡೂಲ್ಕರ್ ನಂತರ ಅತಿ ಹೆಚ್ಚು ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದ ದಾಖಲೆ ಹೊಂದಿರುವ 41 ವರ್ಷದ ವೇಗಿ 188 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. 265 ಇನ್ನಿಂಗ್ಸ್​ಗಳಲ್ಲಿ ಬ್ಯಾಟಿಂಗ್, 350 ಇನ್ನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿದ್ದಾರೆ. ಒಟ್ಟು 704 ವಿಕೆಟ್ ಕಿತ್ತಿದ್ದಾರೆ. 26.45 ಬೌಲಿಂಗ್ ಸರಾಸರಿ, 2.79ರ ಎಕಾನಮಿಯಲ್ಲಿ ಬೌಲಿಂಗ್ ಮಾಡಿದ್ದಾರೆ. ಇನ್ನಿಂಗ್ಸ್​ವೊಂದರಲ್ಲಿ ಬೆಸ್ಟ್​ ಬೌಲಿಂಗ್​ 42/7. ಪಂದ್ಯವೊಂದರಲ್ಲಿ ಬೆಸ್ಟ್ ಬೌಲಿಂಗ್ 71/11. ಅವರು 32 ಸಲ ಐದು ವಿಕೆಟ್​​ಗಳ ಗೊಂಚಲು ಪಡೆದ ಸಾಧನೆ ಮಾಡಿದ್ದಾರೆ. ಮೂರು ಸಲ 10 ವಿಕೆಟ್​ಗಳ (ಎರಡು ಇನ್ನಿಂಗ್ಸ್​​ಗಳಲ್ಲೂ ಸೇರಿ) ಗೊಂಚಲು ಪಡೆದಿದ್ದಾರೆ. ಅವರ ಟೆಸ್ಟ್ ವೃತ್ತಿಜೀವನದಲ್ಲಿ 40037 ಎಸೆತಗಳನ್ನು ಎಸೆದಿದ್ದಾರೆ.

ಟಿ20ಐ, ಏಕದಿನದಲ್ಲಿ ಜಿಮ್ಮಿ ದಾಖಲೆ ಹೇಗಿದೆ?

ಟೆಸ್ಟ್ ಮಾತ್ರವಲ್ಲ, ಏಕದಿನ ಕ್ರಿಕೆಟ್​​ನಲ್ಲೂ ಜಿಮ್ಮಿ ಅತ್ಯುತ್ತಮ ದಾಖಲೆ ಹೊಂದಿದ್ದಾರೆ. 2002ರಲ್ಲಿ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಆ್ಯಂಡರ್ಸನ್, 2015ರ ತನಕ ಕಾಣಿಸಿಕೊಂಡರು. 269 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದ್ದು, 269 ವಿಕೆಟ್ ಉರುಳಿಸಿದ್ದಾರೆ. ಇನ್ನು 2007ರಲ್ಲಿ ಟಿ20ಐ ಕ್ರಿಕೆಟ್​ಗೆ ಪದಾರ್ಪಣೆಗೈದ ವೇಗಿ 18 ವಿಕೆಟ್ ಪಡೆದರು. 2 ವರ್ಷ ಮಾತ್ರ ಅವರು ಟಿ20ಐನಲ್ಲಿ ಕಾಣಿಸಿಕೊಂಡರು.

Whats_app_banner