ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ, ಪಾಕಿಸ್ತಾನ, ಇಂಗ್ಲೆಂಡ್ ಅಲ್ಲ! ಅಮೆರಿಕ ಸೇರಿ ಟಿ20 ವಿಶ್ವಕಪ್ ಗೆಲ್ಲುವ ನೆಚ್ಚಿನ ಮೂರು ತಂಡಗಳನ್ನು ಹೆಸರಿಸಿದ ಮೈಕಲ್ ವಾನ್

ಭಾರತ, ಪಾಕಿಸ್ತಾನ, ಇಂಗ್ಲೆಂಡ್ ಅಲ್ಲ! ಅಮೆರಿಕ ಸೇರಿ ಟಿ20 ವಿಶ್ವಕಪ್ ಗೆಲ್ಲುವ ನೆಚ್ಚಿನ ಮೂರು ತಂಡಗಳನ್ನು ಹೆಸರಿಸಿದ ಮೈಕಲ್ ವಾನ್

Michael Vaughan : ಟಿ20 ವಿಶ್ವಕಪ್‌ನ ಆರಂಭಕ್ಕೂ ಮುನ್ನ ಇಂಗ್ಲೆಂಡ್‌ನ ಮಾಜಿ ನಾಯಕ ಮೈಕೆಲ್ ವಾನ್ ಅವರು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಮೂರು ನೆಚ್ಚಿನ ತಂಡಗಳನ್ನು ಹೆಸರಿಸಿದ್ದಾರೆ.

ಅಮೆರಿಕ ಸೇರಿ ಟಿ20 ವಿಶ್ವಕಪ್ ಗೆಲ್ಲುವ ನೆಚ್ಚಿನ ಮೂರು ತಂಡಗಳನ್ನು ಹೆಸರಿಸಿದ ಮೈಕಲ್ ವಾನ್
ಅಮೆರಿಕ ಸೇರಿ ಟಿ20 ವಿಶ್ವಕಪ್ ಗೆಲ್ಲುವ ನೆಚ್ಚಿನ ಮೂರು ತಂಡಗಳನ್ನು ಹೆಸರಿಸಿದ ಮೈಕಲ್ ವಾನ್

ಐಸಿಸಿ ಪುರುಷರ ಟಿ20 ವಿಶ್ವಕಪ್‌ 2024 (T20 World Cup 2024) ಟೂರ್ನಿಯು ವೆಸ್ಟ್ ಇಂಡೀಸ್ ಮತ್ತು ಯುಎಸ್​ಎನಲ್ಲಿ (West Indies and America) ಜೂನ್ 1 ರಿಂದ 29 ರವರೆಗೆ ನಡೆಯಲಿದೆ. ಒಟ್ಟು 20 ತಂಡಗಳು ಈ ವರ್ಷ ಪ್ರಶಸ್ತಿಗಾಗಿ ಹೋರಾಟ ನಡೆಸಲಿವೆ. ಟಿ20 ವಿಶ್ವಕಪ್‌ನ ಆರಂಭಕ್ಕೂ ಮುನ್ನ ಇಂಗ್ಲೆಂಡ್‌ನ ಮಾಜಿ ನಾಯಕ ಮೈಕೆಲ್ ವಾನ್ (Michael Vaughan) ಅವರು ಮುಂಬರುವ ಆವೃತ್ತಿಯ ಕಡಿಮೆ ಸ್ವರೂಪದಲ್ಲಿ ಮೆಗಾ ಈವೆಂಟ್‌ ಗೆಲ್ಲುವ ತಂಡದ ಕುರಿತು ಭವಿಷ್ಯ ನುಡಿದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಇದೀಗ ತಜ್ಞರ ಟೋಪಿ ಧರಿಸಿರುವ ಮಾಜಿ ಇಂಗ್ಲಿಷ್ ಕ್ರಿಕೆಟಿಗ ವಾನ್​, ಪ್ರಶಸ್ತಿ ಗೆಲ್ಲುವ ತಮ್ಮ ಫೇವರಿಟ್ ತಂಡ ಯಾವುದೆಂಬ ಪ್ರಶ್ನೆಗೆ ಉತ್ತರಿಸಿದ್ದು, ತಮ್ಮ ದೇಶ ಹಾಗೂ ಹಾಲಿ ಚಾಂಪಿಯನ್ ಇಂಗ್ಲೆಂಡ್ ಜೊತೆಗೆ ಭಾರತ ಮತ್ತು ಪಾಕಿಸ್ತಾನ ತಂಡಗಳನ್ನು ಕಡೆಗಣಿಸಿದ್ದಾರೆ. ವಾನ್ ಪ್ರಕಾರ, 2021ರ ಟಿ20 ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ತಂಡವು ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿದೆ.

ಫೇವರಿಟ್ ತಂಡಗಳನ್ನು ಹೆಸರಿಸಿದ ಮೈಕಲ್ ವಾನ್

ಕ್ಲಬ್ ಪೈರಿ ಫೈರ್ ಪಾಡ್‌ಕ್ಯಾಸ್ಟ್​​ನಲ್ಲಿ ಮಾತನಾಡಿದ 49 ವರ್ಷದ ಮಾಜಿ ಬಲಗೈ ಬ್ಯಾಟರ್, ಅದ್ಭುತ ಬ್ಯಾಟಿಂಗ್ ಲೈನಪ್ ಹೊಂದಿರುವ ಆಸೀಸ್​ ಈ ಬಾರಿ ಟಿ20 ವಿಶ್ವಕಪ್ ಕಿರೀಟವನ್ನು ಧರಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಆಸೀಸ್ ವಿಶ್ವಕಪ್ ಗೆಲ್ಲುತ್ತದೆ ಎಂಬ ನಂಬಿಕೆಯೂ ನನಗಿದೆ. ಟಿ20ಗೆ ಬೇಕಾದ ಎಲ್ಲವೂ ಆ ತಂಡದಲ್ಲಿದೆ. ಹಾಗಾಗಿ ಏಕದಿನ ಚಾಂಪಿಯನ್​, ಟಿ20ಯಲ್ಲೂ ಚಾಂಪಿಯನ್ ಆಗುತ್ತದೆ ಎಂದಿದ್ದಾರೆ.

ಟ್ರಾವಿಸ್ ಹೆಡ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್​ವೆಲ್​, ಜೋಸ್​ ಇಂಗ್ಲಿಸ್, ಟಿಮ್ ಡೇವಿಡ್, ಮ್ಯಾಥ್ಯೂ ಶಾರ್ಟ್, ಮ್ಯಾಥ್ಯೂ ವೇಡ್.. ಹೀಗೆ ಸಾಕಷ್ಟು ಮಂದಿ ಇದ್ದಾರೆ. ಬೌಲಿಂಗ್​ ವಿಭಾಗದಲ್ಲೂ ಪ್ರಮುಖರೇ ಇದ್ದಾರೆ. ವೇಗದ ಬೌಲರ್​ಗಳ ಆಯ್ಕೆಯೂ ಹೆಚ್ಚಾಗಿದೆ. ಸ್ಪಿನ್​ ವಿಭಾಗದಲ್ಲೂ ಸಾಕಷ್ಟು ಆಯ್ಕೆಗಳಿವೆ. ಎಲ್ಲಾ ವಿಭಾಗಗಳಲ್ಲೂ ಬಲಿಷ್ಠವಾಗಿರುವ ಆಸೀಸ್​, ಕಪ್ ಗೆಲ್ಲುವುದು ಖಚಿತ ಎಂದು ಹೇಳಿದ್ದಾರೆ.

ಮೈಕನ್ ವಾನ್​ ಆಸ್ಟ್ರೇಲಿಯಾ ಜೊತೆಗೆ ಇನ್ನೆರಡು ತಂಡಗಳನ್ನು ವಿಶ್ವಕಪ್ ಗೆಲ್ಲುವ ಫೇವರಿಟ್ ಎಂದು ಹೇಳಿದ್ದಾರೆ. ವೆಸ್ಟ್ ಇಂಡೀಸ್ ಮತ್ತು ಅಮೆರಿಕಾ ತಂಡಗಳು ಸಹ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡಗಳಾಗಿವೆ ಎಂದು ಭಾವಿಸುತ್ತೇನೆ. ಆದರೆ ಆಸೀಸ್​​ಗೆ ಹೆಚ್ಚಿನ ಅವಕಾಶ ಇದೆ ಎಂದು ಹೇಳಿದ್ದಾರೆ.

ಆಸೀಸ್ ಗೆದ್ದ ದಾಖಲೆ

ಈ ವರ್ಷದ ಕೊನೆಯಲ್ಲಿ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ಟಿ20 ವಿಶ್ವಕಪ್ ಗೆಲ್ಲಲು ಆಸ್ಟ್ರೇಲಿಯಾ ಯಶಸ್ವಿಯಾದರೆ, ಮೆನ್ ಇನ್ ಯೆಲ್ಲೋ ಒಂದೇ ಸಮಯದಲ್ಲಿ ಆಟದ ಎಲ್ಲಾ ಮೂರು ಸ್ವರೂಪಗಳಲ್ಲಿ ಅಗ್ರ ಐಸಿಸಿ ಪ್ರಶಸ್ತಿ ಗೆದ್ದ ಮೊದಲ ತಂಡವಾಗುತ್ತದೆ. ಆಸೀಸ್ ಈಗಾಗಲೇ ಐಸಿಸಿ ಪುರುಷರ ಏಕದಿನ ವಿಶ್ವಕಪ್, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ವಿಜೇತರಾಗಿದ್ದಾರೆ.

2024ರ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದ 20 ತಂಡಗಳು

ಭಾರತ, ನೆದರ್ಲ್ಯಾಂಡ್ಸ್, ನ್ಯೂಜಿಲ್ಯಾಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಯುಎಸ್ಎ, ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ, ಇಂಗ್ಲೆಂಡ್,  ಅಫ್ಘಾನಿಸ್ತಾನ, ಬಾಂಗ್ಲಾದೇಶ, ಐರ್ಲೆಂಡ್, ಸ್ಕಾಟ್ಲೆಂಡ್, ಪಪುವಾ ನ್ಯೂಜಿನಿಯಾ, ನಮೀಬಿಯಾ, ಕೆನಡಾ, ನೇಪಾಳ, ಓಮನ್ ಮತ್ತು ಉಗಾಂಡಾ.

IPL_Entry_Point