KKR vs SRH Highlights: ಕೆಕೆಆರ್ ವಿರುದ್ಧ ಶೈನ್ ಆಗದ ಸನ್‌ರೈಸರ್ಸ್; ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡ ನೈಟ್ ರೈಡರ್ಸ್
ಕನ್ನಡ ಸುದ್ದಿ  /  ಕ್ರಿಕೆಟ್  /  Kkr Vs Srh Highlights: ಕೆಕೆಆರ್ ವಿರುದ್ಧ ಶೈನ್ ಆಗದ ಸನ್‌ರೈಸರ್ಸ್; ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡ ನೈಟ್ ರೈಡರ್ಸ್

ಐಪಿಎಲ್‌ 2024 ಮೆಗಾ ಫೈನಲ್; ಕೆಕೆಆರ್‌ vs ಎಸ್‌ಆರ್‌ಎಚ್‌ ಪಂದ್ಯದ ಹೈಲೈಟ್ಸ್(PTI)

KKR vs SRH Highlights: ಕೆಕೆಆರ್ ವಿರುದ್ಧ ಶೈನ್ ಆಗದ ಸನ್‌ರೈಸರ್ಸ್; ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡ ನೈಟ್ ರೈಡರ್ಸ್

07:19 PM ISTMay 26, 2024 10:32 PM Jayaraj
  • twitter
  • Share on Facebook
07:19 PM IST

ಐಪಿಎಲ್‌ 2024ರ ಮೆಗಾ ಫೈನಲ್‌ನಲ್ಲಿ ಶ್ರೇಯಸ್‌ ಅಯ್ಯರ್‌ ನೇತೃತ್ವದ ಕೋಲ್ಕತ್ತಾ ನೈಟ್‌ ರೈಡರ್ಸ್‌ ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ‌ ಎಸ್‌ಆರ್‌ಎಚ್‌ ವಿರುದ್ಧ ಗೆದ್ದ ಕೆಕೆಆರ್‌ ಮೂರನೇ ಬಾರಿ ಟ್ರೋಫಿ ಗೆದ್ದಿದೆ. ಪಂದ್ಯದಲ್ಲಿ ಏನೇನಾಯ್ತು? ಇಲ್ಲಿದೆ ಹೈಲೈಟ್ಸ್.

Sun, 26 May 202405:02 PM IST

ಮೂರನೇ ಐಪಿಎಲ್‌ ಟ್ರೋಫಿ ಎತ್ತಿ ಹಿಡಿದ ನೈಟ್‌ ರೈಡರ್ಸ್

2012, 2014 ಹಾಗೂ 2024. ಬರೋಬ್ಬರಿ ಹತ್ತು ವರ್ಷಗಳ ಬಳಿಕ ಕೋಲ್ಕತ್ತಾ ಫ್ರಾಂಚೈಸಿ ಮೂರನೇ ಐಪಿಎಲ್ ಟ್ರೋಫಿ ಗೆದ್ದು ಬೀಗಿದೆ. ಬೌಲಿಂಗ್‌ನಲ್ಲಿ ಮಾರಕ ದಾಳಿ ತಂಡದ ಕೈಹಿಡಿಯಿತು. ಮಿಚೆಲ್‌ ಸ್ಟಾರ್ಕ್‌ ಆರಂಭದಲ್ಲೇ ತಂಡದ ಗೆಲುವಿನ ರೂವಾರಿಯಾದರು. ರಸೆಲ್‌, ವರುಣ್‌ ಚಕ್ರವರ್ತಿ ಬೌಲಿಂಗ್‌ನಲ್ಲಿ ಕೊಡುಗೆ ನೀಡಿದರು. ಬ್ಯಾಟಿಂಗ್‌ನಲ್ಲಿ ವೆಂಕಟೇಶ್‌ ಅಯ್ಯರ್‌ ಅಮೋಘ ಅರ್ಧಶತಕದೊಂದಿಗೆ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ಗುರ್ಬಾಜ್‌ ಕೂಡಾ ನಿರ್ಣಾಯಕ ಕೊಡುಗೆ ನೀಡಿದರು. ಚೆನ್ನೈ ಪಿಚ್ ಎಸ್‌ಆರ್‌ಎಚ್‌‌ ಆಟಗಾರರಿಗೆ ಬ್ಯಾಟ್‌ ಬೀಸಲು ಅಡ್ಡಿಪಡಿಸಿದರೆ, ಕೆಕೆಆರ್‌ ಬ್ಯಾಟರ್‌ಗಳು ನಿರಾಯಾಸವಾಗಿ ರನ್‌ ಗಳಿಸಿದರು. ಟೂರ್ನಿಯುದ್ದಕ್ಕೂ ಪ್ರಚಂಡ ಫಾರ್ಮ್‌ನಲ್ಲಿದ್ದ ತಂಡವು ಮೊದಲ ತಂಡವಾಗಿ ಫೈನಲ್‌ ಪ್ರವೇಶಿಸಿತು. ಇದೀಗ ಫೈನಲ್‌ನಲ್ಲೂ ಗೆದ್ದು ತನ್ನ ಸಾಮರ್ಥ್ಯ ಪ್ರದರ್ಶಿಸಿದೆ.

Sun, 26 May 202404:57 PM IST

ಕೆಕೆಆರ್‌ ಚಾಂಪಿಯನ್...

ಕೆಕೆಆರ್‌ ಚಾಂಪಿಯನ್... ಡಗೌಟ್‌ನಲ್ಲಿ ಸಂಭ್ರಮಾಚರಣೆ. ವೀಕ್ಷಕರ ಗ್ಯಾಲರಿಯಿಂದ ಶಾರುಖ್‌ ಖಾನ್‌ ಕರತಾಡನ, ಅಭಿಮಾನಿಗಳ ಹರ್ಷೋದ್ಘಾರ... ಮೂರನೇ ಬಾರಿಗೆ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡವು ಐಪಿಎಲ್‌ ಟ್ರೋಫಿ ಎತ್ತಿಹಿಡಿದು ಸಂಭ್ರಮಿಸಿದೆ.

Sun, 26 May 202404:50 PM IST

ಗುರ್ಬಾಜ್‌ ಔಟ್;‌ ಕೆಕೆಆರ್‌ - 106/2 (9)

ರಹಮಾನುಲ್ಲಾ ಗುರ್ಬಾಜ್‌ 39 ರನ್‌ ಗಳಿಸಿ ಔಟಾಗಿದ್ದಾರೆ. ತಂಡದ ಗೆಲುವಿಗೆ ಕೇವಲ 12 ರನ್‌ ಅಗತ್ಯವಿರುವಾಗ ವಿಕೆಟ್‌ ಕಳೆದುಕೊಂಡಿದ್ದಾರೆ.

Sun, 26 May 202404:37 PM IST

ಕೆಕೆಆರ್‌: 72/1 (6)

ವೆಂಕಟೇಶ್‌ ಅಯ್ಯರ್‌ ಅಬ್ಬರದಾಟವಾಡುತ್ತಿದ್ದಾರೆ. ಕೆಕೆಆರ್‌ 6 ಓವರ್‌ಗಳ ಪವರ್‌ಪ್ಲೇನಲ್ಲಿ ಭರ್ಜರಿ 72 ರನ್‌ ಗಳಿಸಿದೆ. ತಂಡವು ಗೆಲುವಿಗೆ ಬಹುತೇಕ ಸಮೀಪ ಬಂದಿದ್ದು, 10 ಓವರ್‌ಗಳ ಒಳಗೆ ಗುರಿ ತಲುಪುವ ಸುಳಿವು ನೀಡಿದೆ.

Sun, 26 May 202404:23 PM IST

ಕೆಕೆಆರ್‌: 46/1 (4)

4 ಓವರ್‌ ಬಳಿಕ ಕೆಕೆಆರ್‌ 46 ಓವರ್‌ಗಳಲ್ಲಿ 1 ವಿಕೆಟ್‌ ಕಳೆದುಕೊಂಡು 46 ರನ್‌ ಗಳಿಸಿದೆ. ವೆಂಕಟೇಶ ಅಯ್ಯರ್‌ ಪ್ರಚಂಡ ಫಾರ್ಮ್‌ನಲ್ಲಿದ್ದಾರೆ. ಕೇವಲ 6 ಎಸೆತಗಳಲ್ಲಿ 20 ರನ್‌ ಪೇರಿಸಿದ್ದಾರೆ.

Sun, 26 May 202404:07 PM IST

ಸುನಿಲ್‌ ನರೈನ್‌ ಔಟ್

ಚೇಸಿಂಗ್‌ನ ಎರಡನೇ ಓವರ್‌ನಲ್ಲಿ ಕೆಕೆಆರ್‌ ಆರಂಭಿಕ ಬ್ಯಾಟರ್‌ ಸುನಿಲ್‌ ನರೈನ್‌ ಔಟಾಗಿದ್ದಾರೆ. ಪ್ಯಾಟ್‌ ಕಮಿನ್ಸ್‌ ಮೊದಲ ವಿಕೆಟ್‌ ಪಡೆದಿದ್ದಾರೆ. ಮೊದಲ ಎಸೆತದಲ್ಲಿ ಸಿಕ್ಸರ್‌ ಸಿಡಿಸಿದ ನರೈನ್‌, ಎರಡನೇ ಎಸೆತದಲ್ಲೂ ದೊಡ್ಡ ಹೊಡೆತಕ್ಕೆ ಕೈಹಾಕಿ ವಿಕೆಟ್‌ ಕೈಚೆಲ್ಲಿದ್ದಾರೆ.

Sun, 26 May 202404:01 PM IST

KKR vs SRH live Updates:‌‌‌ ಕೆಕೆಆರ್‌ ಚೇಸಿಂಗ್‌ ಆರಂಭ

ಕೆಕೆಆರ್‌ ತಂಡ ಚೇಸಿಂಗ್‌ ಆರಂಭಿಸಿದೆ. ಗುರ್ಬಾಜ್‌ ಹಾಗೂ ಸುನಿಲ್‌ ನರೈನ್‌ ಇನ್ನಿಂಗ್ಸ್‌ ಆರಂಭಿಸಿದ್ದಾರೆ. ಭುವನೇಶ್ವರ್‌ ಕುಮಾರ್‌ ಮೊದಲ ಓವರ್‌ ಎಸೆಯುತ್ತಿದ್ದಾರೆ.

Sun, 26 May 202403:46 PM IST

ಕೋಲ್ಕತ್ತಾ ಕಪ್‌ ಗೆಲುವಿಗೆ ಬೇಕು ಕೇವಲ 114 ರನ್

113 ರನ್‌ಗಳಿಗೆ ಎಸ್‌ಆರ್‌ಎಚ್‌ ಆಲೌಟ್‌ ಆಗಿದೆ. ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡದ ಕಪ್‌ ಗೆಲುವಿಗೆ 114 ರನ್‌ಗಳ ಅತ್ಯಲ್ಪ ಗುರಿ ಸಿಕ್ಕಿದೆ.‌ ಐಪಿಎಲ್‌ ಫೈನಲ್‌ನಲ್ಲಿ ಅತಿ ಕಡಿಮೆ ಮೊತ್ತ ಕಲೆ ಹಾಕಿದ ಕಳೆಪೆ ದಾಖಲೆಯನ್ನು ಹೈದರಾಬಾದ್‌ ಬರೆದಿದೆ.

Sun, 26 May 202403:43 PM IST

ಎಸ್‌ಆರ್‌ಎಚ್‌ 113/9 (18)

ಜೈದೇವ್‌ ಉನದ್ಕತ್‌ ಔಟಾಗುವುದರೊಂದಿಗೆ ಹೈದರಾಬಾದ್‌ 9 ವಿಕೆಟ್‌ ಕಳೆದುಕೊಂಡಿದೆ. 113 ರನ್‌ ಆಗುವಷ್ಟರಲ್ಲಿ ಎಸ್‌ಆರ್‌ಎಚ್‌ 9 ವಿಕೆಟ್‌ ಕಳೆದುಕೊಂಡಿದೆ.

Sun, 26 May 202403:29 PM IST

KKR vs SRH live Updates:‌‌‌ ಎಸ್‌ಆರ್‌ಎಚ್ - 98/8 (16)

16 ಓವರ್‌ ಬಳಿಕ ಹೈದರಾಬಾದ್‌ 8 ವಿಕೆಟ್‌ ನಷ್ಟಕ್ಕೆ 98 ರನ್‌ ಗಳಿಸಿದೆ. ತಂಡದ ರನ್‌ರೇಟ್‌ 6ರ ಆಸುಪಾಸಿನಲ್ಲಿದ್ದು, ದೊಡ್ಡ ಮೊತ್ತ ಕಲೆ ಹಾಕವ ಅವಕಾಶ ಬಹುತೇಕ ಕಮರಿದೆ. ತಂಡದ ಬಳಿ 2 ವಿಕೆಟ್‌ ಮಾತ್ರವೇ ಉಳಿದಿದೆ.

Sun, 26 May 202403:20 PM IST

KKR vs SRH live Updates:‌‌ ಕ್ಲಾಸೆನ್‌ ಔಟ್;‌ ಎಸ್‌ಆರ್‌ಎಚ್ 8 ವಿಕೆಟ್‌ ಪತನ

ಎಸ್‌ಆರ್‌ಎಚ್‌ ತಂಡದ 8 ವಿಕೆಟ್‌ ಪತನವಾಗಿದೆ. ಸ್ಫೋಟಕ ಬ್ಯಾಟರ್‌ ಹೆನ್ರಿಚ್‌ ಕ್ಲಾಸೆನ್‌ 16‌ ರನ್‌ ಗಳಿಸಿ ಹರ್ಷಿತ್‌ ರಾಣಾಗೆ ವಿಕೆಟ್‌ ಒಪ್ಪಿಸಿದ್ದಾರೆ.

Sun, 26 May 202403:13 PM IST

KKR vs SRH live Updates:‌‌ 7 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿ ಎಸ್‌ಆರ್‌ಎಚ್

ಸನ್‌ರೈಸರ್ಸ್‌ ಮೇಲಿಂದ ಮೇಲೆ ವಿಕೆಟ್‌ ಕಳೆದುಕೊಂಡು ಪರದಾಡುತ್ತಿದೆ. ಅಬ್ದುಲ್‌ ಸಮದ್‌ ಕೇವಲ 4 ರನ್‌ ಗಳಿಸಿ ಔಟಾಗಿದ್ದಾರೆ. ಕೆಕೆಆರ್‌ ತಂಡದ ಚಿನ್ನದ ಕೈ ರಸೆಲ್‌ ಎರಡನೇ ವಿಕೆಟ್‌ ಪಡೆದಿದ್ದಾರೆ. 7 ವಿಕೆಟ್‌ ಕಳೆದುಕೊಂಡ ಹೈದರಾಬಾದ್‌ ಅಲ್ಪ ಮೊತ್ತ ಕಲೆ ಹಾಕುವ ಸಾಧ್ಯತೆ ಇದೆ.

Sun, 26 May 202403:02 PM IST

KKR vs SRH live Updates:‌ ಸನ್‌ರೈಸರ್ಸ್‌ ಹೈದರಾಬಾದ್‌ - 70/5 (11)

ನಿಧಾನಗತಿಯಲ್ಲಿ ಬ್ಯಾಟ್‌ ಬೀಸುತ್ತಿದ್ದ ಐಡೆನ್‌ ಮರ್ಕ್ರಾಮ್‌ 20 ರನ್‌ ಗಳಿಸಿ ಔಟಾಗಿದ್ದಾರೆ. ಸನ್‌ರೈಸರ್ಸ್‌ ಹೈದರಾಬಾದ್‌ 62 ರನ್‌ ವೇಳೆಗೆ 5 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದೆ.

Sun, 26 May 202402:58 PM IST

KKR vs SRH live Updates:‌ 10 ಓವರ್‌ ಬಳಿಕ ಹೈದರಾಬಾದ್‌ 61/4 (10)

ಮೊದಲ ಹತ್ತು ಓವರ್‌ಗಳಲ್ಲಿ ಎಸ್‌ಆರ್‌ಎಚ್‌ ನಿಧಾನಗತಿಯಲ್ಲಿ ಬ್ಯಾಟ್‌ ಬೀಸಿ 61 ರನ್‌ ಮಾತ್ರ ಗಳಿಸಿದೆ.

Sun, 26 May 202402:45 PM IST

ನಿತೀಶ್ ರೆಡ್ಡಿ‌ ಔಟ್;‌ ನಾಲ್ಕನೇ ವಿಕೆಟ್‌ ಕಳೆದುಕೊಂಡ ಕೆಕೆಆರ್‌

13 ರನ್‌ ಗಳಿಸಿ ನಿತೀಶ್‌ ರೆಡ್ಡಿ ಔಟಾಗಿದ್ದಾರೆ. ಹರ್ಷಿತ್‌ ರಾಣಾ ಮೊದಲ ವಿಕೆಟ್‌ ಪಡೆದಿದ್ದಾರೆ. ಕೆಕೆಆರ್‌ ಸದ್ಯ ಭಾರಿ ಮುನ್ನಡೆ ಸಾಧಿಸಿದ್ದು, ರನ್‌ ಗಳಿಸಿ ವಿಕೆಟ್‌ ಉಳಿಸಿಕೊಳ್ಳಲು ಎಸ್‌ಆರ್‌ಎಚ್‌ ಪರದಾಡುತ್ತಿದೆ.

Sun, 26 May 202402:39 PM IST

KKR vs SRH live Updates:‌ ಪವರ್‌ಪ್ಲೇ ಬಳಿಕ SRH 40/3 (6)

ಪವರ್‌ಪ್ಲೇ ಬಳಿಕ ಕೆಕೆಆರ್‌ ಪಂದ್ಯದಲ್ಲಿ ಹಿಡಿತ ಸಾಧಿಸಿದೆ. ಸನ್‌ರೈಸರ್ಸ್‌ ಪ್ರಮುಖ 3 ವಿಕೆಟ್‌ ಕಳೆದುಕೊಂಡು 40 ರನ್‌ ಗಳಿಸಿದೆ. ಸದ್ಯ ನಿತೀಶ್‌ ರೆಡ್ಡಿ ಹಾಗೂ ಐಡೆನ್‌ ಮರ್ಕ್ರಾಮ್‌ ಬ್ಯಾಟಿಂಗ್‌ ಮಾಡುತ್ತಿದ್ದಾರೆ.

Sun, 26 May 202402:31 PM IST

KKR vs SRH IPL 2024 Final live Updates:‌ ತ್ರಿಪಾಠಿ ಔಟ್‌, 2ನೇ ವಿಕೆಟ್‌ ಕಬಳಿಸಿದ ಸ್ಟಾರ್ಕ್

ರಾಹುಲ್‌ ತ್ರಿಪಾಠಿ 9(13) ವಿಕೆಟ್‌ ಕೈಚೆಲ್ಲಿದ್ದಾರೆ. ಮಿಚೆಲ್‌ ಸ್ಟಾರ್ಕ್‌ ಎರಡನೇ ವಿಕೆಟ್‌ ಪಡೆದಿದ್ದಾರೆ. ಸನ್‌ರೈಸರ್ಸ್‌ ಭಾರಿ ಸಂಕಷ್ಟಕ್ಕೆ ಸಿಲುಕಿದೆ. ಐಪಿಎಲ್‌ನ ಅತ್ಯಂತ ದುಬಾರಿ ಆಟಗಾರ ಪ್ರಚಂಡ ಫಾರ್ಮ್‌ನಲ್ಲಿದ್ದಾರೆ. ಹೈದರಾಬಾದ್‌ ಪವರ್‌ಪ್ಲೇ ಜೋಶ್‌ ಕಳೆದುಕೊಂಡಿದೆ.

Sun, 26 May 202402:19 PM IST

KKR vs SRH IPL 2024 Final live Updates: ಟ್ರಾವಿಸ್‌ ಹೆಡ್‌ ಗೋಲ್ಡನ್‌ ಡಕ್!

ನಿರ್ಣಾಯಕ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಬಲ್ಲ ಸ್ಫೋಟಕ ಆಟಗಾರ ಟ್ರಾವಿಸ್‌ ಹೆಡ್‌ ಗೋಲ್ಡನ್‌ ಡಕ್ ಆಗಿದ್ದಾರೆ. ಸನ್‌ರೈಸರ್ಸ್‌ ತಂಡ ಇಬ್ಬರೂ ಆರಂಭಿಕರ ವಿಕೆಟ್‌ ಕಳೆದುಕೊಂಡಿದೆ. ಎರಡನೇ ಓವರ್‌ನಲ್ಲಿ ವೈಭವ್‌ ಅರೋರ ನಿರ್ಣಾಯಕ ವಿಕೆಟ್‌ ಪಡೆದು ತಂಡಕ್ಕೆ ಮೇಲುಗೈ ಕೊಟ್ಟಿದ್ದಾರೆ. 3 ಓವರ್‌ಗಳ ಬಳಿಕ ಹೈದರಾಬಾದ್‌ 2 ವಿಕೆಟ್‌ ನಷ್ಟಕೆ 15 ರನ್‌ ಗಳಿಸಿದೆ.

Sun, 26 May 202402:07 PM IST

KKR vs SRH IPL 2024 Final live Updates: ಅಭಿಷೇಕ್‌ ಶರ್ಮಾ ಔಟ್

ಫಸ್ಟ್‌ ಓವರ್‌ನಲ್ಲೇ ಮಿಚೆಲ್‌ ಸ್ಟಾರ್ಕ್ ವಿಕೆಟ್‌ ಪಡೆದಿದ್ದಾರೆ. ಅಭಿಷೇಕ್‌ ಶರ್ಮಾ ವಿಕೆಟ್‌ ಪಡೆದು ಮೇಲುಗೈ ಸಾಧಿಸಿದ್ದಾರೆ. ಸನ್‌ರೈಸರ್ಸ್‌ ತಂಡವು ಮೊದಲ ಓವರ್‌ ಬಳಿಕ 1 ವಿಕೆಟ್‌ ಕಳೆದುಕೊಂಡು 3 ರನ್‌ ಗಳಿಸಿದೆ. ಕೆಕೆಆರ್‌ ಆರಂಭಿಕ ಮುನ್ನಡೆ ಸಾಧಿಸಿದೆ.

Sun, 26 May 202402:03 PM IST

KKR vs SRH IPL 2024 Final live Updates: ಪಂದ್ಯ ಆರಂಭ

ಎಸ್‌ಆರ್‌ಎಚ್‌ ಆರಂಭಿಕರಾದ ಅಭಿಷೇಕ್‌ ಶರ್ಮಾ ಹಾಗೂ ಟ್ರಾವಿಸ್‌ ಹೆಟ್‌ ಬ್ಯಾಟಿಂಗ್‌ಗೆ ಇಳಿದಿದ್ದಾರೆ. ನಿರೀಕ್ಷೆಯಂತೆಯೇ ಮಿಚೆಲ್‌ ಸ್ಟಾರ್ಕ್‌ ಮೊದಲ ಓವರ್‌ ಬೌಲಿಂಗ್‌ ಮಾಡುತ್ತಿದ್ದಾರೆ. ಮೊದಲ 6 ಓವರ್‌ಗಳ ಪವರ್‌ಪ್ಲೇ ಪಂದ್ಯದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಇಲ್ಲಿ ಮೇಲುಗೈ ಸಾಧಿಸುವ ತಂಡವು ಪಂದ್ಯ ಗೆಲುವಿನ ಸನಿಹವಾಗುತ್ತದೆ.

Sun, 26 May 202402:02 PM IST

KKR vs SRH IPL 2024 Final live Updates: ರಾಷ್ಟ್ರಗೀತೆಯೊಂದಿಗೆ ಪಂದ್ಯ ಆರಂಭ

ಐಪಿಎಲ್‌ ಫೈನಲ್ ಪಂದ್ಯದ ಹಿನ್ನೆಲೆಯಲ್ಲಿ ರಾಷ್ಟ್ರಗೀತೆ‌ಯ ಬಳಿಕ ಪಂದ್ಯ ಆರಂಭವಾಗುತ್ತಿದೆ. ಎಸ್‌ಆರ್‌ಎಚ್‌ ಆರಂಭಿಕರಾದ ಅಭಿಷೇಕ್‌ ಶರ್ಮಾ ಹಾಗೂ ಟ್ರಾವಿಸ್‌ ಹೆಟ್‌ ಬ್ಯಾಟಿಂಗ್‌ಗೆ ಇಳಿದಿದ್ದಾರೆ.

Sun, 26 May 202401:39 PM IST

KKR vs SRH IPL 2024 Final live Updates: ಉಭಯ ತಂಡಗಳ ಇಂಪ್ಯಾಕ್ಟ್ ಆಟಗಾರರರು

ಸನ್‌ರೈಸರ್ಸ್ ಹೈದರಾಬಾದ್ ಇಂಪ್ಯಾಕ್ಟ್ ಆಟಗಾರರರು: ಉಮ್ರಾನ್ ಮಲಿಕ್, ಗ್ಲೆನ್ ಫಿಲಿಪ್ಸ್, ಮಯಾಂಕ್ ಮಾರ್ಕಾಂಡೆ, ಅಬ್ದುಲ್ ಸಮದ್, ವಾಷಿಂಗ್ಟನ್ ಸುಂದರ್.

ಕೋಲ್ಕತ್ತಾ ನೈಟ್ ರೈಡರ್ಸ್ ಇಂಪ್ಯಾಕ್ಟ್ ಆಟಗಾರರು: ಅನುಕುಲ್ ರಾಯ್, ಮನೀಶ್ ಪಾಂಡೆ, ನಿತೀಶ್ ರಾಣಾ, ಕೆಎಸ್ ಭರತ್, ಶೆರ್ಫೈನ್ ರುದರ್ಫೋರ್ಡ್

Sun, 26 May 202401:38 PM IST

ಸನ್‌ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ XI

ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್, ನಿತೀಶ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್ (ವಿಕೆಟ್‌ ಕೀಪರ್), ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್‌ (ನಾಯಕ), ಭುವನೇಶ್ವರ್ ಕುಮಾರ್, ಜಯದೇವ್ ಉನದ್ಕತ್, ಟಿ ನಟರಾಜನ್.

Sun, 26 May 202401:37 PM IST

ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ XI

ರಹಮಾನುಲ್ಲಾ ಗುರ್ಬಾಜ್ (ವಿಕೆಟ್‌ ಕೀಪರ್), ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ವೈಭವ್ ಅರೋರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.

Sun, 26 May 202401:44 PM IST

ಟಾಸ್‌ ಗೆದ್ದ ಪ್ಯಾಟ್‌ ಕಮಿನ್ಸ್ ಬ್ಯಾಟಿಂಗ್

ಐಪಿಎಲ್‌ ಮೆಗಾ ಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದ ಪ್ಯಾಟ್‌ ಕಮಿನ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಇದೇ ಮೈದಾನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಮೊದಲು ಬ್ಯಾಟ್‌ ಬೀಸಿ ಹೈದರಾಬಾದ್‌ ಗೆದ್ದು ಬೀಗಿತ್ತು. ಫೈನಲ್‌ ಪಂದ್ಯಕ್ಕೆ ಉಭಯ ತಂಡಗಳು ಯಾವುದೇ ಬದಲಾವಣೆಗಳಿಲ್ಲದೆ ಕಣಕ್ಕಿಳಿಯುತ್ತಿವೆ.

Sun, 26 May 202401:18 PM IST

ಫೈನಲ್‌ ಪಂದ್ಯಕ್ಕೆ ಚೆಪಾಕ್‌ ಕೆಂಪು ಮಣ್ಣಿನ ಪಿಚ್

ಇಂದಿನ ಪಂದ್ಯಕ್ಕೆ ಚೆಪಾಕ್‌ನ 4ನೇ ಪಿಚ್‌ ಬಳಸಲಾಗುತ್ತಿದೆ. ಇದು ಈ ಮೈದಾನದ ಮಧ್ಯದ ಪಿಚ್.‌ ಇದೇ ಪಿಚ್‌ನಲ್ಲಿ ಲೀಗ್‌ ಹಂತದಲ್ಲಿ ಸಿಎಸ್‌ಕೆ ಮತ್ತು ಪಂಜಾಬ್‌ ಕಿಂಗ್ಸ್‌ ತಂಡಗಳ ನಡುವೆ ಮೇ 1ರಂದು ಪಂದ್ಯ ನಡೆದಿತ್ತು. ಅದರಲ್ಲಿ ಆತಿಥೇಯ ತಂಡ ಸೋಲು ಕಂಡಿತ್ತು.

Sun, 26 May 202412:41 PM IST

ಚೆನ್ನೈ ಹವಾಮಾನ ಹೇಗಿದೆ.

ಕೆಕೆಆರ್​ ಮತ್ತು ಎಸ್​ಆರ್​ಹೆಚ್ ಫೈನಲ್​ ಪಂದ್ಯಕ್ಕೆ ಮಳೆಯ ಭೀತಿ ಇಲ್ಲ. ಹವಾಮಾನ ಇಲಾಖೆ ನೀಡಿರುವ ನೀಡಿರುವ ಮಾಹಿತಿ ಪ್ರಕಾರ, ಚೆನ್ನೈನಲ್ಲಿ ಸಂಜೆ ಮೋಡ ಕವಿದ ವಾತಾವರಣ ಇದೆ. ಮೇ 25 ರಂದು ಚೆನ್ನೈನಲ್ಲಿ ಮಳೆ ಸುರಿದು ಉಭಯ ತಂಡಗಳ ಅಭ್ಯಾಸಕ್ಕೆ ಅಡ್ಡಿಯಾಗಿತ್ತು. ಫೈನಲ್‌ ಪಂದ್ಯದ ದಿನ ಮಳೆಯ ಅಪಾಯವು ಕೇವಲ 4% ರಷ್ಟಿತ್ತು. ಸದ್ಯ ಚೆನ್ನೈ ಬಾನಂಗಳದಲ್ಲಿ ಮೋದ ಕವಿದ ವಾತಾವರಣ ಇದೆ.

Sun, 26 May 202410:24 AM IST

ಐಪಿಎಲ್ ಗೆಲ್ಲುವ ತಂಡ ಹೆಸರಿಸಿದ ಖ್ಯಾತಿ ಜೋತಿಷಿ

2024ರ ಇಂಡಿಯನ್ ಪ್ರೀಮಿಯರ್ ಲೀಗ್​​ ಫೈನಲ್​​ನಲ್ಲಿ ಚಾಂಪಿಯನ್ ಆಗುವ ತಂಡ ಯಾವುದೆಂದು ಜ್ಯೋತಿಷಿ ಪಂಡಿತ್ ಠಾಕೂರ್ ಪ್ರಸಾದ್ ಭವಿಷ್ಯ ನುಡಿದಿದ್ದಾರೆ. ಕೆಕೆಆರ್​ ಈ ಬಾರಿ ಚಾಂಪಿಯನ್ ಆಗುತ್ತದೆ ಎಂದು ಹೇಳಿದ್ದಾರೆ.

Sun, 26 May 202408:09 AM IST

ಮುಖಾಮುಖಿ ದಾಖಲೆ

ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಐಪಿಎಲ್‌ನಲ್ಲಿ ಈವರೆಗೆ 27 ಬಾರಿ ಪರಸ್ಪರ ಆಡಿವೆ. ಕೋಲ್ಕತ್ತಾ ನೈಟ್ ರೈಡರ್ಸ್ 18 ಬಾರಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದಿದೆ. ಫೈನಲ್‌ನಲ್ಲಿ ಉಭಯ ತಂಡಗಳ ನಡುವಿನ ಮೊದಲ ಮುಖಾಮುಖಿ. ಈ ಹಿಂದೆ ಪ್ಲೇಆಫ್‌ನಲ್ಲಿ ನಾಲ್ಕು ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಉಭಯ ತಂಡಗಳು ತಲಾ ಎರಡು ಪಂದ್ಯಗಳಲ್ಲಿ ಗೆದ್ದಿವೆ.

Sun, 26 May 202404:52 AM IST

ಕೋಲ್ಕತ್ತಾ ನೈಟ್ ರೈಡರ್ಸ್ ಸಂಭಾವ್ಯ ತಂಡ

ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್​), ಸುನಿಲ್ ನರೈನ್, ಶ್ರೇಯಸ್ ಅಯ್ಯರ್ (ನಾಯಕ), ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ರಿಂಕು ಸಿಂಗ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣಾ, ವೈಭವ್ ಅರೋರಾ, ವರುಣ್ ಚಕ್ರವರ್ತಿ.

Sun, 26 May 202404:52 AM IST

ಸನ್‌ರೈಸರ್ಸ್ ಹೈದರಾಬಾದ್ ಸಂಭಾವ್ಯ ತಂಡ

ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ನಿತೀಶ್ ರೆಡ್ಡಿ, ಏಡನ್ ಮಾರ್ಕ್ರಮ್, ಹೆನ್ರಿಚ್ ಕ್ಲಾಸೆನ್ (ವಿಕೆಟ್‌ ಕೀಪರ್), ಅಬ್ದುಲ್ ಸಮದ್, ಪ್ಯಾಟ್ ಕಮಿನ್ಸ್‌ (ನಾಯಕ), ಭುವನೇಶ್ವರ್ ಕುಮಾರ್, ಜಯದೇವ್ ಉನಾದ್ಕತ್, ಟಿ ನಟರಾಜನ್, ಶಹಬಾಜ್ ಅಹ್ಮದ್ (ಇಂಪ್ಯಾಕ್ಟ್‌ ಆಟಗಾರ).

Sun, 26 May 202404:52 AM IST

ಚೆನ್ನೈ ಹವಾಮಾನ ವರದಿ

ಆಕ್ಯುವೆದರ್ ಪ್ರಕಾರ, ಮೇ 25ರ ಶನಿವಾರವು ಚೆನ್ನೈನಲ್ಲಿ ಶೇ 10 ರಷ್ಟು ಮಳೆಯಾಗುವ ಸಾಧ್ಯತೆಯಿದೆ. ಇದೇ ವೇಳೆ ಐಪಿಎಲ್‌ ಫೈನಲ್‌ ಪಂದ್ಯ ನಡೆಯುವ ಭಾನುವಾರ ಶೇಕಡಾ 4ರಷ್ಟು ಮಾತ್ರ ಮಳೆಯಾಗುವ ಸಾಧ್ಯತೆ ಇದೆ. ಶೇಕಡಾ 1ರಷ್ಟು ಗುಡುಗು ಸಹಿತ ಮಳೆಯಾಗುವ ನಿರೀಕ್ಷೆ ಇದೆ. ಮಳೆ ಇಲ್ಲದಿದ್ದರೂ, ಫೈನಲ್‌ ಪಂದ್ಯದಲ್ಲಿ ಚೆನ್ನೈ ನಗರದಲ್ಲಿ ಮೋಡ ಕವಿದ ವಾತಾವರಣ ಇರಲಿದೆ ಎಂದು ನಿರೀಕ್ಷಿಸಲಾಗಿದೆ.

Sun, 26 May 202404:51 AM IST

ಕೆಕೆಆರ್‌ vs ಎಸ್‌ಆರ್‌ಎಚ್ ಮುಖಾಮುಖಿ

ಪ್ರಸಕ್ತ ಋತುವಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ಲೀಗ್ ಹಂತದ ಒಂದು ಪಂದ್ಯ ಮಾತ್ರ ನಡೆದಿತ್ತು. ನಂತರ ಪ್ಲೇ ಆಫ್‌ನಲ್ಲಿ ಎರಡು ತಂಡಗಳ ನಡುವೆ ಪಂದ್ಯ ನಡೆಯಿತು. ಎರಡೂ ಪಂದ್ಯಗಳಲ್ಲಿ ಕೆಕೆಆರ್ ತಂಡವೇ ಗೆದ್ದಿದೆ. ಚೆನ್ನೈ ಮೈದಾನದಲ್ಲಿ ಉಭಯ ತಂಡಗಳು 2ನೇ ಬಾರಿಗೆ ಸೆಣಸಾಟಕ್ಕೆ ಸಜ್ಜಾಗಿದ್ದು, ಈ ಹಿಂದಿನ ಮುಖಾಮುಖಿಯಲ್ಲಿ ಎಸ್‌ಆರ್‌ಎಚ್ ತಂಡವನ್ನು ಕೆಕೆಆರ್ 10 ರನ್‌ಗಳಿಂದ ಸೋಲಿಸಿತ್ತು. ಇದೀಗ ಮತ್ತೊಂದು ಗೆಲುವಿನ ಕನಸಿನಲ್ಲಿದೆ ಶ್ರೇಯಸ್ ಅಯ್ಯರ್ ಬಳಗ.

Sun, 26 May 202404:50 AM IST

ಎಂಎ ಚಿದಂಬರಂ ಸ್ಟೇಡಿಯಂ ಪಿಚ್ ವರದಿ

ಬಂದರು ನಗರಿ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನ ಪಿಚ್ ಸ್ಪಿನ್ ಸ್ನೇಹಿಯಾಗಿದ್ದು, ನಿಧಾನವಾಗಿರಲಿದೆ. ಬ್ಯಾಟಿಂಗ್‌ ಹಾಗೂ ಬೌಲಿಂಗ್‌ಗೆ ಸಮನಾಗಿ ನೆರವಾಗಲಿದೆ. ಕಳೆದ ಪಂದ್ಯದಲ್ಲೂ ಸ್ಪಿನ್ ಬೌಲರ್​​ಗಳ ಪ್ರಾಬಲ್ಯ ಕಂಡು ಬಂದಿದೆ. ಬ್ಯಾಟರ್‌​​ಗಳು ಎಚ್ಚರಿಕೆಯಿಂದ ಆಡಿದರೆ ರನ್ ಗಳಿಸಲು ಸಾಧ್ಯ. ಇಲ್ಲಿ ಮೊದಲ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 164 ರನ್ ಆಗಿದ್ದರೆ, ಎರಡನೇ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 151 ರನ್ ಮಾತ್ರ. ಇಂಥಾ ಪರಿಸ್ಥಿತಿಯಲ್ಲಿ ಟಾಸ್ ಗೆದ್ದ ನಾಯಕ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡುವುದು ಉತ್ತಮ.