ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್​ ಅಂಕಪಟ್ಟಿ ಅಗ್ರಸ್ಥಾನಿಗಳ ನಡುವೆಯೇ ಅಂತಿಮ ಹಣಾಹಣಿ; ಕೆಕೆಆರ್​ Vs ಎಸ್​ಆರ್​ಹೆಚ್​ ಫೈನಲ್​ ಎಲ್ಲಿ, ಯಾವಾಗ?

ಐಪಿಎಲ್​ ಅಂಕಪಟ್ಟಿ ಅಗ್ರಸ್ಥಾನಿಗಳ ನಡುವೆಯೇ ಅಂತಿಮ ಹಣಾಹಣಿ; ಕೆಕೆಆರ್​ vs ಎಸ್​ಆರ್​ಹೆಚ್​ ಫೈನಲ್​ ಎಲ್ಲಿ, ಯಾವಾಗ?

SRH vs KKR Final : ಐಪಿಎಲ್-2024 ಫೈನಲ್​ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್ ತಂಡಗಳು ಸೆಣಸಾಟ ನಡೆಸಲಿವೆ. ಫೈನಲ್ ಕದನ​ ನಡೆಯುವುದು ಎಲ್ಲಿ? ಯಾವಾಗ? ಇಲ್ಲಿದೆ ವಿವರ

ಐಪಿಎಲ್​ ಅಂಕಪಟ್ಟಿ ಅಗ್ರಸ್ಥಾನಿಗಳ ನಡುವೆಯೇ ಅಂತಿಮ ಹಣಾಹಣಿ; ಕೆಕೆಆರ್​ vs ಎಸ್​ಆರ್​ಹೆಚ್​ ಫೈನಲ್​ ಎಲ್ಲಿ, ಯಾವಾಗ?
ಐಪಿಎಲ್​ ಅಂಕಪಟ್ಟಿ ಅಗ್ರಸ್ಥಾನಿಗಳ ನಡುವೆಯೇ ಅಂತಿಮ ಹಣಾಹಣಿ; ಕೆಕೆಆರ್​ vs ಎಸ್​ಆರ್​ಹೆಚ್​ ಫೈನಲ್​ ಎಲ್ಲಿ, ಯಾವಾಗ?

17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಕೊನೆಯ ಹಂತ ತಲುಪಿದೆ. ಎರಡು ತಿಂಗಳ ನಾನ್​ಸ್ಟಾಫ್​ ಎಂಟರ್​ಟೈನ್ಮೆಂಟ್ ನೀಡಿದ್ದ ವಿಶ್ವದ ಶ್ರೀಮಂತ ಲೀಗ್​​ನಲ್ಲಿ​ ಈಗ ಫೈನಲ್​ ಪಂದ್ಯ ಮಾತ್ರ ಉಳಿದಿದೆ. ಮೊದಲ ಕ್ವಾಲಿಫೈಯರ್​​ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದು ಕೋಲ್ಕತ್ತಾ ನೈಟ್ ರೈಡರ್ಸ್ ಮೊದಲ ತಂಡವಾಗಿ ಪ್ರಶಸ್ತಿ ಸುತ್ತಿಗೇರಿತ್ತು. 2ನೇ ಕ್ವಾಲಿಫೈಯರ್​​ನಲ್ಲಿ ಆರ್​ಆರ್​ ಎದುರು ಗೆಲುವು ಸಾಧಿಸಿದ ಸನ್​ರೈಸರ್ಸ್​ ಹೈದರಾಬಾದ್​​ 2ನೇ ತಂಡವಾಗಿ ಫೈನಲ್​ಗೆ ಲಗ್ಗೆ ಹಾಕಿದೆ. ಮೇ 26ರ ಭಾನುವಾರ ನಡೆಯುವ ಪ್ರಶಸ್ತಿ ಸುತ್ತಿನಲ್ಲಿ ಕೆಕೆಆರ್​ vs ಎಸ್​ಆರ್​ಹೆಚ್ ಸೆಣಸಾಡಲಿವೆ.

ಟ್ರೆಂಡಿಂಗ್​ ಸುದ್ದಿ

2024ರ ಆವೃತ್ತಿಯ ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನ ಪಡೆದಿದ್ದ ತಂಡಗಳೇ ಅಂತಿಮ ಹಣಾಹಣಿಯಲ್ಲಿ ಮುಖಾಮುಖಿಯಾಗುತ್ತಿವೆ. ಕೆಕೆಆರ್ ಲೀಗ್​​ನಲ್ಲಿ ಆಡಿದ 14 ಪಂದ್ಯಗಳಲ್ಲಿ 9 ಗೆಲುವು, 3 ಸೋಲು ಕಂಡು 20 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದಿತ್ತು. ಎರಡು ಪಂದ್ಯಗಳು ಮಳೆಯಿಂದ ರದ್ದಾಗಿದ್ದವು. ಎಸ್​ಆರ್​​ಹೆಚ್​ ಆಡಿದ 17ರಲ್ಲಿ 8 ಗೆಲುವು, 5 ಸೋಲಿನೊಂದಿಗೆ 17 ಅಂಕ ಪಡೆದಿತ್ತು. ಒಂದು ಪಂದ್ಯ ರದ್ದಾಗಿತ್ತು. ಹೀಗಾಗಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿತ್ತು. ಇದೀಗ ಅಗ್ರಸ್ಥಾನ ಪಡೆದ ಎರಡೂ ತಂಡಗಳೇ ಫೈನಲ್​​​ನಲ್ಲಿ ಟ್ರೋಫಿಗಾಗಿ ಕಾದಾಡಲಿವೆ.

ಫೈನಲ್ ಪಂದ್ಯ ಎಲ್ಲಿ, ಯಾವಾಗ, ಎಷ್ಟೊತ್ತಿಗೆ, ಮಳೆ ಬಂದರೆ ಹೇಗೆ?

ಹೈದರಾಬಾದ್ vs ಕೋಲ್ಕತ್ತಾ ತಂಡಗಳ ನಡುವಿನ ಫೈನಲ್ ಪಂದ್ಯವು ಮೇ 26ರ ಭಾನುವಾರ ನಡೆಯಲಿದೆ. ಚೆನ್ನೈನ ಎಂಎ ಚಿದಂಬರಂ ಕ್ರಿಕೆಟ್ ಮೈದಾನದಲ್ಲೇ ಈ ಪಂದ್ಯವೂ ನಡೆಯಲಿದೆ. ಅಂತಿಮ ಹಣಾಹಣಿಯು ಸಂಜೆ 7.30ಕ್ಕೆ ಆರಂಭಗೊಳ್ಳಲಿದೆ. ಸಂಜೆ 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಎರಡೂ ತಂಡಗಳು ಇದೇ ಮೊದಲ ಬಾರಿಗೆ ಫೈನಲ್​ನಲ್ಲಿ ಮುಖಾಮುಖಿಯಾಗುತ್ತಿವೆ. ಫೈನಲ್ ಪಂದ್ಯ ಬಂದರೆ ಮೀಸಲು ದಿನ ಇರಲಿದೆ. ಅಲ್ಲದೆ, 120 ನಿಮಿಷಗಳ ಹೆಚ್ಚುವರಿ ಸಮಯ ಕೂಡ ನೀಡಲಾಗಿದೆ. ಒಂದು ವೇಳೆ ಮೀಸಲು ದಿನವೂ ಪಂದ್ಯ ನಡೆಯದೇ ಇದ್ದರೆ, ಅಂಕಪಟ್ಟಿಯಲ್ಲಿ ಅಗ್ರಸ್ಥಾನಿ ಕೆಕೆಆರ್​ ತಂಡವನ್ನು ವಿಜೇತರೆಂದು ಘೋಷಿಸಲಾಗುತ್ತದೆ.

ಎಸ್​​ಆರ್​ಹೆಚ್ ವಿರುದ್ಧ ಕೆಕೆಆರ್ ಮೇಲುಗೈ

2024ರ ಆವೃತ್ತಿಯಲ್ಲಿ ನೈಟ್ ರೈಡರ್ಸ್ ಮತ್ತು ಸನ್​ರೈಸರ್ಸ್ ಎರಡು ಬಾರಿ ಮುಖಾಮುಖಿಯಾಗಿವೆ. ಮಾರ್ಚ್​ 23ರಂದು ತಮ್ಮ ಅಭಿಯಾನ ಆರಂಭಿಸಿದ ಉಭಯ ತಂಡಗಳು ನಂತರ ಮುಖಾಮುಖಿಯಾಗಿದ್ದು, ಮೇ 21ರಂದು ಮೊದಲ ಕ್ವಾಲಿಫೈಯರ್​​ನಲ್ಲಿ. ಆದರೆ ಎರಡೂ ಪಂದ್ಯಗಳಲ್ಲಿ ಕೆಕೆಆರ್​ ಗೆದ್ದಿದ್ದು, ಫೈನಲ್​​ನಲ್ಲಿ ಯಾವ ತಂಡ ಗೆಲ್ಲುತ್ತದೆ ಎಂಬುದು ಕುತೂಹಲ ಮೂಡಿಸಿದೆ. ಜೊತೆಗೆ ಐಪಿಎಲ್ ಇತಿಹಾಸದಲ್ಲೂ ಎಸ್​​ಆರ್​ಹೆಚ್ ವಿರುದ್ಧ ಕೆಕೆಆರ್​ ತಂಡವೇ ಮೇಲುಗೈ ಸಾಧಿಸಿದೆ. ಒಟ್ಟು 27 ಪಂದ್ಯಗಳಲ್ಲಿ ಮುಖಾಮುಖಿ ಆಗಿದ್ದು, ಕೆಕೆಆರ್ 18 ಗೆಲುವು, ಹೈದರಾಬಾದ್ 9 ಗೆದ್ದಿದೆ.

ಚೆನ್ನೈ ಪಿಚ್​ನಲ್ಲಿ ಪ್ಲೇಆಫ್ ರೆಕಾರ್ಡ್

ಕೆಕೆಆರ್​ ಮತ್ತು ಎಸ್​ಆರ್​ಹೆಚ್​ ತಂಡಗಳು ಮುಖ್ಯವಾದ ಅಂಶವನ್ನು ಗಮನಿಸಬೇಕಿದೆ. ಏಕೆಂದರೆ ಚೆನ್ನೈ ಪಿಚ್​​ನಲ್ಲಿ ಒಟ್ಟು 8 ಪ್ಲೇಆಫ್ ಪಂದ್ಯಗಳು ನಡೆದಿದೆ. ಈ ಪೈಕಿ ಮೊದಲು ಬ್ಯಾಟಿಂಗ್​ ಮಾಡಿದ 6 ತಂಡಗಳೇ ಗೆದ್ದಿರುವುದು ವಿಶೇಷ. ಹಾಗಾಗಿ, ಈ ಹಿಂದಿನ ಟ್ರ್ಯಾಕ್ ರೆಕಾರ್ಡ್ ಗಮನಿಸಿಕೊಂಡು ತಂಡವನ್ನು ಕಟ್ಟಬೇಕಿದೆ. ಸ್ಪಿನ್ ಟ್ರ್ಯಾಕ್​ನಲ್ಲಿ ಯಾರನ್ನು ಕಣಕ್ಕಿಳಿಸಿದರೆ ಉತ್ತಮ ಎಂಬುದರ ಲೆಕ್ಕಾಚಾರ ಹಾಕಬೇಕಿದೆ. ಆರಂಭದಲ್ಲಿ ಫಾಸ್ಟ್ ಬೌಲರ್​ಗಳಿಗೆ ನೆರವಾಗುವ ಈ ಪಿಚ್, ಪಂದ್ಯ ಮುಂದುವರೆದಂತೆ ಸ್ಪಿನ್ನರ್​ಗಳಿಗೆ ಹೆಚ್ಚು ನೆರವಾಗಲಿದೆ.

ಎಸ್​ಆರ್​ಹೆಚ್ ಸಂಭಾವ್ಯ ಪ್ಲೇಯಿಂಗ್ XI

ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ನಿತೀಶ್ ರೆಡ್ಡಿ, ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಅಬ್ದುಲ್ ಸಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಜಯದೇವ್ ಉನಾದ್ಕತ್, ಟಿ ನಟರಾಜನ್.

ಕೆಕೆಆರ್​ ಸಂಭಾವ್ಯ ಪ್ಲೇಯಿಂಗ್ XI

ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ವೈಭವ್ ಅರೋರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024