ಜಸ್ಪ್ರೀತ್ ಬುಮ್ರಾ ಬೌಲಿಂಗ್ ನೋಡುವುದೇ ಚೆಂದ; ಸ್ವಿಂಗ್ ಕಿಂಗ್ ಮ್ಯಾಜಿಕ್​ಗೆ ಬಾಂಗ್ಲಾ ಆಟಗಾರ ತಬ್ಬಿಬ್ಬು, ವಿಡಿಯೋ-jasprit bumrah cleans up shadman islam with a beauty in first over watch video india vs bangladesh 1st test prs ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಜಸ್ಪ್ರೀತ್ ಬುಮ್ರಾ ಬೌಲಿಂಗ್ ನೋಡುವುದೇ ಚೆಂದ; ಸ್ವಿಂಗ್ ಕಿಂಗ್ ಮ್ಯಾಜಿಕ್​ಗೆ ಬಾಂಗ್ಲಾ ಆಟಗಾರ ತಬ್ಬಿಬ್ಬು, ವಿಡಿಯೋ

ಜಸ್ಪ್ರೀತ್ ಬುಮ್ರಾ ಬೌಲಿಂಗ್ ನೋಡುವುದೇ ಚೆಂದ; ಸ್ವಿಂಗ್ ಕಿಂಗ್ ಮ್ಯಾಜಿಕ್​ಗೆ ಬಾಂಗ್ಲಾ ಆಟಗಾರ ತಬ್ಬಿಬ್ಬು, ವಿಡಿಯೋ

Jasprit Bumrah: ಭಾರತ ವಿರುದ್ಧದ ಮೊದಲ ಟೆಸ್ಟ್​​​ನಲ್ಲಿ ಪ್ರಥಮ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶದ ಆರಂಭಿಕ ಆಟಗಾರ ಶಾದ್ಮಾನ್ ಇಸ್ಲಾಂ, ಜಸ್ಪ್ರೀತ್ ಬುಮ್ರಾ ಬೌಲಿಂಗ್ ಕಂಡು ದಂಗಾಗಿದ್ದಾರೆ. ಅದರ ವಿಡಿಯೋ ಇಲ್ಲಿದೆ ನೋಡಿ.

ಜಸ್ಪ್ರೀತ್ ಬುಮ್ರಾ ಬೌಲಿಂಗ್ ನೋಡುವುದೇ ಚೆಂದ; ಸ್ವಿಂಗ್ ಕಿಂಗ್ ಮ್ಯಾಜಿಕ್​ಗೆ ಬಾಂಗ್ಲಾ ಆಟಗಾರ ತಬ್ಬಿಬ್ಬು
ಜಸ್ಪ್ರೀತ್ ಬುಮ್ರಾ ಬೌಲಿಂಗ್ ನೋಡುವುದೇ ಚೆಂದ; ಸ್ವಿಂಗ್ ಕಿಂಗ್ ಮ್ಯಾಜಿಕ್​ಗೆ ಬಾಂಗ್ಲಾ ಆಟಗಾರ ತಬ್ಬಿಬ್ಬು

ಜಸ್ಪ್ರೀತ್ ಬುಮ್ರಾ ಅವರನ್ನು ವಿಶ್ವ ದರ್ಜೆಯ ಬೌಲರ್​ ಎಂದು ಏಕೆ ಕರೆಯುತ್ತಾರೆ ಎನ್ನುವುದಕ್ಕೆ ಚೆನ್ನೈನ ಎಂ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶದ ವಿರುದ್ಧದ ಪ್ರಥಮ ಟೆಸ್ಟ್​ ಪಂದ್ಯದಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಟಿ20 ವಿಶ್ವಕಪ್ ನಂತರ ಹಲವು ತಿಂಗಳು ವಿರಾಮ ಪಡೆದು ಇದೇ ಮೊದಲ ಬಾರಿಗೆ ಕಣಕ್ಕಿಳಿದ ಜಸ್ಪ್ರೀತ್ ಬುಮ್ರಾ, ಮೊದಲ ಓವರ್​ನಲ್ಲೇ ತನ್ನ ಖದರ್ ಏನೆಂದು ತೋರಿಸಿದ್ದಾರೆ. ಸ್ವಿಂಗ್ ಮಾಸ್ಟರ್​ ಮ್ಯಾಜಿಕ್​ಗೆ ಬಾಂಗ್ಲಾದೇಶ ಆರಂಭಿಕ ಆಟಗಾರ ಶಾದ್ಮಾನ್ ಇಸ್ಲಾಂ ತಬ್ಬಿಬ್ಬಾಗಿದ್ದಲ್ಲದೆ, ವಿಕೆಟ್ ಒಪ್ಪಿಸಿಬಿಟ್ಟರು. ಈ ವಿಡಿಯೋ ಇಂಟರ್ನೆಟ್​ನಲ್ಲಿ ಧೂಳೆಬ್ಬಿಸ್ತಿದೆ.

ಉಭಯ ತಂಡಗಳ ನಡುವೆ ನಡೆಯುತ್ತಿರುವ ಟೆಸ್ಟ್​ ಪಂದ್ಯದಲ್ಲಿ ಟಾಸ್ ಸೋತ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ತನ್ನ ಮೊದಲ ಇನ್ನಿಂಗ್ಸ್​​ನಲ್ಲಿ 376 ರನ್ ಗಳಿಸಿದ ಭಾರತ ಆಲೌಟ್ ಆಯಿತು. ಆ ಬಳಿಕ ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾ, ತನ್ನ ಮೊದಲ ಓವರ್​​​ನಲ್ಲೇ ವಿಕೆಟ್ ಕಳೆದುಕೊಂಡಿತು. ಬುಮ್ರಾ ಅವರ ಉರಿದಾಳಿಗೆ ಬಾಂಗ್ಲಾ ಬ್ಯಾಟರ್​ ಒಂದು ಕ್ಷಣ ದಂಗಾಗಿ ಹೋದರು. ಮೊದಲ 5 ಎಸೆತಗಳಲ್ಲೂ ಬುಮ್ರಾ ಸ್ವಿಂಗ್​​ಗೆ ಭಯ ಬಿದ್ದ ಶಾದ್ಮಾನ್ ಇಸ್ಲಾಂ ಕೊನೆ ಎಸೆತದಲ್ಲಿ ಕ್ಲೀನ್ ಬೋಲ್ಡ್ ಆದರು. ಆದರೆ, ಆ ಎಸೆತ ವಿಕೆಟ್​ ಆಗುತ್ತದೆಂದು ಆತ ಊಹಿಸಲೇ ಇರಲಿಲ್ಲ.

ಕಣ್ಣು ಕಣ್ಣು ಬಿಟ್ಟು ನೋಡಿದ ಇಸ್ಲಾಂ

ಬಾಂಗ್ಲಾದೇಶ ಇನ್ನಿಂಗ್ಸ್ ತೆರೆಯಲು ಕ್ರೀಸ್​ಗೆ ಬಂದ ಶಾದ್ಮಾನ್​ ಇಸ್ಲಾಂ ಅವರನ್ನು ಬುಮ್ರಾ ಮೊದಲ ಓವರ್‌ನ ಕೊನೆಯ ಎಸೆತದಲ್ಲೇ ಪೆವಿಲಿಯನ್​ಗೆ ಕಳುಹಿಸಿದರು. ಮೊದಲ ಐದೂ ಎಸೆತಗಳಲ್ಲಿ ಇಸ್ಲಾಂ ಬುಮ್ರಾ ಚೆಂಡನ್ನು ಮುಟ್ಟಲು ಹೆಣಗಾಡಿದರು. ಕೈಯಿಂದ ಬಿಡುಗಡೆ ನಂತರ ನೆಲಕ್ಕೆ ಬಿದ್ದ ಚೆಂಡು ಸ್ವಿಂಗ್ ಆಗುವುದನ್ನು ಗುರುತಿಸುವುದಲ್ಲಿ ವಿಫಲವಾದ ಇಸ್ಲಾಂ, ಕ್ಲೀನ್​ ಬೋಲ್ಡ್ ಆಗಿ ಕಣ್ಣು ಬಿಟ್ಟು ನೋಡಿದರು. ಯಾವುದೇ ಕಾರಣಕ್ಕೂ ಆ ಎಸೆತ ನೇರವಾಗಿ ಬೋಲ್ಡ್​ಗೆ ಬಡಿಯುತ್ತದೆ ಎಂಬುದಕ್ಕೆ ಇಸ್ಲಾಂ ಊಹಿಸಿರಲಿಲ್ಲ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ.

376ಕ್ಕೆ ಭಾರತ ಆಲೌಟ್

ಟೀಮ್ ಇಂಡಿಯಾ ತನ್ನ ಮೊದಲ ಇನ್ನಿಂಗ್ಸ್​​ನಲ್ಲಿ 376ಕ್ಕೆ ಆಲೌಟ್ ಆಗಿದೆ. ಮೊದಲ ದಿನದ ಅಂತ್ಯಕ್ಕೆ 339ಕ್ಕೆ 6 ವಿಕೆಟ್ ಕಳೆದುಕೊಂಡಿದ್ದ ಭಾರತ, ಎರಡನೇ ದಿನ ಭೋಜನ ವಿರಾಮಕ್ಕೂ ಮೊದಲೇ ಸರ್ವಪತನ ಕಂಡಿತು. 86 ರನ್ ಗಳಿಸಿ ಕ್ರೀಸ್​ನಲ್ಲಿದ್ದ ರವೀಂದ್ರ ಜಡೇಜಾ ಅವರು ಬೇಗನೇ ಔಟಾದರೆ, ನಂತರ ಶತಕ ಸಿಡಿಸಿದ್ದ ಅಶ್ವಿನ್ ಸಹ ತುಂಬಾ ಹೊತ್ತು ಕ್ರೀಸ್​ನಲ್ಲಿ ಇರಲಿಲ್ಲ. 117 ರನ್ ಗಳಿಸಿ ಹೊರ ನಡೆದರು. ಬುಮ್ರಾ, ಆಕಾಶ್ ದೀಪ್ ಕಡಿಮೆ ರನ್​ಗೆ ಔಟಾದರು. ಬಾಂಗ್ಲಾ ಪರ ಹಸನ್ ಮಹಮ್ಮದ್ 5 ವಿಕೆಟ್, ಟಸ್ಕಿನ್ ಅಹ್ಮದ್​ 3, ನಹಿದ್ ರಾಣಾ, ಮೆಹದಿ ಹಸನ್ ಮಿರಾಜ್ ತಲಾ 1 ವಿಕೆಟ್ ಪಡೆದರು.

ಸಂಕಷ್ಟದಲ್ಲಿ ಬಾಂಗ್ಲಾದೇಶ

ಮೊದಲ ಇನ್ನಿಂಗ್ಸ್​ ಬ್ಯಾಟಿಂಗ್ ನಡೆಸುತ್ತಿರುವ ಬಾಂಗ್ಲಾ ಸಂಕಷ್ಟಕ್ಕೆ ಸಿಲುಕಿದೆ. ಪಾಕಿಸ್ತಾನ ಎದುರು ಅಬ್ಬರಿಸಿದ ರೀತಿಯಲ್ಲೇ ಭಾರತದ ವಿರುದ್ಧವೂ ಮಿಂಚಲು ಹಾಕಿಕೊಂಡಿದ್ದ ಲೆಕ್ಕಾಚಾರ ತಲೆಕೆಳಗಾಗಿದೆ. ಭಾರತೀಯ ವೇಗಿಗಳ ದಾಳಿಗೆ ಕಂಗಾಲಾದ ಬಾಂಗ್ಲಾ ಬ್ಯಾಟರ್ಸ್​, ತಂಡದ ಮೊತ್ತ 50 ರನ್ ಆಗುವಷ್ಟರಲ್ಲೇ ಪ್ರಮುಖ 5 ವಿಕೆಟ್ ಕಳೆದುಕೊಂಡಿತು. ಬುಮ್ರಾ, ಆಕಾಶ್ ದೀಪ್ ತಲಾ 2 ವಿಕೆಟ್, ಮೊಹಮ್ಮದ್ ಸಿರಾಜ್ 1 ವಿಕೆಟ್ ಪಡೆದರು. (ಈ ಸುದ್ದಿ ಪಬ್ಲಿಷ್ ಆಗುವ ಹೊತ್ತಿಗೆ ಬಾಂಗ್ಲಾ ಸ್ಕೋರ್​ ಹೀಗಿತ್ತು - 112/8)

mysore-dasara_Entry_Point